ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Hunj: ಕ್ರಿಮಿನಲ್ ಪ್ರಕರಣ ದಾಖಲಿಸಿರುವ ರಾಜ್ಯ ಸರಕಾರದ ಕ್ರಮದ ಬಗೆ ಆಕ್ಷೇಪ: ಅಮೆರಿಕ ರಾಯಭಾರ ಕಚೇರಿಗೆ ಲೇಖಕ ರವಿ ಹಂಜ್‌ ಮನವಿ

ಐತಿಹಾಸಿಕ ದಾಖಲೆಗಳು, ಧಾರ್ಮಿಕ ಗ್ರಂಥಗಳು ಹಾಗೂ ಪ್ರಕಟಿತ ಸಾಹಿತ್ಯದ ಆಧಾರದಲ್ಲಿ ಸಂಶೋ ಧನಾತ್ಮಕ ಚರ್ಚೆ ನಡೆಸುವುದು ತಮ್ಮ ಕೃತಿಯ ಉದ್ದೇಶವಾಗಿದ್ದು, ಯಾವುದೇ ಧಾರ್ಮಿಕ ಸಮುದಾಯ ಅಥವಾ ವ್ಯಕ್ತಿಗೆ ಅವಮಾನ ಮಾಡುವ ಉದ್ದೇಶವಿಲ್ಲ ಎಂದು ರವಿ ಹಂಜ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ತಮ್ಮ ಪುಸ್ತಕ ನಿಷೇಧ ಹಾಗೂ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಕರ್ನಾಟಕ ಸರಕಾರದ ಕ್ರಮದ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕದ ಪ್ರಜೆ ರವಿ ಹಂಜ್(Ravi Hunj), ಈ ವಿಚಾರದಲ್ಲಿ ರಾಜ ತಾಂತ್ರಿಕ ಮತ್ತು ದೂತವಾಸದ ನೆರವು ನೀಡುವಂತೆ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ. ರಾಯಭಾರ ಕಚೇರಿಗೆ ಅವರು ಸಲ್ಲಿಸಿದ ಮನವಿಯಲ್ಲಿ ಕೆಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

ಅಮೆರಿಕದ ಚಿಕಾಗೊ ಸಮೀಪದ ಇಲಿನಾಯ್ಸ್‌ನಲ್ಲಿ ನೆಲೆಸಿರುವ ನಾನು, ಕರ್ನಾ ಟಕದ ವೀರಶೈವ-ಲಿಂಗಾಯತ ಧಾರ್ಮಿಕ ಪರಂಪರೆಯ ಮೂಲ, ಐತಿಹಾಸಿಕ ಬೆಳವಣಿಗೆ, ತಾತ್ವಿಕ ನೆಲೆ ಮತ್ತು ಸಮಕಾಲೀನ ಸ್ಥಿತಿಗತಿ ವಿಶ್ಲೇಷಿಸಿ ಈ ಹಿಂದೆ ಪ್ರಕಟಿಸಿದ್ದ ಲೇಖನಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ.

ಐತಿಹಾಸಿಕ ದಾಖಲೆಗಳು, ಧಾರ್ಮಿಕ ಗ್ರಂಥಗಳು ಹಾಗೂ ಪ್ರಕಟಿತ ಸಾಹಿತ್ಯದ ಆಧಾರದಲ್ಲಿ ಸಂಶೋಧನಾತ್ಮಕ ಚರ್ಚೆ ನಡೆಸುವುದು ತಮ್ಮ ಕೃತಿಯ ಉದ್ದೇಶವಾಗಿದ್ದು, ಯಾವುದೇ ಧಾರ್ಮಿಕ ಸಮುದಾಯ ಅಥವಾ ವ್ಯಕ್ತಿಗೆ ಅವಮಾನ ಮಾಡುವ ಉದ್ದೇಶವಿಲ್ಲ ಎಂದು ರವಿ ಹಂಜ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Ravi Hunj Column: ಸಾಂಸ್ಕೃತಿಕ ಕ್ಷೇತ್ರದ ಮೇಲೆ ದಾಳಿ...ಯಾರಿಂದ !?

ಆದರೆ, ವಿಶ್ವವಾಣಿ ಟಿವಿಗೆ ನೀಡಿದ್ದ ಸುಮಾರು 90 ನಿಮಿಷಗಳ ಸಂದರ್ಶನದಿಂದ ಆಯ್ದ ಎರಡು ನಿಮಿಷಗಳ ವಿಡಿಯೊ ತುಣುಕನ್ನು ಕತ್ತರಿಸಿ, ಸಂದರ್ಭದಿಂದ ಬೇರ್ಪಡಿಸಿ ಸಾಮಾಜಿಕವಾಗಿ ಹರಿಬಿಡುವ ಮೂಲಕ ತಮ್ಮ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹಂಜ್ ಆರೋಪಿಸಿದ್ದಾರೆ.

ಸಂಪೂರ್ಣ ಸಂದರ್ಶನ ಗಮನಿಸಿದರೆ ತಮ್ಮ ಹೇಳಿಕೆಗಳ ಹಿನ್ನೆಲೆ ಮತ್ತು ಉದ್ದೇಶ ಸ್ಪಷ್ಟವಾಗಲಿದೆ. ಆದರೂ ಆಯ್ದ ವಿಡಿಯೊ ತುಣುಕುಗಳಿಂದ ಉಂಟಾದ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ತಮ್ಮ ಪುಸ್ತಕ ನಿಷೇಧಿಸಲು ನಿರ್ಧರಿಸಿದ್ದು, ತಮ್ಮ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆಗಳನ್ನೂ ಆರಂಭಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಪೂರ್ಣ ಕೃತಿ ಪರಿಶೀಲಿಸದೆ ಕ್ರಮದ ಆರೋಪ: ಪುಸ್ತಕದ ಸಂಪೂರ್ಣ ವಿಷಯ ಹಾಗೂ 90 ನಿಮಿಷಗಳ ಸಂದರ್ಶನವನ್ನು ಸಮಗ್ರವಾಗಿ ಪರಿಶೀಲಿಸದೆ, ಸಾರ್ವಜನಿಕ ಒತ್ತಡ ಮತ್ತು ತಪ್ಪಾಗಿ ಬಿಂಬಿಸಲಾದ ವಿಡಿಯೊ ಆಧರಿಸಿ ಸರಕಾರ ಕ್ರಮ ಕೈಗೊಂಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ, ಬೌದ್ಧಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ಕಾನೂನು ವ್ಯವಸ್ಥೆಯನ್ನು ಗೌರವಿಸುತ್ತೇನೆ ಹಾಗೂ ಕಾನೂನುಬದ್ಧ ವಿಚಾರಣೆಗಳಿಗೆ ಸಹಕರಿಸಲು ಸಿದ್ಧ, ಯಾವುದೇ ವ್ಯಕ್ತಿಯ ವಿರುದ್ಧದ ಕ್ರಮವು ರಾಜಕೀಯ ಒತ್ತಡ ಅಥವಾ ತಪ್ಪು ಮಾಹಿತಿಯ ಬದಲಿಗೆ ಸಂಪೂರ್ಣ ಸಾಕ್ಷ್ಯಾಧಾರಗಳ ವಸ್ತುನಿಷ್ಠ ಪರಿಶೀಲನೆಯ ಮೇಲೆ ಆಧಾರಿತವಾಗಿರಬೇಕು ಎಂದು ಮನವಿಯಲ್ಲಿ ಹೇಳಿದ್ದಾರೆ.

ರಾಜತಾಂತ್ರಿಕ ಹಸ್ತಕ್ಷೇಪಕ್ಕೆ ಮನವಿ: ಅಮೆರಿಕದ ರಾಯಭಾರ ಕಚೇರಿ ಮತ್ತು ಶಿಕಾಗೊದಲ್ಲಿರುವ ಅಮೆರಿಕದ ದೂತಾವಾಸವು ಪ್ರಸ್ತುತ ಪ್ರಕರಣವನ್ನು ಅಮೆರಿಕದ ಪ್ರಜೆಯ ಹಕ್ಕುಗಳಿಗೆ ಸಂಬಂಧಿ ಸಿದ ವಿಚಾರವಾಗಿ ಪರಿಗಣಿಸಬೇಕು. ಪುಸ್ತಕ ನಿಷೇಧ ಮತ್ತು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಕುರಿತು ಭಾರತೀಯ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಲು ಸೂಕ್ತ ರಾಜತಾಂತ್ರಿಕ ಹಾಗೂ ದೂತಾವಾಸದ ಮಾರ್ಗಗಳ ಮೂಲಕ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಪುಸ್ತಕದ ಸಂಪೂರ್ಣ ವಿಷಯ ಮತ್ತು ಸಂದರ್ಶನ ಪರಿಶೀಲಿಸುವಂತೆ ಸಂಬಂಧಪಟ್ಟ ಭಾರತೀಯ ಅಧಿಕಾರಿಗಳಿಗೆ ಸಲಹೆ ನೀಡಬೇಕು, ಭಾರತದಲ್ಲಿ ನ್ಯಾಯಸಮ್ಮತ ನ್ಯಾಯ ಪ್ರಕ್ರಿಯೆ ಪಡೆಯಲು ತಮ್ಮ ಹಕ್ಕುಗಳು ಮತ್ತು ಕಾನೂನು ರಕ್ಷಣೆಗಳ ಕುರಿತು ಮಾರ್ಗದರ್ಶನ ನೀಡಬೇಕು ಹಾಗೂ ತಮ್ಮ ಆತಂಕಗಳನ್ನು ಅಮೆರಿಕದ ವಿದೇಶಾಂಗ ಇಲಾಖೆಯ ಗಮನಕ್ಕೆ ತರಬೇಕು ಎಂದು ಲೇಖಕ ರವಿ ಹಂಜ್ ಮನವಿ ಮಾಡಿದ್ದಾರೆ.

ಪೊಲೀಸರಿಂದ ವಿಚಾರಣೆ, ಬಳಿಕ ಬಿಡುಗಡೆ

ಇನ್ನು ಈ ನಡುವೆ ಬೆಳಗಾವಿ ಮಾರ್ಕೆಟ್ ಹಾಗೂ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಚ್ಚಿಯಲ್ಲಿ ನೋಟಿಸ್ ನೀಡಿ ರವಿ ಹಂಜ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಸೋಮವಾರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ. ವಿಚಾರಣೆ ವೇಳೆ ಬಸವಣ್ಣನವರನ್ನು ನಿಂದಿಸಿಲ್ಲ. ನಿಂದಿಸೋ ರೀತಿಯ ಪುಸ್ತಕದಲ್ಲಿ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ವಿಚಾರಣೆಯ ಬಳಿಕ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ರವಿ ಹಂಜ್ ಅವರು, ‘ನನ್ನನ್ನು ಬಂಽಸಿಲ್ಲ. ವಿಚಾರಣೆ ನಡೆಸಿ ಬಿಡುಗಡೆ ಗೊಳಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ