ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gilli Nata: ಅಮೆರಿಕಾದಲ್ಲಿಯೂ ಗಿಲ್ಲಿ ಫ್ಯಾನ್ಸ್‌ ವಿಜಯದ ಸಂಭ್ರಮ!

Gilli Nata: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಅವರು ಮಳವಳ್ಳಿಗೆ ಬಂದಿದ್ದಾರೆ. ಅವರನ್ನು ನೋಡಲು ಮಳವಳ್ಳಿ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಗಿಲ್ಲಿಯ ಮೆರವಣಿಗೆ ಸಾಗಿದೆ. ಗಿಲ್ಲಿ ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಬೇಕು ಎಂಬುದು ಅಭಿಮಾನಿಗಳ ಆಸೆ. ಗಿಲ್ಲಿ ಜೊತೆ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಜನರು ಮುಗಿಬಿದ್ದಿದ್ದಾರೆ. ಇದೀಗ ಅಮೆರಿಕಾ ದೇಶದ ನ್ಯೂಯಾರ್ಕ್ ರಾಜಧಾನಿ ಅಲ್ಪನಿಯಲ್ಲಿ ಕನ್ನಡಿಗರ ಬಿಗ್ ಬಾಸ್ ಸೀಸನ್ 12 ನ್ನು ದಾಖಲೆ ಓಟುಗಳಿಂದ ಗೆದ್ದ ಹಳ್ಳಿ ಹುಡುಗ ಗಿಲ್ಲಿಯ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಅಮೆರಿಕಾದಲ್ಲಿಯೂ ಗಿಲ್ಲಿ ಫ್ಯಾನ್ಸ್‌ ವಿಜಯದ ಸಂಭ್ರಮ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 19, 2026 9:00 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಅವರು ಮಳವಳ್ಳಿಗೆ ಬಂದಿದ್ದಾರೆ. ಅವರನ್ನು ನೋಡಲು ಮಳವಳ್ಳಿ (Malavalli) ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಗಿಲ್ಲಿಯ ಮೆರವಣಿಗೆ ಸಾಗಿದೆ. ಗಿಲ್ಲಿ ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಬೇಕು ಎಂಬುದು ಅಭಿಮಾನಿಗಳ ಆಸೆ. ಗಿಲ್ಲಿ (Gilli Nata) ಜೊತೆ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಜನರು ಮುಗಿಬಿದ್ದಿದ್ದಾರೆ. ಇದೀಗ ಅಮೆರಿಕಾ (America) ದೇಶದ ನ್ಯೂಯಾರ್ಕ್ ರಾಜಧಾನಿ ಅಲ್ಪನಿಯಲ್ಲಿ ಕನ್ನಡಿಗರ ಬಿಗ್ ಬಾಸ್ ಸೀಸನ್ 12 ನ್ನು ದಾಖಲೆ ಓಟುಗಳಿಂದ ಗೆದ್ದ ಹಳ್ಳಿ ಹುಡುಗ ಗಿಲ್ಲಿಯ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಸಖತ್‌ ವೈರಲ್‌ ಆಗ್ತಿದೆ ಫೋಟೋ.

ಗಿಲ್ಲಿ ಕ್ರೇಜ್‌

"ಸಕಲಕಲಾವಲ್ಲಭ ಹಳ್ಳಿ ಹುಡುಗ ಗಿಲ್ಲಿಗೆ ಭಾರತದಲ್ಲಿ ಮಾತ್ರವಲ್ಲ ಅಮೆರಿಕಾದಲ್ಲಿಯೂ ಸಹ ಬಹಳಷ್ಟು ಅಭಿಮಾನಿಗಳ ವರ್ಗವಿದೆ, ಫ್ಯಾನ್ ಬೇಸ್ ಇದೆ. ಬಿಗ್ ಬಾಸ್ ಸೀಸನ್ ಕ್ರೇಜು ಅಮೆರಿಕಾದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತುಂಬಾ ಜಾಸ್ತಿ ಇತ್ತು. ಇದಕ್ಕೆ ಮುಖ್ಯ ಕಾರಣ ಗಿಲ್ಲಿ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಇಷ್ಟು ವರ್ಷ ಬಿಗ್ ಬಾಸ್ ನಿಂದ ಸ್ಪರ್ದಾಳುಗಳು ಫೇಮಸ್ ಆಗುತ್ತಿದ್ದರೆ ಈ ವರ್ಷ ಅದು ಉಲ್ಟಾ ಆಗಿದೆ. ಗಿಲ್ಲಿಯಿಂದಾಗಿ ಅಮೆರಿಕಾದಲ್ಲಿ ಬಿಗ್ ಬಾಸ್ ತುಂಬಾ ಜನಪ್ರಿಯವಾಗಿದೆ" ಎಂದು ಕನ್ನಡಿಗರ ಮುಖಂಡ ಬೆಂಕಿ ಬಸಣ್ಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮನು, "ನಮ್ಮ ಚಿಕ್ಕ ಮಕ್ಕಳಾದ ದಿಯಾ ಮತ್ತು ವಿಹಾನ್ ರಿಗೆ ಗಿಲ್ಲಿ ಕಂಡರೆ ಬಹಳ ಇಷ್ಟ. ಅವನ ಡೈಲಾಗ್ ಗಳನ್ನು ಹೇಳುತ್ತಾರೆ. ಅವನ ಡಾನ್ಸ್ ಗಳನ್ನು ಮಾಡುತ್ತಾರೆ" ಎಂದು ಸಂತೋಷದಿಂದ ಹೇಳಿದರು.

Gilli Nata fans celebrate victory in America too

ಅಭಿಷೇಕ್ ಅವರು ಮಾತನಾಡಿ, "ಎರಡನೇ ಸ್ಥಾನವನ್ನು ಮುಗ್ಧ ಮನಸ್ಸಿನ, ಒಳ್ಳೆ ಹೃದಯದ, ಸಾಮಾನ್ಯ ಕುಟುಂಬದ ಹುಡುಗಿ ರಕ್ಷಿತಾ ಗೆದ್ದದ್ದು ತುಂಬಾ ಖುಷಿಯಾಗಿದೆ. ಗಿಲ್ಲಿ ಮತ್ತು ರಕ್ಷಿತಾ ಇಬ್ಬರೂ ಹಳ್ಳಿ ಮೂಲದಿಂದ ಬಂದು ತಮ್ಮ ಸ್ವಪ್ರತಿಭೆಯಿಂದ ಇಷ್ಟು ದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಕ್ಕೆ ನಮ್ಮ ಕನ್ನಡ ಜನತೆಯ ಬೆಂಬಲವೇ ಕಾರಣ" ಎಂದು ಹೇಳಿದರು.

ಇದನ್ನೂ ಓದಿ: Bigg Boss Kannada 12: ತಮ್ಮ ಯಶಸ್ಸಿಗೆ ಕಾರಣರಾದ ಇವರೆಲ್ಲರಿಗೆ ಗಿಲ್ಲಿ ಸ್ಪೆಷಲ್‌ ಥ್ಯಾಂಕ್ಸ್‌! ವಿನ್ನರ್ ನಡೆಗೆ ಫ್ಯಾನ್ಸ್‌ ಮೆಚ್ಚುಗೆ

ಆಲ್ಬನಿ ಕನ್ನಡ ಸಂಘದಲ್ಲಿ ಇಂದು ಕರಿಯೋಕೆ ನೈಟ್ ಆಯೋಜಿಸಿ ಎಲ್ಲಾ ಸದಸ್ಯರು ಹಾಡಿ ಕುಣಿದು ಕುಪ್ಪಳಿಸಿ ಆನಂದ ಪಟ್ಟರು. ಜೊತೆಗೆ ಪಾಟ್ ಲಕ್ ಮೃಷ್ಟಾನ್ನ ಭೋಜನವನ್ನು ಆಯೋಜಿಸಲಾಗಿತ್ತು.