ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Year celebrations: ಹೊಸ ವರ್ಷಾಚರಣೆ; ಬೆಂಗಳೂರಿನಾದ್ಯಂತ ಬಿಗಿ ಭದ್ರತೆ; ತನಿಖಾ ಸಂಸ್ಥೆಗಳು ಹೈ ಅಲರ್ಟ್‌

ಕೆಲವೇ ದಿನಗಳಲ್ಲಿ 2025 ಮುಗಿಯಲಿದ್ದು, ಹೊಸ ವರ್ಷ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ತುಸು ಹೆಚ್ಚಾಗಿಯೇ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲರ್ಟ್​​ ಆಗಿದ್ದಾರೆ.​​

ಸಾಂಧರ್ಬಿಕ ಚಿತ್ರ

ಬೆಂಗಳೂರು: ಕೆಲವೇ ದಿನಗಳಲ್ಲಿ 2025 ಮುಗಿಯಲಿದ್ದು, ಹೊಸ ವರ್ಷ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. (New Year celebrations) ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ತುಸು ಹೆಚ್ಚಾಗಿಯೇ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲರ್ಟ್​​ ಆಗಿದ್ದಾರೆ.​​ ನಗರದಾದ್ಯಂತ ಬ್ಯಾರಿಕೆಡ್ ಹಾಕಿ ವಾಹನಗಳ ಪರಿಶೀಲನೆ ಕಾರ್ಯ ಅದಾಗಲೇ ಆರಂಭವಾಗಿದೆ. ಮಾದಕ ವಸ್ತುಗಳ ಸಾಗಾಟ, ಮಾರಾಟದ ಬಗ್ಗೆ ಮುಖ್ಯವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಎಲ್ಲಾ ಠಾಣೆ ವ್ಯಾಪ್ತಿಗಳಲ್ಲಿ ಪೊಲೀಸ್​​ ತಪಾಸಣೆ ನಡೆಯುತ್ತಿದೆ.

ಎಂ.ಜಿ. ರೋಡ್​​, ಬ್ರಿಗೆಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದ 80 ಫೀಟ್ ರಸ್ತೆ, ಇಂದಿರಾನಗರದ 100 ಫೀಟ್ ರಸ್ತೆ ಸೇರಿ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಹೊಸ ವರ್ಷ ಆಚರಣೆ ವೇಳೆ ನಗರದ ಮೇಲೆ ಹದ್ದಿನ ಕಣ್ಣಿಡಲಿರುವ ಡ್ರೋಣ್ ಕ್ಯಾಮರಾಗಳ ಬಗ್ಗೆ ತರಬೇತಿ ಸಂಬಂಧ ಪ್ರಾಯೋಗಿಕ ಹಾರಾಟವೂ ನಡೆಯುತ್ತಿದೆ. ಈಗಾಗಲೇ ಹೊಸ ವರ್ಷಾಚರಣೆಗೆ ಪೊಲೀಸರು ಕೆಲ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಪಿಜಿಗಳಿಗೂ ಕಟ್ಟುನಿಟ್ಟಿನ ನಿಯಮವನ್ನು ವಿಧಿಸಲಾಗಿದೆ.

ಪಿ.ಜಿ.ಗಳ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್ ಕಟ್ ಮಾಡಬಾರದು. ಮಹಿಳಾ ಪಿಜಿಗಳಿಗೆ ಶುಭ ಕೋರಲು ಬರುವ ಪುರುಷರಿಗೆ ಅವಕಾಶ ನೀಡಬಾರದು. ಪಿ.ಜಿ. ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಅದಕ್ಕೆ ಮಾಲೀಕರೆ ಹೊಣೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಪಬ್‌ ಮಾಲೀಕರೊಂದಿಗೆ ಸಭೆ ನಡೆಸಿದ ಪೊಲೀಸರು ಪಬ್, ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು. ಕಾರ್ಯಕ್ರಮ ಆಯೋಜಿಸುವ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು. ಸಿಸಿಟಿವಿ ಫೂಟೇಟ್ ಬ್ಯಾಕಪ್‌ ಇಟ್ಟುಕೊಳ್ಳುವುದು. ಕಾರ್ಯಕ್ರಮಕ್ಕೆ ಬರುವ ಗ್ರಾಹಕರ ಬ್ಯಾಗ್‌, ಲಗೇಜ್‌ಗಳನ್ನು ತಪ್ಪದೇ ಚೆಕ್ ಮಾಡುವುದು. ಯಾವುದೇ ಆಯುಧ, ಸ್ಫೋಟಕ, ಗಾಂಜಾ ಮತ್ತು ಇತರೆ ಮಾದಕ ವಸ್ತು ಇಲ್ಲದಿರುವ ಬಗ್ಗೆ ಖಚಿತಪಡಿಕೊಳ್ಳುವುದರ ಕುರಿತು ಸೂಚನೆ ನೀಡಿದ್ದಾರೆ.

New Year Celebration rules: ಹೊಸ ವರ್ಷಾಚರಣೆಗೆ ದಿನಗಣನೆ ಶುರು: ಬಿಗಿ ಗೈಡ್‌ಲೈನ್ಸ್‌ ಜಾರಿ ಮಾಡಿದ ಪೊಲೀಸ್‌ ಇಲಾಖೆ!

ದೆಹಲಿ ಸ್ಫೋಟದ ನಂತರ ದೇಶಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಹೊಸ ವರ್ಷಾಚರಣೆಯ ಸಾಧಕ ಬಾಧಕಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್​​ಗಳಲ್ಲಿನ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ. ಸಿಸಿಟಿವಿ, ಅಲ್ಲಿನ ಸೆಕ್ಯೂರಿಟಿ ವ್ಯವಸ್ಥೆ, ಬೌನ್ಸರ್ ಗಳ ವ್ಯವಸ್ಥೆ, ಎಮೆರ್ಜೆನ್ಸಿ ಎಕ್ಸಿಟ್ ಸೇರಿದಂತೆ ಹಲವು ಸುರಕ್ಷತೆಯ ನಿಯಮಗಳ ಕುರಿತು ಪರಿಶೀಲನೆ ನಡೆಸಲಾಗಿದೆ.