ಬೆಂಗಳೂರು, ಮಾ. 6: ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ಸಾಕು ಶ್ವಾನವನ್ನು (Dog Walking) ವಾಕಿಂಗ್ ಕರೆದುಕೊಂಡು ಹೋಗುವ ವಿಚಾರದಲ್ಲಿ ಆರಂಭವಾದ ಕಿರಿಕ್ ಹಿರಿಯ ನಾಗರಿಕರ ನಡುವೆ ತೀವ್ರ ಜಗಳಕ್ಕೆ ಕಾರಣವಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರಿನ ವರ್ತೂರು ಪ್ರದೇಶದ ಬ್ರಿಗೇಡ್ ಯುಟೋಪಿಯಾ-ಪೂರ್ವ ಆಂಟೋಪಿಯಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿ ತರುಣ್ ಅರೋರಾ ತನ್ನ ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದ. ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಹಿರಿಯ ನಾಗರಿಕರು ನಡೆಯಲು ಮತ್ತು ವ್ಯಾಯಾಮ ಮಾಡಲು ಗೊತ್ತುಪಡಿಸಿದ ಸ್ಥಳವಿದೆ. ಅಲ್ಲಿಗೆ ಆತ ಶ್ವಾನದೊಂದಿಗೆ ತೆರಳಿದ್ದ.
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಜಗಳದ ದೃಶ್ಯ:
ನಾಯಿಯನ್ನು ವಾಕಿಂಗ್ ವಲಯದ ಹತ್ತಿರ ತಂದು ಮೂತ್ರ ವಿಸರ್ಜಿಸಲು ಬಿಟ್ಟಿದ್ದರ ಬಗ್ಗೆ ಅಲ್ಲಿದ್ದ ಹಿರಿಯ ನಾಗರಿಕರು ಪ್ರಶ್ನಿಸಿದರು. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎನ್ನಲಾಗಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ರಸ್ತೆ ಬದಿ, ವಿಭಜಕಗಳ ಗಿಡಗಳ ಸೂಕ್ತ ನಿರ್ವಹಣೆಗೆ ಆದೇಶ
ಮಾತಿನ ಚಕಮಕಿ ಶೀಘ್ರದಲ್ಲೇ ಜಗಳಕ್ಕೆ ತಿರುಗಿತು. ಏಳರಿಂದ ಎಂಟು ಹಿರಿಯ ನಾಗರಿಕರು ಅರೋರಾ ಮೇಲೆ ಹಲ್ಲೆ ನಡೆಸಿದರು. ಒದ್ದು, ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅರೋರಾ ದೂರಿನಲ್ಲಿ ತಿಳಿಸಿದ್ದಾನೆ. ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಮಧ್ಯ ಪ್ರವೇಶಿಸಿ ಜಗಳವಾಡುತ್ತಿದ್ದವರನ್ನು ಬೇರ್ಪಡಿಸಿದರು. ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವುದನ್ನು ಅವರು ತಡೆದರು.
ಘಟನೆಯ ನಂತರ, ಅರೋರಾ ವರ್ತೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಯ ಆರೋಪದ ಮೇಲೆ ದೂರು ದಾಖಲಿಸಿದ್ದಾನೆ. ಆದರೆ ಆ ಗುಂಪಿನ ಮಹಿಳೆಯೊಬ್ಬರು ಅರೋರಾ ವಿರುದ್ಧ ಪ್ರತಿದೂರು ದಾಖಲಿಸಿದ್ದರಿಂದ ಈ ಘಟನೆ ಮತ್ತೊಂದು ತಿರುವು ಪಡೆದುಕೊಂಡಿತು. ಆ ಪ್ರದೇಶದಲ್ಲಿ ನಾಯಿ ಮೂತ್ರ ವಿಸರ್ಜಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ತಮ್ಮ ಮೇಲೆ ಹಲ್ಲೆ ನಡೆಸಿ ಅರೋರಾ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಇದು ಜುಮ್ಕಿ ಕಮಾಲ್; ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿದ ಚಾಲಕ
ತಮ್ಮ ಮಕ್ಕಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುವ ಮೂಲಕ ಅರೋರಾ ತಮ್ಮನ್ನು ಬೆದರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈಗ ಅವರು ತಮ್ಮ ಸುರಕ್ಷತೆಯ ಬಗ್ಗೆ ಭಯಭೀತರಾಗಿದ್ದು, ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ ಎಂದು ಹೇಳಿದರು.
ಸಿಸಿಟಿವಿ ದೃಶ್ಯಗಳಲ್ಲಿ ಹಿರಿಯ ನಾಗರಿಕರ ಗುಂಪೊಂದು ಅಪಾರ್ಟ್‌ಮೆಂಟ್ ಸಂಕೀರ್ಣದ ಒಳಗೆ ವ್ಯಾಯಾಮ ಮಾಡುವುದನ್ನು ಮತ್ತು ಅರೋರಾ ತನ್ನ ನಾಯಿಯನ್ನು ಅಲ್ಲೇ ಸಮೀಪ ಕರೆದುಕೊಂಡು ಹೋಗುವುದು ಕಂಡು ಬಂದಿದೆ. ಈ ವೇಳೆ ಘರ್ಷಣೆ ನಡೆದಿದೆ. ಈ ಸಮಯದಲ್ಲಿ ವೃದ್ಧರೊಬ್ಬರು ಅರೋರಾ ಕತ್ಯವನ್ನು ಪ್ರಶ್ನಿಸಿದ್ದಾರೆ. ನಂತರ ಅರೋರಾ ಕೈಯಿಂದ ಫೋನ್ ಅನ್ನು ತೆಗೆದು ಅದನ್ನು ದೂರ ಎಸೆದರು. ಕೊನೆಗೆ ಈ ಜಗಳ ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸರು ಪ್ರಸ್ತುತ ಎರಡೂ ಕಡೆಯ ದೂರುಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.