ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಿ.10ರಿಂದ 12ರವರೆಗೆ ಬೆಂಗಳೂರಿನಲ್ಲಿ ಪುತ್ತೂರು ನರಸಿಂಹ ನಾಯಕ್‌ರಿಂದ ವಿಶೇಷ ಸಂಗೀತ ಕಾರ್ಯಾಗಾರ

Music Workshop: ಪರಮ್‌ ಸಂಸ್ಥೆ ವತಿಯಿಂದ ಬೆಂಗಳೂರಿನ ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಡಿ.10 ರಿಂದ 12ರವರೆಗೆ 3 ದಿನಗಳ ಕಾಲ ಸಂಜೆ 6 ರಿಂದ 8ರವರೆಗೆ ಖ್ಯಾತ ಗಾಯಕ ಪಂಡಿತ್ ಪುತ್ತೂರು ನರಸಿಂಹ ನಾಯಕ್ ಅವರಿಂದ ಸಂಗೀತ ಕಾರ್ಯಾಗಾರ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ ಡಿ.10ರಿಂದ 3 ದಿನಗಳ ವಿಶೇಷ ಸಂಗೀತ ಕಾರ್ಯಾಗಾರ

ಪಂಡಿತ್ ಪುತ್ತೂರು ನರಸಿಂಹ ನಾಯಕ್ -

Profile
Siddalinga Swamy Dec 9, 2025 5:20 PM

ಬೆಂಗಳೂರು, ಡಿ.9: ದಾಸ ಸಾಹಿತ್ಯ ಮತ್ತು ಭಕ್ತಿ ಸಂಗೀತದ ಮೂಲಕ ಅಪಾರ ಜನಮನ್ನಣೆ ಗಳಿಸಿರುವ ಖ್ಯಾತ ಗಾಯಕ ಪಂಡಿತ್ ಪುತ್ತೂರು ನರಸಿಂಹ ನಾಯಕ್ (Puttur Narasimha Nayak) ಅವರಿಂದ ಸಂಗೀತ ಕಾರ್ಯಾಗಾರ (Music Workshop) ನಡೆಯಲಿದೆ. 'ದಾಸವಾಣಿ - ಸಂತವಾಣಿ' ಎಂಬ ಶೀರ್ಷಿಕೆಯಡಿ ನಡೆಯಲಿರುವ ಅವರ ಮುಖ್ಯ ಸಂಗೀತ ಕಛೇರಿಗೂ ಮುನ್ನ ಡಿ.10 ರಿಂದ 12ರವರೆಗೆ 3 ದಿನಗಳ ಕಾಲ ವಿಶೇಷ ಸಂಗೀತ ಕಾರ್ಯಾಗಾರವನ್ನು ಪರಮ್‌ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಕಾರ್ಯಾಗಾರ ಎಲ್ಲಿ?

ಬೆಂಗಳೂರಿನ ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಡಿ.10 ರಿಂದ 12ರವರೆಗೆ ಸಂಜೆ 6 ರಿಂದ 8ರವರೆಗೆ ನಡೆಯಲಿದೆ. ಈ 3 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದವರಲ್ಲಿ ಆಯ್ದ ಕೆಲವರಿಗೆ ಮುಖ್ಯ ಸಂಗೀತ ಕಛೇರಿಯ ಸಮಯದಲ್ಲಿ ಪಂ.ಪುತ್ತೂರು ನರಸಿಂಹ ನಾಯಕ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಆಸಕ್ತರು ಬುಕ್‌ ಮೈ ಶೋ (Book My Show) ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

ಏನನ್ನು ಕಲಿಯಬಹುದು?

ಪಂ. ಪುತ್ತೂರು ನರಸಿಂಹ ನಾಯಕ್ ಅವರಿಂದ ನೇರವಾಗಿ ದಾಸರಪದಗಳು, ಅಭಂಗ್‌ಗಳು ಮತ್ತು ಭಜನೆಗಳನ್ನು ಕಾರ್ಯಾಗಾರದಲ್ಲಿ ಕಲಿಯಬಹುದಾಗಿದೆ.

ಡಿ. 13ಕ್ಕೆ ಎಡಿಎ ರಂಗಮಂದಿರದಲ್ಲಿ ಸಂಗೀತ ಕಛೇರಿ

ಈ ಕಾರ್ಯಾಗಾರದ ಬಳಿಕ ಡಿಸೆಂಬರ್ 13 ರಂದು ಎಡಿಎ ರಂಗಮಂದಿರಲ್ಲಿ ಗಾಯಕ ಪಂಡಿತ್ ಪುತ್ತೂರು ನರಸಿಂಹ ನಾಯಕ್ ಅವರಿಂದ ಸಂಜೆ 6:30 ರಿಂದ ಮುಖ್ಯ ಸಂಗೀತ ಕಛೇರಿ ನಡೆಯಲಿದೆ. ಇದೇ ವೇಳೆ ಭಾರತದ ಭಕ್ತಿ ಪರಂಪರೆಯ ರತ್ನಗಳಾದ ಕರ್ನಾಟಕದ ದಾಸ ಪರಂಪರೆಯ ಜೀವನ ಪಾಠಗಳು ಮತ್ತು ಇತರ ಸಂತ-ಕವಿಗಳ ಒಳನೋಟದ ರಚನೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಸಂಗೀತ ಕಾರ್ಯಕ್ರಮವು ಭಕ್ತಿ, ಚಿಂತನೆ ಮತ್ತು ದೈವ ಭಕ್ತಿಯ ಪಥದ ಕಡೆಗೆ ಮಾರ್ಗದರ್ಶನ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Mahila Utsava 2025: ಕರ್ನಾಟಕ ಮಹಿಳಾ ಯಕ್ಷಗಾನ ತಂಡದಿಂದ ಯಕ್ಷೋತ್ಸವ ಸಂಪನ್ನ

ಸಂಗೀತಗಾರರ ತಂಡ

ಪಂ.ಪುತ್ತೂರು ನರಸಿಂಹ ನಾಯಕ್ ಅವರಿಗೆ ಪ್ರಸಿದ್ಧ ಕಲಾವಿದರು ಸಾಥ್ ನೀಡಲಿದ್ದಾರೆ. ನಾಗರ ಕೃಷ್ಣ ಉಡುಪ – ಕೀಬೋರ್ಡ್, ಶಿವಲಿಂಗ ರಾಜಾಪುರ – ಬಾನ್ಸುರಿ, ರಘುನಾಥ್ ಮೈಸೂರು – ತಬಲಾ, ಗುರುಮೂರ್ತಿ ವೈದ್ಯ – ಪಖಾವಾಜ್, ವೆಂಕಟೇಶ್ ಪುರೋಹಿತ್ – ಮಂಜೀರಾ, ಸಾಮಂತ್ ಕಾರ್ಗಲ್ – ಚಿಪ್ಳಿ, ಸಮಿಕ್ ಶೆಣೈ – ಘುಂಗ್ರೂ.