Actor Dharmendra: ಧರ್ಮೇಂದ್ರ ಯುಗಾಂತ್ಯ- ದಿಗ್ಗಜ ನಟನ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ
Dharmendra passes away: ಭಾರತೀಯ ಚಿತ್ರರಂಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದಿಂದ ಸಿನಿಮಾ ಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ.
ಧರ್ಮೇಂದ್ರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದರು. -
ಮುಂಬೈ: ಬಾಲಿವುಡ್‍ನ ದಂತಕತೆ ನಟ ಧರ್ಮೇಂದ್ರ (Dharmendra) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸಂತಾಪ ಸಲ್ಲಿಸಿದರು. ಅವರನ್ನು ಅದ್ಭುತ ನಟ ಎಂದು ಕರೆದ ಮೋದಿ, ಧರ್ಮೇಂದ್ರ ಅವರ ನಿಧನವು ಭಾರತೀಯ ಚಿತ್ರರಂಗದ ಒಂದು ಯುಗದ ಅಂತ್ಯ ಎಂದು ಬರೆದಿದ್ದಾರೆ.
ಧರ್ಮೇಂದ್ರ ಅವರ ನಿಧನವು ಭಾರತೀಯ ಚಿತ್ರರಂಗದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಅವರು ಒಬ್ಬ ಅಪ್ರತಿಮ ಚಲನಚಿತ್ರ ವ್ಯಕ್ತಿತ್ವ, ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿರುವ ಅದ್ಭುತ ನಟ. ಅವರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ರೀತಿ ಅಸಂಖ್ಯಾತ ಜನರನ್ನು ಆಕರ್ಷಿಸಿತು. ಧರ್ಮೇಂದ್ರ ಅವರ ಸರಳತೆ, ವಿನಯತೆಗೆ ಮೆಚ್ಚುಗೆ ಪಡೆದಿದ್ದಾರೆ. ಈ ದುಃಖದ ಸಮಯದಲ್ಲಿ, ನನ್ನ ಮನಸ್ಸು ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳೊಂದಿಗೆ ಇವೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
Actor Dharmendra: ಬಾಲಿವುಡ್ ʻಹೀ ಮ್ಯಾನ್ʼ ಸಿನಿ ಜರ್ನಿ ಹೇಗಿತ್ತು ಗೊತ್ತಾ? ಇಲ್ಲಿದೆ ಡಿಟೇಲ್ಸ್
ಇಲ್ಲಿದೆ ಪ್ರಧಾನಿ ಮೋದಿ ಟ್ವೀಟ್:
PM Modi says, "The passing of Dharmendra Ji marks the end of an era in Indian cinema. He was an iconic film personality, a phenomenal actor who brought charm and depth to every role he played. The manner in which he played diverse roles struck a chord with countless people.… pic.twitter.com/2t5Ywij2GU
— ANI (@ANI) November 24, 2025
ಸಿಎಂ ಸಿದ್ದರಾಮಯ್ಯ ಕೂಡ ಧರ್ಮೇಂದ್ರ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದಿಂದ ನಾನು ಆಳವಾದ ದುಃಖ ಅನುಭವಿಸುತ್ತಿದ್ದೇನೆ. ಅವರು ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಸಲ್ಪಟ್ಟ ಐಕಾನಿಕ್ ವ್ಯಕ್ತಿತ್ವಗಳಲ್ಲಿ ಒಬ್ಬರು. ಅವರ ಮರೆಯಲಾಗದ ಅಭಿನಯ ಮತ್ತು ದಶಕಗಳ ಕಾಲ ಸಿನಿಮಾ ಸಂಸ್ಕೃತಿಗೆ ನೀಡಿದ ಕೊಡುಗೆ ಅನೇಕ ತಲೆಮಾರುಗಳ ಮೇಲೆ ಅಚ್ಚಳಿಯದ ಛಾಪು ಬಿತ್ತಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಪರಂಪರೆ ಮುಂದಿನ ತಲೆಮಾರುಗಳನ್ನು ಪ್ರೇರೇಪಿಸುತ್ತಿರಲಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಸಿಎಂ ಸಿದ್ಧರಾಮಯ್ಯ ಟ್ವೀಟ್
ಹಲವು ದಶಕಗಳಿಂದ ಬಾಲಿವುಡ್ ಅನ್ನು ಆಳಿದ ಧರ್ಮೇಂದ್ರ ಅವರು ನವೆಂಬರ್ 24ರಂದು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಧರ್ಮೇಂದ್ರ, ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು. ಧರ್ಮೇಂದ್ರ ಅವರು ಈಚೆಗೆ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನಿಧನರಾಗಿಬಿಟ್ಟರು ಎಂಬ ವದಂತಿಗಳು ಹರಿದಾಡಿ ಗೊಂದಲ ಉಂಟಾಗಿತ್ತು. ಕುಟುಂಬ ಸದಸ್ಯರಿಗೂ ಅದು ನೋವು ತಂದಿತ್ತು. ಆದರೆ ಆನಂತರ ಚೇತರಿಸಿಕೊಂಡ ಧರ್ಮೇಂದ್ರ ಅವರು ಮನೆಗೆ ಶಿಫ್ಟ್ ಆಗಿದ್ದರು. ಆದರೆ, ಸೋಮವಾರ, 89 ವರ್ಷದ ಹಿರಿಯ ನಟ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದ ದೀರ್ಘಕಾಲದ ಹೋರಾಟದ ನಂತರ ಕೊನೆಯುಸಿರೆಳೆದರು.
Deeply grieved by the demise of veteran actor Shri Dharmendra - one of Indian cinema’s most beloved icons.
— Siddaramaiah (@siddaramaiah) November 24, 2025
His unforgettable performances, humane screen presence and decades of contribution to film culture have left an indelible mark on generations.
My heartfelt condolences to… pic.twitter.com/70OJLvQbEq
ಧರ್ಮೇಂದ್ರ ಅವರು ಜನಿಸಿದ್ದು ಡಿಸೆಂಬರ್ 8, 1935ರಂದು. 15 ದಿನ ಕಳೆದಿದ್ದರೆ, ಅವರ 90ನೇ ಹುಟ್ಟುಹಬ್ಬವನ್ನು ತುಂಬಾ ಅದ್ಧೂರಿಯಾಗಿ ಮಾಡುವುದಕ್ಕೆ ಇಡೀ ಡಿಯೋಲ್ ಫ್ಯಾಮಿಲಿ ಕಾತರದಿಂದ ಕಾದಿತ್ತು. ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರ 90ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಧರ್ಮೇಂದ್ರ ಉಸಿರು ಚೆಲ್ಲಿದ್ದಾರೆ.