ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‘SIB Power CONSOL’ ಅನ್ನು ಪ್ರಾರಂಭಿಸಿದ ಸೌತ್ ಇಂಡಿಯನ್ ಬ್ಯಾಂಕ್

SIB Power CONSOL ಅಡಿಯಲ್ಲಿ ₹10 ಲಕ್ಷರಿಂದ ₹3 ಕೋಟಿ ವರೆಗೆ ಸಾಲ ಏಕೀಕರಣ ಸೌಲಭ್ಯ ಲಭ್ಯವಿದೆ. ಈ ಯೋಜನೆಯಡಿ, ವ್ಯಕ್ತಿಗಳು ₹10 ಲಕ್ಷದಿಂದ ₹3 ಕೋಟಿವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಏಕೀಕೃತ ಸಾಲಗಳಿಗೆ ಗರಿಷ್ಠ 15 ವರ್ಷದ ತೀರಿಸುವ ಅವಧಿ, ಹಾಗೂ ಗೃಹಸಾಲ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗಳಿಗೆ 30 ವರ್ಷಗಳವರೆಗೆ ಅವಧಿ ಲಭ್ಯ.

ಸೌತ್ ಇಂಡಿಯನ್ ಬ್ಯಾಂಕ್ ನಿಂದ ‘SIB Power CONSOL’ ಪ್ರಾರಂಭ

-

Ashok Nayak
Ashok Nayak Nov 26, 2025 6:45 PM

ಗ್ರಾಹಕರು ತಮ್ಮ ಅನೇಕ ಸಾಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮರುಸಂಘಟಿಸಿ ನಿರ್ವಹಿಸಲು ಸಹಾಯಕವಾಗುವ SIB Power CONSOL ಎಂಬ ಹೊಸ ಸಾಲ ಉತ್ಪನ್ನ ವನ್ನು ಸೌತ್ ಇಂಡಿಯನ್ ಬ್ಯಾಂಕ್ ಇಂದು ಪರಿಚಯಿಸಿದೆ.

ವೇತನಭುಕ್ತರು, ಸ್ವಯಂ ಉದ್ಯೋಗಿ ವೃತ್ತಿಪರರು (SEP) ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು (SENP) ಒಳಗೊಂಡು 30 ರಿಂದ 55 ವರ್ಷ ವಯಸ್ಸಿನ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಈ ಉತ್ಪನ್ನವು, ಸಾಲ ತೀರಿಸುವಿಕೆಯನ್ನು ಸರಳಗೊಳಿಸಲು ಮತ್ತು ಏಕಕಾಲದಲ್ಲಿ ಅನೇಕ ಸಾಲಗಳನ್ನು ನಿರ್ವಹಿಸುವುದರಿಂದ ಉಂಟಾಗುವ ಆರ್ಥಿಕ ಭಾರವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ.

SIB Power CONSOL ಮೂಲಕ ಗೃಹಸಾಲ, ಕಾರು ಸಾಲ, ಶಿಕ್ಷಣ ಸಾಲ, ವ್ಯಕ್ತಿಗತ ಸಾಲ ಹಾಗೂ ಗೃಹೋಪಯೋಗಿ ವಸ್ತುಗಳ ಸಾಲ ಸೇರಿದಂತೆ ಅನೇಕ ಸಾಲಗಳನ್ನು ಕಡಿಮೆ ಬಡ್ಡಿದರದ ಒಂದೇ ಸಾಲಕ್ಕೆ ಏಕೀಕರಿಸಬಹುದು. ಈ ಮೂಲಕ ಬ್ಯಾಂಕ್ ‘ಡೆಟ್ ಕೌನ್ಸಲರ್’ ಆಗಿ ಕಾರ್ಯನಿರ್ವಹಿಸಿ, ಗ್ರಾಹಕರಿಗೆ ಹೆಚ್ಚು ಸ್ಪಷ್ಟ ಮತ್ತು ಸುಲಭವಾಗಿ ನಿರ್ವಹಿಸ ಬಹುದಾದ ತೀರಿಸುವಿಕೆ ಮಾದರಿಯನ್ನು ನೀಡುತ್ತದೆ.

ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್

ಈ ಉತ್ಪನ್ನವು ಸ್ವತ್ತಿನ ಆಧಾರಿತ ಸಾಲವಾಗಿದ್ದು, ಗ್ರಾಹಕರು ತಮ್ಮ ಮನೆ ಅಥವಾ ವಾಣಿಜ್ಯ ಸ್ವತ್ತನ್ನು ಗಿರವಿ ಇಟ್ಟು ಅದರ ಮೌಲ್ಯದ 75% ವರೆಗೆ ಸಾಲವನ್ನು ಪಡೆಯ ಬಹುದು. ಸ್ವತ್ತನ್ನು ಮಾರದೇ ಅದರ ಮೌಲ್ಯವನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳಲು ಇದು ಸಹಕಾರಿಯಾಗುತ್ತದೆ.

SIB Power CONSOL ಅಡಿಯಲ್ಲಿ ₹10 ಲಕ್ಷರಿಂದ ₹3 ಕೋಟಿ ವರೆಗೆ ಸಾಲ ಏಕೀಕರಣ ಸೌಲಭ್ಯ ಲಭ್ಯವಿದೆ. ಈ ಯೋಜನೆಯಡಿ, ವ್ಯಕ್ತಿಗಳು ₹10 ಲಕ್ಷದಿಂದ ₹3 ಕೋಟಿವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಏಕೀಕೃತ ಸಾಲಗಳಿಗೆ ಗರಿಷ್ಠ 15 ವರ್ಷದ ತೀರಿಸುವ ಅವಧಿ, ಹಾಗೂ ಗೃಹಸಾಲ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗಳಿಗೆ 30 ವರ್ಷಗಳವರೆಗೆ ಅವಧಿ ಲಭ್ಯ. ಸಾಲ ಮಂಜೂರಾದ ಬಳಿಕ, ಬ್ಯಾಂಕ್ ಗ್ರಾಹಕರ ಇತ್ತೀಚಿನ ಬಾಕಿಯಿರುವ ಎಲ್ಲಾ ಸಾಲ ಗಳನ್ನು ನೇರವಾಗಿ ಹೊಂದಿಸಿ, ಅವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದೇ ಮಾಸಿಕ ಇಎಮ್‌ಐಯನ್ನು ಸೃಷ್ಟಿಸುತ್ತದೆ.

Repayment Track Record (RTR) ಆಧಾರಿತ ಸಾಲ ಮೌಲ್ಯಮಾಪನವನ್ನು ಅಳವಡಿಸಿ ಕೊಂಡಿರುವುದರಿಂದ ದಾಖಲಾತಿ ಪ್ರಕ್ರಿಯೆ ಬಹಳ ಕಡಿಮೆಯಾಗಿದೆ. ಜೊತೆಗೆ ಶೂನ್ಯ ಪ್ರೊಸೆಸಿಂಗ್ ಫೀಯು ಈ ಉತ್ಪನ್ನದ ಮತ್ತೊಂದು ವಿಶೇಷತೆ. ಗ್ರಾಹಕರ ವಿಕಸನಶೀಲ ಅಗತ್ಯ ಗಳನ್ನು ಗಮನದಲ್ಲಿಟ್ಟುಕೊಂಡು ಬುದ್ದಿವಂತ ಹಣಕಾಸು ಪರಿಹಾರಗಳನ್ನು ಒದಗಿ ಸುವಲ್ಲಿ ಸೌತ್ ಇಂಡಿಯನ್ ಬ್ಯಾಂಕ್‌ನ ಬದ್ಧತೆಯನ್ನು SIB Power CONSOL ಮತ್ತಷ್ಟು ಸ್ಪಷ್ಟಪಡಿಸುತ್ತದೆ.

ಹೆಚ್ಚು ಬಡ್ಡಿದರದ ಅನೇಕ ಸಾಲಗಳನ್ನು ಕಡಿಮೆ ಬಡ್ಡಿದರದ ಒಂದೇ ಸಾಲಕ್ಕೆ ಏಕೀಕರಿ ಸುವ ಮೂಲಕ, ಈ ಉತ್ಪನ್ನವು ಗ್ರಾಹಕರ ಒಟ್ಟು ಆರ್ಥಿಕ ಭಾರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ದೀರ್ಘಾವಧಿ ತೀರಿಸುವಿಕೆ ಆಯ್ಕೆಗಳ ಸೌಲಭ್ಯವನ್ನು ಒದಗಿಸು ತ್ತದೆ.