ಬೆಂಗಳೂರು: ಭಾರತದ ಶ್ರೇಷ್ಟ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ), ಪತ್ರಿಕೋದ್ಯಮ ಮತ್ತು ಸಾಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸ ಲಾದ ‘ಜೈನ್ ಯುನಿವರ್ಸಿಟಿ ಕಿರುಚಿತ್ರೋತ್ಸವ 2026’ರ ಮೂರನೇ ಆವೃತ್ತಿಯನ್ನು ಹೆಮ್ಮೆಯಿಂದ ಆಯೋಜಿಸಿತು.
ಈ ಚಿತ್ರೋತ್ಸವವು ಸಿನಿಮಾ ಅನುಭವದ ಮೂಲಕ ಸಮಾಜದ ದಿನನಿತ್ಯದ ಬದುಕನ್ನು ಪ್ರಭಾ ವಿಸುವ ವೈವಿಧ್ಯಮಯ ಮತ್ತು ಮನಮುಟ್ಟುವ ಕಥೆ ಪ್ರದರ್ಶಿಸಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿ ವಿಜೇತ ನಟ ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ “ಆಧಿ” ಪಾತ್ರಕ್ಕಾಗಿ) ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಜೊತೆಗೆ ಡಾ. ದಿನೇಶ್ ನೀಲಕಂಠ್, ಡಾ. ಕಿರಣ್ ಎಸ್, ಡಾ. ಸಂಗೀತಾ ದೇವನಾಥನ್ ಮತ್ತು ಡಾ. ಭಾರ್ಗವಿ ಡಿ. ಹೆಮ್ಮಿಗೆ ಅವರುಗಳೂ ಉಪಸ್ಥಿತರಿದ್ದರು.
ಜೈನ್ ವಿಶ್ವವಿದ್ಯಾಲಯದ ಕಿರು ಚಲನಚಿತ್ರೋತ್ಸವದ ತೀರ್ಪುಗಾರರ ಸಮಿತಿಯ ಭಾಗವಾಗಿ, ಲವ್ ಮಾಕ್ಟೇಲ್ ಸರಣಿಯ ಸಂಪಾದಕ ಮತ್ತು ಛಾಯಾಗ್ರಾಹಕ ಕ್ರೇಜಿ ಮೈಂಡ್ಸ್, ಉತ್ತಮ ಬರಹ ಮತ್ತು ಸಂಪಾದನೆಯ ಮಹತ್ವವನ್ನು ಒತ್ತಿ ಹೇಳುತ್ತಾ ಹೀಗೆ ವಿವರಿಸಿದರು "ಒಂದು ಅತ್ಯುತಮ್ಮ ಚಲನಚಿತ್ರವು ಎರಡು ಟೇಬಲ್‌ಗಳ ಮೇಲೆ ರೂಪುಗೊಳ್ಳುತ್ತದೆ, ಒಂದು ಅಸಾಧಾರಣ ಕಥೆಗಾಗಿ ಬರವಣಿಗೆಯ ಟೇಬಲ್ ಮತ್ತು ಚಲನಚಿತ್ರಕ್ಕೆ ಜೀವ ತುಂಬಲು ಎಡಿಟಿಂಗ್ ಟೇಬಲ್." ಬೆಳ್ಳಿತೆರೆಯ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ (AI) ಪಾತ್ರದ ಬಗ್ಗೆ ತಮ್ಮ ಹೇಳಿಕೆಯನ್ನು ವಿಸ್ತರಿಸುತ್ತಾ ಅವರು, "AI ಎಂದಿಗೂ ಮಾನವ ಭಾವನೆಗಳ ಸಂಕೀರ್ಣತೆಗಳನ್ನು ಅನುಕರಿಸಲು ಸಾಧ್ಯವಿಲ್ಲ ಮತ್ತು ಸಿನಿಮಾ ಉದ್ಯಮದ ಅವಿಭಾಜ್ಯ ಅಂಗವಾಗಲು ಅದು ಇನ್ನೂ ಒಂದು ದಶಕ ಮುಂಚಿತ ವಾಗಿದೆ" ಎಂದರು.
ಇದನ್ನೂ ಓದಿ: Jain Mission Hospital: ಏ.12ಕ್ಕೆ 3 ಜೈನ್ ಮಿಷನ್ ಆಸ್ಪತ್ರೆಯ ಹೊಸ ಬ್ಲಾಕ್‌ಗಳ ಲೋಕಾರ್ಪಣೆ : ಸಂತೋಷ್ ಹೆಗ್ಡೆ ಭಾಗಿ
ತೀರ್ಪುಗಾರರ ಸಮಿತಿಯ ಸದಸ್ಯರಾದ ಬಿ.ಎಸ್. ಕೆಂಪರಾಜು, ಕನ್ನಡ ಚಲನಚಿತ್ರ ಸಂಪಾ ದಕರು (ಜಸ್ಟ್ ಮಾತ್ ಮಾತಲ್ಲಿ), ಉತ್ತಮ ಚಿತ್ರಕ್ಕೆ ಉತ್ತಮ ಕಥೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ಹೀಗೆ ಹೇಳಿದರು: "ಉತ್ತಮ ಚಿತ್ರಕ್ಕೆ ಮೂಲ ಸಾರವೇ ಉತ್ತಮ ಚಿತ್ರಕಥೆ; ಯಾವುದೇ ಸಿನಿಮಾ ಯಶಸ್ವಿಯಾಗಲು ಉತ್ತಮ ಚಿತ್ರಕಥೆಯನ್ನು ಬರೆಯುವುದು ಒಂದು ಅವಿಭಾಜ್ಯ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ."
ಚಲನಚಿತ್ರ ನಟ ಮತ್ತು ಕನ್ನಡ ಫಿಲಂಫೇರ್ ವಿಜೇತ ನವೀನ್ ಶಂಕರ್ , ಅವರು ಜೈನ್ ವಿಶ್ವವಿದ್ಯಾಲಯದ ಈ ಮುಂದಾಳತ್ವವನ್ನು ಶ್ಲಾಘಿಸಿ, “ಇಂತಹ ಚಿತ್ರೋತ್ಸವಗಳು ನಮಗೆ ಸಿನೆಮಾ ದೊಡ್ಡ ಪರದೆಗಳ ಬಗ್ಗೆ ಮಾತ್ರವಲ್ಲ, ಅದು ಆಲೋಚನೆಗಳು, ಉತ್ಸಾಹ ಮತ್ತು ಆರಂಭಿಸಲು ಬೇಕಾದ ಧೈರ್ಯದ ಬಗ್ಗೆ ಎಂಬುದನ್ನು ನೆನಪಿಸುತ್ತವೆ. ಕಾಲೇಜು ಕ್ಯಾಂಪಸ್‌ನಲ್ಲಿ ಸಣ್ಣ ಪ್ರಯತ್ನ ವಾಗಿ ಆರಂಭವಾದುದು, ಮುಂದೆ ಮಹತ್ವದ ಸಾಧನೆಗೆ ದಾರಿ ಮಾಡಿಕೊಡಬಹುದು. ವಿದ್ಯಾರ್ಥಿಗಳಿಗೆ ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಮತ್ತು ತಮ್ಮದೇ ಆದ ಧ್ವನಿಯನ್ನು ನಿರ್ಮಿಸಲು ಅವಕಾಶ ಸಿಗುತ್ತಿರುವುದು ಸಂತೋಷಕರ ವಿಷಯ ” ಎಂದರು. ಅವರು ಮುಂದು ವರಿದು, “ವಿಶೇಷವಾಗಿ ಚಿಕ್ಕಚಿತ್ರಗಳು, ಆಶಾವದಿ ಚಲನಚಿತ್ರ ನಿರ್ಮಾಪಕರಿಗೆ ಪ್ರಯೋಗ ಮಾಡಲು, ಕಲೆಯ ಅರ್ಥವನ್ನು ತಿಳಿದುಕೊಳ್ಳಲು ಮತ್ತು ಸಿನೆಮಾದ ಮೂಲಭೂತ ವಾಸ್ತವಿಕತೆಗಳನ್ನು ಅನುಭವಿಸಲು ಉತ್ತಮ ವೇದಿಕೆಯಾಗಿವೆ. ಇಂತಹ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ವಿದ್ಯಾರ್ಥಿಗಳನ್ನು ಚಿತ್ರರಂಗದೊಂದಿಗೆ ಸಂಪರ್ಕಿಸಲು ಜೈನ್ ವಿಶ್ವವಿದ್ಯಾಲಯ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯ,” ಎಂದು ಹೇಳಿದರು.
ಸೃಜನಶೀಲತೆಯ ಮಹತ್ವ ಒತ್ತಿ ಹೇಳಿದ ಪ್ರೊ-ವೈಸ್ ಚಾನ್ಸಲರ್ ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಡಾ. ದಿನೇಶ್ ನೀಲಕಂಠ್ ಅವರು, “ಉತ್ತಮ ಪ್ರತಿಭೆಗಳು ದೊಡ್ಡ ಸ್ಟುಡಿಯೊ ಗಳಿಂದ ಅಲ್ಲ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದಲೇ ಬೆಳೆಯುತ್ತವೆ. ನಾವು ಇಂತಹ ವೇದಿಕೆಗಳನ್ನು ನಿರ್ಮಿಸುತ್ತಿದ್ದೇವೆ,” ಎಂದು ಹೇಳಿದರು.
ಕಿರುಚಿತ್ರಗಳ ಬೆಳವಣಿಗೆ ಕುರಿತು ಮಾತನಾಡಿದ ಡಾ. ಕಿರಣ್ ಎಸ್, ಉಪ ಡೀನ್ (ಅಕಾಡೆಮಿಕ್ಸ್) ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ), “ಚಿಕ್ಕಚಿತ್ರಗಳು ಇನ್ನು ಕೇವಲ ಮೆಟ್ಟಿಲುಗಳಲ್ಲ, ಅವು ಸ್ವತಂತ್ರವಾಗಿ ಶಕ್ತಿಯುತ ಕಥನ ಮಾಧ್ಯಮಗಳಾಗಿವೆ,” ಎಂದು ಹೇಳಿದರು.
ಡಾ. ಸಂಗೀತಾ ದೇವನಾಥನ್ ಉಪ ಡೀನ್ (ಅಕಾಡೆಮಿಕ್ಸ್) ಪ್ರಾಧ್ಯಾಪಕರು, ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಅವರು ಸೃಜನಾತ್ಮಕ ಚಿಂತನೆಯ ಅಗತ್ಯವನ್ನು ಉಲ್ಲೇಖಿಸಿ, “ಆಲೋಚ ನಾತ್ಮಕ ಚಿಂತನೆಗೆ ಸೃಜನಾತ್ಮಕತೆ ಅಗತ್ಯ,” ಎಂದು ಹೇಳಿದರು. ಅವರು ಮುಂದುವರೆದು, “ಇಂದಿನ ಕಾಲದಲ್ಲಿ ಎರಡು ಅಥವಾ ಮೂರು ಗಂಟೆಗಳ ಸಿನಿಮಾ ನೋಡುವ ಅಭ್ಯಾಸ ಕಡಿಮೆಯಾಗುತ್ತಿದೆ. ಕಿರುಚಿತ್ರಗಳು ಈ ಕಲೆಯ ಭವಿಷ್ಯವಾಗಿವೆ,” ಎಂದು ಹೇಳಿದರು.
ಪತ್ರಿಕೋದ್ಯಮ ಮತ್ತು ಸಾಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಡಾ. ಭಾರ್ಗವಿ ಡಿ. ಹೆಮ್ಮಿಗೆ ಅವರು, “ಈ ವರ್ಷದ ಚಿತ್ರೋತ್ಸವಕ್ಕೆ ಭಾರತದೆಲ್ಲೆಡೆಯಿಂದ 90ಕ್ಕೂ ಹೆಚ್ಚು ಕಿರುಚಿತ್ರಗಳು ನೋಂದಣಿಯಾಗಿದೆ . ಇದು ಈ ಕಾರ್ಯ ಕ್ರಮದ ಬೆಳೆಯುತ್ತಿರುವ ವ್ಯಾಪ್ತಿ ಮತ್ತು ಖ್ಯಾತಿಯನ್ನು ತೋರಿಸುತ್ತದೆ,” ಎಂದು ಹೇಳಿದರು. ಅವರು ಮುಂದುವರೆದು, “ವಿಜಯ್ ಸೇತುಪತಿ ಪ್ರೊಡಕ್ಷನ್ಸ್ ಮತ್ತು ಕೆಜಿಎಫ್ ಹಾಗೂ ಸಲಾರ್ ಚಿತ್ರದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರಂತಹ ಹೆಸರಂತ ಸಂಗೀತ ಸಂಯೋಜಕರು ಕೂಡಿದ ಸಲ್ಲಿಕೆಗಳೂ ಬಂದಿವೆ,” ಎಂದರು.
ಜ್ಯೂರಿ ಸದಸ್ಯರಾದ ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಕಲಾವಿದ ನವೀನ್ ದ್ವಾರಕ ನಾಥ್ ಅವರು, “ಯುವ ನಿರ್ಮಾಪಕರಲ್ಲಿ ಕಥನದ ಗುಣಮಟ್ಟವು ಸ್ಪಷ್ಟವಾಗಿ ಹೆಚ್ಚುತ್ತಿದೆ. ಸಿನೆಮಾ ಜನರನ್ನು ಸಂಪರ್ಕಿಸುತ್ತದೆ ಮತ್ತು ಭಾವನಾತ್ಮಕ ಬಾಂಧವ್ಯವನ್ನು ನಿರ್ಮಿಸುತ್ತದೆ,” ಎಂದು ಹೇಳಿದರು. ಅವರು ಕಾರ್ಯಕ್ರಮವನ್ನು ಶ್ಲಾಘಿಸಿ, “ಇದು ಕೇವಲ ಒಂದು ಕಾರ್ಯಕ್ರಮ ವಲ್ಲ, ನಿಜವಾದ ಉತ್ಸವದ ಅನುಭವ ನೀಡುತ್ತದೆ. ಆರಂಭದಿಂದ ಅಂತ್ಯವರೆಗೆ ಉತ್ತಮ ವ್ಯವಸ್ಥೆ ಮತ್ತು ಉತ್ತಮ ಗುಣಮಟ್ಟದ ಚಿತ್ರಗಳು ಕಾಣಿಸುತ್ತವೆ,” ಎಂದು ಹೇಳಿದರು.
ಈ ಕಾರ್ಯಕ್ರಮದ ಮೊದಲ ದಿನ ವಿದ್ಯಾರ್ಥಿ ವರ್ಗದ 12 ಆಯ್ಕೆಯಾದ ಚಿಕ್ಕಚಿತ್ರಗಳನ್ನು ಪ್ರದರ್ಶಿಸಲಾಯಿತು. ಎರಡನೇ ದಿನ ವೃತ್ತಿಪರ ವರ್ಗದ ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ನಂತರ ನಡೆಯುವ ಸಮಾರೋಪದಲ್ಲಿ ಪುರುಷ ಮತ್ತು ಮಹಿಳಾ ಅತ್ಯುತ್ತಮ ನಟ ಮತ್ತು ನಟಿ , ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.
ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಭಾರತದಲ್ಲಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದು ವಿದ್ಯಾರ್ಥಿಗಳ ಪ್ರತಿಭೆಯನ್ನು ಅಭಿವೃದ್ಧಿಪಡಿಸುವಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಈ ವಿಶ್ವವಿದ್ಯಾಲಯಕ್ಕೆ NAAC ವತಿಯಿಂದ A++ ಮಾನ್ಯತೆ (CGPA 3.71) ಲಭಿಸಿದ್ದು, UGC ಯಿಂದ Category-1 ಸ್ವಾಯತ್ತತೆ ನೀಡಲಾಗಿದೆ. ಇದು ಏಷ್ಯಾ ಮತ್ತು ಪ್ಯಾಸಿಫಿಕ್ ವಿಶ್ವವಿದ್ಯಾಲಯಗಳ ಸಂಘದ ಸದಸ್ಯತ್ವ ಹೊಂದಿದೆ. KSURF ICARE ರೇಟಿಂಗ್‌ನಲ್ಲಿ ಯುವ ವಿಶ್ವವಿದ್ಯಾಲಯ ವಿಭಾಗದಲ್ಲಿ ಫೈವ್ ಸ್ಟಾರ್ ಮಾನ್ಯತೆ ಪಡೆದಿದೆ. 2025ರ NIRF ರ‍್ಯಾಂಕಿಂಗ್‌ನಲ್ಲಿ 62ನೇ ಸ್ಥಾನ ಮತ್ತು ಇಂಡಿಯಾ ಟುಡೇ ವರದಿ ಪ್ರಕಾರ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ 8ನೇ ಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ 2933 ಪೇಟೆಂಟ್ ಅರ್ಜಿಗಳು ಸಲ್ಲಿಸಲಾಗಿದ್ದು, 2335 ಪ್ರಕಟಗೊಂಡಿವೆ.2023ರಲ್ಲಿ ಯುವಜನ ಮತ್ತು ಕ್ರೀಡಾ ಸಚಿವಾಲಯದಿಂದ ‘ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ’ ಲಭಿಸಿದೆ. ಕ್ರೀಡಾ ಕ್ಷೇತ್ರದಲ್ಲಿಯೂ ವಿಶ್ವವಿದ್ಯಾಲಯ ಸಾಧನೆ ಮಾಡಿದ್ದು, ಖೇಲೋ ಇಂಡಿಯಾ 2021ರಲ್ಲಿ ಚಾಂಪಿಯನ್ ಆಗಿ, 2022ರಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ISO 21001:2018 ಗುಣಮಟ್ಟದ ಪ್ರಮಾಣಪತ್ರವನ್ನು ಹೊಂದಿದೆ.ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ವಿಭಾಗವು ಸಾಮಾಜಿಕ ವಿಜ್ಞಾನ ಶಾಲೆಯ ಪ್ರಮುಖ ಭಾಗವಾಗಿದೆ. ಇದು ವಿದ್ಯಾರ್ಥಿ ಗಳಿಗೆ ಜಾಗತಿಕ ಮಾಧ್ಯಮ ಕ್ಷೇತ್ರದಲ್ಲಿ ಪ್ರವೇಶಿಸಲು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. 2025ರಲ್ಲಿ ಇಂಡಿಯಾ ಟುಡೇ ಶ್ರೇಯಾಂಕದಲ್ಲಿ 7ನೇ ಸ್ಥಾನ ಪಡೆದಿದೆ. ಕಾರ್ಯಾಗಾರಗಳು, ಅತಿಥಿ ಉಪನ್ಯಾಸಗಳು ಮತ್ತು ಮಾಧ್ಯಮ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಬೆಳವಣಿಗೆಗೆ ವೇದಿಕೆ ಒದಗಿಸುತ್ತದೆ.