ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Road Accident: ಮತ್ತೊಂದು ಭೀಕರ ಅಪಘಾತ, ಬೈಕ್‌ಗೆ ಕಾರು ಡಿಕ್ಕಿ, ಬಿದ್ದ ಮಗುವಿನ ತಲೆಯ ಮೇಲೆ ಹರಿದ ಕಾರು

ದೇವರ ದರ್ಶನ ಮುಗಿಸಿ ಬೈಕ್​​ನಲ್ಲಿ ವಾಪಸ್​ ಬರುವಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಎರಡು ವರ್ಷದ ಕಂದಮ್ಮನ ತಲೆ ಮೇಲೆಯೇ ಕಾರು ಹರಿದ ಪರಿಣಾಮ ಎರಡು ವರ್ಷದ ತ್ರಿಶೂಲ್ ಸಾವನ್ನಪ್ಪಿದ್ದಾನೆ. ನಿನ್ನೆ ಮಹಾಶಿವರಾತ್ರಿ ದಿನ ಸಂಜೆ 5.30ಕ್ಕೆ ಈ ಭೀಕರ ಅಪಘಾತ ಸಂಭವಿಸಿದೆ.

ಬೈಕ್‌ಗೆ ಕಾರು ಡಿಕ್ಕಿ, ಬಿದ್ದ ಮಗುವಿನ ತಲೆಯ ಮೇಲೆ ಹರಿದ ಕಾರು

ಮೃತ ತ್ರಿಶೂಲ್ -

ಹರೀಶ್‌ ಕೇರ
ಹರೀಶ್‌ ಕೇರ Feb 16, 2026 1:02 PM

ಬೆಂಗಳೂರು, ಫೆ.16: ಮಹದೇವಪುರದ (bengaluru) ಹಳೆಹಳ್ಳಿ ರಸ್ತೆಯಲ್ಲಿ ಭೀಕರ ಅಪಘಾತ (Road accident) ಸಂಭವಿಸಿದ್ದು, ಅಪ್ಪ-ಅಮ್ಮನ ಜೊತೆ ಬೈಕ್​ನಲ್ಲಿ ಬರ್ತಿದ್ದ 2 ವರ್ಷದ ಕಂದಮ್ಮ (child death) ಸಾವನ್ನಪ್ಪಿದೆ. ದೇವಸ್ಥಾನಕ್ಕೆ ಹೋಗಿ ವಾಪಸ್ ಬರ್ತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್​ನಲ್ಲಿ ಮುಂದೆ ಕೂತಿದ್ದ ಮಗು ಕೆಳಗೆ ಬಿದ್ದಿದ್ದು, ಮತ್ತೊಂದು ಕಾರು ಮಗುವಿನ ಮೇಲೆಯೇ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ದೇವರ ದರ್ಶನ ಮುಗಿಸಿ ಬೈಕ್​​ನಲ್ಲಿ ವಾಪಸ್​ ಬರುವಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಎರಡು ವರ್ಷದ ಕಂದಮ್ಮನ ತಲೆ ಮೇಲೆಯೇ ಕಾರು ಹರಿದ ಪರಿಣಾಮ ಎರಡು ವರ್ಷದ ತ್ರಿಶೂಲ್ ಸಾವನ್ನಪ್ಪಿದ್ದಾನೆ. ನಿನ್ನೆ ಮಹಾಶಿವರಾತ್ರಿ ದಿನ ಸಂಜೆ 5.30ಕ್ಕೆ ಈ ಭೀಕರ ಅಪಘಾತ ಸಂಭವಿಸಿದ್ದು, ಕಣ್ಮುಂದೆಯೇ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.

ತ್ರಿಶೂಲ್ ತಂದೆ-ತಾಯಿ ಉಜ್ಜಯಿನಿಗೆ ಹೋಗಿದ್ದರು. ವಾಪಾಸ್ ಬರುವಾಗ ಮಗುವನ್ನು ಬೈಕಿನಲ್ಲಿ ಮುಂದೆ ಕೂರಿಸಿಕೊಂಡು ಬಂದಿದ್ರು. ಹಿಂದೆಯಿಂದ ಕಾರು ಡಿಕ್ಕಿ ಹೊಡೆದಾಗ ಮಗು ಕೆಳಗಡೆ ಬಿದ್ದಿದೆ. ಈ ವೇಳೆ ಮಗುವಿನ ಮೇಲೆ ಇನ್ನೊಂದು ಕಾರು ಹರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಹದೇವಪುರದಲ್ಲಿ ಆಮೆಗತಿಯಲ್ಲಿ ರಸ್ತೆ ದುರಸ್ತಿ ನಡೆಯುತ್ತಿದ್ದು, ರಸ್ತೆ ಹದಗೆಟ್ಟ ಹಿನ್ನೆಲೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

Student Self Harming: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಮಹದೇವಪುರ ವಿಧಾನಸಭಾ ಕ್ಷೇತ್ರ ಹಳೇಹಳ್ಳಿ ಪಂಚಾಯತ್ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ ವಿಳಂಬದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಳೆದ 6 ತಿಂಗಳಿಂದ ರಸ್ತೆ ದುರಸ್ತಿ ಕಾಮಗಾರಿ ಕಾರ್ಯ ನಡೆದಿದ್ದು, ರಸ್ತೆ ಅವಸ್ಥೆ ಬಗ್ಗೆ ಪದೇ ಪದೇ ದೂರು ಕೊಟ್ಟು ಸ್ಥಳೀಯರು ಹೈರಾಣಾಗಿದ್ದಾರಂತೆ.

ಹೋಟೆಲ್‌ ಉದ್ಘಾಟನೆ ವೇಳೆ ಹೃದಯಾಘಾತದಿಂದ ಸಾವು

ದಾವಣಗೆರೆ: ಖಾಸಗಿ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಹೃದಯಾಘಾತಕ್ಕೊಳಗಾಗಿ (Heart Attack) ಯುವಕ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere) ಜಿಲ್ಲೆ ಜಗಳೂರು ಪಟ್ಟಣದಲ್ಲಿ ನಡೆದಿದೆ. ಸುಭಾನ್ (25) ಮೃತ ಯುವಕ.

ಖಾಸಗಿ ಹೋಟೆಲ್ ಕಾರ್ಯಕ್ರಮಕ್ಕೆ ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಊಟಕ್ಕೆ ಕೂತಿದ್ದಾಗ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವಕ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.