ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 8ನೇ ಶಾಖೆ ಉದ್ಘಾಟನೆ ನಾಳೆ; ಹಲವು ಗಣ್ಯರು ಭಾಗಿ

ನಗರದ ಹೆಸರಾಂತ ಹಾಗೂ ವಿಶ್ವಾಸಾರ್ಹ ಚಿನ್ನಾಭರಣ ಸಂಸ್ಥೆಯಾದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ 8ನೇ ಶಾಖೆಯನ್ನು ಕನಕಪುರ ರಸ್ತೆ, ರಘುವನಹಳ್ಳಿ ಪ್ರದೇಶದಲ್ಲಿ ಜನವರಿ 23ರಂದು ಬೆಳಿಗ್ಗೆ 11 ಗಂಟೆಗೆ ಭವ್ಯವಾಗಿ ಉದ್ಘಾಟನೆಯಾಗಲಿದೆ. ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರು & ಶ್ರೀಮತಿ ಚೆನ್ನಮ್ಮ ಶ್ರೀ ಹೆಚ್.ಡಿ. ದೇವೇಗೌಡರುಆಶೀರ್ವಾದದಿಂದ ಹಾಗೂ ದಿವ್ಯ ಸಾನಿಧ್ಯ ಅವಧೂತ ವಿನಯ್ ಗುರೂಜಿರವರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ.

ಸಂಗ್ರಹ ಚಿತ್ರ

ಬೆಂಗಳೂರು: ನಗರದ ಹೆಸರಾಂತ ಹಾಗೂ ವಿಶ್ವಾಸಾರ್ಹ ಚಿನ್ನಾಭರಣ ಸಂಸ್ಥೆಯಾದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ (Sri Sai Gold Palace) ತನ್ನ 8ನೇ ಶಾಖೆಯನ್ನು ಕನಕಪುರ ರಸ್ತೆ, ರಘುವನಹಳ್ಳಿ ಪ್ರದೇಶದಲ್ಲಿ ಜನವರಿ 23ರಂದು ಬೆಳಿಗ್ಗೆ 11 ಗಂಟೆಗೆ ಭವ್ಯವಾಗಿ ಉದ್ಘಾಟನೆ ಮಾಡಲಿದ್ದು, ಈ ಸಮಾರಂಭವು ಗಣ್ಯ ಅತಿಥಿಗಳು ಹಾಗೂ ಸಿನಿ–ಟಿವಿ ತಾರೆಯರ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮಾಲೀಕರಾದ ಶ್ರೀ ಟಿ.ಎ. ಶರವಣ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ಶಾಖೆಯ ಉದ್ಘಾಟನೆಯನ್ನು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ನೆರವೇರಿಸಲಿದ್ದು, ಕೇಂದ್ರ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ದೀಪ ಬೆಳಗಿಸಲಿದ್ದಾರೆ. ಡೈಮಂಡ್ ವಿಭಾಗವನ್ನು ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ಉದ್ಘಾಟಿಸಲಿದ್ದಾರೆ.

ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರು & ಶ್ರೀಮತಿ ಚೆನ್ನಮ್ಮ ಶ್ರೀ ಹೆಚ್.ಡಿ. ದೇವೇಗೌಡರುಆಶೀರ್ವಾದದಿಂದ ಹಾಗೂ ದಿವ್ಯ ಸಾನಿಧ್ಯ ಅವಧೂತ ವಿನಯ್ ಗುರೂಜಿರವರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ.

ಮುಖ್ಯ ಆಕರ್ಷಣೆ

ಈ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಜನಪ್ರಿಯ ಚಲನಚಿತ್ರ ನಟಿ ಶ್ರೀಮತಿ ರುಕ್ಮಿಣಿ ವಸಂತ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಲಿದ್ದಾರೆ.

ವಿಶೇಷ ಅತಿಥಿಗಳು

  • ಈ ಬಾರಿಯ ಬಿಗ್ ಬಾಸ್ ವಿಜೇತರಾದ ಗಿಲ್ಲಿ ನಟರಾಜ್
  • ಬಿಗ್ ಬಾಸ್ ಸ್ಪರ್ಧಿಗಳಾದ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯ, ರಘು, ಧನುಷ್ ಗೌಡ, ಸ್ಪಂದನ

ಗಣ್ಯ ಅತಿಥಿಗಳು

ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಶಾಸಕರಾದ ಎಸ್.ಟಿ. ಸೋಮಶೇಖರ್, ಎಂ. ಕೃಷ್ಣಪ್ಪ ಸೇರಿದಂತೆ ವಿಶೇಷ ಅತಿಥಿಗಳು ಈ ಬಾರಿಯ ಬಿಗ್ ಬಾಸ್ ವಿಜೇತರಾದ ಗಿಲ್ಲಿ ನಟರಾಜ್ಗ್ ಬಾಸ್ ಸ್ಪರ್ಧಿಗಳಾದ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯ, ರಘು, ಧನುಷ್ ಗೌಡ, ಸ್ಪಂದನ ಚಲನಚಿತ್ರ ನಟಿಯರಾದ ಪ್ರೇಮಾ, ಅನುಷಾ ರೈ, ಐಶ್ವರ್ಯ ಸಿಂಧೋಗಿ, ರೂಪಿಕಾ, ನಟರಾದ ತರುಣ್ ಸುಧೀರ್, ಸೋನಲ್, ಕಾರುಣ್ಯರಾಮ್, ನಟಿಯರಾದ ರೂಪ ಅಯ್ಯರ್, ಅಪೂರ್ವ, ಗಗನ್ ಬಾರಿ, ಸ್ಪಂದನಾ ಸೋಮಣ್ಣ, ಸುಶ್ಮಿತಾ ಜಗಪ್ಪ, ಜಾನವಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವಿಶೇಷತೆ

“ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಅಂದರೆ ನಂಬಿಕೆ ಮತ್ತು ವಿಶ್ವಾಸ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಚಿನ್ನದಲ್ಲಿ ಹೂಡಿಕೆ ಎಂದಿಗೂ ನಷ್ಟವಿಲ್ಲ. ಗ್ರಾಹಕರ ಅಪಾರ ಪ್ರೀತಿ ಮತ್ತು ವಿಶ್ವಾಸದಿಂದ ಇಂದು ಬೆಂಗಳೂರಿನಲ್ಲಿ 8ನೇ ಶಾಖೆ ಆರಂಭಿಸುವಂತಾಗಿದೆ” ಎಂದು ಶ್ರೀ ಟಿ.ಎ. ಶರವಣ್ ಅವರು ತಿಳಿಸಿದರು.

ಸಾರ್ವಜನಿಕರಿಗೆ ಉತ್ಕೃಷ್ಟ ಗುಣಮಟ್ಟದ ಚಿನ್ನಾಭರಣ, ಡೈಮಂಡ್ ಮತ್ತು ಆಕರ್ಷಕ ವಿನ್ಯಾಸಗಳನ್ನು ಒದಗಿಸುವ ಉದ್ದೇಶದಿಂದ ಈ ಹೊಸ ಶಾಖೆಯನ್ನು ಆರಂಭಿಸಲಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.