ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bone Marrow Transplant Unit: ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರು ರಸ್ತೆ ಶಾಖೆಯಲ್ಲಿ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಒಂದಾಗಿರುವ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಕನಾಟಕದಲ್ಲಿ ಹೆಚ್ಚುತ್ತಿರುವ ಗಂಭೀರ ರಕ್ತ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಸುಧಾರಿತ ತಂತ್ರಜ್ಞಾನ ಹಾಗೂ ತಜ್ಞ ವೈದ್ಯರು, ವೈದ್ಯಕೀಯ ಸವಲತ್ತುಗಳೊಂದಿಗೆ ಸಜ್ಜಾಗಿದ್ದು ಕೇವಲ ರಾಜ್ಯ ಮಾತ್ರ ವಲ್ಲ ದಕ್ಷಿಣ ಭಾರತದ ಹಾಗೂ ವಿದೇಶಗಳ ರೋಗಿಗಳಿಗೂ ಕ್ಯಾನ್ಸರ್‌ನಿಂದ ಗುಣಮುಖ ರಾಗುವ ಭರವಸೆ ಮೂಡಿಸಿದೆ

ಬೆಂಗಳೂರು: ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಸಮೂಹವಾಗಿರುವ ಸ್ಪರ್ಶ್‌ ಆಸ್ಪತ್ರೆ ಇದೀಗ ತನ್ನ ಹೆಣ್ಣೂರು ಘಟಕದಲ್ಲಿ ಅಸ್ಥಿಮಜ್ಜೆ ಕಸಿ ಕೇಂದ್ರವನ್ನು ಆರಂಭಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಒಂದಾಗಿ ರುವ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಕನಾಟಕದಲ್ಲಿ ಹೆಚ್ಚುತ್ತಿರುವ ಗಂಭೀರ ರಕ್ತ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಸುಧಾರಿತ ತಂತ್ರಜ್ಞಾನ ಹಾಗೂ ತಜ್ಞ ವೈದ್ಯರು, ವೈದ್ಯಕೀಯ ಸವಲತ್ತುಗಳೊಂದಿಗೆ ಸಜ್ಜಾಗಿದ್ದು ಕೇವಲ ರಾಜ್ಯ ಮಾತ್ರವಲ್ಲ ದಕ್ಷಿಣ ಭಾರತದ ಹಾಗೂ ವಿದೇಶಗಳ ರೋಗಿಗಳಿಗೂ ಕ್ಯಾನ್ಸರ್‌ನಿಂದ ಗುಣಮುಖರಾಗುವ ಭರವಸೆ ಮೂಡಿಸಿದೆ.

ಅಸ್ಥಿಮಜ್ಜೆ ಕಸಿಗೆಂದೇ ಸೀಮಿತವಾದ ಘಟಕವನ್ನು ರಕ್ತ, ಅಸ್ಥಿಮಜ್ಜೆ ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಮಾತ್ರವಲ್ಲದೇ ಬಹು ವೈದ್ಯಕೀಯ ವಿಭಾಗಗಳ ತಜ್ಞರ ಚಿಕಿತ್ಸೆ ಅಗತ್ಯವಿರುವ ರಕ್ತ ಕ್ಯಾನ್ಸರ್‌ (ಲ್ಯುಕೇಮಿಯಾ), ಹಿಮೋಗ್ಲೋಬಿನ್‌ ಕೊರತೆಯಿಂದ ಆಗುವ ಅನುವಂಶಿಕ ಕಾಯಿಲೆ (ಥಲಸ್ಸೇಮಿಯಾ), ಸೋಂಕಿನ ವಿರುದ್ಧ ಹೋರಾಡುವ ಬಿಳಿರಕ್ತಕಣ ಗಳ ಕ್ಯಾನ್ಸರ್‌ (ಲಿಂಫೋಮಾ), ಅಪ್ಲಾಸ್ಟಿಕ್‌ ರಕ್ತ ಹೀನತೆ ಮೊದಲಾದವುಗಳಿಗೆ ವಿಶ್ವದರ್ಜೆಯ ಅನುಭವಿ ವೈದ್ಯರ ತಂಡ ದಿಂದ ಸಂಕೀರ್ಣ ಚಿಕಿತ್ಸೆಗೆ ವ್ಯವಸ್ಥೆಗೊಳಿಸಲಾಗಿದೆ.

ಇದನ್ನೂ ಓದಿ: Health Tips: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಕಾಮಕಸ್ತೂರಿ ಬೀಜ ತಿಂತೀರಾ?; ಇದರಿಂದ ಲಾಭಕ್ಕಿಂತ ಅಪಾಯ ಹೆಚ್ಚು ಎನ್ನುತ್ತಾರೆ ಪೌಷ್ಠಿಕ ತಜ್ಞರು

ಅತ್ಯಾಧುನಿಕ ಅಸ್ಥಿ ಮಜ್ಜೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಪರ್ಶ್‌ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಡಾ.ಶರಣ್‌ ಶಿವರಾಜ್‌ ಪಾಟೀಲ್‌, “ ಪ್ರತಿಯೊಂದು ಜೀವಕ್ಕೂ ಮರು ಜೀವ ಪಡೆಯಲು ಎರಡನೇ ಆವಕಾಶದ ಅರ್ಹತೆ ಇದೆ. ಸ್ಪರ್ಶ್‌ ಆಸ್ಪತ್ರೆಯ ಈ ಅಸ್ಥಿಮಜ್ಜೆ ಕಸಿ ಘಟಕವು ರಕ್ತ ಕ್ಯಾನ್ಸರ್‌ನ ಅತ್ಯಂತ ಗಂಭೀರ ಕಾಯಿಲೆಗಳ ರೋಗ ನಿರ್ಣಯಗೊಂಡ ರೋಗಿಗಳಿಗೆ ಭರವಸೆ ಯಾಗಲಿದೆ. ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು ಅತ್ಯುತ್ಕೃಷ್ಟ ಚಿಕಿತ್ಸಾ ವ್ಯವಸ್ಥೆ, ಸುಧಾರಿತ ತಂತ್ರಜ್ಞಾನ ಹಾಗೂ ಅಷ್ಟೇ ಕಾಳಜಿಯ ಸೇವೆ ಒದಗಿಸಲಿದೆ” ಎಂದರು.

ಸ್ಪರ್ಶ್‌ ಕ್ಯಾನ್ಸರ್‌ ಸಂಸ್ಥೆಯ ಅತ್ಯಂತ ಪ್ರಮುಖ ಮತ್ತು ಆಧಾರಸ್ತಂಭದಂತೆ ಕೆಲಸ ಮಾಡುವ ಈ ಅಸ್ಥಿಮಜ್ಜೆ ಕಸಿ ಘಟಕವನ್ನು ಕ್ಯಾನ್ಸರ್‌ನ ಎಲ್ಲ ಹಂತದ ಚಿಕಿತ್ಸೆಗಳಿಗೂ ಸಜ್ಜುಗೊಳಿಸಲಾಗಿದೆ. ಆರಂಭಿಕ ಹಂತದಲ್ಲೇ ರೋಗ ನಿರ್ಣಯದಿಂದ ಮೊದಲ್ಗೊಂಡು ಅತ್ಯಂತ ನಿಖರವಾದ ಚಿಕಿತ್ಸೆಗಳಿಂದ ಸುಧಾರಿತ ಆರೋಗ್ಯ ಸೇವೆಗಳೊಂದಿಗೆ ಅಷ್ಟೇ ಕಾಳಜಿಯ ಆರೈಕೆಯನ್ನೊಳ ಗೊಂಡು ದೀರ್ಘಾವಧಿಯ ಬದುಕಿನ ಅವಕಾಶ ಕಲ್ಪಿಸಿಕೊಡ ಲಿದೆ ಎಂದು ಡಾ.ಶರಣ್‌ ಪಾಟೀಲ್‌ ಹೇಳಿದರು.

ಅತ್ಯಾಧುನಿಕ ಅಸ್ಥಿಮಜ್ಜೆ ಘಟಕವು ಸೋಂಕು ನಿರೋಧಕ ಹೆಚ್‌ಇಪಿಎ ಪ್ರತ್ಯೇಕ ಕೊಠಡಿಗಳು (ಹೆಪಾ ಫಿಲ್ಟರ್ಡ್‌ ಐಸೊಲೇಷನ್‌ ರೂಮ್ಸ್‌), ಘಟಕಕ್ಕೆಂದೇ ಮೀಸಲಾದ ರಕ್ತ ಬ್ಯಾಂಕ್‌, ಕಾಂಡ ಕೋಶಗಳ ಚಿಕಿತ್ಸಾ ಪ್ರಕ್ರಿಯೆ (ಸ್ಟೆಮ್‌ ಸೆಲ್‌) ಸೌಕರ್ಯ ಸೇರಿದಂತೆ ಒಂದೇ ಸೂರಿನಡಿ ಎಲ್ಲ ಪರೀಕ್ಷೆ ಗಳನ್ನೂ (ಹೆಚ್‌ಎಲ್‌ಎ ಟೈಪಿಂಗ್‌, ಇನ್ಫೆಕ್ಷನ್ಸ್‌, ಹಾಗೂ ಡ್ರಗ್‌ ಲೆವಲ್‌ ಮಾನಿಟರಿಂಗ್‌) ನಡೆಸಲು ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಉಪಕರಣ ಗಳನ್ನೊಳಗೊಂಡಿದೆ. ಜೊತೆಗೆ ರಕ್ತ ಕ್ಯಾನ್ಸರ್‌ ತಜ್ಞರು, ಅಸ್ಥಿಮಜ್ಜೆ ಕಸಿ ವೈದ್ಯರು, ತೀವ್ರ ನಿಗಾ ತಜ್ಞರು ಹಾಗೂ ಈ ವಿಭಾಗಗಳಲ್ಲಿ ವಿಶೇಷವಾಗಿ ತರಬೇತಿ ಹೊಂದಿದ ಶುಶ್ರೂಷಕಿ ಯರ ತಂಡದೊಂದಿಗೆ ಸದಾ ಸೇವೆಗೆ ಸನ್ನದ್ಧಗೊಳಿಸಲಾಗಿದೆ.

ಸಾಂಪ್ರದಾಯಿಕ ಅಸ್ಥಿಮಜ್ಜೆ ಕಸಿಯೊಂದಿಗೆ ಘಟಕವು ಸಿಎಆರ್‌-ಟಿ ಸೆಲ್‌ ಥೆರಪಿ ಮತ್ತು ಅತ್ಯಾಧುನಿಕ ಇಮ್ಯುನೋಥೆರಪಿಯ ಸೌಲಭ್ಯವನ್ನೂ ಒದಗಿಸಲಿದ್ದು ರಕ್ತ ಕ್ಯಾನ್ಸರ್‌ ರೋಗಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆಯನ್ನು ಪಡೆಯಲು ಅವಕಾಶವಿದೆ.

ಈ ನೂತನ ಘಟಕದೊಂದಿಗೆ ಸ್ಪರ್ಶ್‌ ಆಸ್ಪತ್ರೆ ಸಮೂಹವು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಗಳ ಸಾಮರ್ಥ್ಯಗಳೊಂದಿಗೆ ಎಲ್ಲ ರೋಗಿಗಳಿಗೂ ಲಭ್ಯವಾಗುವಂತಹ ಅತ್ಯುನ್ನತ ದರ್ಜೆಯ ಕ್ಯಾನ್ಸರ್‌ ಚಿಕಿತ್ಸೆ ಒದಗಿಸುವ ತನ್ನ ಸೇವಾ ಬದ್ಧತೆಯ ವಿಸ್ತರಣೆಯನ್ನು ಪುನರುಚ್ಚರಿಸು ತ್ತಿದೆ..

ಸ್ಪರ್ಶ್‌ ಆಸ್ಪತ್ರೆ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಸ್‌ದೀಪ್‌ ಸಿಂಗ್‌, ಹಿರಿಯ ತಜ್ಞರು, ಸಮಾಲೋಚಕರು, ಸ್ಪರ್ಶ್‌ ಆಸ್ಪತ್ರೆ ಸಮೂಹದ ಆಸ್ಪತ್ರೆಗಳಲ್ಲಿ ಅಸ್ಥಿ ಮಜ್ಜೆ ಕಸಿ ಮಾಡಿಸಿಕೊಂಡು ಚೇತರಿಕೆ ಕಂಡಿರುವ ಅನೇಕ ಕ್ಯಾನ್ಸರ್‌ ರೋಗಿಗಳು ಉಪಸ್ಥಿತರಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡರು.