ಜಾರೋ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಆಂಡ್ ರಿಸರ್ಚ್ ಲಿಮಿಟೆಡ್‌ಗೆ ಆಂಕರ್ ಹೂಡಿಕೆದಾರರಿಂದ ರೂ. 135 ಕೋಟಿ ಹೂಡಿಕೆ
ವೈಟ್‌ಓಕ್ ಕ್ಯಾಪಿಟಲ್, 360 ಒನ್, ಸೊಸೈಟಿ ಜನರಾಲೆ, ಎಲ್‌ಸಿ ಫಾರೋಸ್, ಸಿಂಗ್ಯುಲಾರಿಟಿ ಈಕ್ವಿಟಿ, ಅಬಾಕಸ್, ಸುಭಕಮ್ ವೆಂಚರ್ಸ್, ಐಟಿಐ ಮ್ಯೂಚುವಲ್ ಫಂಡ್, ಯೂನಿವರ್ಸಲ್ ಶಾಂಪೂ, ವೈನ್ ಗ್ರೋತ್ ಫಂಡ್, ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಆಂಡ್ ನೋಮುರಾ ಸಿಂಗಾಪುರ ಸೇರಿದಂತೆ ಹಲವು ಹೂಡಿಕೆದಾರರು ಈ ಹೂಡಿಕೆಯಲ್ಲಿ ಭಾಗವಹಿಸಿದ್ದವು.

-

ಬೆಂಗಳೂರು: ಜಾರೋ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಆಂಡ್ ರಿಸರ್ಚ್ ಲಿಮಿಟೆಡ್ ಸಾರ್ವಜನಿಕರಿಗೆ ಆರಂಭಿಕ ಸಾರ್ವಜನಿಕ ಕೊಡುಗೆಯು ಆರಂಭವಾಗುವುದಕ್ಕೂ ಮೊದಲು ಆಂಕರ್ ಹೂಡಿಕೆದಾರರಿಂದ ರೂ. 135 ಕೋಟಿ ಹೂಡಿಕೆ ಪಡೆದುಕೊಂಡಿದೆ.
2025 ಸೆಪ್ಟೆಂಬರ್ 22, ಸೋಮವಾರದಂದು ಪ್ರತಿ ಷೇರಿಗೆ ರೂ. 890 ರಂತೆ 15,16,853 ಈಕ್ವಿಟಿ ಷೇರುಗಳನ್ನು ಕಂಪನಿಯು ಆಂಕರ್ ಹೂಡಿಕೆದಾರರಿಗೆ ಒದಗಿಸುತ್ತಿದೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ವೈಟ್‌ಓಕ್ ಕ್ಯಾಪಿಟಲ್, 360 ಒನ್, ಸೊಸೈಟಿ ಜನರಾಲೆ, ಎಲ್‌ಸಿ ಫಾರೋಸ್, ಸಿಂಗ್ಯುಲಾರಿಟಿ ಈಕ್ವಿಟಿ, ಅಬಾಕಸ್, ಸುಭಕಮ್ ವೆಂಚರ್ಸ್, ಐಟಿಐ ಮ್ಯೂಚುವಲ್ ಫಂಡ್, ಯೂನಿವರ್ಸಲ್ ಶಾಂಪೂ, ವೈನ್ ಗ್ರೋತ್ ಫಂಡ್, ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಆಂಡ್ ನೋಮುರಾ ಸಿಂಗಾ ಪುರ ಸೇರಿದಂತೆ ಹಲವು ಹೂಡಿಕೆದಾರರು ಈ ಹೂಡಿಕೆಯಲ್ಲಿ ಭಾಗವಹಿಸಿದ್ದವು.
ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್ ಲಿಮಿಟೆಡ್, ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಲಿಮಿಟೆಡ್ ಮತ್ತು ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿದ್ದು, ಬಿಗ್‌ಶೇರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಈ ಕೊಡು ಗೆಯ ರಿಜಿಸ್ಟ್ರಾರ್ ಆಗಿದೆ.