ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akhilesh Yadav: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್‌ ಯಾದವ್‌

Akhilesh Yadav in Bengaluru: ಬೆಂಗಳೂರಿನ ತಮ್ಮ ಸಂಬಂಧಿಯೊಬ್ಬರ ಮನೆಗೆ ಭೇಟಿ ನೀಡಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್, ರಾಮೇಶ್ವರಂ ಕೆಫೆಗೆ (‌Rameshwarama cafe) ಭೇಟಿ ನೀಡಿ ಅಲ್ಲಿನ ದೋಸೆ ಸವಿದರು. ನಂತರ ಅದನ್ನು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್‌ ಯಾದವ್‌

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಅಖಿಲೇಶ್‌ ಯಾದವ್ -

ಹರೀಶ್‌ ಕೇರ
ಹರೀಶ್‌ ಕೇರ Nov 18, 2025 7:23 AM

ಬೆಂಗಳೂರು: ಬೆಂಗಳೂರಿಗೆ ಸಮಾಜವಾದಿ ಪಕ್ಷ (Samajwadi Party) ದ ಮುಖ್ಯಸ್ಥ ಮತ್ತು ಕನ್ನೌಜ್ ಸಂಸದ ಅಖಿಲೇಶ್ ಯಾದವ್ (Akhilesh Yadav) ಭೇಟಿ ನೀಡಿದ್ದಾರೆ. ಈ ವೇಳೆ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ರಾಮೇಶ್ವರಂ ಕೆಫೆ (Rameshwaram Cafe) ಗೆ ಭೇಟಿ ನೀಡಿ ಖಾದ್ಯ ಸವಿದಿದ್ದಾರೆ. ಈ ಪೈಕಿ ದೋಸೆಗೆ ಅಖಿಲೇಶ್ ಯಾದವ್ ಮಾರು ಹೋಗಿದ್ದಾರೆ.

ಈ ಕುರಿತು ಫೋಟೋಗಳನ್ನು ಅಖಿಲೇಶ್ ಯಾದವ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಮೇಶ್ವರಂ ಕೆಫೆ ತಿಂಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ವೇಳೆ ಅಖಿಲೇಶ್‌ ಯಾದವ್‌ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಾರೆ. ನಂತರ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ದೋಸೆ ಸೇವಿಸುತ್ತಿರುವ ಫೋಟೋ ಪೋಸ್ಟ್‌ ಮಾಡಿದ್ದು, ʼಕರ್ನಾಟಕದ ನೆನಪು, ಸ್ವಾದದ ಹಳೆಯ ಸಂಬಂಧʼ ಎಂದು ಕ್ಯಾಪ್ಷನ್‌ ಬರೆದಿದ್ದಾರೆ.



ರಾಹುಲ್ ಬೇಡ, ಅಖಿಲೇಶ್‌ ಇರಲಿ

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಬಳಿಕ ಐಎನ್​ಡಿಐಎ ಬಣದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಇದರ ಬೆನ್ನಲ್ಲೇ ಲಕ್ನೋ ಸೆಂಟ್ರಲ್‌ನ ಶಾಸಕ ರವಿದಾಸ್ ಮೆಹ್ರೋತ್ರಾ ತಮ್ಮ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಬೇಕು. ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಸ್ವಂತವಾಗಿ ಸರ್ಕಾರ ರಚಿಸಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಸಮಾಜವಾದಿ ಪಕ್ಷ 37 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಈ ಮೂಲಕ ಕಾಂಗ್ರೆಸ್ ನಂತರ ಲೋಕಸಭೆಯಲ್ಲಿ ಎರಡನೇ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಅಖಿಲೇಶ್ ಯಾದವ್ ಬ್ಯಾಲೆಟ್ ಮತದಾನಕ್ಕೆ ಮರಳುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ವ್ಯವಸ್ಥೆಯನ್ನೂ ಪ್ರಶ್ನಿಸಿದ್ದಾರೆ. ಹೀಗಾಗಿ ಭಾರತ ಮೈತ್ರಿಕೂಟವನ್ನು ಮುನ್ನಡೆಸಬೇಕು ಎಂದು ರವಿದಾಸ್ ಮೆಹ್ರೋತ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

INDIA Bloc Alliance: "ರಾಹುಲ್‌ ಬೇಡ ಅಖಿಲೇಶ್‌ ನಮ್ಮ ನಾಯಕರಾಗಲಿ"; ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು?