ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

5 ರಿಂದ 70 ಲಕ್ಷವರೆಗೂ ಪ್ರಶ್ನೆ ಪತ್ರಿಕೆಗಳ ಮಾರಾಟ: ಅ.19ರವರೆಗೆ ಸಾಹುಕಾರ್‌ ಡಾ.ಗೀತಾ ಇಡಿ ಕಸ್ಟಡಿಗೆ

ಶಿವಶಂಕರಪ್ಪ ಅವರ ಸಂಬಂಧಿ ಸುಗುರೇಶ್ ಜಾಕಾ ತಪ್ಪೊಪ್ಪಿಗೆ ಮತ್ತು ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಹೇಳಿಕೆ ಆಧರಿಸಿ ಮಂಗಳವಾರ ಕಾರ್ಯಾಚರಣೆ ನಡೆಸಿದ್ದ ಇ.ಡಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದರು. ಬುಧವಾರ ಇಬ್ಬರೂ ಆರೋಪಿಗಳನ್ನು ಅಧಿಕಾರಿಗಳು ಪಿಎಂಎಲ್ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಬೆಂಗಳೂರು: ಪಶುವೈದ್ಯರ ನೇಮಕ ಹಗರಣದಲ್ಲಿ ಬಂಧಿತ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಮಾಜಿ ಸದಸ್ಯೆ ಡಾ. ಬಿ.ವಿ.ಗೀತಾ ಅವ ರನ್ನು ಅ.19ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟ ಡಿಗೆ ವಹಿಸಿ ಪಿಎಂಎಲ್ಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಶಿವಶಂಕರಪ್ಪ ಅವರ ಸಂಬಂಧಿ ಸುಗುರೇಶ್ ಜಾಕಾ ತಪ್ಪೊಪ್ಪಿಗೆ ಮತ್ತು ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಹೇಳಿಕೆ ಆಧರಿಸಿ ಮಂಗಳವಾರ ಕಾರ್ಯಾಚರಣೆ ನಡೆಸಿದ್ದ ಇ.ಡಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದರು. ಬುಧವಾರ ಇಬ್ಬರೂ ಆರೋಪಿಗಳನ್ನು ಅಧಿಕಾರಿಗಳು ಪಿಎಂಎಲ್ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಇಬ್ಬರನ್ನೂ ಅ.19ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ಇ.ಡಿ ಪರವಾಗಿ ಹಾಜರಾದ ವಿಶೇಷ ಸಾರ್ವಜನಿಕ ಅಭಿಯೋಜಕ ಮಧು ಎನ್.ರಾವ್, ಇಬ್ಬರೂ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ೧೪ ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದರು. ‌

ಇದನ್ನೂ ಓದಿ: KPSC recruitment scam: ಕೆಪಿಎಸ್‌ಸಿ ನೇಮಕಾತಿ ಹಗರಣ; ಶಿವಶಂಕರಪ್ಪ ಸಾಹುಕಾರ್, ಬಿ.ವಿ. ಗೀತಾ 13 ದಿನ ಇಡಿ ಕಸ್ಟಡಿಗೆ

ತನಿಖೆಯ ವೇಳೆ ಕೆಲ ಕಟು ಸತ್ಯಗಳು ಹೊರಬಂದಿದ್ದು, ಹಲವು ಅಭ್ಯರ್ಥಿಗಳಿಗೆ 40 ಲಕ್ಷ, 60 ಲಕ್ಷ ಹಾಗೂ 70 ಲಕ್ಷ ರು.ಗೆ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ಕೇವಲ 5 ಲಕ್ಷ ರುಪಾಯಿಗೂ ಪ್ರಶ್ನೆಪತ್ರಿಕೆ ಡೀಲ್ ನಡೆದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ಗಳಿಂದ ಪಡೆದಿದ್ದ ಬ್ಲ್ಯಾಂಕ್ ಚೆಕ್ ಗಳು, ಪ್ರಾಮಿಸರಿ ನೋಟ್‌ಗಳು ಹಾಗೂ ಸಹಿ ಮಾಡಲಾದ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ವಿನುತಾ ಎಂಬ ಅಭ್ಯರ್ಥಿಯ ತಂದೆ ಮಲ್ಲಪ್ಪ ಅವರ ಮೂಲಕ ಶಿವಶಂಕರಪ್ಪ ಡೀಲ್ ಮಾಡಿ ದ್ದರು. ಆರಂಭದಲ್ಲಿ 50 ಲಕ್ಷ ರು.ಗೆ ಬೇಡಿಕೆಯಿಟ್ಟು, ಅಂತಿಮವಾಗಿ 20 ಲಕ್ಷ ರು. ಗೆ ಡೀಲ್ ಮುಗಿಸಲಾಗಿತ್ತು. 10 ಲಕ್ಷ ರು. ಮುಂಗಡ ಹಣ ಪಾವತಿಸಿರುವುದನ್ನು ವಿನುತಾ ಅವರ ತಂದೆ ಮಲ್ಲಪ್ಪ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

ಅದೇ ರೀತಿ, ನಂದೀಶ್ ಎಂಬ ಅಭ್ಯರ್ಥಿಯ ತಂದೆ ಬಸವರಾಜಪ್ಪ ಅವರು ಕೆಪಿಎಸ್‌ಸಿ ಸದಸ್ಯೆ ಬಿ.ವಿ.ಗೀತಾ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದು, ವಾಟ್ಸ್‌ಆಪ್ ಮೂಲಕ ಮಾತುಕತೆ ನಡೆಸಿದ್ದರು. ಅಲ್ಲಿಯೂ 50 ಲಕ್ಷ ರು. ಬೇಡಿಕೆಯಿಟ್ಟು, 40 ಲಕ್ಷಕ್ಕೆ ಡೀಲ್ ಕುದುರಿಸಿ ಈಗಾಗಲೇ 20 ಲಕ್ಷ ರು. ವರ್ಗಾವಣೆಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಈ ಇಬ್ಬರು ಅಭ್ಯರ್ಥಿಗಳು ಮಾತ್ರವಲ್ಲದೆ, ಇನ್ನೂ ಹಲವು ಅಭ್ಯರ್ಥಿಗಳ ಜತೆ ಆರೋಪಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರು. ಅಕ್ರಮ ವ್ಯವಹಾರ ನಡೆಸಿದ್ದಾರೆ. ಕೆಪಿಎಸ್‌ಸಿ ಕಚೇರಿ ಪರಿಶೀಲನೆ ವೇಳೆ ಹಾಗೂ ಶಿವಶಂಕರಪ್ಪ ಅವರ ಪಿಎ ಬಳಿ ಬ್ಯಾಂಕ್ ಡೆಪಾಸಿಟ್ ರಶೀದಿಗಳು ಪತ್ತೆಯಾಗಿವೆ. ಗೀತಾ ಅವರು ತಮ್ಮ ಸಂಬಂಧಿಕರ ಖಾತೆಗಳ ಮೂಲಕ ನಗದು ಡೆಪಾ ಸಿಟ್ ಮಾಡಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ವಕೀಲರು ತಿಳಿಸಿದರು. ಇದಲ್ಲದೇ, ಪಶುವೈದ್ಯಕೀಯ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆಗೆ ಸಹಾಯ ಮಾಡಲು ಬಿ.ವಿ.ಗೀತಾ ಅವರು ಜ್ಞಾನೇಂದ್ರ ಕುಮಾರ್ ಅವರನ್ನು ಸಂಪರ್ಕಿಸಿದ್ದರು.

ವಿಚಾರಣೆ ವೇಳೆ ಜ್ಞಾನೇಂದ್ರ ಕುಮಾರ್ ಈ ವಿಷಯ ಒಪ್ಪಿಕೊಂಡಿದ್ದಾರೆ. ಸಂಪೂರ್ಣ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಇಷ್ಟವಿಲ್ಲದಿದ್ದ ಕಾರಣ, ಕೇವಲ 80 ಪ್ರಶ್ನೆಗಳಿಗೆ ಮಾತ್ರ ಸರಿಯಾದ ಉತ್ತರ ಗಳನ್ನು ಸಿದ್ಧಪಡಿಸಲಾಗಿತ್ತು. ಗೀತಾ ನೀಡಿದ್ದ 5 ರಿಂದ 6 ಅಭ್ಯರ್ಥಿಗಳ ಹೆಸರು ಮತ್ತು ರೋಲ್ ನಂಬರ್‌ಗಳ ಆಧಾರದ ಮೇಲೆ ಸಿಟ್ಟಿಂಗ್ ಅರೇಂಜ್‌ಮೆಂಟ್ ಹಾಗೂ ಪ್ರಶ್ನೆ ಪತ್ರಿಕೆಯ ಸರಣಿಯನ್ನು ಗುರುತಿಸಿ ಅಕ್ರಮ ಎಸಗಿರುವುದನ್ನು ಜ್ಞಾನೇಂದ್ರ ಕುಮಾರ್ ಬಹಿರಂಗಪಡಿಸಿದ್ದಾರೆ ಎಂದು ವಕೀಲ ಮಧು ಎನ್.ರಾವ್ ನ್ಯಾಯಾಲಯಕ್ಕೆ ತಿಳಿಸಿದರು.

ಅಂತಿಮವಾಗಿ ಇಬ್ಬರನ್ನೂ ಇ.ಡಿ ಕಸ್ಟಡಿಗೆ ನೀಡಿ ಆದೇಶಿಸಿದ ನ್ಯಾಯಾಲಯ, ತನಿಖೆಗೆ ಸರಿಯಾಗಿ ಸಹಕರಿಸಬೇಕು, ಸುಮ್ಮನೆ ವೈದ್ಯಕೀಯ ವರದಿಗಳನ್ನು ನೆಪವಾಗಿ ತರಬಾರದು ಎಂದು ಆರೋಪಿ ಗಳಿಗೆ ಸೂಚನೆ ನೀಡಿತು. ತನಿಖೆಯ ವೇಳೆ ಆರೋಪಿಗಳಿಗೆ ಅಗತ್ಯವಿರುವ ಮಾತ್ರೆ, ಔಷಧಗಳು ಹಾಗೂ ಸೂಕ್ತ ಆರೋಗ್ಯ ತಪಾಸಣೆಯನ್ನು ಒದಗಿಸುವಂತೆ ಇ.ಡಿ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶಿಸಿತು.

ಉಪವಾಸಕ್ಕೆ ಅವಕಾಶ ಕೋರಿದ ಗೀತಾ

ಕಸ್ಟಡಿ ಕೋರಿದ ಇ.ಡಿ ಮನವಿಯನ್ನು ಆರೋಪಿಗಳ ಪರ ವಕೀಲರು ತೀವ್ರವಾಗಿ ವಿರೋಧಿಸಿದರು. ಪ್ರಕರಣದಲ್ಲಿ ಸಿಐಡಿ ಈಗಾಗಲೇ ಬಹುತೇಕ ತನಿಖೆ ನಡೆಸಿದೆ. ಈಗ ಇದು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರದ ನಡುವಿನ ವಿಷಯದಂತಾಗಿದೆ. ಹಿಂದೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಎರಡು ದಿನಗಳ ಕಾಲ ಸುದೀ ರ್ಘ ಶೋಧ ನಡೆಸಿದ್ದರು. ಈಗ ಅನಗತ್ಯವಾಗಿ ಶಿವಶಂಕರಪ್ಪ ಮತ್ತು ಗೀತಾ ಅವರನ್ನು ಬಂಧಿಸಲಾಗಿದೆ ಎಂದು ವಾದಿಸಿದರು. ಅಲ್ಲದೇ, ಆರೋಗ್ಯದ ಕಾರಣಗಳನ್ನು ಮುಂದಿಟ್ಟು ಆರೋಪಿಗಳಿಗೆ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು