ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಿಂಚುವ ಹೊಳಪು: ಜೋಯಾಲುಕ್ಕಾಸ್‌ನ ಅಪೂರ್ವವಾದ ನೂತನ ಶೋರೂಮ್ ಅನಾವರಣ

ಅತ್ಯಾಧುನಿಕ ಸೌಲಭ್ಯ, ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ವಿನ್ಯಾಸ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿನ್ಯಾಸಗಳನ್ನು ಒಳಗೊಂಡ ವಿಸ್ತಾರವಾದ ಸಂಗ್ರಹಗಳನ್ನು ಒಳಗೊಂಡಿದೆ. ಸೀಮಿತ ಅವಧಿಗೆ, ಗ್ರಾಹಕರು ಪ್ರತಿ ಖರೀದಿಯೊಂದಿಗೆ ಖಚಿತವಾದ ಉಚಿತ ಉಡುಗೊರೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಸಂತಸದಾಯಕವಲ್ಲದೆ, ಸಂದರ್ಭದ ಮಾಂತ್ರಿಕತೆ ಯನ್ನು ಹೆಚ್ಚಿಸುತ್ತದೆ

ಜೋಯಾಲುಕ್ಕಾಸ್‌ನ ಅಪೂರ್ವವಾದ ನೂತನ ಶೋರೂಮ್ ಅನಾವರಣ

Profile Ashok Nayak Apr 14, 2025 2:58 PM

ಬೆಂಗಳೂರು: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್ ಕೋರಮಂಗಲದಲ್ಲಿ ತನ್ನ ಇತ್ತೀಚಿನ ಶೋರೂಮ್‌ನ ಅದ್ಧೂರಿ ಉದ್ಘಾಟನೆಯೊಂದಿಗೆ ತನ್ನ ಮಹತ್ವದ ವಿಸ್ತರಣೆಯನ್ನು ಸಂಭ್ರಮಾಚರಿಸಿತು. ಅದ್ಭುತವಾಗಿ ಜರುಗಿದ ಈ ಸಮಾರಂಭದಲ್ಲಿ ಜೋಯಾಲುಕ್ಕಾಸ್‌ನ ಪ್ರಮುಖ ಗಣ್ಯರು ಮತ್ತು ಕಾರ್ಯನಿರ್ವಾಹಕರು ಭಾಗವಹಿಸಿದ್ದರು.

ಈ ಹೊಸ ಶೋರೂಮ್ ಎಲ್ಲರಿಗೂ ವಿಶ್ವದರ್ಜೆಯ ಆಭರಣ ಅನುಭವಗಳನ್ನು ತರುವ ಜೋಯಾ ಲುಕ್ಕಾಸ್‌ನ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಅತ್ಯಾಧುನಿಕ ಸೌಲಭ್ಯ, ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ವಿನ್ಯಾಸ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿನ್ಯಾಸಗಳನ್ನು ಒಳಗೊಂಡ ವಿಸ್ತಾರವಾದ ಸಂಗ್ರಹಗಳನ್ನು ಒಳಗೊಂಡಿದೆ. ಸೀಮಿತ ಅವಧಿಗೆ, ಗ್ರಾಹಕರು ಪ್ರತಿ ಖರೀದಿಯೊಂದಿಗೆ ಖಚಿತವಾದ ಉಚಿತ ಉಡುಗೊರೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಸಂತಸದಾಯಕವಲ್ಲದೆ, ಸಂದರ್ಭದ ಮಾಂತ್ರಿಕತೆ ಯನ್ನು ಹೆಚ್ಚಿಸುತ್ತದೆ.

ಈ ಮಳಿಗೆ ವಿಸ್ತಾರವಾಗಿದೆ. ಇದು ಜಾಗತಿಕ ವಿನ್ಯಾಸಗಳ ಆವೃತ್ತಿಗಳೊಂದಿಗೆ ಸ್ಥಳೀಯ ಸಾಂಸ್ಕೃತಿಕ ಸೌಂದರ್ಯವನ್ನು ಬೆರೆಸುವ ಜೋಯಾಲುಕ್ಕಾಸ್‌ನ ಧ್ಯೇಯಕ್ಕೆ ಸಾಕ್ಷಿಯಾಗಿದೆ. ಸಮಕಾಲೀನ ಜಾಗತಿಕ ಪ್ರವೃತ್ತಿಗಳನ್ನು ಸಂಯೋಜಿಸುವಾಗ ಎಚ್ಚರಿಕೆಯಿಂದ ಸಂಗ್ರಹಿಸಲಾಗಿದೆ. ಪ್ರಾದೇಶಿಕ ಶ್ರೀಮಂತ ಆಭರಣ ಸಂಪ್ರದಾಯಗಳನ್ನು ಇವು ಪ್ರತಿಬಿಂಬಿಸುತ್ತವೆ.

ಉದ್ಘಾಟನಾ ಸಮಾರಂಭದಲ್ಲಿ ವಿಶೇಷವಾದ ಫಸ್ಟ್-ಲುಕ್ ಸಂಗ್ರಹ, ಉಚಿತ ಖಚಿತ ಉಡುಗೊರೆ, ಉಚಿತ ವಿನ್ಯಾಸ ಸಮಾಲೋಚನೆ ಮತ್ತು ಜೋಯಾಲುಕ್ಕಾಸ್ ಛಾಪಿನ ಸೇವೆಯನ್ನು ಆನಂದಿಸುವ ಸಂತೃಪ್ತ ಗ್ರಾಹಕರು ಸೇರಿದ್ದಾರೆ. ಕೋರಮಂಗಲ ಆಭರಣ ಮಳಿಗೆ ತೆರೆದಿದ್ದು, ಆಭರಣಪ್ರಿಯರಿಗೆ ಸೊಬಗು, ಕರಕುಶಲತೆ ಮತ್ತು ವೈಯಕ್ತಿಕ ಅಭಿವ್ಯಕ್ತಿಯ ಸರಿಸಾಟಿಯಿಲ್ಲದ ಜಗತ್ತನ್ನು ಅನ್ವೇಷಿಸಲು ಆಹ್ವಾನಿಸುತ್ತಿದೆ. ನೀವು ಕಾಲಾತೀತ ಸಾಂಪ್ರದಾಯಿಕತೆಯನ್ನು ಹುಡುಕುತ್ತಿರಲಿ ಅಥವಾ ಸಮ ಕಾಲೀನ ಆಭರಣಗಳನ್ನು ಅನ್ವೇಷಿಸುತ್ತಿರಲಿ; ಜೋಯಾಲುಕ್ಕಾಸ್ ಅಸಾಧಾರಣ ಅನುಭವವನ್ನು ನೀಡುತ್ತದೆ.

ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಶ್ರೀ ಜೋಯ್ ಆಲುಕ್ಕಾಸ್ ಅವರು ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿ, ``ಕೋರಮಂಗಲವು ಬೆಂಗಳೂರಿನಲ್ಲಿ ಆಧುನಿಕ ಜೀವನಶೈಲಿಯ ಕೇಂದ್ರ ವಾಗಿದೆ. ನಮ್ಮ ಹೊಸ ಮಳಿಗೆಯು ಕೇವಲ ಮಾರಾಟದ ಕೇಂದ್ರವಲ್ಲ. ಮಿಗಿಲಾಗಿ ಗ್ರಾಹಕರು ಉತ್ತಮ ಆಭರಣಗಳ ಕಲಾತ್ಮಕತೆ, ಕರಕುಶಲತೆ ಮತ್ತು ಭಾವನಾತ್ಮಕ ಮಹತ್ವವನ್ನು ಅನುಭವಿಸ ಬಹುದಾದ ತಾಣವಾಗಿದೆ. ಈ ಕ್ರಿಯಾತ್ಮಕ ಸಮುದಾಯಕ್ಕೆ ನಮ್ಮ ಛಾಪಿನ ಶ್ರೇಷ್ಠತೆಯನ್ನು ತರಲು ನಾವು ರೋಮಾಂಚನಗೊಂಡಿದ್ದೇವೆ'' ಎಂದು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿ ದ್ದಾರೆ.