ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಸಂವಾದದಲ್ಲಿ ಸೇರಿಕೊಂಡ ನೋಬೆಲ್ ಬಹುಮಾನ ಪುರಸ್ಕೃತರು

ಭಾರತಕ್ಕೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿ ದೇಶದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಮಾನ್ಯ ಜನರನ್ನು ಭೇಟಿಯಾಗಲು ನಾನು ಬಹಳ ಕೌತುಕಗೊಂಡಿದ್ದೇನೆ. ಭಾರತದಲ್ಲಿ ವಿಜ್ಞಾನಕ್ಕೆ ಇರುವ ಉತ್ಕಂಟತೆಯು ನಿಜವಾಗಿಯೂ ಪ್ರೇರಣೆ ನೀಡುವಂತಹುದು ಮತ್ತು ಸಂಶೋಧನೆ ಹಾಗೂ ಆವಿಷ್ಕಾರದ ಭವಿಷ್ಯತ್ತಿನ ಕುರಿತು ಪರಿಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ

ಭಾರತದಲ್ಲಿ ಸಂವಾದದಲ್ಲಿ ಸೇರಿಕೊಂಡ ನೋಬೆಲ್ ಬಹುಮಾನ ಪುರಸ್ಕೃತರು

-

Ashok Nayak Ashok Nayak Oct 30, 2025 2:56 PM

ನವಂಬರ್ 3-5, ನೊಬೆಲ್ ಬಹುಮಾನ ಸಂವಾದವು, ಬೆಂಗಳೂರು ಹಾಗೂ ಮುಂಬೈನಲ್ಲಿನ ಒಂದು ವಿಶೇಷ ಅವಳಿ ಕಾರ್ಯಕ್ರಮಕ್ಕಾಗಿ ಬರಲಿದೆ. ಟಾಟಾ ಟ್ರಸ್ಟ್ಸ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಸಂವಾದವು ಯುವಜನರು ಹೆಚ್ಚು ತೊಡಗಿಕೊಳ್ಳುವಂತಹ, ದೀರ್ಘಕಾಲ ಇರುವಂತಹ ಮತ್ತು ಸಮಾನತೆಯುಳ್ಳ ಭವಿಷ್ಯತ್ತನ್ನು ರೂಪಿಸಲು ಜ್ಞಾನ, ಸೃಜನಶೀಲತೆ ಹಾಗೂ ಹೂಡಿಕೆ ಕಾರಣವಾ ಗಬಲ್ಲದು ಎಂಬುದನ್ನು ಶೋಧಿಸಲು ಮುಂಚೂಣಿ ಚಿಂತಕರು ಹಾಗೂ ನೋಬೆಲ್ ಬಹುಮಾನ ಪುರಸ್ಕೃತರನ್ನು ಒಂದುಗೂಡಿಸಲಿದೆ.

“ಭಾರತಕ್ಕೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿ ದೇಶದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಮಾನ್ಯ ಜನರನ್ನು ಭೇಟಿಯಾಗಲು ನಾನು ಬಹಳ ಕೌತುಕಗೊಂಡಿದ್ದೇನೆ. ಭಾರತದಲ್ಲಿ ವಿಜ್ಞಾನಕ್ಕೆ ಇರುವ ಉತ್ಕಂಟತೆಯು ನಿಜವಾಗಿಯೂ ಪ್ರೇರಣೆ ನೀಡುವಂತಹುದು ಮತ್ತು ಸಂಶೋಧನೆ ಹಾಗೂ ಆವಿಷ್ಕಾರದ ಭವಿಷ್ಯತ್ತಿನ ಕುರಿತು ಪರಿಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.” ಎಂದು ಹೇಳಿದರು, ಕಾರ್ಯಕ್ರಮದಲ್ಲಿ ಸೇರಿಕೊಳ್ಳುತ್ತಿರುವ ನೋಬೆಲ್ ಬಹುಮಾನ ಪುರಸ್ಕೃತರ ಪೈಕಿ ಒಬ್ಬರಾದ ಡೇವಿಡ್ ಮ್ಯಾಕ್‌ ಮಿಲನ್.

ಇದನ್ನೂ ಓದಿ: Gururaj Gantihole Column: ಶತಕೋಟಿ ಸರದಾರ ಬಿಎಸ್‌ʼಎನ್‌ʼಎಲ್‌ ಪುಟಿದೆದ್ದು ನಿಲ್ಲುವುದೇ !?

ನಮಗೆ ಬೇಕಾದ ಭವಿಷ್ಯತ್ತು(The Future We Want) ಎಂಬ ಥೀಮ್‌ನೊಂದಿಗೆ ಭಾರತ ಸಂವಾದ ಗಳು, ಜ್ಞಾನ, ಸೃಜನಶೀಲತೆ ಹಾಗೂ ನಮ್ಮ ಯುವಜನತೆಯಲ್ಲಿ ಬಲವಾದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಹೂಡಿಕೆಗಳ ಮೂಲಕ ದೇಶಗಳು ಯಾವ ರೀತಿ ಪ್ರಗತಿ ಸಾಧಿಸಬಹುದು ಎಂಬುದರ ಮೇಲೆ ಪ್ರತಿಫಲಿಸಲಿವೆ. ಇದು ಭವಿಷ್ಯಮುಖಿಯಾಗಿದ್ದು ಹೆಚ್ಚು ಒಳಗೊಳ್ಳುವಂತಹ, ದೀರ್ಘಕಾಲ ಇರುವಂತಹ ಮತ್ತು ಸಮಾನತೆಯುಳ್ಳ ಆನಂದ, ಅದ್ಭುತ ಹಾಗೂ ಆವಿಷ್ಕಾರದ ಜಗತ್ತನ್ನು ಯಾವ ರೀತಿ ನಿರ್ಮಾಣ ಮಾಡಬಹುದು ಎಂಬುದರ ಕುರಿತಾಗಿರುತ್ತದೆ. ಈ ಕಾರ್ಯ ಕ್ರಮವು, ಮುಂಬರುವ ದಶಕವನ್ನು ರೂಪಿಸುವ ಮೆಗಾಟ್ರೆಂಡ್ಸ್(ಬೃಹತ್ ಪ್ರವೃತ್ತಿಗಳು) ಮೇಲೆ ಭಾಷಣಗಳು ಮತ್ತು ಪ್ಯಾನಲ್ ಚರ್ಚೆಗಳನ್ನು ಒಳಗೊಂಡಿರುತ್ತದೆ.

ಕಾರ್ಯಕ್ರಮಗಳು ನೋಬೆಲ್ ಬಹುಮಾನ ಪುರಸ್ಕೃತ ಜೇಮ್ಸ್ ರಾಬಿನ್ಸನ್(ಆರ್ಥಿಕತೆ ವಿಜ್ಞಾನಗಳು, 2024) ಮತ್ತು ಡೇವಿಡ್ ಮ್ಯಾಕ್‌ಮಿಲನ್(ರಸಾಯನ ಶಾಸ್ತ್ರ, 2021) ಇವರುಗಳ ಜೊತೆಜೊತೆಗೇ ಸುಪ್ರಸಿದ್ಧ ತಜ್ಞರಾದ ತೊಲುಲಾಹ್ ಓನಿ, ಗಗನ್‌ದೀಪ್ ಕಾಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಕುಶ್ ಪಾರ್ಮರ್ ಅವರುಗಳನ್ನು ಒಳಗೊಂಡಿರುತ್ತದೆ.

“ಸುಮಾರು 125 ವರ್ಷಗಳಿಂದ, ಮಾನವಕುಲಕ್ಕೆ ಅತ್ಯಂತ ಹೆಚ್ಚು ಪ್ರಯೋಜನವನ್ನು ನೀಡಿ ದವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ಭಾರತದಲ್ಲಿ ನಡೆಯುವ ಸಂವಾದಗಳಿಗೆ ನಾವು ನಮ್ಮೊಂದಿಗೆ ತಿಳುವಳಿಕೆ, ಸೃಜನಶೀಲತೆ ಮತ್ತು ಸಹಕಾರದ ಮಹತ್ವವನ್ನು ಪ್ರತಿಬಿಂಬಿಸುವ ಕಥೆಗಳನ್ನು ತರುತ್ತಿದ್ದೇವೆ. ನೋಬೆಲ್ ಪ್ರಶಸ್ತಿಯ ಆಧಾರಿತ ಪರಿಣಾಮಕಾರಿ ಕಥೆಗಳು, ದೇಶದಾ ದ್ಯಂತ ಮನಸ್ಸುಗಳನ್ನು ಪ್ರೇರೇಪಿಸಿ, ನಾವು ಬಯಸುವ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವಂತಿವೆ,” ಎಂದು ನೋಬೆಲ್ ಫೌಂಡೇಶನ್‌ನ ಕಾರ್ಯನಿರ್ವಹಣಾ ನಿರ್ದೇಶಕಿ ಹನ್ನಾ ಸ್ಟ್ಯಾರ್ನೆ ಹೇಳಿದರು.

ಟಾಟಾ ಟ್ರಸ್ಟ್‌ಗಳ ಸಿಇಒ ಸಿದ್ಧಾರ್ಥ್ ಶರ್ಮಾ ಹೇಳಿದರು: “ಟಾಟಾ ಟ್ರಸ್ಟ್‌ಗಳು ಶತಮಾನಕ್ಕಿಂತ ಹೆಚ್ಚು ಕಾಲದಿಂದ ನಮ್ಮ ಸಮುದಾಯಗಳೊಂದಿಗೆ ಕೈಜೋಡಿಸಿ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ವರ್ಗಗಳನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿವೆ. ಭಾರತದ ಅತ್ಯಂತ ಹಳೆಯ ದಾನಶೀಲ ಸಂಸ್ಥೆಯಾಗಿರುವ ಮತ್ತು ಏಷ್ಯಾದಲ್ಲಿಯೇ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ನಮ್ಮ ಪರಂಪರೆ, ಸಮಾಜಕ್ಕೆ ಹಿಂತಿರುಗಿಸುವ ಮನೋಭಾವ ಮತ್ತು ಉತ್ತಮ ನಾಳೆ ಯನ್ನು ರೂಪಿಸುವ ಕಲ್ಪನೆಗಳನ್ನು ಬೆಂಬಲಿಸುವ ಧೋರಣೆಯಲ್ಲಿ ಬೇರೂರಿದೆ. ನೋಬೆಲ್ ಪ್ರೈಸ್ ಔಟ್ರೀಚ್‌ನೊಂದಿಗೆ ನಮ್ಮ ಸಹಭಾಗಿತ್ವವು ಸಮಾನತೆಯುತ ಸಮಾಜವನ್ನು ನಿರ್ಮಿಸಲು ಮತ್ತು ಅಧ್ಯಯನ, ಆವಿಷ್ಕಾರ ಮತ್ತು ಒಳಗೊಳ್ಳುವಿಕೆಯ ಮೂಲಕ ಮಾನವ ಪ್ರಗತಿಯನ್ನು ಮುಂದು ವರಿಸಲು ಇರುವ ನಮ್ಮ ಸಂಯುಕ್ತ ಬದ್ಧತೆಯನ್ನು ಆಚರಿಸುತ್ತದೆ.”

ನೋಬೆಲ್ ಬಹುಮಾನ ಸಂವಾದವನ್ನು ನೋಬೆಲ್ ಪ್ರೈಜ್ ಔಟ್‌ರೀಚ್ ಮತ್ತು ಟಾಟಾ ಟ್ರಸ್ಟ್ಸ್, ನೋಬೆಲ್ ಇಂಟರ್ ನ್ಯಾಷನಲ್ ಭಾಗೀದಾರರಾದ ಎಬಿಬಿ, ಇಕ್ಯುಟಿ, ಸ್ಕೇನಿಯ ಮತ್ತು ಸ್ಟೆಗ್ರಾ(ABB, EQT, Scania and Stegra)ದ ಬೆಂಬಲದೊಂದಿಗೆ ಸಂಘಟಿಸುತ್ತಿದೆ.