ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Women Walkathon: ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು 3ನೇ ಆವೃತ್ತಿಯ “ವುಮೆನ್‌ ವಾಕಥಾನ್‌” ಆಯೋಜನೆ

ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ವಾಕಥಾನ್‌ನನ್ನು ಯಶಸ್ವಿ ಗೊಳಿಸಿದರು. ಈ ಮೂಲಕ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ ಬಗ್ಗೆ ಆದ್ಯತೆ ನೀಡಬೇಕು ಎಂಬುದನ್ನು ಸಾರಿ ಹೇಳಿದರು. ಎಲ್ಲಾ ವಯಸ್ಸಿನ ಮಹಿಳೆಯರು ಆರೋ ಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬ ಸಂದೇಶವನ್ನು ಈ ಮೂಲಕ ಎಲ್ಲರಿಗೂ ತಿಳಿಸ ಲಾಯಿತು.

"ಮಹಿಳಾ ದಿನಾಚರಣೆ" ಪ್ರಯುಕ್ತ 3ನೇ ಆವೃತ್ತಿಯ "ಮಹಿಳಾ ವಾಕಥಾನ್‌"

Profile Ashok Nayak Mar 4, 2025 9:20 AM

ಬೆಂಗಳೂರು: ಮಹಿಳೆಯರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಲ್ಟಿಯಸ್‌ ಆಸ್ಪತ್ರೆಯ ನೇತೃತ್ವದಲ್ಲಿ "ಮಹಿಳಾ ದಿನಾಚರಣೆ" ಪ್ರಯುಕ್ತವಾಗಿ 3ನೇ ಆವೃತ್ತಿಯ "ಮಹಿಳಾ ವಾಕಥಾನ್‌"ನನ್ನು ಆಯೋ ಜಿಸಿತ್ತು. ಡೆಂಟಲ್‌ ಡೆನ್‌ ನಿರ್ದೇಶಕಿ ಡಾ.ಲಕ್ಷ್ಮಿ ರೂಪೇಶ್‌ ಹಾಗೂ ಅವರ ತಂಡ ಬಿಯಾಂ ಡ್‌ ಎಕ್ಸಲೆನ್ಸ್‌ ಸ್ಪೋಟ್ಸ್‌ ಟ್ರಸ್ಟ್‌ ಆಯೋಜಿಸಿದ್ದ ವುಮೆನ್‌ ವಾಕಥಾನ್‌ ಬೆಂಗಳೂರಿನ ಕಲ್ಯಾಣ ನಗರದ ಕೆಬಿಸಿ ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌ನಿಂದ ಪ್ರಾರಂಭಗೊಂಡಿತು. ಆಲ್ಟಿಯಸ್‌ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರಿಯಾ ಎಸ್‌. ಪಿ. ಪಾಟೀಲ್‌ ಹಾಗೂ ರು ಚಾಲನೆ ನೀಡಿದರು.

walkathon

ಈ ವೇಳೆ ಮಾತನಾಡಿದ ಡೆಂಟಲ್‌ ಡೆನ್‌ ನಿರ್ದೇಶಕಿ ಡಾ.ಲಕ್ಷ್ಮಿ ರೂಪೇಶ್‌ ಮಾತನಾಡಿ, 3ನೇ ಆವೃತ್ತಿಯ ವುಮೆನ್‌ ವಾಕಥಾನ್‌ ಗೆ ಉತ್ತರ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ವಾಕಥಾನ್‌ನನ್ನು ಯಶಸ್ವಿ ಗೊಳಿಸಿದರು. ಈ ಮೂಲಕ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ ಬಗ್ಗೆ ಆದ್ಯತೆ ನೀಡಬೇಕು ಎಂಬುದನ್ನು ಸಾರಿ ಹೇಳಿದರು. ಎಲ್ಲಾ ವಯಸ್ಸಿನ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬ ಸಂದೇಶವನ್ನು ಈ ಮೂಲಕ ಎಲ್ಲರಿಗೂ ತಿಳಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲ ಮಹಿಳೆಯರು ಹಾಗೂ ಸಹಭಾಗಿತ್ವ ನೀಡಿದ ಸಂಸ್ಥೆಗಳಿಗೂ ಅಭಿನಂದನೆಗಳು ಎಂದರು.

ಇದನ್ನೂ ಓದಿ: Bangalore Accident: ಬಿಎಂಟಿಸಿ ಬಸ್‌ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ವೇಳೆ ಮಾತನಾಡಿದ ಆಲ್ಟಿಯಸ್‌ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರಿಯಾ ಎಸ್‌. ಪಿ. ಪಾಟೀಲ್‌ ಅವರು, ಕುಟುಂಬ ನಿರ್ವಹಣೆಯ ಜವಾಬ್ದಾರಿ ನಿಭಾಯಿ ಸುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆಯೇ ಮಹಿಳೆಯರು ನಿರ್ಲಕ್ಷಿಸುತ್ತಿದ್ದಾರೆ. ದೇಶದಲ್ಲಿ ಶೇಕಡ 60 ರಿಂದ 70 ರಷ್ಟು ಮಹಿಳೆಯರು ದಿನನಿತ್ಯ ದೈಹಿಕ ವ್ಯಾಯಾಮವನ್ನು ನಿರ್ಲಕ್ಷಿಸಿ ಅನೇಕ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯ. ಅದರಲ್ಲೂ ನಮ್ಮ ದೇಶದ ಸಾಂಪ್ರದಾಯಿಕ ಮಹಿಳೆಯರು ತನ್ನ ಕುಟುಂಬದ ಆರೋಗ್ಯ ದ ಬಗ್ಗೆಯೇ ಹೆಚ್ಚು ಚಿಂತಿಸಿ, ತಾವು ಮಾತ್ರ ಸಮಯಕ್ಕೆ ಸರಿಯಾಗಿ ಆಹಾರವನ್ನೂ ಸೇವಿಸುತ್ತಿಲ್ಲ. ಪೌಷ್ಠಿಕಯುಕ್ತ ಆಹಾರವಂತೂ ನಿರ್ಲಕ್ಷವಾಗಿದೆ. ಇದರಿಂದ ಹಲವು ಕಾಯಿಲೆಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಮಹಿಳೆ ಕೇವಲ ಮಕ್ಕಳನ್ನು ಹೆರವುದು ಅಥವಾ ಮನೆ ಕೆಲಸಕ್ಕಾಗಿ ಅಷ್ಟೇ ಮೀಸಲಾಗಿಲ್ಲ. ತಮ್ಮದೇ ಆದ ಜೀವನವನ್ನು ಜೀವಿಸು ವುದು ಅವಳ ಮೂಲಭೂತ ಹಕ್ಕು. ಇದಕ್ಕಾಗಿ ಅವರ ಆರೋಗ್ಯದ ಕಾಳಜಿಯನ್ನು ಆಯಾ ಕುಟುಂಬದವರು ತೆಗೆದುಕೊಳ್ಳಬೇಕು. ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ದೈಹಿಕ ವ್ಯಾಯಾಮ ಮಾಡುವುದು, ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದನ್ನು ಮಹಿಳೆಯರು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಇನ್ನು, ಮಹಿಳೆಯರು ಎಂಡೋಮೆಟ್ರಿಯಾಸಿಸ್‌ ಕಾಯಿಲೆ ತುತ್ತಾಗುತ್ತಿದ್ದು, ಸ್ಕಾನ್‌ ಬಳಿಕವೇ ಅವರಿಗೆ ಈ ಬಗ್ಗೆಯೇ ಅವರಿಗೆ ತಿಳಿಯುತ್ತಿದೆ. ಈ ಸಮಸ್ಯೆಯನ್ನು ಸಾಮಾನ್ಯ ಸ್ತ್ರೀರೋಗ ತಜ್ಞೆಯರಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಇದಕ್ಕೆ ಎಂಡೋಮೆಟ್ರಿಯಾಸಿಸ್‌ ವಿಶೇಷ ತಜ್ಞರೇ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಮಹಿಳೆಯರು ಹೆಚ್ಚು ಗಮನಹರಿಸಬೇಕು ಎಂದರು.

ಇಂದು ಸಾಕಷ್ಟು ಮಹಿಳೆಯರನ್ನು ಗರ್ಭಕಂಠ ಕ್ಯಾನ್ಸರ್‌ ಅಥವಾ ಸರ್ವೈಕಲ್‌ ಕ್ಯಾನ್ಸರ್‌ ಹೆಚ್ಚು ಕಾಡುತ್ತಿದೆ. ಈ ಕ್ಯಾನ್ಸರ್‌ನ ಬಗ್ಗೆ ಅನೇಕ ಮಹಿಳೆಯರಿಗೆ ಜಾಗೃತಿಯೂ ಇಲ್ಲ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರೇ ಈ ಕ್ಯಾನ್ಸರ್‌ಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಸರ್ವೈಕಲ್‌ ಕ್ಯಾನ್ಸರ್‌ ಬಗ್ಗೆ ಪ್ರತಿಯೊಬ್ಬ ಮಹಿಳೆಯರು ಹಾಗೂ ಅವರ ಕುಟುಂಬಸ್ಥರು ಜಾಗೃತಿ ವಹಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಈ ಕ್ಯಾನ್ಸರ್‌ಗೆ ಲಸಿಕೆ ಲಭ್ಯವಿದ್ದು, ಪ್ರತಿಯೊಬ್ಬ ಮಹಿಳೆಯರು ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವುದರಿಂದ ಕ್ಯಾನ್ಸರ್‌ ಬರುವುದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಹೆಣ್ಣು ಮಕ್ಕಳಿಗೆ ಈ ಲಸಿಕೆ ಹಾಕಿಸಿ ಎಂದು ಹೇಳಿದರು.

ಮಹಿಳೆಯರ ಆರೋಗ್ಯದ ಕಾಳಜಿ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾಗಿದ್ದ ಈ ವಾಕಥಾನ್‌ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಾರು ಮಹಿಳೆಯರು ನಮ್ಮೊಂದಿಗೆ ಕೈ ಜೋಡಿಸಿ ವಾಕಥಾನ್‌ನನ್ನು ಯಶಸ್ವಿಗೊಳಿಸಿದರು. ವುಮೆನ್‌ ವಾಕಥಾನ್‌ ನಲ್ಲಿ 1500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.