Republic Day Nail Art 2025: ಗಣರಾಜ್ಯೋತ್ಸವದ ಹಿನ್ನೆಲೆ ಟ್ರೆಂಡಿಯಾದ ತಿರಂಗಾ ನೇಲ್ ಆರ್ಟ್
Republic Day Nail Art 2025: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಫ್ಯಾಷನ್ ಪ್ರಿಯರಿಗಾಗಿ ನೇಲ್ ಆರ್ಟ್ ಡಿಸೈನರ್‌ಗಳು ರಾಷ್ಟ್ರಪ್ರೇಮ ಬಿಂಬಿಸುವ ಡಿಸೈನ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಫ್ಯಾಷನ್ ಪ್ರಿಯರ ಸುಂದರ ಉಗುರುಗಳ ಮೇಲೆ ತ್ರಿವರ್ಣದ ರಂಗು ಹರಡಿದೆ. ಗಣರಾಜ್ಯೋತ್ಸವದ ಅಂಗವಾಗಿ ನೇಲ್ ಆರ್ಟ್ ಡಿಸೈನರ್‌ಗಳು (Republic Day Nail Art 2025) ಈ ಬಾರಿ ನೂತನ ಸ್ಟೈಲ್ ಸ್ಟೇಟ್‌ಮೆಂಟ್ ಬಿಂಬಿಸುವ ತ್ರೀ ಶೇಡ್ಸ್ ಹಾಗೂ ಮಿಕ್ಸ್ ಮ್ಯಾಚ್ ಆಧಾರಿತ ಥೀಮ್ ಪರಿಚಯಿಸಿದ್ದಾರೆ.
ಟ್ರೆಂಡಿಯಾಗಿರುವ ನೇಲ್ ಆರ್ಟ್
ತಿರಂಗಾ, ಧ್ವಜ, ತ್ರಿವರ್ಣದ ಸ್ಟಿಕ್ಕರ್ಸ್ ಹೀಗೆ ನಾನಾ ಡಿಸೈನ್ ಹೊಂದಿರುವ ನೇಲ್ ಆರ್ಟ್ ಇದೀಗ ನೇಲ್ ಸ್ಟುಡಿಯೋಗಳಲ್ಲಿ ಪಾಪುಲರ್ ಆಗಿದೆ.
ಆರ್ಟಿಫಿಷಿಯಲ್ ತಿರಂಗಾ ನೇಲ್ ಸ್ಟಿಕ್ಕರ್ಸ್
ಆರ್ಟಿಫಿಷಿಯಲ್ ತಿರಂಗಾ ನೇಲ್ ಸ್ಟಿಕ್ಕರ್ಸ್‌ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಫ್ಯಾನ್ಸಿ ಸ್ಟೋರ್ಸ್‌ಗಳಲ್ಲೂ ದೊರೆಯುತ್ತವೆ. ನೀಟಾಗಿ ಅಂಟಿಸಬೇಕು. ಇಲ್ಲವಾದಲ್ಲಿ ಕಿತ್ತು ಹೋಗಬಹುದು ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್.
ಮೆನಿಕ್ಯೂರ್ ನಂತರ…
ನೇಲ್ ಆರ್ಟ್ ಡಿಸೈನರ್‌ಗಳು ಪ್ರತಿ ಬಾರಿಯೂ ಒಂದಲ್ಲಒಂದು ಬಗೆಯ ನೇಲ್ ಆರ್ಟನ್ನು ರಿಲೀಸ್ ಮಾಡುತ್ತಿರುತ್ತಾರೆ. ಅದರಲ್ಲೂ, ಈ ಸೀಸನ್‌ನಲ್ಲಿ ರಾಷ್ಟ್ರಪ್ರೇಮ ಬಿಂಬಿಸುವ ಶೇಡ್‌ಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. ಈ ಶೇಡ್ಸ್ ಹಾಗೂ ಡಿಸೈನ್ ಹಚ್ಚಿಕೊಳ್ಳುವ ಮುನ್ನ ಪೆಡಿಕ್ಯೂರ್ ಮಾಡಿಸಿಕೊಂಡಿರಬೇಕು. ಆಗಷ್ಟೇ ಚೆನ್ನಾಗಿ ಕಾಣಿಸುವುದು ಎನ್ನುತ್ತಾರೆ ಡಿಸೈನರ್ಸ್.
ಸಹಾಯ ತೆಗೆದುಕೊಳ್ಳಿ
ಎಡಗಡೆ ಬೆರಳಿನ ಉಗುರಿಗೆ ನೇಲ್ ಆರ್ಟ್ ಹಚ್ಚುವಾಗ ನೋ ಪ್ರಾಬ್ಲಂ. ಆದರೆ, ಬಲಗೈಗೆ ಈ ಡಿಸೈನ್ ಖುದ್ದು ಮಾಡಿಕೊಳ್ಳಲು ಸಾಧ್ಯವಿಲ್ಲ. ಇತರರ ಸಹಾಯ ಪಡೆಯಲೇಬೇಕು. ಇಲ್ಲವಾದಲ್ಲಿ ಡಿಸೈನ್ ವಕ್ರವಾಗಬಹುದು.
ಈ ಸುದ್ದಿಯನ್ನೂ ಓದಿ | Republic Day Saree Fashion 2025: ಗಣರಾಜ್ಯೋತ್ಸವ ಸಂಭ್ರಮಕ್ಕೆ ಬಂತು ವೈವಿಧ್ಯಮಯ ಕಾಟನ್ ಮಿಕ್ಸ್ ಸೀರೆಗಳು
ಜಸ್ಟ್ ಟ್ರೈ ಮಾಡಿ ನೋಡಿ
ಸಿಂಪಲ್ ಆದ ಡಿಸೈನನ್ನು ನೀವೇ ಬಿಡಿಸಿಕೊಳ್ಳಬಹುದು. ಮೊದಲಿಗೆ ನೇಲ್ ಆರ್ಟ್ ಸಾಮಾಗ್ರಿಗಳನ್ನು ರೆಡಿಯಾಗಿಟ್ಟುಕೊಳ್ಳಿ. ಮೊದಲಿಗೆ ಟ್ರಾನ್ಸಪರೆಂಟ್ ಕೋಟ್ ಹಾಕಿ. ಒಣಗಿದ ನಂತರ ಹೈಲೈಟ್ ಆಗುವ ನೇಲ್ ಶೇಡ್ ಹಚ್ಚಬೇಕು. ಅದರ ಮೇಲೆ ಕೇಸರಿ ಬಿಳಿ ಹಸಿರು ನೇಲ್ ಪೇಂಟನ್ನು ಸಾಫ್ಟಾಗಿ ಸ್ಲೈಡಾಗಿ ಕಾಣುವಂತೆ ಹಚ್ಚಿ. ಬೇಕಿದ್ದಲ್ಲಿ ಸುತ್ತಲೂ ಚಿಕ್ಕ ಚಿಕ್ಕ ಚಿತ್ತಾರ ಮೂಡಿಸಿ. ಒಣಗಿದ ನಂತರ ಇದರ ಮೇಲೆ ಟ್ರಾನ್ಸಪರೆಂಟ್ ನೇಲ್ ಕಲರ್ ಹಚ್ಚಬಹುದು ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರೀಟಾ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)