ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Jain Mission Hospital: ಏ.12ಕ್ಕೆ 3 ಜೈನ್ ಮಿಷನ್ ಆಸ್ಪತ್ರೆಯ ಹೊಸ ಬ್ಲಾಕ್‌ಗಳ ಲೋಕಾರ್ಪಣೆ : ಸಂತೋಷ್ ಹೆಗ್ಡೆ ಭಾಗಿ

ನಗರ ಹೊರವಲಯದ ಜೈನ್ ಮಿಷನ್ ಆಸ್ಪತ್ರೆ(Jain Mission Hospital)ಯ 3 ಹೊಸ ಬ್ಲಾಕ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಏ.12ರಂದು ಭಾನುವಾರ ಜೈನ್ ಮಿಷನ್ ಆಸ್ಪತ್ರೆ ಆವರಣದಲ್ಲಿ ನಡೆಯ ಲಿದ್ದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ(Retired Lokayukta Santosh Hegde) ಭಾಗಿಯಾಗಲಿದ್ದಾರೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಜೈನ್ ತಿಳಿಸಿದ್ದಾರೆ.

ಏ.12ಕ್ಕೆ 3 ಜೈನ್ ಮಿಷನ್ ಆಸ್ಪತ್ರೆಯ ಹೊಸ ಬ್ಲಾಕ್‌ಗಳ ಲೋಕಾರ್ಪಣೆ

-

Profile
Ashok Nayak Apr 9, 2026 12:00 AM

ಚಿಕ್ಕಬಳ್ಳಾಪುರ: ನಗರ ಹೊರವಲಯದ ಜೈನ್ ಮಿಷನ್ ಆಸ್ಪತ್ರೆ(Jain Mission Hospital)ಯ 3 ಹೊಸ ಬ್ಲಾಕ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಏ.12ರಂದು ಭಾನುವಾರ ಜೈನ್ ಮಿಷನ್ ಆಸ್ಪತ್ರೆ ಆವರಣದಲ್ಲಿ ನಡೆಯಲಿದ್ದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ(Retired Lokayukta Santosh Hegde) ಭಾಗಿಯಾಗಲಿದ್ದಾರೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಜೈನ್ ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಎನ್. ಸಂತೋಷ್ ಹೆಗ್ಡೆ, ಜೆ.ಐ.ಟಿ.ಓ. ಅಪೆಕ್ಸ್ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಸಂಸದರಾದ ಡಾ.ಕೆ.ಸುಧಾಕರ್ (Chikkaballapur MLA Pradeep Ishwar, MP Dr. K Sudhakar)ಪಾಲ್ಗೊಳ್ಳವ ಈ ಕಾರ್ಯಕ್ರಮಕ್ಕೆ ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಡಾ.ಬಿ.ಎಸ್.ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಪ್ರಭು ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರುಗಳೊಂದಿಗೆ ಬ್ಲಾಕ್ ದಾನಿಗಳಾದ, ಶ್ರೀಮತಿ ಲೀಲಾದೇವಿ ರಂಜಿತ್ ಮಲ್ ಜಿ ಕಾನುಂಗಾ, ಭವರಿ ಬಾಯಿ ಘೆವರ್ ಚಂದ್ ಜಿ ಸುರಾಣಾ, ಶ್ರೀಮತಿ ದುರ್ಗೇಶ್ ಪ್ರದೀಪ್ ಜಿ ಮಲೋತ್ರ ಮುಖ್ಯ ಪೋಷಕರಾಗಿ ದಿಲೀಪ್ ಸುರಣಾ, ಆನಂದ್ ಸುರಾಣಾ ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ

ಚಿಕ್ಕಬಳ್ಳಾಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ಭಾಸ್ಕರ್ ಎನ್, ತಹಸಿಲ್ದಾರ್ ಶ್ರೀಮತಿ ರಶ್ಮಿ ವಿ, ಶ್ರೀ ಕೆ.ವಿ. ಮತ್ತು ಪಿ.ಇ. ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ ರೆಡ್ಡಿ, ಅಗಲಗುರ್ಕಿ ಗ್ರಾಮ ಪಿ.ಡಿ.ಓ. ಎಸ್ ಜಿ ಅಶೋಕ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಿ.ಎಸ್.ನಂಜುAಡರಾಮಯ್ಯ ಶೆಟ್ಟಿ,  ಮುದ್ದೇನಹಳ್ಳಿಯ ಬೆಳವಣಿಗೆ ಮತ್ತು ಪಿ.ಜಿ.ಅಧ್ಯಯನಗಳ ಕಾರ್ಯತಂತ್ರದ ನಿರ್ದೇಶಕ ಡಾ. ರಘುಪತಿ ಎ.ಆರ್., ಬೆಂಗಳೂರು ಸದ್ಗುರು ಸನ್ನಿಧಿಯ ಸ್ವಾಮಿ ಲವಣ, ನಂದಿಗಿರಿಧಾಮ ಪೊಲೀಸ್ ಸಬ್ ಇನ್ಸ್ಪೆಕ್ಟರ್  ದುಂಡಪ್ಪ ಬಾರ್ಕಿ, ಪಾಲ್ಗೊಳ್ಳುವ ಇವರೆಲ್ಲರನ್ನು  ಜೈನ್ ಮಿಷನ್ ಟ್ರಸ್ಟಿನ ಅಧ್ಯಕ್ಷರಾದ ಸುರೇಶ್ ಕುಮಾರ್ ಜೈನ್,  ಕಾರ್ಯದರ್ಶಿ ಉತ್ತಮ್ ಚಂದ್ ಜೈನ್, ಖಜಾಂಚಿ ಗುಲಾಬ್ ಪಗಾರಿಯ, ಉಪಾಧ್ಯಕ್ಷರಾದ ಲಕ್ಷ್ಮೀಚಂದ್ ಭಂಡಾರಿ, ಸಹ ಕಾರ್ಯದರ್ಶಿಗಳಾದ ಮನೀಶ್ ಜೈನ್, ಮಾಜಿ ಅಧ್ಯಕ್ಷರಾದ ಜಿತೇಂದ್ರ ಮರಡಿಯ, ಸದಸ್ಯರು ಅಂಕಿತ್ ಜೈನ್, ಬಾಬು ಲಾಲ್ ಪೊರ್ವಾಲ್, ಲೋಕೇಶ್ ಬಿ.ಜೈನ್, ಹಿರಾಚಂದ್ ಸಕಾರಿಯಾ,  ಸಹ ಸದಸ್ಯರು ಶಾಂತಿಲಾಲ್ ಗೋಟಾವತ್, ಕಾಂತಿಲಾಲ್ ಚೋಪ್ರ, ರಮೇಶ್ ಬಂಬೋಲಿ, ಕಪಿಲ್ ಸಿಂಗಿ ಹಾಗೂ ಜೈನ್ ಮಿಷನ್ ಆಸ್ಪತ್ರೆಯ ಅಧ್ಯಕ್ಷರಾದ ಡಾ.ನರಪತ್ ಸೋಲಂಕಿ, ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷರಾದ ಡಾ. ಮಹೇಶ್ ಎಚ್ ಬಿಜ್ಜವಾರ, ವೈದ್ಯಕೀಯ ನಿರ್ದೇಶಕರಾದ ಡಾ.ಬಾಲಕೃಷ್ಣ ಸಿ.ಕೆ. , ಸಿ.ಒ.ಒ. ಸೈಯದ್ ಬಹಾಉದ್ದಿನ್ ಆಗಮಿಸು ವರು ಎಂದು ಜೈನ್ ಮಿಷನ್ ಟ್ರಸ್ಟ್ ವ್ಯವಸ್ಥಾಪಕ ರಾಕೇಶ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.