ಇದು ಜುಮ್ಕಿ ಕಮಾಲ್; ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿದ ಚಾಲಕ: ವಿಡಿಯೊ ವೈರಲ್
Viral Video: ಪ್ರೀತಿ ಅನ್ನೋದು ಕೇವಲ ದುಬಾರಿ ಕಾರು, ಮನೆ, ಐಷಾರಾಮಿ ವಸ್ತುಗಳಿಗೆ ಸೀಮಿತವಾಗಿಲ್ಲ. ಅದು ದೈನಂದಿನ ಬದುಕಿನ ಸಣ್ಣ ಪುಟ್ಟ ಸಂಗತಿಯಲ್ಲೂ ಅಡಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ನಗರದ ಆಟೋ ಚಾಲಕನೊಬ್ಬ ತನ್ನ ಮಡದಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪತ್ನಿಯ ಕಿವಿಯೋಲೆಯನ್ನು ಆಟೋದಲ್ಲಿ ನೇತು ಹಾಕಿದ ಚಾಲಕ -
ಬೆಂಗಳೂರು, ಫೆ. 23: ಪ್ರೀತಿಯನ್ನು ಕೆಲವರು ವಿಭಿನ್ನವಾಗಿ ವ್ಯಕ್ತ ಪಡಿಸುತ್ತಾರೆ. ಪ್ರೀತಿ ಅನ್ನೋದು ಕೇವಲ ದುಬಾರಿಯಾದ ಕಾರು, ಮನೆ, ಐಷಾರಾಮಿ ವಸ್ತುಗಳಿಗೆ ಸೀಮಿತವಾಗಿಲ್ಲ. ಅದು ದೈನಂದಿನ ಬದುಕಿನ ಸಣ್ಣ ಪುಟ್ಟ ಸಂಗತಿಗಳಲ್ಲೂ ಅಡಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ನಗರದ ಆಟೋ ಚಾಲಕನೊಬ್ಬ ತನ್ನ ಮಡದಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಆಟೋ ರಿಕ್ಷಾ ಚಾಲಕನೊಬ್ಬ ದೈನಂದಿನ ಪ್ರಯಾಣದ ಸಮಯದಲ್ಲಿ ತನ್ನ ಪತ್ನಿಯ ಪ್ರೀತಿಯನ್ನು ಹೇಗೆ ನೆನಪಿಸಿಕೊಳ್ಳುತ್ತಿದ್ದಾನೆ ಎನ್ನುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಎಲ್ಲರ ಮನ ಗೆದ್ದಿದೆ. ಚಾಲಕ ತನ್ನ ಆಟೋದಲ್ಲಿ ಪತ್ನಿಯ ಕಿವಿಯೋಲೆಗಳನ್ನು ನೇತು ಹಾಕಿದ್ದು ಪ್ರೀತಿಯನ್ನು ಹೀಗೂ ವ್ಯಕ್ತ ಪಡಿಸಬಹುದು ಎಂದು ತಿಳಿಸಿಕೊಟ್ಟಿದ್ದಾನೆ.
ವಿಡಿಯೊ ನೋಡಿ:
ಈ ವಿಡಿಯೊವನ್ನು ಕಂಟೆಂಟ್ ಕ್ರಿಯೇಟರ್ ಮರ್ಲಿನ್ ಸುಲ್ತಾನಾ ಆಕಂಡ್ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಪ್ರಯಾಣಿಸುವಾಗ ಚಾಲಕನ ಸೀಟ್‌ನ ಬಳಿ ಪತ್ನಿಯ ಕಿವಿಯೋಲೆಗಳನ್ನು ತೂಗು ಹಾಕಿರುವುದನ್ನು ಅವರು ಗಮನಿಸಿದ್ದಾರೆ. ಆಟೋ ಚಲಿಸುವಾಗ ಆ ಕಿವಿಯೋಲೆಗಳು ತೂಗಾಡುತ್ತಾ ಚಾಲಕನಿಗೆ ಪತ್ನಿ ಸದಾ ಜತೆಗೆ ಇದ್ದಾಳೆ ಎನ್ನುವ ಭಾವ ಮೂಡಿಸುವಂತಿತ್ತು ಎಂದು ಮರ್ಲಿನ್ ಹೇಳಿದ್ದಾರೆ.
ಹಿಮದ ಕಣಿವೆಯ ನಡುವೆ ಹಾದು ಹೋದ ವಂದೇ ಭಾರತ್: ಕಾಶ್ಮೀರದ ಎದುರು ಸ್ವಿಟ್ಜರ್ಲೆಂಡ್ ಶೂನ್ಯ ಎಂದ ನೆಟ್ಟಿಗರು
ವಿಡಿಯೊವನ್ನು"ಪ್ರೀತಿಯಲ್ಲಿ ಬಿದ್ದ ಪುರುಷರು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. "ಎಲ್ಲ ಪ್ರೇಮಿಗಳೂ ಹೂವುಗಳನ್ನು ನೀಡುವುದಿಲ್ಲ. ಕೆಲವರು ತಮ್ಮ ಪ್ರೀತಿಯ ನೆನಪುಗಳನ್ನು ದಿನವಿಡೀ ಕಣ್ಣಮುಂದೆ ಇರುವಂತೆ ನೋಡಿಕೊಳ್ಳುತ್ತಾರೆʼʼ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಆಟೋ ಚಾಲಕನ ಹೃದಯಸ್ಪರ್ಶಿ ಕ್ಷಣವನ್ನು ಹೊಗಳಿದ್ದಾರೆ. ನೆಟ್ಟಿಗರು ಇದು ಸಿನಿಮಾ ದೃಶ್ಯದಂತೆ ಕಾಣುತ್ತದೆ ಎಂದು ಕರೆದಿದ್ದಾರೆ. ಮತ್ತೊಬ್ಬರು, ಇಂತಹ ಪ್ರೀತಿ ಮಾಡುವ ಜನರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.