ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naavu Nammavaru: ಜು. 27ಕ್ಕೆ ಬೆಂಗಳೂರಿನಲ್ಲಿ ಜೀ ಕನ್ನಡದಿಂದ 'ನೆನಪಿನ ಅಂಗಳ'; ಕುಟುಂಬಗಳ ಜತೆ ಸಂಭ್ರಮಿಸಲು ಸದವಕಾಶ

Naavu Nammavaru: 'ನಾವು ನಮ್ಮವರು' ರಿಯಾಲಿಟಿ ಶೋ ಭಾಗವಾಗಿ ಕುಟುಂಬಗಳ ಜತೆ ಸುಂದರ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ಅವಕಾಶ ಕಲ್ಪಿಸುವ ಸಲುವಾಗಿ ಜೀ ಕನ್ನಡದಿಂದ ಆಯೋಜಿಸಿರುವ ʼನೆನಪಿನ ಅಂಗಳದಲ್ಲಿʼ ಕಾರ್ಯಕ್ರಮವು ಜುಲೈ 27ರಂದು ಮಧ್ಯಾಹ್ನ 3.30ಕ್ಕೆ ವಿಜಯನಗರದ ಗೋವಿಂದರಾಜ ನಗರ ವಾರ್ಡ್‌ನ ಸಂಗೊಳ್ಳಿ ರಾಯಣ್ಣ ರಸ್ತೆಯ ಎಸ್‌ಎಚ್‌ಕೆ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ.

ಜು. 27ಕ್ಕೆ 'ನೆನಪಿನ ಅಂಗಳ'; ಕುಟುಂಬಗಳ ಜತೆ ಸಂಭ್ರಮಿಸಲು ಸದವಕಾಶ

Prabhakara R Prabhakara R Jul 25, 2025 5:57 PM

ಬೆಂಗಳೂರು, 25 ಜುಲೈ 2025: ಕನ್ನಡಿಗರ ನೆಚ್ಚಿನ ವಾಹಿನಿ ಜೀ಼ ಕನ್ನಡ ಜನರನ್ನು ತನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ಮನರಂಜಿಸುತ್ತ ಬಂದಿದೆ. ಈಗ 'ನಾವು ನಮ್ಮವರು' ರಿಯಾಲಿಟಿ ಶೋ ಮೂಲಕ ಜನರ ಮನರಂಜನೆ ಮತ್ತಷ್ಟು ಹೆಚ್ಚಲಿದೆ. ಅಷ್ಟೇ ಅಲ್ಲದೇ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವ ಜೀ಼ ಕನ್ನಡ ಸಂಬಂಧಗಳನ್ನು ಸಂಭ್ರಮಿಸೋಕೆ ನಿಮಗಾಗಿ ಮತ್ತೊಂದು ಸರ್ಪ್ರೈಸ್ ತಂದಿದೆ. ಅದುವೇ 'ನೆನಪಿನ ಅಂಗಳದಲ್ಲಿ' ಆನ್-ಗ್ರೌಂಡ್ ಈವೆಂಟ್'!

ʼನೆನಪಿನ ಅಂಗಳದಲ್ಲಿʼ ಕಾರ್ಯಕ್ರಮವನ್ನು ಜುಲೈ 27ರಂದು ಮಧ್ಯಾಹ್ನ 3.30ಕ್ಕೆ ವಿಜಯನಗರದ ಗೋವಿಂದರಾಜ ನಗರ ವಾರ್ಡ್‌ನ ಸಂಗೊಳ್ಳಿ ರಾಯಣ್ಣ ರಸ್ತೆಯ ಎಸ್‌ಎಚ್‌ಕೆ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ವೀಕ್ಷಕರು, ತಮ್ಮ ಕುಟುಂಬದ ಜತೆಗಿನ ಸುಂದರವಾದ ಹಳೆಯ ನೆನಪುಗಳನ್ನು ಮತ್ತೆ ಮೆಲುಕುಹಾಕಬಹುದಾಗಿದ್ದು, ಇಲ್ಲಿ ಲಗೋರಿ, ಹಾವು ಏಣಿ ಆಟ, ಕುಂಟೆಬಿಲ್ಲೆ, ಗೋಲಿ ಆಟ, ಟೆಂಟ್ ಸಿನೆಮಾ, ಸೈಕಲ್ ಟೈಯರ್ ರೇಸ್ ಮುಂತಾದ ಹಳೆಯ ಆಟಗಳು ಇರಲಿವೆ.

ಈ ಸುದ್ದಿಯನ್ನೂ ಓದಿ |Kundapra Kannada Habba 2025: ಬೆಂಗಳೂರಿನಲ್ಲಿ ಜುಲೈ 26, 27ರಂದು ʼಕುಂದಾಪ್ರ ಕನ್ನಡ ಹಬ್ಬʼ: ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ

ಸ್ಪರ್ಧೆಗಳು, ಮನರಂಜನೆ ಮತ್ತು ಮರೆಯಲಾಗದ ಕ್ಷಣಗಳು ನಿಮಗಾಗಿ ಕಾಯುತ್ತಿವೆ. ಕುಟುಂಬದ ಜತೆ ಬನ್ನಿ, ಸುಂದರ ಸಮಯವನ್ನು ಕಳೆಯಿರಿ ಮತ್ತು ನೆನಪುಗಳನ್ನು ಹೊತ್ತು ತನ್ನಿ. ಅಷ್ಟೇ ಅಲ್ಲದೇ ಪರಸ್ಪರ ಕುಟುಂಬಗಳ ಜತೆ ಸಂಭ್ರಮಿಸಬಹುದು. ನೆನಪಿನಂಗಳದಲ್ಲಿ ಮರೆಯಲಾಗದ ಕ್ಷಣಗಳನ್ನು ಸಂಭ್ರಮಿಸೋಕೆ ತಪ್ಪದೇ ಫ್ಯಾಮಿಲಿ ಜತೆ ಬನ್ನಿ, ಹಬ್ಬ ಮಾಡಿ ಎಂದು ವೀಕ್ಷಕರಲ್ಲಿ ಜೀ಼ ಕನ್ನಡ ಮನವಿ ಮಾಡಿದೆ.