ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಾಕ್ಟೊ ತನಿಖೆ: ಅಂದಾಜು 60% ಸ್ತ್ರೀರೋಗ ಅಪಾಯಿಂಟ್ಮೆಂಟ್ ಗಳಲ್ಲಿ 25-34 ವಯಸ್ಸಿನ ಮಹಿಳೆಯರು

ಪ್ರಾಕ್ಟೊ ತನಿಖೆಯ ಪ್ರಕಾರ ಈಗ ತನ್ನ ಒಟ್ಟು ಸಮಾಲೋಚನೆಗಳಲ್ಲಿ ಶೇಖಡಾ 19%ರಷ್ಟು ಸ್ತ್ರೀರೋಗ ಸಮಾಲೋಚನೆ ಗಳಿಗಾಗಿವೆ, ಇದು ಜನರಲ್ ಫಿಸಿಷಿಯನ್ ಗಳನ್ನು ಸಹ ಮೀರಿಸುವಂತಹದ್ದಾಗಿದೆ. ಸ್ತ್ರೀರೋಗ ವಿಭಾಗದಲ್ಲಿ ಮಹಿಳೆಯರು ಸಂತಾನ ಚಿಕಿತ್ಸೆ, ಗರ್ಭಪಾತ, ಸ್ತನಗಳ ನೋವು, PCOS/PCOD ಮತ್ತು ಅನಿಯಮಿತ ಋತುಚಕ್ರಗಳಿಗಾಗಿ ಸಕ್ರಿಯವಾಗಿ ವೈದ್ಯಕೀಯ ಸಲಹೆಯನ್ನು ಪಡೆಯುತ್ತಿದ್ದಾರೆ. ಈ ಪ್ರವೃತ್ತಿಯು ವಿಶೇಷವಾಗಿ ಯುವ ಮಹಿಳೆರನ್ನೂ ಒಳಗೊಂಡಂತೆ ಸಂತಾ ನೋತ್ಪತ್ತಿ ಮತ್ತು ಹಾರ್ಮೋನಿನ ಆರೋಗ್ಯಾರೈಕೆಯ ಮೇಲೆ ಬೆಳೆಯುತ್ತಿರುವ ಆಸಕ್ತಿಯನ್ನು ಒತ್ತಿ ಹೇಳುತ್ತದೆ.

ಸ್ತ್ರೀರೋಗ ಸಮಾಲೋಚನೆಗಳಲ್ಲಿ ಮಿಲೇನಿಯಲ್ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ

Profile Ashok Nayak Mar 9, 2025 1:18 PM

ಬೆಂಗಳೂರು: ಭಾರತದ ಮಂಚೂಣಿ ಮತ್ತು ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಸೇವೆಗಳ ವೇದಿಕೆಯಾದ ಪ್ರಾಕ್ಟೊನಲ್ಲಿ ಅತಿ ಹೆಚ್ಚಿನ ಸಮಾಲೋಚನೆ ಪಡೆದ ವೈದ್ಯಕೀಯ ಸ್ಪೆಷಾಲಿಟಿಯಾಗಿ ಸ್ತ್ರೀರೋಗ (ಗೈನಕಾಲಾಜಿ) ವಿಭಾಗವು ಸ್ಥಾನ ಪಡೆದು ಕೊಂಡ ಕಾರಣ 2024*ರಲ್ಲಿ ಮಹಿಳೆಯರ ಆರೋಗ್ಯಾರೈಕೆ ಆದ್ಯತೆಗಳಲ್ಲಿ ಗಮನಾರ್ಹ ಏರಿಕೆಯನ್ನು ಕಾಣಬಹುದಾಗಿದೆ. ಈ ಬದಲಾವಣೆಯ ಮೊದಲನೆಯ ಸ್ಥಾನದಲ್ಲಿ ಮಿಲೇನಿಯಲ್ ಮಹಿಳೆಯರು, ಅಂದರೆ 25-34 ವಯಸ್ಸಿನ ಮಹಿಳೆಯರು ಎಲ್ಲಾ ಸ್ತ್ರೀರೋಗ ವೈದ್ಯಕೀಯ ಸಮಾಲೋಚನೆಗಳ ಶೇಖಡಾ 60% ರಷ್ಟು ಪಾಲನ್ನು ಕಾಯ್ದುಕೊಂಡಿದ್ದಾರೆ. ಕಳೆದ ಪ್ರವೃತ್ತಿಗಳಲ್ಲಿ ಅಂದರೆ 2018ರ ಒಂದು ಸಮೀಕ್ಷೆಯ ಪ್ರಕಾರ 24%ರಷ್ಟು ಮಹಿಳೆಯರು ಇದುವರೆಗೆ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರನ್ನು ಭೇಟಿಯೇ ಆಗಿಲ್ಲ ಎಂದು ಸೂಚಿಸಲಾಗಿತ್ತು, ಈ ವರದಿಗೆ ಹೋಲಿಸಿದರೆ ಇದು ಗಮನಾರ್ಹ ಏರಿಕೆ ಯಾಗಿದೆ.

ಇದನ್ನೂ ಓದಿ: Bangalore Accident: ಬಿಎಂಟಿಸಿ ಬಸ್‌ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪ್ರಾಕ್ಟೊ ತನಿಖೆಯ ಪ್ರಕಾರ ಈಗ ತನ್ನ ಒಟ್ಟು ಸಮಾಲೋಚನೆಗಳಲ್ಲಿ ಶೇಖಡಾ 19%ರಷ್ಟು ಸ್ತ್ರೀರೋಗ ಸಮಾಲೋಚನೆ ಗಳಿಗಾಗಿವೆ, ಇದು ಜನರಲ್ ಫಿಸಿಷಿಯನ್ ಗಳನ್ನು ಸಹ ಮೀರಿಸುವಂತಹದ್ದಾಗಿದೆ. ಸ್ತ್ರೀರೋಗ ವಿಭಾಗದಲ್ಲಿ ಮಹಿಳೆಯರು ಸಂತಾನ ಚಿಕಿತ್ಸೆ, ಗರ್ಭಪಾತ, ಸ್ತನಗಳ ನೋವು, PCOS/PCOD ಮತ್ತು ಅನಿಯಮಿತ ಋತುಚಕ್ರಗಳಿಗಾಗಿ ಸಕ್ರಿಯವಾಗಿ ವೈದ್ಯಕೀಯ ಸಲಹೆಯನ್ನು ಪಡೆಯುತ್ತಿದ್ದಾರೆ. ಈ ಪ್ರವೃತ್ತಿಯು ವಿಶೇಷವಾಗಿ ಯುವ ಮಹಿಳೆರನ್ನೂ ಒಳಗೊಂಡಂತೆ ಸಂತಾ ನೋತ್ಪತ್ತಿ ಮತ್ತು ಹಾರ್ಮೋನಿನ ಆರೋಗ್ಯಾರೈಕೆಯ ಮೇಲೆ ಬೆಳೆಯುತ್ತಿರುವ ಆಸಕ್ತಿಯನ್ನು ಒತ್ತಿ ಹೇಳುತ್ತದೆ. ಇದಲ್ಲದೆ, ಕೂದಲು ಉದುರುವಿಕೆ, ಚರ್ಮದ ಅಲರ್ಜಿಗಳು ಮತ್ತು ಮೂಲವ್ಯಾಧಿ ಚಿಕಿತ್ಸೆ ರೀತಿಯ ಸಮಸ್ಯೆಗಳ ಸಮಾಲೋಚನೆಯ ಜೊತೆಯಲ್ಲಿ ಉಳಿದ ಹೆಚ್ಚು ಹುಡುಕಾಟ ನಡೆಸಿದ ವಿಷಯಗಳಲ್ಲಿ ಮದುವೆಯ ಕುರಿತು ಸಮಾಲೋಚನೆ ಮತ್ತು ವೈಯಕ್ತಿಕ ಚಿಕಿತ್ಸೆಯೊಂದಿಗೆ ಮಾನಸಿಕ ಆರೋಗ್ಯರೈಕೆಯ ಕಡೆಗೂ ವಿಶೇಷ ಗಮನವನ್ನು ನೀಡಲಾಗುತ್ತಿದೆ.

ಪತ್ತೆ ಮಾಡಿದ ಪ್ರಮುಖ ವಿಷಯಗಳ ಒಂದು ತ್ವರಿತ ಒಳನೋಟ:

  1. ಶೇಖಡಾ 60% ಸಮಾಲೋಚನೆಗಳು 25-34 ವಯಸ್ಸಿನ ಮಿಲೇನಿಯಲ್ ಮಹಿಳೆಯರದ್ದು, ಇದರ ನಂತರ

○ 35 - 44 ವಯಸ್ಸಿನವರು 30%

○ 45+ ವಯಸ್ಸಿನವರು 5%

○ 18-24 ವಯಸ್ಸಿನವರು 3%

○ 18ಕ್ಕಿಂತ ಕೆಳಗಿನ ವಯಸ್ಸಿನವರು 2%

  1. ಮೊದಲಿಗಿಂತಲೂ ಅಧಿಕ ಮಹಿಳೆಯರು ಸ್ತ್ರೀರೋಗ ಆರೋಗ್ಯಾರೈಕೆಯ ಕಡೆಗೆ ಆದ್ಯತೆ

● 2024ರಲ್ಲಿನ ಜನರಲ್ ಫಿಸಿಷಿಯನ್ ಸಮಾಲೋಚನೆಗಳನ್ನು(18%) ಸಹ ಸ್ತ್ರೀರೋಗ ಸಮಾಲೋಚನೆಗಳು(19%) ಹಿಂದಕ್ಕೆ ಹಾಕಿದೆ, ಇದು ಹೆಚ್ಚಿನ ಮಹಿಳೆಯರು ಸಮಾಲೋಚನೆ ಪಡೆದ ಸ್ಪೆಷಾಲಿಟಿ ವಿಭಾಗವಾಗಿದೆ, ಇದರ ನಂತರ:

○ 14% ಸಾಮಾನ್ಯ ಚರ್ಮ ಚಿಕಿತ್ಸೆ

○ 8% ಸಾಮಾನ್ಯ ಮಕ್ಕಳರೋಗ ಚಿಕಿತ್ಸೆ

○ 6% ಮೂಳೆರೋಗಚಿಕಿತ್ಸೆ

  1. ಸ್ತ್ರೀರೋಗದ 76% ಸಮಾಲೋಚನೆಗಳು T1 ನಗರಗಳಿಂದ ಬಂದಿವೆ, ನಂತರ

● T2 ನಗರಗಳು – 17%

● ಭಾರತದ ಉಳಿದ ನಗರಗಳು – 7%

T1 ಒಳಗೆ ಸ್ತ್ರೀರೋಗ ಶಾಸ್ತ್ರ ಸಮಾಲೋಚನೆಗಳ ನಗರವಾರು ಕೊಡುಗೆ:

○ 33% - ದೆಹಲಿ NCR

○ 28% - ಬೆಂಗಳೂರು

○ 12% - ಮುಂಬೈ

○ 11%- ಹೈದೆರಾಬಾದ್

○ 10% - ಪುಣೆ

○ 6% - ಚೆನ್ನೈ

  1. ಅತಿವೇಗದ ಬೆಳವಣಿಗೆಯನ್ನು ಕಂಡ ಸ್ಪೆಷಾಲಿಟಿಗಳು

ಕೆಲವು ಸ್ಪೆಷಾಲಿಟಿಗಳು ಗಮನಾರ್ಹ YoY ಬೆಳವಣಿಗೆಯನ್ನು ಕಂಡಿದೆ, ಇದು ಮಹಿಳೆಯರಲ್ಲಿ ಬೆಳೆಯುತ್ತಿರುವ ಆರೋಗ್ಯ ಆದ್ಯತೆಗಳ ಕಡೆಗೆ ಗಮನಹರಿಸುತ್ತದೆ. ಉನ್ನತ 5 ಅತಿ ವೇಗದ ಬೆಳವಣಿಗೆಯನ್ನು ಕಂಡ ಸ್ಪೆಷಾಲಿಟಿ ವಿಭಾಗಳೆಂದರೆ:

● ನೆಫ್ರಾಲಜಿ - 19%

● ರೆಡಿಯಾಲಾಜಿ- 16%

● ಪಶುವೈದ್ಯಕೀಯ ವೈದ್ಯರು - 13%

● ಆಂಕಾಲಜಿ - 13%

● ಡಯಟೀಷಿಯನ್ - 11%

ಈ ತನಿಖೆಗಳ ಬಗ್ಗೆ ಮಾತನಾಡಿದ ವಿಶ್ವಾಸ್ ಫರ್ಟಿಲಿಟಿ ಅಂಡ್ ಗೈನಕಾಲಜಿ ಸೆಂಟರ್ ನ ಇನ್ಫರ್ಟಿಲಿಟಿ ಸ್ಪೆಷಲಿಸ್ಟ್, ಗೈನಕಾಲಜಿಸ್ಟ್, ರೆಪ್ರೊಡಕ್ಟಿವ್ ಎಂಡೋಕ್ರೈನಾಲಾಜಿಸ್ಟ್(ಇನ್ಫರ್ಟಿಲಿಟಿ), ಅಬ್ಸ್ಟೆಟ್ರಿಷಿಯನ್ ಡಾ. ಬಸವರಾಜ್ ದೇವರಶೆಟ್ಟಿ, “ಅನೇಕ ವರ್ಷಗಳವರೆಗೆ ಸ್ತ್ರೀರೋಗ ಸಮಾಲೋಚನೆಗಳು ಎಂದರೆ ಗರ್ಭಾವಸ್ಥೆ ಅಥವಾ ಕೆಲವು ನಿರ್ದಿಷ್ಟ ತುರ್ತು ಪರಿಸ್ಥಿತಿಗಳಾಗಿತ್ತು. ಆದರೆ ಈಗ ನಾನು ನೋಡುತ್ತಿರುವ ಬದಲಾವಣೆ ಮತ್ತು ಈ ಡೇಟಾ ನನಗೆ ತೋರಿಸುತ್ತಿರುವ ಅಂಕಿ-ಅಂಶ ನಿಜಕ್ಕೂ ದೊಡ್ಡ ಮಾರ್ಪಾಡಾಗಿದೆ. ಯುವ ಮಹಿಳೆಯರು ಗರ್ಭಿಣಿ ಯೋಜನೆಗಳನ್ನು ಹೊರತುಪಡಿಸಿ ಸಕ್ರಿಯವಾಗಿ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ. ಅವರು ನಿಯಮಿತವಾಗಿ ತಪಾಸಣೆಗಳಿಗೆ ಬರುತ್ತಾರೆ, ಹಾರ್ಮೋನ್ ಆರೋಗ್ಯದ ಬಗ್ಗೆ ಚರ್ಚಿಸುತ್ತಾರೆ ಮತ್ತು ತಮ್ಮ ದೇಹವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಇಷ್ಟಪಡುತ್ತಿದ್ದಾರೆ.

ಇದೊಂದು ಸ್ವಾಗತಾರ್ಹ ಬದಲಾವಣೆ, ಈ ಮೂಲಕ ಮಹಿಳೆಯರು ತಮ್ಮ ಯೋಗಕ್ಷೇಮವನ್ನು ಆರಂಭದಿಂದಲೇ ನಿಯಂ ತ್ರಣದಲ್ಲಿಡಲು ಸಹಾಯವಾಗುತ್ತದೆ ಮತ್ತು ತಿಳಿವಳಿಕೆ ಸಹ ಸಿಗುತ್ತದೆ. ಇದು ಜೀವನಶೈಲಿಯ ಬದಲಾವಣೆ, ಕೆಲಸದಲ್ಲಿನ ಒತ್ತಡ ಮತ್ತು ವೃತ್ತಿ ಪ್ರಗತಿ, ಹಣಕಾಸಿನ ಪರಿಸ್ಥಿತಿಗಳು ಮತ್ತು ಮಹತ್ವಾಕಾಂಕ್ಷೆಗಳಿಂದ ಗರ್ಭಧಾರಣೆಯನ್ನು ಮುಂದೂಡುವ ಕಾರಣದಿಂದಲೂ ಆಗಬಹುದು. ಅನಾರೋಗ್ಯಕರ ಜೀವನಶೈಲಿ(ಅನಾರೋಗ್ಯಕರ ಸಂಸ್ಕರಿಸಿದ ಆಹಾರ ಗಳು, ಸಾಕಷ್ಟು ನಿದ್ದೆ ಮತ್ತು ವ್ಯಾಯಾಮ ಇಲ್ಲದಿರುವುದು) ಬೊಜ್ಜು ಉಂಟುಮಾಡಬಹುದು ಮತ್ತು ಇದರಿಂದ ಸ್ತ್ರೀರೋಗ ಮತ್ತು ವೈದ್ಯಕೀಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಇವೆಲ್ಲವೂ ಸಹ ಸ್ತ್ರೀರೋಗ ಸಮಾಲೋಚನೆಗಳಿಗೆ ಕಾರಣವಾಗಿದೆ.” ಎಂದರು.

ಈ ಪ್ರಾಕ್ಟೊ ಮಹಿಳಾ ಆರೋಗ್ಯ ತನಿಖೆಗಳು ಮಹಿಳೆಯರ ಆರೋಗ್ಯರೈಕೆ ಆಯ್ಕೆಗಳಲ್ಲಿ ಅತ್ಯಂತ ಗಮನಾರ್ಹ ಬದಲಾವಣೆ ಯನ್ನು ದೃಢಪಡಿಸುತ್ತದೆ. ಸ್ತ್ರೀರೋಗ ಸಮಾಲೋಚನೆಗಳಲ್ಲಿ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯದ ಕುರಿತು ಹೆಚ್ಚುತ್ತಿ ರುವ ಕಾಳಜಿಯು ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ, ಎರಡೂ ಕಡೆಗಿನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಪ್ರಾಕ್ಟೊ ಲಭ್ಯತೆ, ವಿಶ್ವಾಸಾರ್ಹ ಮಾಹಿತಿ ಮತ್ತು ಆರೋಗ್ಯಾರೈಕೆ ಸೇವೆಗಳನ್ನು ಒದಗಿಸುವ ಮೂಲಕ ಈ ಬೆಳೆಯುತ್ತಿರುವ ಬದಲಾವಣೆಗೆ ಬೆಂಬಲಿಸಲು ಬದ್ಧವಾಗಿದೆ. ಈ ಮೂಲಕ ಮಹಿಳೆಯರು ಆರೋಗ್ಯವನ್ನು ಸುಧಾರಿಸುತ್ತಾ ಮಾಹಿತಿಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾಕ್ಟೊ ಅನುವು ಮಾಡಿಕೊಡುತ್ತದೆ.