ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರನ್ನು ನಿರ್ವಹಿಸುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಜಾಗತಿಕ ನಿರ್ಧಾರ ವಿಜ್ಞಾನ ಕಂಪನಿಯಾದ ಮ್ಯೂ ಸಿಗ್ಮಾ (Mu Sigma) ಜೊತೆಗೆ ಮಹತ್ವದ ಕಾರ್ಯತಂತ್ರದ ಸಹಭಾಗಿತ್ವ ಮಾಡಿಕೊಂಡಿದೆ.
ದತ್ತಾಂಶ ಆಧಾರಿತ ನಿರ್ಧಾರಗಳನ್ನು ಬಳಸಿಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರನ್ನು ಸಾಟಿಯಿಲ್ಲದ ಗ್ರಾಹಕ ಅನುಭವ ನೀಡುವ 'ಆಲ್ಗಾರಿದಮಿಕ್ ವಿಮಾನ ನಿಲ್ದಾಣ'ವನ್ನಾಗಿ ಮರುರೂಪಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ. ಇಲ್ಲಿ ಪ್ರತಿಯೊಂದು ಸಂವಹನವು ನೈಜ-ಸಮಯದ ಒಳನೋಟಗಳಿಂದ ರೂಪುಗೊಳ್ಳಲಿದ್ದು, ಪ್ರತಿ ಪ್ರಯಾಣಿಕರ ಅಗತ್ಯತೆಗಳ ಸುತ್ತ ವಿನ್ಯಾಸಗೊಳಿಸಲಾಗುತ್ತದೆ.
ಸುಧಾರಿತ ವಿಶ್ಲೇಷಣಾ ಮಾದರಿಗಳನ್ನು ಬಳಸಿಕೊಂಡು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಕಾರ್ಯಾಚರಣೆಯ ದತ್ತಾಂಶಗಳನ್ನು ಒಗ್ಗೂಡಿಸಿ ವಿಶ್ಲೇಷಿಸುವ ಮೂಲಕ ಮ್ಯೂ ಸಿಗ್ಮಾ ಸಂಸ್ಥೆಯ ನಿರ್ಧಾರ ಬುದ್ಧಿಮತ್ತೆ ವೇದಿಕೆ ಎಐ ಪ್ರಯಾಣಿಕರ ಅನುಕೂಲತೆಗಳನ್ನು ಹೆಚ್ಚಿಸಲು ನೆರವಾಗಲಿದೆ. ಪ್ರಯಾಣಿಕರ ಬದಲಾಗುತ್ತಿರುವ ಬೇಡಿಕೆಗಳನ್ನು ತಿಳಿಯಲು ಹಾಗೂ ಅನುಕೂಲತೆ, ಸೌಕರ್ಯ ಮತ್ತು ದಕ್ಷತೆಯನ್ನು ಪೂರ್ವಭಾವಿಯಾಗಿ ಹೆಚ್ಚಿಸಲು ಇದು ನೆರವಾಗಲಿದೆ.
ವಿಶೇಷವೆಂದರೆ, ಇದು ಪ್ರಯಾಣಿಕರ ಪಾಲಿಗೆ ವಿಮಾನ ನಿಲ್ದಾಣವು ಕೇವಲ ಸಂಚಾರ ಕೇಂದ್ರವಷ್ಟೇ ಅಲ್ಲದೇ, ಸಮಗ್ರ ಅನುಭವ ಕೇಂದ್ರವನ್ನಾಗಿ ಮಾರ್ಪಡಿಸಲು ಸಹಕರಿಸಲಿದೆ.
ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ
ಪ್ರಯಾಣಿಕರ ಹಿತಕ್ಕೆ ಆದ್ಯತೆ ನೀಡುವ ಗುರಿ ಹೊಂದಿರುವ ಈ ಉಪಕ್ರಮವು, ಅತಿಥಿಗಳ ಹಿತವೇ ಮೊದಲು ಎಂಬ ಉದ್ದೇಶದಡಿ, ವಿಮಾನ ನಿಲ್ದಾಣದಲ್ಲಿನ ಪ್ರತಿಯೊಂದು ಸಂವಹನ ಬಿಂದುವನ್ನು ಇನ್ನಷ್ಟು ಚುರುಕು ಮತ್ತು ಅರ್ಥಗರ್ಭಿತವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿವೆ. ಮುನ್ಸೂಚನೆಯ ವಿಶ್ಲೇಷಣೆಯು ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಪಾರ್ಕಿಂಗ್‌ನಲ್ಲಿ ಸರತಿ ಸಾಲುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟರ್ಮಿನಲ್‌ಗಳ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಮುನ್ಸೂಚನೆಯ ವಿಶ್ಲೇಷಣೆಯು ಮಳಿಗೆಗಳು, ರೆಸ್ಟೋರೆಂಟ್‌ಗಳು ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿನ ಸರತಿ ಸಾಲು ಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದ್ದು, ಟರ್ಮಿನಲ್‌ನಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ನೈಜ-ಸಮಯದ ಬೇಡಿಕೆ ಮುನ್ಸೂಚನೆ ಮತ್ತು ಕ್ರಿಯಾತ್ಮಕಬೆಲೆ ನಿಗದಿಯು ಪಾರ್ಕಿಂಗ್ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಮತ್ತಷ್ಟು ಉತ್ತಮಗೊಳಿಸುತ್ತವೆ.
ಬಿಎಲ್‌ಆರ್ ಪಲ್ಸ್ ಆಪ್ ಮತ್ತು ಜಾಲತಾಣದ (bengaluruairport.com/kn/) ಮೂಲಕ ತೊಡಗಿಸಿ ಕೊಳ್ಳುವ ಪ್ರಯಾಣಿಕರು, ವೈಯಕ್ತಿಕ ಶಿಫಾರಸು, ಲಾಯಲ್ಟಿ ಬಹುಮಾನ, ಸೇವೆಗಳು ಮತ್ತು ಕೊಡುಗೆಗಳ ಕುರಿತು ಸಮಯೋಚಿತ ಅಧಿಸೂಚನೆಗಳೊಂದಿಗೆ ವರ್ಧಿತ ಡಿಜಿಟಲ್ ಅನುಭವ ವನ್ನು ಪಡೆಯುತ್ತಾರೆ. ಟರ್ಮಿನಲ್ ಒಳಗೆ, ಸ್ಥಳ ಆಧಾರಿತ ಪ್ರಚಾರ, ಸುಧಾರಿತ ಸಂಕೇತ ಫಲಕ ಮತ್ತು ವಿಶಿಷ್ಟ ಡೀಲ್‌ಗಳು ಪ್ರಯಾಣದ ವೇಳೆ ಮಾರ್ಗ ಕಂಡುಕೊಳ್ಳುವಿಕೆ ಮತ್ತು ನಿರ್ಧಾರ ತೆಗೆದು ಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತವೆ.
ಈ ಕುರಿತು ಮಾತನಾಡಿದ ಬಿಐಎಎಲ್ ನ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫ್ಯಾಂಥಮ್ ಅವರು, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ನಾವು ವಿಮಾನ ನಿಲ್ದಾಣದ ಅನುಭವವನ್ನು ಮರು ವ್ಯಾಖ್ಯಾನಿಸಲು ಬದ್ಧರಾಗಿದ್ದೇವೆ. ಮ್ಯೂ ಸಿಗ್ಮಾ ಜೊತೆಗಿನ ನಮ್ಮ ಸಹಯೋಗವು ಈ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.
ಮ್ಯೂ ಸಿಗ್ಮಾ ಹೊಂದಿರುವ ಸುಧಾರಿತ ನಿರ್ಧಾರ ವಿಜ್ಞಾನವು ನಮಗೆ ಪ್ರತಿ ಸಂವಹನವನ್ನು ವೈಯಕ್ತೀಕರಿಸಲು, ಅಡಚಣೆಗಳು ಸಂಭವಿಸುವ ಮೊದಲೇ ನಿರೀಕ್ಷಿಸಲು, ಕಾರ್ಯಾಚರಣೆ ಗಳಾದ್ಯಂತ ದಕ್ಷತೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ವಿಶ್ವದರ್ಜೆಯ ಅತಿಥಿ ಅನುಭವಗಳ ಹೊಸ ಯುಗದತ್ತ ದಾರಿ ಯನ್ನು ರೂಪಿಸುತ್ತಿದೆ” ಎಂದು ತಿಳಿಸಿದರು.