ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

100 Scientists resign: ಇಸ್ರೋಗೆ 100ಕ್ಕೂ ಹೆಚ್ಚು ವಿಜ್ಞಾನಿಗಳ ರಾಜೀನಾಮೆ

ಬಾಹ್ಯಾಕಾಶ ಇಲಾಖೆಯಿಂದ ಗಗನಯಾನ ಸೇರಿದಂತೆ ಪ್ರಮುಖ ಇಸ್ರೋ ಯೋಜನೆ ಗಳಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ವಿಜ್ಞಾನಿಗಳು ದಿಢೀರನೆ 100ಕ್ಕೂ ಹೆಚ್ಚು ಮಂದಿ ರಾಜೀನಾಮೆ ಕೊಟ್ಟು ಸರಣಿ ಯಾಗಿ ಹೊರ ನಡೆಯುತ್ತಿದ್ದಾರೆ. ಇನ್ನೂ ಹಲವರು ವಿಆರ್‌ಎಸ್ ಪಡೆದು (ಸ್ವಯಂ ನಿವೃತ್ತಿ) ಪಡೆದು ಹೊರ ನಡೆಯುತ್ತಿದ್ದಾರೆ.

ಖಾಸಗಿ ಸ್ಟಾರ್ಟಪ್‌ಗಳಿಂದ ಆಕರ್ಷಕ ವೇತನ, ಸಾಮೂಹಿಕ ಗುಳೆ

ತಡೆಗೆ ಇಸ್ರೋ ಕಠಿಣ ನಿಯಮ

ಬೆಂಗಳೂರು: ಬಾಹ್ಯಾಕಾಶ ಇಲಾಖೆಯಿಂದ ಗಗನಯಾನ ಸೇರಿದಂತೆ ಪ್ರಮುಖ ಇಸ್ರೋ ಯೋಜನೆ ಗಳಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ವಿಜ್ಞಾನಿಗಳು ದಿಢೀರನೆ 100ಕ್ಕೂ ಹೆಚ್ಚು ಮಂದಿ ರಾಜೀನಾಮೆ ಕೊಟ್ಟು ಸರಣಿಯಾಗಿ ಹೊರ ನಡೆಯುತ್ತಿದ್ದಾರೆ. ಇನ್ನೂ ಹಲವರು ವಿಆರ್‌ಎಸ್ ಪಡೆದು (ಸ್ವಯಂ ನಿವೃತ್ತಿ) ಪಡೆದು ಹೊರ ನಡೆಯುತ್ತಿದ್ದಾರೆ.

ದೇಶದಲ್ಲಿ ಖಾಸಗಿ ವಲಯದ ಬಾಹ್ಯಾಕಾಶ ಯೋಜನೆಗಳು ಹೆಚ್ಚಾಗುತ್ತಿವೆ. ಅಲ್ಲಿ ಉತ್ತಮ ಸಂಬಳ ಹಾಗೂ ಹುದ್ದೆಯ ಸ್ಥಾನ ಮಾನದ ಆಕಾಂಕ್ಷೆಯಿಂದ ಇಸ್ರೋ ತೊರೆದು ಖಾಸಗಿ ವಲಯಕ್ಕೆ ಸೇರ್ಪಡೆ ಯಾಗುತ್ತಿದ್ದಾರೆ ಎನ್ನಲಾಗಿದೆ. ಸರಣಿ ರಾಜೀನಾಮೆಯು ಇಸ್ರೋದ ಮಹತ್ವಾ ಕಾಂಕ್ಷಿ ಯೋಜನೆಗಳ ಹಿನ್ನಡೆಗೆ ಕಾರಣವಾಗಬಹುದು. ಅಲ್ಲದೆ ದೇಶದ ಕೋಟ್ಯಂತರ ರು. ವೆಚ್ಚದ ಯೋಜನೆಗಳು ವಿಳಂಬವಾಗಿ ಮತ್ತಷ್ಟು ಖರ್ಚು ಹೆಚ್ಚಾಗುವ ಅಪಾಯ ಇದೆ.

ಈ ಬೆಳವಣಿಗೆಯ ಬಳಿಕ ಬಾಹ್ಯಾಕಾಶ ಕೇಂದ್ರವು ರಾಜೀನಾಮೆ ನಿಯಮವನ್ನು ಮತ್ತಷ್ಟು ಬಿಗು ಮಾಡಿದೆ. ಇಸ್ರೋ ತುರ್ತು ಕ್ರಮ ಕೈಗೊಂಡಿದ್ದು, ಜುಲೈ 14ರಂದು ಆಂತರಿಕ ಜ್ಞಾಪನಾ ಪತ್ರದಲ್ಲಿ ವಿಜ್ಞಾನಿಗಳ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆ ನಿಯಮಗಳನ್ನು ಕಟ್ಟುನಿಟ್ಟಿಗೊಳಿಸಲಾಗಿದೆ.

ಇದನ್ನೂ ಓದಿ: ISRO: 73ನೇ ದಿನದ ರೈತರ ಹೋರಾಟಕ್ಕೆ ಇಸ್ರೋ ನೌಕರರ ಸಾಥ್ : ಅನ್ನದಾತರನ್ನು ಒಕ್ಕಲೆಬ್ಬಿಸದಂತೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ

ಹೊಸ ಬದಲಾವಣೆ ಏನು?: 2020೦ರ ನವೆಂಬ ರ್‌ನಲ್ಲಿ ತಂದಿದ್ದ ನಿಯಮದ ಪ್ರಕಾರ, ಇಸ್ರೋ ವಿವಿಧ ಕೇಂದ್ರಗಳ ನಿರ್ದೇಶಕರಿಗೆ ವಿಜ್ಞಾನಿ/ಎಂಜಿನಿಯರ್ ದರ್ಜೆಯವರೆಗಿನ ಅಧಿಕಾರಿಗಳ ರಾಜೀ ನಾಮೆ ಅಥವಾ ಸ್ವಯಂನಿವೃತ್ತಿಯನ್ನು ಅಂಗೀಕರಿಸುವ ಅಧೀಕಾರವಿತ್ತು. ಆದರೆ ಹೊಸ ಆದೇಶದ ಪ್ರಕಾರ ಈ ಅಧಿಕಾರ ವನ್ನು ಹಿಂಪಡೆಯಲಾಗಿದೆ. ಗಗನ ಯಾನ ಮತ್ತು ಇತರ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿರುವ ವಿಜ್ಞಾನಿಗಳ ರಾಜೀನಾಮೆಯನ್ನು ಕೇಂದ್ರದ ನಿರ್ದೇಶಕರು ನೇರವಾಗಿ ಸ್ವೀಕರಿಸುವಂತಿಲ್ಲ. ಈ ಯೋಜನೆಗಳು ಪೂರ್ಣಗೊಳ್ಳುವ ವರೆಗೆ ಇಂತಹ ವಿನಂತಿ ಗಳನ್ನು ಸಾಮಾನ್ಯ ಪ್ರಕ್ರಿಯೆಯಾಗಿ ಪರಿಗಣಿಸಬಾರದು ಎಂದು ಸೂಚಿಸಲಾಗಿದೆ.

ಎಲ್ಲಾ ರಾಜೀನಾಮೆ ಮತ್ತು ನಿವೃತ್ತಿ ಪ್ರಸ್ತಾವನೆಗಳನ್ನು ಅಂತಿಮ ನಿರ್ಧಾರಕ್ಕಾಗಿ ಕಡ್ಡಾಯವಾಗಿ ದೆಹಲಿಯ ಬಾಹ್ಯಾಕಾಶ ಇಲಾಖೆಗೆ ಕಳುಹಿಸಿಕೊಡಬೇಕಾಗುತ್ತದೆ. ಅಲ್ಲಿನ ಉನ್ನತಮಟ್ಟದ ಸಮಿತಿ ರಾಜೀನಾಮೆ ಅಂಗೀಕಾರದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಯಾರ್ಯಾರು ರಾಜೀನಾಮೆ ಕೊಟ್ಟವರು? ಬಾಹ್ಯಾಕಾಶ ಇಲಾಖೆಯು ಅಧಿಕೃತವಾಗಿ ರಾಜೀನಾಮೆ ನೀಡಿದವರ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಇಸ್ರೋ ಮೂಲಗಳ ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ 100 ರಿಂದ 120ಕ್ಕೂ ಹೆಚ್ಚು ಪ್ರಮುಖ ವಿಜ್ಞಾನಿಗಳು ಸಂಸ್ಥೆಯನ್ನು ತೊರೆದಿದ್ದಾರೆ.

ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರ ದಿಂದ (ಯು ಆರ್‌ಎಸ್‌ಸಿ) ಸುಮಾರು 80ಕ್ಕೂ ಹೆಚ್ಚು ವಿಜ್ಞಾನಿಗಳು ಹೊರ ನಡೆದಿದ್ದಾರೆ. ತಿರುವನಂತಪುರಂನ ವಿಕ್ರಮ್ ಸಾರಾಭಾಯಿ ಬಾಹ್ಯಾ ಕಾಶ ಕೇಂದ್ರದಿಂದ (ವಿಎಸ್‌ಎಸ್‌ಸಿ) ಕನಿಷ್ಠ 20ಕ್ಕೂ ಹೆಚ್ಚು ಜನರು ರಾಜೀನಾಮೆ ನೀಡಿದ್ದಾರೆ.

ಇಸ್ರೋದ ಒಟ್ಟು 14,600ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೋಲಿಸಿದರೆ ಈ ಸಂಖ್ಯೆ ಚಿಕ್ಕದಾಗಿ ಕಂಡರೂ, ರಾಜೀನಾಮೆ ನೀಡಿದವ ರೆಲ್ಲರೂ ಗಗನಯಾ ನದಂತಹ ದೇಶದ ಪ್ರತಿಷ್ಠಿತ ಮಿಷನ್‌ ಗಳಲ್ಲಿ ಪ್ರಮುಖ ಜವಾಬ್ದಾರಿ ಹೊತ್ತವರಾಗಿದ್ದಾರೆ. ರಾಜೀ ನಾಮೆ ನೀಡಿದವರಲ್ಲಿ ಇಸ್ರೋದ ಅತ್ಯಂತ ಪ್ರತಿಭಾವಂತ ಮತ್ತು ಹಿರಿಯ ಅಧಿಕಾರಿಗಳೂ ಸೇರಿದ್ದಾರೆ.

ಯಾರ್ಯಾರು ತೊರೆದಿದ್ದಾರೆ?: ವಿಎಸ್‌ಎಸ್ ಸಿಯಲ್ಲಿದ್ದ ವಿಕ್ಟರ್ ಜೋಸೆಫ್ ಪ್ರಮುಖ ಎಲ್‌ವಿಎಂ-3 ರಾಕೆಟ್ ಯೋಜನೆಯ ನಿರ್ದೇಶಕ ಆಗಿದ್ದ ರು. ಸ್ಪೇಸ್ ಡಾಕಿಂಗ್ ಪ್ರಯೋಗದ ಪ್ರಾಜೆಕ್ಟ್ ನಿರ್ದೇಶಕ ಕೂಡ ಯುಆರ್‌ಎಸ್‌ಸಿಯಿಂದ ರಾಜೀನಾಮೆ ನೀಡಿದ್ದಾರೆ. ಚಂದ್ರಯಾನ-3 ಮಿಷನ್‌ನ ಪ್ರಾಜೆಕ್ಟ್ ಮ್ಯಾನೇಜರ್ (ಸಿಮ್ಯುಲೇಶನ್ಸ್) ಆಗಿದ್ದ ಆದಿತ್ಯ ರಾಳ್ಳಪಲ್ಲಿಯ ವರು, ಚಂದ್ರನ ಮೇಲಿಳಿಯುವ ಪ್ರಕ್ರಿಯೆಯ ನ್ನು ಯಶಸ್ವಿಯಾಗಿಸಲು 1 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿ, 25 ಟೆರಾಬೈಟ್ ಡೇಟಾ ವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು, ಇವರೂ ರಾಜೀನಾಮೆ ನೀಡಿದ್ದಾರೆ. ‌

ಈ ಸಾಮೂಹಿಕ ರಾಜೀನಾಮೆ ಪ್ರಕ್ರಿಯೆ ಇದೇ ಮೊದಲಲ್ಲ. ಇದಕ್ಕೆ ಖಾಸಗಿ ಬಾಹ್ಯಾಕಾಶ ವಲಯದ ಆಕರ್ಷಣೆಯೊಂದೇ ಕಾರಣವೂ ಅಲ್ಲ. 2004-2007ರ ಈ ಅವಧಿಯಲ್ಲಿ ನೇಮಕಗೊಂಡಿದ್ದ ಹೊಸ ನೌಕರರಲ್ಲಿ ಸುಮಾರು ಅರ್ಧದಷ್ಟು ಜನ ಸಂಸ್ಥೆ ತೊರೆದಿದ್ದರು. 2012ರಿಂದ 2024 ಕಳೆದ 12 ವರ್ಷಗಳಲ್ಲಿ ಸುಮಾರು 700ಕ್ಕೂ ಹೆಚ್ಚು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.

ಖಾಸಗಿ ಸ್ಟಾರ್ಟಪ್‌ಗಳು ಕೋಟ್ಯಂತರ ರು. ಬಂಡ ವಾಳದಿಂದ ಹೊಸಹೊಸ ಯೋಜನೆಗಳನ್ನು ಆರಂಭಿಸುತ್ತಿದ್ದು, ಇಸ್ರೋ ವಿಜ್ಞಾನಿಗಳನ್ನು ಆಕರ್ಷಿಸುತ್ತಿದೆ. ಇಸ್ರೋದಲ್ಲಿ ಮಂದಗತಿಯ ಔದ್ಯೋ ಗಿಕ ಬೆಳವಣಿಗೆ, ಸಾಂಸ್ಥಿಕ ಒತ್ತಡಗಳು, ಮುಕ್ತಕೆಲಸದ ಸಂಸ್ಕೃತಿಯ ಕೊರತೆಗಳು ಹೊರ ಹೋಗಲು ಪ್ರೇರೇಪಿಸುತ್ತಿವೆ, ಕಠಿಣ ನಿಯಮಗಳಿಂದಲೂ ವಿeನಿಗಳನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಹಲವು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಮುಂದಿನ ನೇಮಕಾತಿ: ಇಸ್ರೋದ 2025-26ರ ವಾರ್ಷಿಕ ವರದಿಯ ಪ್ರಕಾರ, ಸುಮಾರು 1050 ವೈಜ್ಞಾನಿಕ, ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ದಲ್ಲಿದೆ. ಆದರೂ, ರಾಷ್ಟ್ರೀಯ ಮಿಷನ್‌ಗಳಲ್ಲಿ ಕೆಲಸ ಮಾಡುತ್ತಿರುವ ಅನುಭವೀ ವಿಜ್ಞಾನಿಗಳ ಸ್ಥಾನವನ್ನು ಹೊಸಬರಿಂದ ತಕ್ಷಣ ತುಂಬುವುದು ಅಷ್ಟು ಸುಲಭವಲ್ಲ ಎಂದು ವರದಿ ಒಪ್ಪಿಕೊಂಡಿದೆ.

ಇತ್ತೀಚೆಗಿನ ವೈಫಲ್ಯಗಳು

? ಪಿಎಸ್‌ಎಲ್‌ವಿ-ಸಿ62 ರಾಕೆಟ್ ಮೂಲಕ ಈ ವರ್ಷ ಜ.12ರಂದು 16 ಉಪಗ್ರಹಗಳನ್ನು ಬಾಹ್ಯಾ ಕಾಶಕ್ಕೆ ಕಳುಹಿಸಲು ಇಸ್ರೋ ಯೋಜಿಸಿತ್ತು. ಆದರೆ ರಾಕೆಟ್‌ನ 3ನೇ ಹಂತದಲ್ಲಿದ್ದ ತಾಂತ್ರಿಕ ದೋಷದಿಂದ ಯಾವುದೇ ಉಪಗ್ರಹಗಳೂ ಕಕ್ಷೆಯನ್ನು ಸೇರಲಿಲ್ಲ.

? 2025 ಮೇನಲ್ಲಿ ಪಿಎಸ್‌ಎಲ್‌ವಿ- ಸಿ61 ರಾಕೆಟ್ ಉಪಗ್ರಹಗಳನ್ನು ಕಕ್ಷೆಗೇರಿಸಲು ಹೊರಟಿತ್ತು. ಅಲ್ಲೂ 3ನೇ ಹಂತದಲ್ಲಿಯೇ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 3ನೇ ಹಂತದಲ್ಲಿ ರಾಕೆಟ್ ಬೇರ್ಪಡಲು ಆರಂಭಿಸಿದ 203 ಸೆಕೆಂಡ್ ಗಳಲ್ಲಿಯೇ ದೋಷ ಕಾಣಿಸಿಕೊಂಡು, ಇಡೀ ಉಡಾ ವಣೆಯೇ ವಿಫಲವಾಗಿತ್ತು.

ಯಾಕಿರಬಹುದು ಗುಳೆ?

ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸ್ಟಾರ್ಟಪ್‌ಗಳಿಂದ ಹೊಸ ಹೊಸ ಯೋಜನೆ, ಭಾರೀ ವೇತನ, ಸಂಶೋಧನಾ ಸ್ವಾತಂತ್ರ್ಯ

ಇಸ್ರೋದಲ್ಲಿ ಮಂದಗತಿಯ ಔದ್ಯೋಗಿಕ ಬೆಳವಣಿಗೆ, ಸಾಂಸ್ಥಿಕ ಒತ್ತಡಗಳು, ಮುಕ್ತ ಕೆಲಸದ ಸಂಸ್ಕೃತಿಯ ಕೊರತೆಗಳು

ಕಠಿಣ ನಿಯಮಗಳು, ಹಲವು ಹೊಸ ಹೊಸ ಯೋಜನೆಗಳಿಂದ ವಿಜ್ಞಾನಿಗಳ ಮೇಲೆ ಹೆಚ್ಚಿದ ಕಾರ್ಯೋತ್ತಡ: 9 ತಜ್ಞರ ಅಂದಾಜು

image

ಅನೇಕ ಜನರು ಸಂಸ್ಥೆ ತೊರೆಯುತ್ತಿರುವುದು ನಿಜ, ಇದು ಪ್ರತಿಯೊಂದು ಸಂಸ್ಥೆಯಲ್ಲೂ ನಡೆಯು ವ ಸಾಮಾನ್ಯ ಪ್ರಕ್ರಿಯೆ. ಹೊಸ ನಿಯಮಗಳು ದೇಶದ ಪ್ರಮುಖ ಯೋಜನೆಗಳು ಇದ್ದಕ್ಕಿದ್ದಂತೆ ನಿಲ್ಲ ದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿವೆ.

-ವಿ.ನಾರಾಯಣನ್, ಇಸ್ರೋ ಮುಖ್ಯಸ್ಥ