ಭಾರತದ ಯಾವುದೇ ಇ-ಕಾಮರ್ಸ್ ಕಂಪನಿಗಿಂತ ವೇಗವಾಗಿ ಐಫೋನ್ 17 ಅನ್ನು 17 ನಿಮಿಷಗಳಲ್ಲಿ ಡೆಲಿವರಿ ಮಾಡುತ್ತಿದೆ ಸಂಗೀತಾ ಗ್ಯಾಜೆಟ್ಸ್
ಬಹುತೇಕ ಇ- ಕಾಮರ್ಸ್ ಕಂಪನಿಗಳು ಮರು ದಿನ ಡೆಲಿವರಿ ಮಾಡುವುದಾಗಿ ಹೇಳುತ್ತಿರುವಾಗ ಮತ್ತು ಕ್ವಿಕ್ ಕಾಮರ್ಸ್ ಸಂಸ್ಥೆಗಳು 10 ನಿಮಿಷಗಳಲ್ಲಿ ದಿನಸಿ ವಿತರಣೆ ಮಾಡುವುದಾಗಿ ಹೇಳುತ್ತಿರು ವಾಗ ಸಂಗೀತಾ ಗ್ಯಾಜೆಟ್ಸ್ ಸಂಸ್ಥೆಯು ವಿಶ್ವದ ಅತ್ಯಂತ ಬೇಡಿಕೆಯ ಸ್ಮಾರ್ಟ್ ಫೋನ್ ಅನ್ನು ಕೇವಲ 17 ನಿಮಿಷಗಳಲ್ಲಿ ತಲುಪಿಸುವ ನಿರ್ಧಾರ ತೆಗೆದುಕೊಂಡಿದೆ.

-

ಬೆಂಗಳೂರು: ಅತ್ಯಂತ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಕಂಪನಿ ಆಗಿರುವ ಸಂಗೀತಾ ಗ್ಯಾಜೆಟ್ಸ್, ಹೊಸ ಐಫೋನ್ 17 ಅನ್ನು 17 ನಿಮಿಷಗಳಲ್ಲಿ ಡೆಲಿವರಿ ಮಾಡುವ ಹೊಸ ಯೊಜನೆಯನ್ನು ಇಂದು ಆರಂಭಿಸಿದೆ.
ಭಾರತದ 300ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಮತ್ತು ಯಾವುದೇ ಇ- ಕಾಮರ್ಸ್ ಕಂಪನಿ ಗಿಂತ ಹೆಚ್ಚಿನ ಪಿನ್ ಕೋಡ್ ಪ್ರದೇಶಗಳಲ್ಲಿ ಕಂಪನಿ ಈ ಸೇವೆ ಒದಗಿಸಲಿದ್ದು, ಅತ್ಯುತ್ತಮ ಅನು ಭವ ಒದಗಿಸುವ ಮೂಲಕ ಸ್ಮಾರ್ಟ್‌ಫೋನ್ ರಿಟೇಲ್ ವಿಭಾಗದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ.
ಬಹುತೇಕ ಇ- ಕಾಮರ್ಸ್ ಕಂಪನಿಗಳು ಮರು ದಿನ ಡೆಲಿವರಿ ಮಾಡುವುದಾಗಿ ಹೇಳುತ್ತಿರುವಾಗ ಮತ್ತು ಕ್ವಿಕ್ ಕಾಮರ್ಸ್ ಸಂಸ್ಥೆಗಳು 10 ನಿಮಿಷಗಳಲ್ಲಿ ದಿನಸಿ ವಿತರಣೆ ಮಾಡುವುದಾಗಿ ಹೇಳುತ್ತಿರು ವಾಗ ಸಂಗೀತಾ ಗ್ಯಾಜೆಟ್ಸ್ ಸಂಸ್ಥೆಯು ವಿಶ್ವದ ಅತ್ಯಂತ ಬೇಡಿಕೆಯ ಸ್ಮಾರ್ಟ್ ಫೋನ್ ಅನ್ನು ಕೇವಲ 17 ನಿಮಿಷಗಳಲ್ಲಿ ತಲುಪಿಸುವ ನಿರ್ಧಾರ ತೆಗೆದುಕೊಂಡಿದೆ.
ಪ್ರತೀ ಐಫೋನ್ 17 ಅನ್ನು ತರಬೇತಿ ಪಡೆದ ಟೆಕ್ ತಜ್ಞರು ಡೆಲಿವರಿ ಮಾಡಲಿದ್ದು, ಇದರಿಂದ ಗ್ರಾಹಕರು ಅತ್ಯುತ್ತಮ ರೀತಿಯಲ್ಲಿ ತಮ್ಮ ಸಾಧನವನ್ನು ಸ್ವೀಕರಿಸಲಿದ್ದಾರೆ. ಪ್ರತೀ ಖರೀದಿ ಜೊತೆಗೆ ಮೊದಲ ದಿನದಿಂದಲೇ ಉಚಿತ ಡ್ಯಾಮೇಜ್ ಪ್ರೊಟೆಕ್ಷನ್ ಸೌಲಭ್ಯ ಒದಗಿಸಲಾಗುತ್ತದೆ. ಈ ಸೌಲಭ್ಯ ವು ಐಫೋನ್ ಅನ್ನು ಸಾಮಾನ್ಯ ಪ್ಯಾಕೇಜ್ ನಂತೆ ಪರಿಗಣಿಸುವ ಇತರ ಇ- ಕಾಮರ್ಸ್ ಕಂಪನಿಗಳಿ ಗಿಂತ ಸಂಗೀತಾವನ್ನು ಭಿನ್ನವಾಗಿ ನಿಲ್ಲಿಸುತ್ತದೆ.
ಇದನ್ನೂ ಓದಿ: Vishwavani Editorial: ಬಾಲ ಬಿಚ್ಚಿದ ಮಗ್ಗುಲುಮುಳ್ಳು
2014ರಲ್ಲಿ ಕ್ವಿಕ್ ಕಾಮರ್ಸ್ ಇನ್ನೂ ಅಸ್ತಿತ್ವದಲ್ಲಿರದಿದ್ದಾಗ ಸಂಗೀತಾ ಗ್ಯಾಜೆಟ್ಸ್ 2 ಗಂಟೆಯಲ್ಲಿ ಡೆಲಿವರಿ ಮಾಡುವ ಸೌಲಭ್ಯ ಒದಗಿಸಿತ್ತು. ಆ ಪರಂಪರೆಯನ್ನು ಮುಂದುವರಿಸಿರುವ ಕಂಪನಿ ಈಗ ಮತ್ತೊಂದು ಆಕರ್ಷಕ ಯೋಜನೆ ಜಾರಿಗೆ ತಂದಿದೆ.
ಈ ಕುರಿತು ಮಾತನಾಡಿರುವ ಸಂಗೀತಾ ಗ್ಯಾಜೆಟ್ಸ್ ನ ಡೈರೆಕ್ಟರ್ ಚಂದು ರೆಡ್ಡಿ ಅವರು, “ಐಫೋನ್ ಖರೀದಿಸುವುದು ಎಂದರೆ ಕೇವಲ ಒಂದು ಬಾಕ್ಸ್ ಪಡೆಯುವುದಷ್ಟೇ ಅಲ್ಲ, ಈ ಸೇವೆಯು ವಿಶ್ವಾಸ, ವೇಗ ಮತ್ತು ಕಾಳಜಿಯಿಂದ ಕೂಡಿರಬೇಕು ಎಂದು ಸಂಗೀತಾ ನಂಬುತ್ತದೆ.
17 ನಿಮಿಷಗಳ ಐಫೋನ್ ಡೆಲಿವರಿ ಯೋಜನೆ ಮೂಲಕ ನಾವು ಪ್ರೀಮಿಯಂ ಡೆಲಿವರಿ ಅನುಭವ ವು ಹೇಗಿರುತ್ತದೆ ಎಂಬುದನ್ನು ತೋರಿಸಿಕೊಡುತ್ತಿದ್ದೇವೆ. 51 ವರ್ಷಗಳ ಪರಂಪರೆ ಹೊಂದಿರುವ ನಾವು ಇದೀಗ ಸ್ಮಾರ್ಟ್ ಫೋನ್ ರಿಟೇಲ್ ವಿಭಾಗದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ” ಎಂದು ಹೇಳಿದರು.
₹3,000 ಕೋಟಿ ವಹಿವಾಟು ಮತ್ತು ಭಾರತದಾದ್ಯಂತ 800ಕ್ಕೂ ಹೆಚ್ಚು ಅಂಗಡಿಗಳ ರಿಟೇಲ್ ಉಪಸ್ಥಿತಿ ಹೊಂದಿರುವ ಸಂಗೀತಾ ಗ್ಯಾಜೆಟ್ಸ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಪ್ರತೀ ವರ್ಷ 100 ಹೊಸ ಅಂಗಡಿಗಳನ್ನು ಮತ್ತು ದೇಶಾದ್ಯಂತ ಡಾರ್ಕ್ ಸ್ಟೋರ್ ಗಳನ್ನು ಸೇರಿಸುವ ಮೂಲಕ ತನ್ನ ಕ್ವಿಕ್ ಕಾಮರ್ಸ್ ಸಾಮರ್ಥ್ಯವನ್ನು ಬಲಪಡಿಸುತ್ತಿದೆ. 50 ವರ್ಷಗಳ ಹಿಂದೆ ಗ್ರಾಮಾಫೋನ್‌ಗಳನ್ನು ಮಾರಾಟ ಮಾಡುವುದರಿಂದ ಪ್ರಯಾಣ ಆರಂಭಿಸಿರುವ ಸಂಸ್ಥೆ ಇದೀಗ ಗ್ಯಾಜೆಟ್ ಜಗತ್ತಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಪ್ರಸ್ತುತ ದಕ್ಷಿಣ ಭಾರತದಾದ್ಯಂತ ವರ್ಷಕ್ಕೆ 1,00,000ಕ್ಕೂ ಹೆಚ್ಚು ಫೋನ್ ಗಳನ್ನು ಮಾರಾಟ ಮಾಡುತ್ತಿದೆ.