ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಸಿಯೂಟ ಯೋಜನೆಗೆ ʼಚೆನ್ನಮ್ಮʼ ಹೆಸರಿಡಿ

ರವಣ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರು ಮಾಜಿ ಪ್ರಧಾನಿ ಎಚ.ಡಿ. ದೇವೇಗೌಡರ ಧರ್ಮಪತ್ನಿ ದಿ.ಚೆನ್ನಮ್ಮ ದೇವೇಗೌಡರ ಕುರಿತು ಭಾವುಕರಾಗಿ ಮಾತನಾಡಿದರು. ಬಂದವರಿಗೆಲ್ಲ ಅತಿಥಿ ಸತ್ಕಾರ ಮಾಡುತ್ತಾ ‘ಅನ್ನಪೂರ್ಣೇಶ್ವರಿ’ ಎಂದೇ ಖ್ಯಾತರಾಗಿದ್ದ ಅಮ್ಮನವರ ಹೆಸರನ್ನು ಸರಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇಡಬೇಕು ಎಂದು ಒತ್ತಾಯಿಸಿದರು

ವಿಧಾನ ಪರಿಷತ್‌ನಲ್ಲಿ ಅಗಲಿದ ಗಣ್ಯರಿಗೆ ಸಂತಾಪ

ನೀರಿಗಾಗಿ ಡಿ.ಸುಧಾಕರ್ ಶ್ರಮ

ವಿಧಾನ ಪರಿಷತ್: ಗಣ್ಯರ ಅಗಲಿಕೆಯ ನೆನಪಿನಲ್ಲಿ ವಿಧಾನ ಪರಿಷತ್ತು ಗುರುವಾರ ಮೌನಕ್ಕೆ ಜಾರಿತು. ರಾಜಕಾರಣ, ಸಾಹಿತ್ಯ, ಸಂಗೀತ, ಕಲೆ ಹಾಗೂ ಸಮಾಜ ಸೇವೆ ಕ್ಷೇತ್ರದ ಹಲವು ಸಾಧಕರಿಗೆ 159ನೇ ಅDiವೇಶನದ ಮೊದಲ ದಿನ ಸಂತಾಪ ಸೂಚಿಸಿ, ಅವರ ಸೇವೆಯನ್ನು ಸದನ ಸ್ಮರಿಸಿತು.

ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿ, ವಿಧಾನ ಪರಿಷತ್ತಿನ ಮಾಜಿ ಸಚಿವ ರಾಮಚಂದ್ರಗೌಡ, ಸಚಿವರಾಗಿದ್ದ ಡಿ. ಸುಧಾಕರ್, ಮಾಜಿ ಸಚಿವ ವೆಂಕಟರಮಣಪ್ಪ, ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷ ಸಿ. ವೀರಣ್ಣ, ಮಾಜಿ ಸಂಸದ ಎಚ್. ಹನುಮಂತಪ್ಪ, ಬರಹಗಾರ ಡಾ. ಎಸ್. ಆರ್.ರಾಮಸ್ವಾಮಿ, ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ, ರಂಗ ಕಲಾವಿದ ಹಾಗೂ ಮೀನುಗಾರರ ಮುಖಂಡ ರಾಮಚಂದರ್ ಬೈಕಂಪಾಡಿ, ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಹಿನ್ನೆಲೆ ಗಾಯಕಿ ಎಸ್. ಜಾನಕಿ, ಹಿರಿಯ ಲೇಖಕಿ ಸಿ.ಎನ್. ಮುಕ್ತಾ, ಪುರಾತತ್ವ ತಜ್ಞ ಪ್ರೊ.ಎ.ವಿ. ನರಸಿಂಹಮೂರ್ತಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ಇದನ್ನೂ ಓದಿ: Bisiyuta: ಬಿಸಿಯೂಟ ನೌಕರರು ಸರಕಾರಗಳಿಗೆ ಬಿಸಿ ಮುಟ್ಟಿಸುವಂತೆ ಸಂಘಟಿತರಾಗಬೇಕು: ಮುಸ್ತಾಫ

ಮೇ.10ರಂದು ಡಿ. ಸುಧಾಕರ್ ಅವರು ವಿವಿ ಸಾಗರ ಹಾಗೂ ಗಾಯತ್ರಿ ಜಲಾಶಯದಿಂದ 112 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬೃಹತ್ ಯೋಜನೆ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ವಿಶೇಷ ಕಾಳಜಿ ವಹಿಸಿದ್ದರು. ಬರಗಾಲದಲ್ಲಿ ರೈತರ ಜಾನುವಾರುಗಳಿಗೆ ಮೇವು ಒದಗಿಸಲು ಸುಮಾರು 500 ಎಕರೆ ಸರಕಾರಿ ಜಮೀನಿನಲ್ಲಿ ಮೇವು ಬೆಳೆಸಿ ಉಚಿತವಾಗಿ ವಿತರಿಸುವ ಮೂಲಕ ರಾಜ್ಯಕ್ಕೆ ಮಾದರಿ ಯಾಗಿದ್ದರು.

2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು ಎಂದು ಹೇಳಿದರು. ದೇವೇಗೌಡರ ನಿವಾಸಕ್ಕೆ ಆಗಮಿಸುತ್ತಿದ್ದ ಅತಿಥಿಗಳಿಗೆ ಚೆನ್ನಮ್ಮ ಅವರು ಆತ್ಮೀಯವಾಗಿ ಊಟೋಪಚಾರ ಮಾಡುತ್ತಿದ್ದ ಕಾರಣ ಅವರನ್ನು ಅನ್ನಪೂರ್ಣೆ ಎಂದು ಕರೆಯಲಾಗುತ್ತಿತ್ತು. ಅವರ ಸರಳ ಜೀವನ ಹಾಗೂ ಮೌಲ್ಯಗಳು ಆದರ್ಶಪ್ರಾಯವಾಗಿದ್ದವು ಎಂದು ಹೇಳಿದರು. ನಂತರ ಸಭಾನಾಯಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂತಾಪ ಸೂಚನೆಗೆ ಅನುಮೋದನೆ ನೀಡಿದರು.

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಿಧನರಾದ ಗಣ್ಯರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರು ಬಿಟ್ಟುಹೋದ ಹೆಜ್ಜೆಗಳು ಮುಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದರು. ಬಿಜೆಪಿ ಸದಸ್ಯ ಸಿ.ಟಿ. ರವಿ ಮಾತನಾಡಿ, ರಾಮಚಂದ್ರಗೌಡ ಅವರು ಬಿಬಿಎಂಪಿ ಸದಸ್ಯ ಸ್ಥಾನದಿಂದ ರಾಷ್ಟ್ರಮಟ್ಟದವರೆಗೆ ಬೆಳೆದಿದ್ದು, ಅವರ ಬದುಕು ಎಲ್ಲರಿಗೂ ಮಾದರಿ ಎಂದರು.

ಸಾಂಸ್ಕೃತಿಕ ನಮನ ಮತ್ತು ಸ್ಮಾರಕಗಳ ಬೇಡಿಕೆ ಕನ್ನಡದ ಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್ ಸದಸ್ಯೆ ಉಮಾಶ್ರೀ, ಅವರ ಅಪಾರ ಕೊಡುಗೆಯನ್ನು ಸ್ಮರಿಸಿದರು.

ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆದ ಹಿನ್ನೆಲೆಯಲ್ಲಿ, ಅವರ ನೆನಪಿಗಾಗಿ ರಾಜ್ಯ ಸರಕಾರ ಒಂದು ಸ್ಮಾರಕವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು. ಇದರ ಬೆನ್ನ ಮಾತನಾಡಿದ ಬಿಜೆಪಿ ಶಾಸಕ ರವಿಕುಮಾರ್, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಯುವಕರಿಗಾಗಿ ದಿ. ಎಸ್. ಜಾನಕಿ ಮತ್ತು ದಿ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆ ಯಾಗಬೇಕೆಂದು ಪ್ರಸ್ತಾವನೆ ಸಲ್ಲಿಸಿದರು.

ದಿ.ಚೆನ್ನಮ್ಮ ಹೆಸರಿಡಲು ಮನವಿ: ಶರವಣ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರು ಮಾಜಿ ಪ್ರಧಾನಿ ಎಚ.ಡಿ. ದೇವೇಗೌಡರ ಧರ್ಮಪತ್ನಿ ದಿ.ಚೆನ್ನಮ್ಮ ದೇವೇಗೌಡರ ಕುರಿತು ಭಾವುಕರಾಗಿ ಮಾತನಾಡಿದರು. ಬಂದವರಿಗೆಲ್ಲ ಅತಿಥಿ ಸತ್ಕಾರ ಮಾಡುತ್ತಾ ‘ಅನ್ನಪೂರ್ಣೇಶ್ವರಿ’ ಎಂದೇ ಖ್ಯಾತ ರಾಗಿದ್ದ ಅಮ್ಮನವರ ಹೆಸರನ್ನು ಸರಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇಡಬೇಕು ಎಂದು ಒತ್ತಾಯಿಸಿದರು. ಇದೇ ಅಭಿಪ್ರಾಯವನ್ನು ಬೆಂಬಲಿಸಿದ ನೂತನ ಸದಸ್ಯ ಮಳವಳ್ಳಿ ಶಿವಣ್ಣ ಅವರು, ಕೇಂದ್ರ ಸರ್ಕಾರದ ಅನ್ನಭಾಗ್ಯ ಯೋಜನೆಗೂ ಚೆನ್ನಮ್ಮ ಅವರ ಹೆಸರಿಡುವಂತೆ ಸರಕಾರವನ್ನು ಒತ್ತಾಯಿಸಿದರು.