ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmendra Passes away: ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

Actor Dharmendra: 1975ರ ಐಕಾನಿಕ್ ಚಲನಚಿತ್ರ ಶೋಲೇ ಚಿತ್ರೀಕರಣದ ಸಮಯದಲ್ಲಿ ನಟ ಧರ್ಮೇಂದ್ರ ಅವರು ತಮ್ಮ ಸಹನಟಿ ಹೇಮಾ ಮಾಲಿನಿಯವರೊಂದಿಗೆ ಹೆಚ್ಚು ಸಮಯ ಕಳೆಯಲು ಒಂದು ವಿನೋದಭರಿತ ಐಡಿಯಾ ಮಾಡಿದ್ದರು. ರೊಮ್ಯಾಂಟಿಕ್‌ ದೃಶ್ಯವನ್ನು ಮರುಚಿತ್ರೀಕರಿಸಲು, ಅವರು ಸೆಟ್‌ನ ಸ್ಪಾಟ್‌ಬಾಯ್ಸ್‌ಗಳಿಗೆ ತಲಾ ರೂ. 20 ನೀಡಿ ಉದ್ದೇಶಪೂರ್ವಕವಾಗಿ ಶೂಟಿಂಗ್‌ ವೇಳೆ ತಪ್ಪು ಮಾಡುವಂತೆ ಹೇಳಿದ್ದರಂತೆ.

ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

ನಟ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ(ಸಂಗ್ರಹ ಚಿತ್ರ) -

Priyanka P
Priyanka P Nov 24, 2025 2:11 PM

ಬಾಲಿವುಡ್‌ನಲ್ಲಿ ಅನೇಕ ರೊಮ್ಯಾಂಟಿಕ್‌ ಜೋಡಿಗಳನ್ನು ನೋಡಿರುತ್ತೀರಿ. ಕೆಲವರು ವಿವಾಹವಾದರೆ, ಇನ್ನೂ ಕೆಲವು ಜೋಡಿಗಳ ಅಮರ ಪ್ರೇಮ ಕಾವ್ಯ ಮದುವೆವರೆಗೆ ತಲುಪುವುದೇ ಇಲ್ಲ. ಬಹಳ ಹಿಂದಿನಿಂದಲೂ ಬಾಲಿವುಡ್‍ನಲ್ಲಿ ಪ್ರೇಮಪಕ್ಷಿಗಳಿಗೇನೂ ಕೊರತೆಯಿಲ್ಲ. ರೀಲ್‌ನಿಂದ ದಾಂಪತ್ಯ ಜೀವನದವರೆಗೂ ಹಲವರ ಪ್ರೇಮಕಥೆ ಸಾಗಿದೆ. ಆದರೆ, ಆದರೆ, ನಟ ಧರ್ಮೇಂದ್ರ (Actor Dharmendra) ಮತ್ತು ಹೇಮಾಮಾಲಿನಿಯಂತಹ (Hema Malini) ಐಕಾನಿಕ್ ಪ್ರೇಮಕಥೆಗಳಿರುವುದು ಬಹಳ ವಿರಳ. ಅವರು ಪರದೆ ಮೇಲೆ ಸೃಷ್ಟಿಸಿದ ಮಾಯಾಜಾಲ ಮತ್ತು ನಿಜಜೀವನದ ಅವರ ಪ್ರೇಮಕಥೆಯು ಆಳವಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಅವರ ಪ್ರೇಮವು ಸಂಪ್ರದಾಯಗಳನ್ನು ಮೀರಿ ನಿಂತ ಪ್ರೀತಿಯ ಸಂಕೇತವಾಗಿತ್ತು.

ಇಪ್ಪತ್ತು ರೂಪಾಯಿಗೆ ಅಪ್ಪುಗೆ!

ಈ ದಂಪತಿಯ ಐಕಾನಿಕ್ ಪ್ರೇಮಕಥೆಗೆ ಸಂಬಂಧಿಸಿದ ಅನೇಕ ಘಟನೆಗಳಿವೆ. ಆದರೆ ಅವುಗಳಲ್ಲಿ ಬಹುತೇಕರ ಹೃದಯವನ್ನು ಗೆದ್ದ ಘಟನೆಯೊಂದು 1975ರ ಶೋಲೇ ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ನಡೆದಿದೆ. ಧರ್ಮೇಂದ್ರ ಅವರು ಹೇಮಾ ಮಾಲಿನಿಯವರೊಂದಿಗೆ ಹೆಚ್ಚು ಸಮಯ ಕಳೆಯಲು ತಾವೇ ಕಾರಣಗಳನ್ನು ಹುಡುಕುತ್ತಿದ್ದರಂತೆ.

dharmendra Hema malini

Dharmendra: ಧರ್ಮ ಮೀರಿದ ಪ್ರೇಮವಿವಾಹ! ಡ್ರೀಮ್ ಗರ್ಲ್ ಮೇಲೆ ಲವ್; ಧರ್ಮೇಂದ್ರ - ಹೇಮಾ ಮಾಲಿನಿ ಕ್ಯೂಟ್‌ ಪ್ರೇಮ ಕಥೆ ಇದು

ಚಿತ್ರದ ಒಂದು ಪ್ರಸಿದ್ಧ ದೃಶ್ಯದಲ್ಲಿ — ವೀರು (ಧರ್ಮೇಂದ್ರ) ಬಸಂತಿಗೆ (ಹೇಮಾ) ರಿವಾಲ್ವರ್ ಬಳಸುವ ವಿಧಾನವನ್ನು ಕಲಿಸುತ್ತಾನೆ. ಈ ದೃಶ್ಯವನ್ನು ಮತ್ತೆ ಮತ್ತೆ ಚಿತ್ರೀಕರಿಸಲು ಧರ್ಮೇಂದ್ರ ಒಂದು ಐಡಿಯಾ ಮಾಡಿದರು. ಅವರು ಸೆಟ್‌ನ ಸ್ಪಾಟ್‌ಬಾಯ್ಸ್‌ಗಳಿಗೆ ತಲಾ 20 ರೂ. ನೀಡುತ್ತಾ ದೃಶ್ಯವನ್ನು ಉದ್ದೇಶಪೂರ್ವಕವಾಗಿ ತಪ್ಪು ಮಾಡುವಂತೆ ಹೇಳಿದರು. ಹೀಗಾಗಿ ದೃಶ್ಯವನ್ನು ಮರುಚಿತ್ರೀಕರಿಸಬೇಕಾಗಿ ಬಂದು, ಅವರು ಮತ್ತೆ ಮತ್ತೆ ಹೇಮಾಮಾಲಿನಿಯನ್ನು ಅಪ್ಪಿಕೊಳ್ಳುವ ಅವಕಾಶ ಸಿಗುತ್ತಿತ್ತು.

ಈ ತಮಾಷೆಯಯ ಚಿತ್ರೀಕರಣದಲ್ಲಿ ತಾಂತ್ರಿಕ ಸಿಬ್ಬಂದಿಯೂ ಭಾಗಿಯಾದರು. ಕೆಲವೊಮ್ಮೆ ಅವರು ರೆಫ್ಲೆಕ್ಟರ್ ಬಿಸಾಡುತ್ತಿದ್ದರು. ಇನ್ನು ಕೆಲವೊಮ್ಮೆ ಅವರು ಏನಾದರೊಂದು ಚಿಕ್ಕ ತಪ್ಪುಗಳನ್ನು ಮಾಡುತ್ತಿದ್ದರು. ಹಾಗಾಗಿ ಧರ್ಮೇಂದ್ರ ಮತ್ತೆ ಡ್ರೀಮ್ ಗರ್ಲ್ ಅನ್ನು ಅಪ್ಪಿಕೊಳ್ಳುವ ಅವಕಾಶ ಪಡೆಯುತ್ತಿದ್ದರು. ಇದಕ್ಕಾಗಿ ಧರ್ಮೇಂದ್ರ ಅವರು ಅಂದಿನ ಕಾಲದಲ್ಲಿ 2,000 ರೂ.ಗಳಷ್ಟು ಖರ್ಚು ಮಾಡಿದ್ದರಂತೆ. ಆದರೆ ಈ ಕಥೆಯ ಅತ್ಯಂತ ಸುಂದರ ಭಾಗವೇನೆಂದರೆ ಹೇಮಾ ಮಾಲಿನಿಯವರ ಪ್ರತಿಕ್ರಿಯೆ. ಅವರು ಕೋಪಗೊಳ್ಳದೆ ಮತ್ತೆ ದೃಶ್ಯದಲ್ಲಿ ನಟಿಸಲು ಮುಂದಾಗುತ್ತಿದ್ದರಂತೆ. ಇದೇ ಘಟನೆಯು ಅವರ ನಿಜಜೀವನದ ಪ್ರೇಮಕಥೆಯ ಆರಂಭಕ್ಕೆ ಮುನ್ನುಡಿಯಾಯಿತು ಎಂದು ಹೇಳಲಾಗಿದೆ.

Dharmendra: ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ನಿಧನ

ಆದರೆ, ಇವರಿಬ್ಬರ ಪ್ರೇಮಕಥೆಗೆ ಹಲವಾರು ಅಡೆತಡೆಗಳು ಇದ್ದವು. ಧರ್ಮೇಂದ್ರ ಈಗಾಗಲೇ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರು. ಅವರ ಪತ್ನಿ ತನ್ನ ಪತಿಗೆ ವಿಚ್ಛೇದನ ನೀಡಲು ನಿರಾಕರಿಸಿದರು. ಆದರೆ ಹೇಮಾಳಿಂದ ಮೋಹಗೊಂಡ ಧರ್ಮೇಂದ್ರ, ಒಂದು ಹೆಜ್ಜೆ ಮುಂದೆ ಹೋದರು. ಪತ್ನಿ ಡಿವೋರ್ಸ್ ನೀಡದ ಕಾರಣ 1980ರಲ್ಲಿ, ಹೇಮಾಮಾಲಿನಿಯನ್ನು ಕಾನೂನುಬದ್ಧವಾಗಿ ಮದುವೆಯಾಗಲು ಅವರು ಇಸ್ಲಾಂಗೆ ಮತಾಂತರಗೊಳ್ಳಲು ಅಸಾಂಪ್ರದಾಯಿಕ ನಿರ್ಧಾರವನ್ನು ತೆಗೆದುಕೊಂಡರು ಎಂದು ಹೇಳಲಾಗಿದೆ. ಮುಸ್ಲಿಂ ಸಂಪ್ರದಾಯದಂತೆ ಈ ಜೋಡಿ ವಿವಾಹವಾದರು. ಹೇಮಾ ಅವರು ಅಯ್ಯಂಗಾರ್ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ಆ ಸಂಪ್ರದಾಯದಲ್ಲೂ ವಿವಾಹ ಕಾರ್ಯ ನೆರವೇರಿತು ಎಂಬ ಸುದ್ದಿ ಹಬ್ಬಿತ್ತು.

ಇತ್ತೀಚೆಗೆ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರು. ಧರ್ಮೇಂದ್ರ ತಮ್ಮ ಮೊದಲ ಪತ್ನಿ ಜೊತೆ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಧರ್ಮೇಂದ್ರ-ಹೇಮಾಮಾಲಿನಿ ದಂಪತಿಗೆ ಇಶಾ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಧರ್ಮೇಂದ್ರ ತಮ್ಮ ಮೊದಲ ಪತ್ನಿಯ ಇಬ್ಬರು ಪುತ್ರರಾದ ಸನ್ನಿ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ಆಳವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.