ವಿಶಾಖಪಟ್ಟಣದ ವಿಜ್ಞಾನ್ ಕಾಲೇಜು ಮತ್ತು ಡೈಟ್ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಕೋರ್ಸ್ ಪೂರ್ತಿ ಮಾಡಿದ 750 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ತನ್ನ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ (ಎಸ್ ಐ ಸಿ) ಯೋಜನೆ ಅಡಿಯಲ್ಲಿ ಭವಿಷ್ಯದ ತಂತ್ರಜ್ಞಾನ ಕೌಶಲ್ಯ ತರಬೇತಿ ಕಾರ್ಯವನ್ನು ಮುಂದುವರಿಸಿದ್ದು, ಈ ನಿಟ್ಟಿನಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ವಿಜ್ಞಾನ್‌ಸ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ಡೈಟ್ ಕಾಲೇಜಿನಲ್ಲಿ ಕೌಶಲ್ಯ ತರಬೇತಿ ಕೋರ್ಸ್ ಗೆ ಹಾಜರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದೆ.
ಈ ವರ್ಷ ವಿಶಾಖಪಟ್ಟಣದ ಎರಡು ಕಾಲೇಜುಗಳಲ್ಲಿ ಒಟ್ಟು 750 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗಿದ್ದು, ಅದರಲ್ಲಿ ವಿಜ್ಞಾನ್ ಕಾಲೇಜಿನಿಂದ 500 ಮತ್ತು ಡೈಟ್ ಕಾಲೇಜಿನಿಂದ 250 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ತಂತ್ರಜ್ಞಾನ ಆಧರಿತ ಭವಿಷ್ಯಕ್ಕೆ ಭಾರತದ ಯುವಜನತೆ ಯನ್ನು ಸಿದ್ಧಗೊಳಿಸುವ ಸ್ಯಾಮ್‌ಸಂಗ್‌ನ ಧ್ಯೇಯದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ.
ಆಂಧ್ರಪ್ರದೇಶದಲ್ಲಿ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ ಪದವೀಧರರು
ವಿಶಾಖಪಟ್ಟಣದ ವಿಜ್ಞಾನ್‌ಸ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿನ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು 2025ರ ಡಿಸೆಂಬರ್ 12ರಂದು ವಿಶಾಖಪಟ್ಟಣದ ವಿಜ್ಞಾನ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಎಂಬಿಬಿಎಸ್ & ಎಸಿಪಿ - ಸೈಬರ್ ಕ್ರೈಂ ಸಿಐಡಿ ಡಾ. ಬಿ. ರವಿ ಕಿರಣ್, ವಿಜ್ಞಾನ್ ಕಾಲೇಜು ಪ್ರಾಚಾರ್ಯರಾದ ಡಾ. ಸುಧಾಕರ್ ಜ್ಯೋತುಳ ಹಾಗೂ ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ (ಇಎಸ್‌ಎಸ್‌ಸಿಐ) ದ ಸ್ಟ್ರಾಟಜಿಕ್ ಪಾರ್ಟ್ನರ್‌ಶಿಪ್ಸ್ ಉಪಾಧ್ಯಕ್ಷ ಸರೋಜ್ ಅಪಾಟೋ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಇದನ್ನೂ ಓದಿ: Samsung: ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಿಗಾಗಿ, ಎಂಬೈಬ್ ನ ಎಐ-ಚಾಲಿತ ಕಲಿಕಾ ವೇದಿಕೆ
ವಿಜ್ಞಾನ್ ಕಾಲೇಜಿನಲ್ಲಿ ಕೋರ್ಸ್ ಪೂರ್ಣಗೊಳಿಸಿದ 500 ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಇದರಲ್ಲಿ 250 ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯಲ್ಲಿ ಮತ್ತು 250 ವಿದ್ಯಾರ್ಥಿ ಗಳು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್‌ನಲ್ಲಿ ತರಬೇತಿ ಪಡೆದಿದ್ದಾರೆ. ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರಗಳನ್ನು ಅಧ್ಯಾಪಕರು, ಗಣ್ಯರು ಮತ್ತು ಎಸ್‌ಐಸಿ ಪಾಲುದಾರರ ಸಮ್ಮುಖದಲ್ಲಿ ಸ್ವೀಕರಿಸಿದರು.
ಅದೇ ದಿನ, ಆಂಧ್ರಪ್ರದೇಶದ ವಿಶಾಖಪಟ್ಟಣದ ಡೈಟ್ ಕಾಲೇಜಿನಲ್ಲಿ ಮತ್ತೊಂದು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡೈಟ್ ಕಾಲೇಜು ಚೇರ್ ಮನ್ ಶ್ರೀ ದಾದಿ ರತ್ನಾಕರ್ ಗಾರು, ಡೈಟ್ ಕಾಲೇಜು ಪ್ರಾಚಾರ್ಯ ಡಾ. ರುಗಡ ವೈಕುಂಠ ರಾವ್ ಹಾಗೂ ಇಎಸ್‌ಎಸ್‌ಸಿಐನ ಸ್ಟ್ರಾಟಜಿಕ್ ಪಾರ್ಟ್ನರ್‌ಶಿಪ್ಸ್ ಉಪಾಧ್ಯಕ್ಷ ಶ್ರೀ ಸರೋಜ್ ಅಪಾಟೋ ಆಗಮಿಸಿದ್ದರು.
ಡೈಟ್ ಕಾಲೇಜಿನಲ್ಲಿ 250 ಎಸ್‌ಐಸಿ ಫಲಾನುಭವಿಗಳಿಗೆ ಕೃತಕ ಬುದ್ಧಿಮತ್ತೆಯಲ್ಲಿ ವಿಶೇಷ ತರಬೇತಿ ಪೂರ್ಣಗೊಳಿಸಿದ್ದಕ್ಕಾಗಿ ಪ್ರಮಾಣಪತ್ರಗಳನ್ನು ನೀಡಲಾಯಿತು. ಗಣ್ಯರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದರು.
ಭಾರತದಾದ್ಯಂತ ಭವಿಷ್ಯದ ತಂತ್ರಜ್ಞಾನ ಕೌಶಲ್ಯ ತರಬೇತಿ
ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ ಕೃತಕ ಬುದ್ಧಿಮತ್ತೆ (ಎಐ), ಇಂಟರ್ನೆಟ್ ಆಫ್ ಥಿಂಗ್ಸ್ (ಐಓಟಿ), ಬಿಗ್ ಡೇಟಾ ಮತ್ತು ಕೋಡಿಂಗ್ & ಪ್ರೋಗ್ರಾಮಿಂಗ್‌ಗಳಲ್ಲಿ ಯುವಜನತೆಗೆ ತರಬೇತಿ ನೀಡುವ ಮೂಲಕ ಭಾರತದ ಡಿಜಿಟಲ್ ಕೌಶಲ್ಯ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳಿಗೆ ಪೂರಕವಾಗಿ ಆಯೋ ಜಿಸಲಾಗುತ್ತಿರುವ ಈ ಕಾರ್ಯಕ್ರಮವನ್ನು 2025ರಲ್ಲಿ 10 ರಾಜ್ಯಗಳಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ವೇಗವಾಗಿ ವಿಸ್ತರಿಸಲಾಗುತ್ತಿದೆ.
ಹಿಂದಿನ ವರ್ಷದ 3,500 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಈ ಸಲ ಏಳು ಪಟ್ಟು ಹೆಚ್ಚಾ ಗಿದೆ. ಈ ಯೋಜನೆಯು ಒಳಗೊಳ್ಳುವಿಕೆಯ ಕಡೆಗೆ ಹೆಚ್ಚಿನ ಗಮನ ಹೊಂದಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಶೇ.42ರಷ್ಟು ಮಹಿಳೆಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಉತ್ತಮ ಗುಣಮಟ್ಟದ ತಂತ್ರಜ್ಞಾನ ಶಿಕ್ಷಣಕ್ಕೆ ಸಮಾನ ಅವಕಾಶ ನೀಡುವ ಸ್ಯಾಮ್‌ಸಂಗ್‌ನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ (ಇಎಸ್‌ಎಸ್‌ಸಿಐ) ಮತ್ತು ಟೆಲಿಕಾಂ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ (ಟಿಎಸ್‌ಎಸ್‌ಸಿ) ಅಡಿ ಮಾನ್ಯತೆ ಪಡೆದ ತರಬೇತಿ ಪಾಲುದಾರರೊಂದಿಗೆ ಸ್ಯಾಮ್ ಸಂಗ್ ಕೆಲಸ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ತಾಂತ್ರಿಕ ತರಬೇತಿ, ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಿದ್ಧರಾಗುವಂತೆ ಮಾಡುತ್ತಿದೆ. ಈ ಕಾರ್ಯಕ್ರಮವು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ, ಸಣ್ಣ ನಗರ ಪ್ರದೇಶಗಳ ಮತ್ತು ಅಭಿವೃದ್ಧಿಶೀಲ ಜಿಲ್ಲೆಗಳಿಗೆ ಆದ್ಯತೆ ನೀಡುತ್ತದೆ. ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ಭಾರತದ ಡಿಜಿಟಲ್ ಪರಿವರ್ತನೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತದೆ.
ತಂತ್ರಜ್ಞಾನದ ಮೂಲಕ ಭಾರತದ ಕಾರ್ಯಪಡೆಯ ಸಬಲೀಕರಣ
ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್, ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಮತ್ತು ಡಿಓಎಸ್‌ಟಿ (ಡಿಜಿಟಲ್ ಮತ್ತು ಆಫ್‌ಲೈನ್ ಸ್ಕಿಲ್ಸ್ ಟ್ರೈನಿಂಗ್) ನಂತಹ ಯೋಜನೆಗಳ ಮೂಲಕ ಯುವ ಭಾರತೀಯರಿಗೆ ಉದ್ಯೋಗಕಾವಕಾಶ, ಹೊಸ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಈ ಕಾರ್ಯಕ್ರಮಗಳು ಡಿಜಿಟಲ್ ಕೌಶಲ್ಯಯುಕ್ತ, ಹೊಸ ಆವಿಷ್ಕಾ ರಕ್ಕೆ ಸಿದ್ಧವಾದ ಮತ್ತು ಭವಿಷ್ಯ ಸಿದ್ಧ ಪ್ರತಿಭಾ ಸಮೂಹವನ್ನು ನಿರ್ಮಿಸುವ ಕಂಪನಿಯ ಬದ್ಧತೆ ಯನ್ನು ಬಲಪಡಿಸುತ್ತವೆ ಮತ್ತು ಆತ್ಮನಿರ್ಭರ ಭಾರತಕ್ಕೆ ಶಕ್ತಿ ತುಂಬುತ್ತದೆ.