ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿಶು ಮಂದಿರ- ಆನ್ ಸಹಯೋಗ: ಪರಿಸರಸ್ನೇಹಿ ಸಾರಿಗೆ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೊಸ ಬಲ

ಕೆ.ಆರ್.ಪುರಂ ಹಾಗೂ ಪೂರ್ವ ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಆಯ್ಕೆಯಾದ 12 ಮಹಿಳಾ ಫಲಾನುಭವಿಗಳಲ್ಲಿ ಹೆಚ್ಚಿನವರು ಒಂಟಿ ತಾಯಂದಿರು ಮತ್ತು ವಿಧವೆಯರಾಗಿದ್ದಾರೆ. ವಾಹನ ಹಸ್ತಾಂ ತರಕ್ಕೂ ಮುನ್ನ ಅವರು ಚಾಲನಾ ಕೌಶಲ್ಯ, ರಸ್ತೆ ಸುರಕ್ಷತೆ ಹಾಗೂ ವಾಹನ ನಿರ್ವಹಣೆಗೆ ಸಂಬಂಧಿಸಿದ ವಿಶೇಷ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಪರಿಸರಸ್ನೇಹಿ ಸಾರಿಗೆ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೊಸ ಬಲ

-

Profile
Ashok Nayak Jul 10, 2026 11:26 AM

ಬೆಂಗಳೂರು: ಜಾಗತಿಕ ಮಟ್ಟದ ವೃತ್ತಿಪರ ಸೇವಾ ಸಂಸ್ಥೆಯಾದ ಆನ್ (Aon) ಸಂಸ್ಥೆಯ ಸಹಯೋಗದೊಂದಿಗೆ ಶಿಶು ಮಂದಿರ ಸಂಸ್ಥೆಯು ಹೆಲ್ಲಾ ನಗರದ ಶಿಶು ನಗರ ಕ್ಯಾಂಪಸ್‌ʼನಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ 12 ಎಲೆಕ್ಟ್ರಿಕ್ ಆಟೋರಿಕ್ಷಾ ಗಳನ್ನು ಹಸ್ತಾಂತರಿಸಿತು.

ಈ ಕಾರ್ಯಕ್ರಮವು ಶಿಶು ಮಂದಿರದ ಮಹತ್ವಾಕಾಂಕ್ಷಿ ‘ಇಕೋ-ವೀಲ್ಸ್’ ಉಪಕ್ರಮದ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದ್ದು, ಆನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಈವರೆಗೆ ಒಟ್ಟು 254 ಎಲೆಕ್ಟ್ರಿಕ್ ವಾಹನಗಳನ್ನು ಮಹಿಳೆಯರಿಗೆ ವಿತರಿಸಿದ ಸಾಧನೆಯನ್ನು ದಾಖಲಿಸಿದೆ.

ಕೆ.ಆರ್.ಪುರಂ ಹಾಗೂ ಪೂರ್ವ ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಆಯ್ಕೆಯಾದ 12 ಮಹಿಳಾ ಫಲಾನುಭವಿಗಳಲ್ಲಿ ಹೆಚ್ಚಿನವರು ಒಂಟಿ ತಾಯಂದಿರು ಮತ್ತು ವಿಧವೆಯರಾಗಿದ್ದಾರೆ. ವಾಹನ ಹಸ್ತಾಂತರಕ್ಕೂ ಮುನ್ನ ಅವರು ಚಾಲನಾ ಕೌಶಲ್ಯ, ರಸ್ತೆ ಸುರಕ್ಷತೆ ಹಾಗೂ ವಾಹನ ನಿರ್ವಹಣೆಗೆ ಸಂಬಂಧಿಸಿದ ವಿಶೇಷ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಯೋಜನೆಯು ಅವರ ಜೀವನದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುವ ಜೊತೆಗೆ, ಆರ್ಥಿಕ ಸ್ವಾವಲಂಬನೆ ಮತ್ತು ದೀರ್ಘಕಾಲೀನ ಭದ್ರತೆಗೆ ಭದ್ರ ಅಡಿಪಾಯವನ್ನು ಒದಗಿಸಲಿದೆ.

ಇದನ್ನೂ ಓದಿ: Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'

‘ಇಕೋ-ವೀಲ್ಸ್’ ಉಪಕ್ರಮವು ಎರಡು ಪ್ರಮುಖ ಸಾಮಾಜಿಕ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸುವ ಉದ್ದೇಶ ಹೊಂದಿದೆ. ಒಂದೆಡೆ, ದುರ್ಬಲ ಹಿನ್ನೆಲೆಯ ಮಹಿಳೆಯರಿಗೆ ಸುಸ್ಥಿರ ಮತ್ತು ಗೌರವಯುತ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು; ಮತ್ತೊಂದೆಡೆ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವುದು. ಮಹಿಳೆಯರನ್ನು ಸ್ವಯಂ ಉದ್ಯೋಗಿ ಗಳಾಗಿಯೂ, ಕಿರು ಉದ್ಯಮಿಗಳಾಗಿಯೂ ರೂಪಿಸುವ ಮೂಲಕ ಅವರ ಆದಾಯ ಸಾಮರ್ಥ್ಯವನ್ನು ಹೆಚ್ಚಿಸುವ ಈ ಯೋಜನೆ, ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಜೊತೆಗೆ ನಗರದಲ್ಲಿ ಸ್ವಚ್ಛ, ಶಬ್ದರಹಿತ ಹಾಗೂ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಗೆ ಸಹಕಾರಿಯಾಗುತ್ತಿದೆ.

Aon

ಈ ಉಪಕ್ರಮವು ಕೇವಲ ವಾಹನ ವಿತರಣೆಗೆ ಸೀಮಿತವಾಗಿಲ್ಲ. ದೀರ್ಘಾವಧಿಯ ಆರ್ಥಿಕ ಭದ್ರತೆ ಮತ್ತು ಹಣಕಾಸು ಸಾಕ್ಷರತೆಯನ್ನೂ ಇದು ಸಮಾನವಾಗಿ ಒತ್ತಿ ಹೇಳುತ್ತದೆ. ಶಿಶು ಮಂದಿರವು ಪ್ರತಿಯೊಬ್ಬ ಫಲಾನುಭವಿಗೆ ಬ್ಯಾಂಕ್ ಖಾತೆ ತೆರೆಯಲು ನೆರವಾಗುವುದರೊಂದಿಗೆ, ನಿಯಮಿತ ಉಳಿತಾಯದ ಅಭ್ಯಾಸ ಬೆಳೆಸಲು ಮಾರ್ಗದರ್ಶನ ನೀಡುತ್ತಿದೆ. ಯೋಜನೆಯ ಭಾಗವಾಗಿ, ಪ್ರತಿ ಯೊಬ್ಬ ಮಹಿಳಾ ಚಾಲಕಿಯೂ ತಮ್ಮ ಕುಟುಂಬದ ಭವಿಷ್ಯದ ಆರ್ಥಿಕ ಭದ್ರತೆಯನ್ನು ಗಮನ ದಲ್ಲಿಟ್ಟುಕೊಂಡು ಪ್ರತಿ ತಿಂಗಳು 3,000 ರೂಪಾಯಿ ಉಳಿತಾಯ ಮಾಡುವ ಸಂಕಲ್ಪ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಆನ್ (Aon) ಸಂಸ್ಥೆಯ ಭಾರತ ವಿಭಾಗದ ಪೀಪಲ್ ಲೀಡರ್ ಕನ್ವರ್‌ಪ್ರಿಯಾ ಖನ್ನಾ, “ಸಬಲೀಕರಣವೆಂದರೆ ಕೇವಲ ಅವಕಾಶಗಳನ್ನು ಒದಗಿಸುವುದಲ್ಲ; ವ್ಯಕ್ತಿಗಳು ತಮ್ಮ ಭವಿಷ್ಯವನ್ನು ಆತ್ಮವಿಶ್ವಾಸದಿಂದ ನಿರ್ಮಿಸಿಕೊಳ್ಳಲು ಅಗತ್ಯ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಕಲ್ಪಿಸುವುದು. ‘ಇಕೋ-ವೀಲ್ಸ್’ ಉಪಕ್ರಮದ ಮೂಲಕ ಮಹಿಳೆಯರಿಗೆ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯದ ಅವಕಾಶಗಳನ್ನು ಸೃಷ್ಟಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಅಸಂಘಟಿತ ವಲಯದಿಂದ ಹೊರಬಂದು, ಸ್ವಾವಲಂಬಿ ಉದ್ಯಮಿಗಳಾಗಿ ತಮ್ಮ ಕುಟುಂಬಗಳ ಬದುಕನ್ನು ರೂಪಿಸುತ್ತಿರುವ ಈ ಮಹಿಳೆಯರು, ಹಸಿರು ಮತ್ತು ಸುಸ್ಥಿರ ಬೆಂಗಳೂರಿನ ನಿರ್ಮಾಣಕ್ಕೂ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಯಶೋಗಾಥೆಗಳು ನಮ್ಮೆಲ್ಲರಿಗೂ ಸ್ಫೂರ್ತಿದಾಯಕ,” ಎಂದು ಹೇಳಿದರು.

ಶಿಶು ಮಂದಿರದ ಉಪಾಧ್ಯಕ್ಷ ವಿಂಗ್ ಕಮಾಂಡರ್ (ನಿವೃತ್ತ) ಡಿ.ಪಿ. ಸಭರವಾಲ್ ಮಾತನಾಡಿ, “ಆರ್ಥಿಕ ಭದ್ರತೆಯ ಅವಕಾಶಗಳನ್ನು ಸೃಷ್ಟಿಸುವುದೇ ನಿಜವಾದ ಸಬಲೀಕರಣದ ಅಡಿಪಾಯ ಎಂದು ಶಿಶು ಮಂದಿರ ಸದಾ ನಂಬಿದೆ. ಆನ್ ಸಂಸ್ಥೆಯ ಅಮೂಲ್ಯ ಸಹಕಾರದೊಂದಿಗೆ ಇಂದು 254 ಎಲೆಕ್ಟ್ರಿಕ್ ಆಟೋಗಳ ವಿತರಣೆಯ ಮಹತ್ವದ ಮೈಲಿಗಲ್ಲು ತಲುಪಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ.

ಈ ಮಹಿಳೆಯರು ಕೇವಲ ಜೀವನೋಪಾಯ ಗಳಿಸುತ್ತಿಲ್ಲ; ಅವರು ಸುಸ್ಥಿರತೆ, ಸಾಮಾಜಿಕ ಬದಲಾ ವಣೆ ಮತ್ತು ಪರಿಸರ ಜಾಗೃತಿಯ ಪ್ರತಿನಿಧಿಗಳಾಗಿ ‘ಕ್ಲೈಮೇಟ್ ಚಾಂಪಿಯನ್ಸ್’ ಆಗಿ ಹೊರಹೊಮ್ಮಿ ದ್ದಾರೆ. ಸಮಾಜದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಪರಸ್ಪರ ಪೂರಕ ಎಂಬುದನ್ನು ಅವರು ಸಾಬೀತುಪಡಿಸುತ್ತಿದ್ದಾರೆ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆನ್ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಕನ್ವರ್‌ಪ್ರಿಯಾ ಖನ್ನಾ, ಸೈಮನ್ ಫ್ರಾನ್ಸಿಸ್ ಸೇರಿದಂತೆ ಸಂಸ್ಥೆಯ ಪ್ರಮುಖ ಪ್ರತಿನಿಧಿಗಳು ಹಾಗೂ ಶಿಶು ಮಂದಿರದ ಆಡಳಿತ ಮಂಡಳಿಯ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.