ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA Vinay Kulkarni: ಬಿಜೆಪಿಯರ ಒಳಸಂಚಿನಿಂದ ವಿನಯ್‌ ಕುಲಕರ್ಣಿಗೆ ಸಂಕಷ್ಟ: ಡಿಸಿಎಂ ಡಿ.ಕೆ.ಶಿವಕುಮಾರ್‌ ಆರೋಪ

ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ ಒಳಸಂಚು ಮಾಡಿ ಶಾಸಕ ವಿನಯ್‌ ಕುಲಕರ್ಣಿಯನ್ನು ಸಿಲುಕಿಸಿದ್ದಾರೆ. ಅವರ ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದೇನೆ. ಮೇಲ್ಮನವಿಗೆ ಅವಕಾಶ ಇದೆ, ಆದ್ದರಿಂದ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬಿಜೆಪಿಯವರ ಒಳಸಂಚಿನಿಂದ ವಿನಯ್‌ ಕುಲಕರ್ಣಿಗೆ ತೊಂದರೆ: ಡಿಕೆಶಿ

‌ಶಾಸಕ ವಿನಯ್‌ ಕುಲಕರ್ಣಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ -

Prabhakara R
Prabhakara R Apr 17, 2026 8:10 PM

ಬೆಂಗಳೂರು: ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಆದರೆ, ಶಾಸಕ ವಿನಯ್‌ ಕುಲಕರ್ಣಿ (MLA Vinay Kulkarni) ವಿರುದ್ಧ ದೊಡ್ಡ ಒಳಸಂಚು ನಡೆದಿದೆ. ಇನ್ನೇನು ಬಿ ರಿಪೋರ್ಟ್‌ ಸಲ್ಲಿಸುವ ಸಮಯದಲ್ಲಿ ತನಿಖೆಯನ್ನು ಸಿಬಿಐ ತೆಗೆದುಕೊಂಡು ಕಿರುಕುಳ ನೀಡಲಾಗಿದೆ. ವಿನಯ್‌ ಕುಲಕರ್ಣಿ ಕುಟುಂಬದ ಪರ ನಾವು ನಿಲ್ಲುತ್ತೇವೆ, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಒಳಸಂಚು ನಡೆದಿದೆ ಎಂದು ಆರೋಪಿಸಿದ ಅವರು, ಈ ಪ್ರಕರಣದಲ್ಲಿ ಸಿಬಿಐ ಕೊಡುವ ಅವಶ್ಯಕತೆ ಏನಿತ್ತು?, ಈಗ ಯಡಿಯೂರಪ್ಪ ಅವರು ನಾನು ಆವತ್ತೇ ಶಿಕ್ಷೆ ಆಗುತ್ತೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಮುಂಚೆಯೇ ಹೇಗೆ ಹೇಳಲು ಸಾಧ್ಯ?. ಉತ್ತರ ಕರ್ನಾಟಕದಲ್ಲಿ ವಿನಯ್‌ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಾನೆ ಎಂದು ಬಿಜೆಪಿಯವರು ಮಾಡಿದ ಒಳಸಂಚಿಗೆ ವಿನಯ್‌ ಕುಲಕರ್ಣಿಗೆ ತೊಂದರೆ ಆಗಿದೆ. ನನಗೂ ಇದೇ ರೀತಿ ಸಂಚು ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಒಳಸಂಚಿನಲ್ಲಿ ವಿನಯ್‌ ಕುಲಕರ್ಣಿಯನ್ನು ಸಿಲುಕಿಸಿದ್ದಾರೆ. ಅವರ ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದೇನೆ. ಮೇಲ್ಮನವಿಗೆ ಅವಕಾಶ ಇದೆ, ವಿನಯ್‌ ಕುಲಕರ್ಣಿ ಕುಟುಂಬದವರ ಪರ ನಿಲ್ಲುತ್ತೇವೆ. ಆದ್ದರಿಂದ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳುವುದು ಬೇಡ, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.