ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸದೃಢ ಬೆಳವಣಿಗೆ: ಕರ್ನಾಟಕದ ಸ್ಥಳೀಯ ಉದ್ಯಮಗಳಿಗೆ ಡಿಜಿಟಲ್ ಪಾವತಿಗಳಿಂದ ಉತ್ತೇಜನ

ಹಂಪಿಯ ಪ್ರಾಚೀನ ದೇವಾಲಯ ಪಟ್ಟಣಗಳಿಂದ ಹಿಡಿದು ಬೆಳಗಾವಿಯ ಜನನಿಬಿಡ ಕೈಗಾರಿಕಾ ವಲಯಗಳವರೆಗೆ, ಮಂಗಳೂರಿನ ಅಭಿವೃದ್ಧಿಶೀಲ ಬಂದರು ಬದಿಯ ಮಾರುಕಟ್ಟೆಗಳಿಂದ ಹಿಡಿದು ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರಶಾಂತ ಬೀದಿಗಳವರೆಗೆ, ಸ್ಥಳೀಯ ವ್ಯವಹಾರಗಳ ಟ್ರೆಂಡ್‌ ನಲ್ಲಿ ಸ್ಪಷ್ಟ ಬದಲಾವಣೆಗಳು ಕಾಣುತ್ತಿವೆ.

ಕರ್ನಾಟಕದ ಸ್ಥಳೀಯ ಉದ್ಯಮಗಳಿಗೆ ಡಿಜಿಟಲ್ ಪಾವತಿಗಳಿಂದ ಉತ್ತೇಜನ

-

Ashok Nayak Ashok Nayak Sep 9, 2025 7:35 PM

ಬೆಂಗಳೂರು: ಬೆಂಗಳೂರಿನ ಪ್ರಖ್ಯಾತ ಕಮರ್ಶಿಯಲ್‌ ಸ್ಟ್ರೀಟ್‌ನಿಂದ ಹಿಡಿದು, ಶ್ರೀಗಂಧದ ಸಮೃದ್ಧ ಪರಿಮಳವನ್ನು ಸೂಸುವ ಮೈಸೂರಿನ ಶಾಪ್‌ಗಳು ಸೇರಿದಂತೆ ಹುಬ್ಬಳ್ಳಿಯ ಜನನಿಬಿಡ ವ್ಯಾಪಾರ ಬೀದಿಯಲ್ಲಿ ಒಮ್ಮೆ ನಡೆದು ನೋಡಿ- ಅಲ್ಲೆಲ್ಲಾ ನೀವು ಗಮನಾರ್ಹ ಬದಲಾವಣೆಯನ್ನು ಗಮನಿಸುತ್ತೀರಿ. ದೈನಂದಿನ ವ್ಯವಹಾರ ಮತ್ತು ಜನಸಂದಣಿಯ ನಡುವೆಯೇ ವ್ಯಾಪಾರಿಗಳು ಸದ್ದಿಲ್ಲದೇ ಬದಲಾಗುತ್ತಿದ್ದಾರೆ. ಅನೇಕರು ಸಾಂಪ್ರದಾಯಿಕ ಕ್ಯಾಶ್‌ ರಿಜಿಸ್ಟರ್‌ಗಳು ಮತ್ತು ಲೆಡ್ಜರ್ ಪುಸ್ತಕಗಳನ್ನು ಬದಿಗಿರಿಸಿ QR ಕೋಡ್‌ಗಳು, ಕಾರ್ಡ್ ಯಂತ್ರಗಳು ಮತ್ತು ಪಾವತಿ ಯಶಸ್ವಿ ಯಾಗಿರುವುದನ್ನು ಸೂಚಿಸುವ ಆಡಿಯೊ ಅಲರ್ಟ್‌ಗಳಿಗೆ ಬದಲಾಗಿದ್ದಾರೆ.

ಇದು ಕೇವಲ ಹೊಸ ತಂತ್ರಜ್ಞಾನದ ವೇಗಕ್ಕೆ ಒಗ್ಗಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಡಿಜಿಟಲ್‌ ಪಾವತಿಗಳು ಆಧುನಿಕ ತಂತ್ರಜ್ಞಾನ ತಂದ ಅನುಕೂಲಗಳು ಮಾತ್ರವಲ್ಲ, ಅನೇಕ ಸಣ್ಣ ಮತ್ತು ಸಾಂಪ್ರದಾಯಿಕ ವ್ಯಾಪಾರಿಗಳಿಗೆ, ಮಾಲೀಕರಿಗೆ, ದೈನಂದಿನ ಕಾರ್ಯಾಚರಣೆಗಳನ್ನು ಹೆಚ್ಚು ಸರಾಗವಾಗಿ, ತ್ವರಿತವಾಗಿ ಮತ್ತು ವಿಶ್ವಾಸಾರ್ಹವಾಗಿ ನಡೆಸಲು ಡಿಜಿಟಲ್ ಪಾವತಿಗಳು ಅತ್ಯಗತ್ಯವಾಗಿವೆ.

ಇದನ್ನೂ ಓದಿ: Bangalore News: ಶಿಕ್ಷಕರು ಮಕ್ಕಳನ್ನು ಸಮರ್ಥ ನಾಗರಿಕರನ್ನಾಗಿ ರೂಪಿಸಬೇಕು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ

ಕೇವಲ ತಂತ್ರಜ್ಞಾನ ಮಾತ್ರವಲ್ಲ - ನೈಜ ಸಮಸ್ಯೆಗಳಿಗೆ ಪರಿಹಾರ

ಈ ಬದಲಾವಣೆಯು ಕೇವಲ ಡಿಜಿಟಲ್ ಪರಿಕರಗಳನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲದೇ, ಹಳೆಯ ಸಮಸ್ಯೆಗಳನ್ನು ಪರಿಹರಿಸಲು ಒಂದು ಅತ್ಯುತ್ತಮ ಮಾರ್ಗವಾಗಿದೆ. ಪ್ರತಿನಿತ್ಯದ ಸಮಸ್ಯೆ ಗಳ ಬಗ್ಗೆ ಒಮ್ಮೆ ಯೋಚಿಸಿ: ನಾಣ್ಯ ಅಥವಾ ನೋಟುಗಳನ್ನು ನಿರ್ವಹಿಸುವುದು, ಪ್ರತಿ ವಹಿವಾಟ ನ್ನು ಕೈಯಿಂದ ದಾಖಲಿಸುವುದು ಮತ್ತು ಲೆಕ್ಕಪತ್ರದ ತಪ್ಪುಗಳನ್ನು ಸರಿಪಡಿಸುವುದು ತ್ರಾಸದಾಯಕ ಕೆಲಸ.

ಡಿಜಿಟಲ್ ಪಾವತಿಗಳೊಂದಿಗೆ, ವ್ಯಾಪಾರಿಗಳು ತ್ವರಿತ ಪಾವತಿ ದೃಢೀಕರಣ, ಬಿಲ್ಟ್‌-ಇನ್‌ ರೆಕಾರ್ಡ್‌ ಕೀಪಿಂಗ್‌ ಅನ್ನು ಪಡೆಯುತ್ತಾರೆ. ಅಲ್ಲದೇ ಖಾತೆಯ ವಹಿವಾಟುಗಳು ಸುಲಭವಾಗಿ ತಾಳೆಯಾಗು ತ್ತವೆ- ಇದು ಅವರಿಗೆ ತಮ್ಮ ವ್ಯವಹಾರವನ್ನು ಬೆಳೆಸುವತ್ತ ಹೆಚ್ಚು ಗಮನಹರಿಸಲು ಅನುವು ಮಾಡಿಕೊಡುತ್ತದೆ. ಹಂಪಿಯ ಪ್ರಾಚೀನ ದೇವಾಲಯ ಪಟ್ಟಣಗಳಿಂದ ಹಿಡಿದು ಬೆಳಗಾವಿಯ ಜನನಿಬಿಡ ಕೈಗಾರಿಕಾ ವಲಯಗಳವರೆಗೆ, ಮಂಗಳೂರಿನ ಅಭಿವೃದ್ಧಿಶೀಲ ಬಂದರು ಬದಿಯ ಮಾರುಕಟ್ಟೆಗಳಿಂದ ಹಿಡಿದು ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರಶಾಂತ ಬೀದಿಗಳವರೆಗೆ, ಸ್ಥಳೀಯ ವ್ಯವಹಾರಗಳ ಟ್ರೆಂಡ್‌ನಲ್ಲಿ ಸ್ಪಷ್ಟ ಬದಲಾವಣೆಗಳು ಕಾಣುತ್ತಿವೆ. ಅಲ್ಲಿಯ ಗ್ರಾಹಕರು UPI ಆ್ಯಪ್‌ಗಳು, ಟ್ಯಾಪ್-ಆ್ಯಂಡ್‌-ಗೋ ಕಾರ್ಡ್‌ಗಳು ಅಥವಾ ಸುಲಭವಾದ QR ಸ್ಕ್ಯಾನ್‌ಗಳ ಮೂಲಕ ಪಾವತಿಸುವ ಡಿಜಿಟಲ್ ಮಾರ್ಗಗಳನ್ನು ಹೆಚ್ಚಾಗಿ ಬಯಸುತ್ತಾರೆ.

ತಮ್ಮ ಗ್ರಾಹಕರು ಇದನ್ನೇ ನಿರೀಕ್ಷಿಸುತ್ತಾರೆ ಎಂದು ಅರಿತ ಅನೇಕ ವ್ಯಾಪಾರಿಗಳು ಈಗ ಮುಂದು ವರಿದು ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರು ಕೇವಲ QR ಕೋಡ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ವ್ಯವಹಾರಗಳು ಆಡಿಯೋ ಆಧಾರಿತ ಪಾವತಿ ದೃಢೀಕರಣ ಸಾಧನಗಳು ಅಥವಾ ಕಾರ್ಡ್ ಮತ್ತು UPI ಪಾವತಿಗಳನ್ನು ನಿರ್ವಹಿಸುವ ಸಂಯೋಜಿತ POS ಯಂತ್ರಗಳನ್ನು ಬಳಸುತ್ತಿವೆ. ಈ ಉಪಕರಣಗಳು ದುಬಾರಿ ಸೀರೆಗಳ ಶೋರೂಂಗಳಿಂದ ಹಿಡಿದು ಸಾಂಪ್ರದಾಯಿಕ ಮಿಠಾಯಿ ಅಂಗಡಿಗಳವರೆಗೆ ಎಲ್ಲ ರೀತಿಯ ಸ್ಥಳಗಳಲ್ಲಿ ಕಾಣಸಿಗುತ್ತವೆ.

ಸಾಂಪ್ರದಾಯಿಕ ವ್ಯಾಪಾರಿಗಳು, ಹೊಸದಾಗಿ ಕಂಡುಕೊಂಡ ನಿರ್ವಹಣಾ ವಿಧಾನ

ಕಾಗದದ ರಸೀದಿಗಳು ಮತ್ತು ಕೈಬರಹದ ಲೆಡ್ಜರ್‌ಗಳನ್ನು ಈಗಲೂ ಬಳಸುತ್ತಿರುವ ವ್ಯವಹಾರಗಳು ಸಹ ಪ್ರಯೋಜನಗಳನ್ನು ಗುರುತಿಸುತ್ತಿವೆ. ಡಿಜಿಟಲ್‌ಗೆ ಬದಲಾಯಿಸುವುದರಿಂದ ಅವರಿಗೆ ಹಣಕಾ ಸನ್ನು ಇನ್ನಷ್ಟು ಸುಲಭವಾಗಿ ಟ್ರ್ಯಾಕ್ ಮಾಡಲು ಮತ್ತು ಉತ್ತಮವಾಗಿ ಯೋಜಿಸಲು ಸಹಕಾರಿ ಯಾಗುತ್ತದೆ.

ಇಂದಿನ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯು ಸಣ್ಣ ಮತ್ತು ಸಾಂಪ್ರದಾಯಿಕ ವ್ಯಾಪಾರಿಗಳ ನಿರ್ದಿಷ್ಟ ಅಗತ್ಯಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಸಾಧನಗಳು ಪೋರ್ಟಬಲ್ ಆಗಿರುತ್ತವೆ, ಬಳಸಲು ಸುಲಭ ಮತ್ತು ಹಲವು ಭಾಷೆಗಳಲ್ಲಿ ಬೆಂಬಲವನ್ನು ಒದಗಿಸುತ್ತವೆ. ಉದಾಹರಣೆಗೆ, ಫೋನ್‌ಪೇನ ಸ್ಮಾರ್ಟ್‌ಸ್ಪೀಕರ್ 21 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕದಾದ್ಯಂತ ವ್ಯಾಪಾರಿಗಳು ತಮ್ಮ ಆದ್ಯತೆಯ ಭಾಷೆಯಲ್ಲಿ ಪಾವತಿ ಅಪ್‌ಡೇಟ್‌ಗಳನ್ನು ಪಡೆಯಲು ಸಹಾಯ ಮಾಡುತ್ತದೆ - ಭಾಷಾ ವೈವಿಧ್ಯಮಯ ರಾಜ್ಯದಲ್ಲಿ ಇದು ಪ್ರಮುಖ ವೈಶಿಷ್ಟ್ಯವಾಗಿದೆ.

ಒಂದು ಕಾಲದಲ್ಲಿ ದೊಡ್ಡ ರೀಟೇಲ್‌ ವ್ಯಾಪಾರಿಗಳಿಗೆ ಮಾತ್ರ ಸೀಮಿತವಾಗಿದ್ದ POS ಯಂತ್ರಗಳು ಈಗ ಸಣ್ಣ ಶಾಪ್‌ಗಳಿಗೂ ಸುಲಭವಾಗಿ ಲಭ್ಯವಾಗುತ್ತಿವೆ ಮತ್ತು ಪ್ರಾಯೋಗಿಕ ಅನುಭವವನ್ನು ನೀಡುತ್ತಿವೆ. ಫೋನ್‌ಪೇನ POS ವ್ಯವಸ್ಥೆಯು UPI, ಕಾರ್ಡ್ ಮತ್ತು ಕಾಂಟ್ಯಾಕ್ಟ್‌ಲೆಸ್‌ ಪಾವತಿಗಳನ್ನು ಬೆಂಬಲಿಸುತ್ತದೆ. ವ್ಯಾಪಾರಿಗಳು ತಮ್ಮ ಎಲ್ಲ ವಹಿವಾಟುಗಳನ್ನು ಫೋನ್‌ ಪೇ ಬ್ಯುಸಿನೆಸ್ ಆ್ಯಪ್‌ ನಲ್ಲಿ ಬಳಕೆಗೆ ಸುಲಭವಾದ ಡ್ಯಾಶ್‌ಬೋರ್ಡ್‌ನಲ್ಲಿ ವೀಕ್ಷಿಸಬಹುದು. ಇದು ಖಾತೆ ಸಮನ್ವಯ ಮತ್ತು ದೈನಂದಿನ ಸೆಟಲ್‌ಮೆಂಟ್‌ಗಳ ನಿರ್ವಹಣೆಯನ್ನು ಹೆಚ್ಚು ಸುಲಭಗೊಳಿಸುತ್ತದೆ.

"ಡಿಜಿಟಲ್ ಪಾವತಿಗಳು ಈಗ ಎಲ್ಲ ಕಡೆ ಲಭ್ಯವಿವೆ. ನನ್ನ ಅನೇಕ ಮಳಿಗೆಗಳಲ್ಲಿ ಪೋನ್‌ಪೇ POS ಮತ್ತು ಫೋನ್‌ಪೇ QR ನಂತಹ ಫೋನ್‌ಪೇ ಉತ್ಪನ್ನಗಳ ಮೂಲಕ, ನಾನು ನನ್ನ ಮೊಬೈಲ್‌ನಲ್ಲಿ (ಫೋನ್‌ಪೇ ಬ್ಯುಸಿನೆಸ್‌ ಆ್ಯಪ್‌) ಎಲ್ಲ ವಹಿವಾಟುಗಳನ್ನು ಟ್ರ್ಯಾಕ್ ಮಾಡಬಹುದು. ಆದ್ದರಿಂದ ನಾನೇ ಎಲ್ಲ ಕಡೆ ಹಾಜರಿರಬೇಕು ಎಂಬ ಅನಿವಾರ್ಯತೆ ಇಲ್ಲ. ಇದು ನಿಜವಾಗಿಯೂ ನನ್ನ ವ್ಯವಹಾರವನ್ನು ಬೆಳೆಸುವತ್ತ ಗಮನಹರಿಸಲು ನನಗೆ ಅವಕಾಶ ಮಾಡಿಕೊಡುತ್ತದೆ. ಜೊತೆಗೆ, ಗ್ರಾಹಕರು ಜನದಟ್ಟಣೆಯ ಸಮಯದಲ್ಲಿಯೂ ಅವರು ಬಯಸಿದಂತೆ ಪಾವತಿಸಬಹುದು. ಇದು ಹೆಚ್ಚಿನ ಜನರಿಗೆ, ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡುತ್ತದೆ" ಎಂದು ಮೈಸೂರಿನ ಯುವರಾಜ್ ಸಿಲ್ಕ್ ಹೌಸ್‌ನ ಮಾಲೀಕರಾದ ಅರುಣಾ ಯುವರಾಜ್ ಅಭಿಪ್ರಾಯ ಪಡುತ್ತಾರೆ.

ಜನದಟ್ಟಣೆಯ ಸ್ಥಳಗಳಿಗಾಗಿ ಸರಳ ತಂತ್ರಜ್ಞಾನ

ಫೋನ್‌ಪೇನ ಸ್ಕ್ಯಾನ್ ಮಾಡಿ ಪಾವತಿಸಿ ರೀತಿಯ QR ಕೋಡ್‌ಗಳು ಇನ್ನೂ ಹೆಚ್ಚು ಜನಪ್ರಿಯ ವಾಗಿವೆ. ಏಕೆಂದರೆ ಅವುಗಳಿಗೆ ಯಾವುದೇ ಸೆಟಪ್ ಅಥವಾ ವಿದ್ಯುತ್‌ನ ಅಗತ್ಯವಿಲ್ಲ. ಅಲ್ಲದೇ ಅವು ಯಾವುದೇ UPI ಆ್ಯಪ್‌ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಆದರೂ, ಜನನಿಬಿಡ ರೀಟೇಲ್‌ ವ್ಯಾಪಾರ ಪ್ರದೇಶಗಳು ಈಗ ಹೆಚ್ಚುವರಿ ಅನುಕೂಲಕ್ಕಾಗಿ ಆಡಿಯೊ ಪಾವತಿ ಸಾಧನಗಳನ್ನು ಸಹ ಬಳಸುತ್ತಿವೆ. ಈ ಫೋನ್‌ಪೇ ಸ್ಮಾರ್ಟ್‌ಸ್ಪೀಕರ್‌ಗಳು ಹೆಚ್ಚಿನ ದಟ್ಟಣೆಯ ಸ್ಥಳಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿವೆ. ಗದ್ದಲದ ಅಥವಾ ವ್ಯಾಪಾರ ಹೆಚ್ಚಿರುವ ಜಾಗಗಳಲ್ಲಿ ಪಾವತಿ ದೃಢೀಕರಣ ಗಳನ್ನು ಮ್ಯಾನುಯಲ್‌ ಆಗಿ ಪರಿಶೀಲಿಸುವುದು ಅಷ್ಟೊಂದು ಸುಲಭವಲ್ಲ.

"ಫಿನ್‌ಟೆಕ್ ಪರಿಹಾರಗಳು ನಮ್ಮ ವ್ಯವಹಾರದ ಹಣಕಾಸನ್ನು ನಿರ್ವಹಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿವೆ. ನಾವು ಏಳು ವರ್ಷಗಳಿಗೂ ಹೆಚ್ಚು ಕಾಲ ಫೋನ್‌ಪೇ ಜೊತೆಗಿದ್ದೇವೆ ಮತ್ತು ಅವರ ಸ್ಮಾರ್ಟ್‌ಸ್ಪೀಕರ್‌ಗಳು ರಿಯಲ್‌-ಟೈಮ್‌ ಪಾವತಿ ದೃಢೀಕರಣಗಳನ್ನು ಪಡೆಯುವಲ್ಲಿ ಉತ್ತಮವಾಗಿ ಸಹಾಯ ಮಾಡಿವೆ" ಎಂದು ಮೈಸೂರಿನ ಸಿಂಧೂರ್ ಸಿಲ್ಕ್ಸ್‌ನ ಮಾಲೀಕರಾದ ದಿವ್ಯಾನ್ ಹೇಳುತ್ತಾರೆ. "ನಾನು ಸ್ಟೋರ್‌ನಲ್ಲಿ ಇಲ್ಲದಿರುವಾಗ ಇದು ತುಂಬ ಸಹಾಯಕವಾಗಿದೆ. ಇದು ನನಗೆ ಇತರ ಪ್ರಮುಖ ಕಾರ್ಯಗಳತ್ತ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಏಕೆಂದರೆ ನನ್ನ ತಂಡವು ವಹಿವಾಟುಗಳನ್ನು ದೃಢೀಕರಿಸಲು ನನಗೆ ಕರೆ ಮಾಡುವ ಅಗತ್ಯವಿಲ್ಲ. ಎಲ್ಲವೂ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ."

ಸ್ಥಳೀಯತೆಯ ಅಂಶವನ್ನು ಸೇರಿಸುವ ಮೂಲಕ, ಫೋನ್‌ಪೇ ಸ್ಮಾರ್ಟ್‌ಸ್ಪೀಕರ್‌ಗಳು ಅಮಿತಾಬ್ ಬಚ್ಚನ್, ಮಮ್ಮುಟ್ಟಿ, ಕಿಚ್ಚ ಸುದೀಪ್ ಮತ್ತು ಮಹೇಶ್ ಬಾಬು ಅವರಂತಹ ಜನಪ್ರಿಯ ಸೆಲೆಬ್ರಿಟಿ ಗಳ ಧ್ವನಿಯಲ್ಲಿ ಆಡಿಯೊ ದೃಢೀಕರಣಗಳನ್ನು ಒದಗಿಸುತ್ತವೆ - ಈ ವೈಶಿಷ್ಟ್ಯವು ಗ್ರಾಹಕರೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಿಸುತ್ತದೆ.

ಫೋನ್‌ಪೇ ಬಳಸಿ ಪಾವತಿಗಳನ್ನು ಡಿಜಿಟಲೀಕರಣಗೊಳಿಸುವುದು ಸುಲಭ

ಡಿಜಿಟಲ್ ವ್ಯವಹಾರಗಳಿಗೆ ಬದಲಾಗುವುದು ಕಷ್ಟಕರವಲ್ಲ. ನೀವು ಕಿರಾಣಿ ಅಂಗಡಿ, ರೇಷ್ಮೆ ನೇಯ್ಗೆ ಘಟಕ, ಶ್ರೀಗಂಧದ ಕರಕುಶಲ ವ್ಯವಹಾರ ಅಥವಾ ಟೈಲರಿಂಗ್ ಶಾಪ್‌ ಸೇರಿದಂತೆ ಯಾವುದೇ ವ್ಯವಹಾರವನ್ನು ನಡೆಸುತ್ತಿದ್ದರೂ ಡಿಜಿಟಲ್ ಪಾವತಿಗಳಿಗೆ ಬದಲಾಯಿಸುವುದು ಸುಗಮ ಮತ್ತು ಅನುಕೂಲಕರವಾಗಿದೆ.

QR ಕೋಡ್ ಬಳಕೆಯನ್ನು ಪ್ರಾರಂಭಿಸುವುದು ಸರಳ. ಇದು ಉಚಿತ, ಹೊಂದಿಸಲು ಸುಲಭ ಮತ್ತು ತಕ್ಷಣವೇ ಬಳಸಲು ಸಿದ್ಧವಾಗುತ್ತದೆ. ಹೆಚ್ಚು ಜನನಿಬಿಡ ಸ್ಟೋರ್‌ಗಳಿಗೆ ಅಥವಾ ವೇಗದ ಸೇವೆಯ ಅಗತ್ಯವಿರುವವರಿಗೆ, ಸ್ಮಾರ್ಟ್‌ಸ್ಪೀಕರ್ ಅನ್ನು ನಿಯೋಜಿಸುವುದರಿಂದ ಪಾವತಿಗಳನ್ನು ಮ್ಯಾನು ಯಲ್‌ ಆಗಿ ಪರಿಶೀಲಿಸುವ ಅಗತ್ಯವನ್ನು ನಿವಾರಿಸುತ್ತದೆ. ನಿಮ್ಮ ಗ್ರಾಹಕರು ಕಾರ್ಡ್‌ಗಳು ಅಥವಾ ಕಾಂಟ್ಯಾಕ್ಟ್‌ಲೆಸ್‌ ಪಾವತಿಗಳನ್ನು ಬಯಸಿದರೆ, ಫೋನ್‌ಪೇ POS ಸಾಧನವು ಯಾವುದೇ ಹೆಚ್ಚುವರಿ ತೊಂದರೆಯಿಲ್ಲದೆ ಆ ಅನುಕೂಲವನ್ನು ನೀಡುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ನಿಯಂತ್ರಣ, ಉತ್ತಮ ಸ್ಪಷ್ಟತೆ ಮತ್ತು ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ಹೆಚ್ಚಿನ ವಿಶ್ವಾಸ ವನ್ನು ಒದಗಿಸಲು ಈ ಎಲ್ಲ ಸಾಧನಗಳನ್ನು ನಿರ್ಮಿಸಲಾಗಿದೆ.

ಕರ್ನಾಟಕದ ಚಿಲ್ಲರೆ ವ್ಯಾಪಾರ ವಲಯವು ವಿಸ್ತರಿಸುತ್ತಿದ್ದಂತೆ, ಇಂದು ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳುವ ವ್ಯವಹಾರಗಳು ಬದುಕುಳಿಯಲು ಮಾತ್ರವಲ್ಲದೆ, ಹೆಚ್ಚು ಸಂಪರ್ಕಿತ ಮತ್ತು ಗ್ರಾಹಕ-ಕೇಂದ್ರಿತ ಆರ್ಥಿಕತೆಯಲ್ಲಿ ಯಶಸ್ವಿಯಾಗಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿವೆ.