ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಸ್ಟ್ರೈಕರ್ ನ ಹೊಸ ಕೇಂದ್ರ : ಭಾರತದಲ್ಲಿ ತನ್ನ ಆರ್ ಅಂಡ್ ಡಿ ಹೆಜ್ಜೆಗುರುತು ವಿಸ್ತರಣೆ

ಡಿಜಿಟಲ್ ಮತ್ತು ಎಐ ತಂತ್ರಜ್ಞಾನಗಳ ಮೇಲೆ ಹೆಚ್ಚು ಗಮನ ಹರಿಸುವುದರೊಂದಿಗೆ ನಮ್ಮ ಹೊಸ ಅತ್ಯಾಧುನಿಕ ಕೇಂದ್ರವು ಉನ್ನತ ಪ್ರತಿಭೆಯನ್ನು ಆಕರ್ಷಿಸಲು, ಶ್ರೇಷ್ಠತೆಯನ್ನು ಪೋಷಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಮುನ್ನಡೆಸಲು ವಿನ್ಯಾಸಗೊಳಿಸಲಾಗಿದೆ- ಇವೆಲ್ಲವೂ ಸಹ ಆರೋಗ್ಯರೈಕೆ ಯನ್ನು ಉತ್ತಮಗೊಳಿಸುವ ನಮ್ಮ ಧ್ಯೇಯವನ್ನು ಎತ್ತಿ ಹಿಡಿಯುತ್ತದೆ.”

ಭಾರತದಲ್ಲಿ ತನ್ನ ಆರ್ ಅಂಡ್ ಡಿ ಹೆಜ್ಜೆಗುರುತು ವಿಸ್ತರಣೆ

-

Ashok Nayak Ashok Nayak Sep 21, 2025 8:42 PM

ಬೆಂಗಳೂರು: ವೈದ್ಯಕೀಯ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕನಾಗಿರುವ ಸ್ಟ್ರೈಕರ್ (NYSE: SYK), ಇಂದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ತನ್ನ ಹೊಸ ಕೇಂದ್ರವನ್ನು ಆರಂಭಿಸುವು ದರೊಂದಿಗೆ ಭಾರತದಲ್ಲಿ ತನ್ನ ಆರ್ ಅಂಡ್ ಡಿ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸುವ ಪ್ರಕಟಣೆ ಯನ್ನು ಮಾಡಿದೆ. ಪ್ರಸ್ತುತ ಗುರ್ಗಾಂವ್ ನಲ್ಲಿ ೨೨೦,೦೦೦ ಚದರ ಅಡಿಯ ಆರ್ ಅಂಡ್ ಡಿ ಆವರಣವನ್ನು ಹೊಂದಿದೆ, ಮತ್ತು ಹೊಸದಾಗಿ ಆರಂಭವಾಗಲಿರುವ ಕೇಂದ್ರವು ೧೪೦,೦೦೦ ಚದರ ಅಡಿ ಹೊಂದಿದ್ದು ಇದು ದೇಶದಲ್ಲಿನ ಸ್ಟ್ರೈಕರ್ ನ ಹೆಜ್ಜೆಗುರುತನ್ನು ಮತ್ತಷ್ಟು ಬಲಪಡಿಸುವ ವಿಶ್ವಾಸವನ್ನು ಹೊಂದಿದೆ.

ಈ ಹೊಸ ಅತ್ಯಾಧುನಿಕ ಕೇಂದ್ರವು ವಿವಿಧ ಕಾರ್ಯಾಚರಣಾ ತಂಡಗಳನ್ನು ಮತ್ತು ಉದ್ಯಮ ಮಂಚೂಣಿ ಲ್ಯಾಬ್ ಮೂಲಸೌಕರ್ಯವನ್ನು ಒಂದುಗೂಡಿಸುತ್ತದೆ. ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ(ಎಐ), ಡಿಜಿಟಲ್ ನಾವಿನ್ಯತೆ ಮತ್ತು ಉತ್ಪನ್ನ ಭದ್ರತೆಯಲ್ಲಿ ಮುಂದಿನ ಪೀಳಿಗೆಯ ಸಾಮರ್ಥ್ಯಗಳನ್ನು ವಿಶಿಷ್ಟವಾಗಿ ಸೇರಿಸುತ್ತದೆ.

ಇದನ್ನೂ ಓದಿ: Hari Paraak Column: ಕೊಲೆ ಒಳ್ಳೆಯದು ?!

ಈ ನವೀನ ಕೇಂದ್ರಕ್ಕೆ ಮತ್ತಷ್ಟು ಮೆರಗು ಎಂಬಂತೆ, ಒಂದು ವೈದ್ಯಕೀಯ ಅನುಭವ ಕೇಂದ್ರವು ಆರೋಗ್ಯಾರೈಕೆ ವೃತ್ತಿಪರರೊಂದಿಗಿನ ಸಂಬಂಧಗಳನ್ನು ಮತ್ತಷ್ಟು ಆಳವಾಗಿಸುತ್ತದ. ಈ ಮೂಲಕ ಐಸಿಯು ಬೆಡ್ಸ್, ಸ್ಟ್ರೆಚರ್ಸ್, ಆಂಬುಲೆನ್ಸ್ ಕಾಟ್ ಗಳು ಮತ್ತು ಆಸ್ಪತ್ರೆ ಹಾಗೂ ಸಾರ್ವಜನಿಕ ಪ್ರವೇಶವಿರುವ ಎಇಡಿಗಳನ್ನು(ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ಸ್) ಒಳಗೊಂಡಂತೆ ರೋಗಿ ಆರೈಕೆಯಲ್ಲಿ ಸುಧಾರಣೆ ತರುತ್ತದೆ ಮತ್ತು ಜೀವಗಳನ್ನು ರಕ್ಷಿಸಲು ಸಹಾಯ ಮಾಡುವ ಪರಿಹಾರ ಗಳನ್ನು ಒದಗಿಸುತ್ತದೆ.

ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸ್ಟ್ರೈಕರ್ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ನ ಉಪಾಧ್ಯಕ್ಷರಾದ ರಾಮ್ ರಂಗರಾಜನ್ ಅವರು, “ಜಗತ್ತಿನಾದ್ಯಂತದ ನಮ್ಮ ಗ್ರಾಹಕರು ಮತ್ತು ರೋಗಿಗಳ ಅಗತ್ಯತೆಗಳನ್ನು ಪರಿಹರಿಸುವುದಕ್ಕಾಗಿ ನಾವು ನಾವಿನ್ಯತೆ ಸಾಧಿಸಲು, ಪಾಲುದಾರಿಕೆ ಮಾಡಲು ಮತ್ತು ಪರಿಹಾರಗಳನ್ನು ಒದಗಿಸಲು ನಮ್ಮ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದೇವೆ- ಒಂದು ಉದ್ದೇಶದೊಂದಿಗೆ ಬೆಳೆಯುತ್ತಿದ್ದೇವೆ. ಈ ಸುಧಾರಿತ ಲ್ಯಾಬ್ ಗಳು ಆರೋಗ್ಯ ಕ್ಷೇತ್ರದ ವೃತ್ತಿಪರರೊಂದಿಗೆ ಕೆಲಸ ಮಾಡಲು, ಅತ್ಯಮೂಲ್ಯ ಅವಲೋಕನಗಳನ್ನು ತಿಳಿಯಲು ಮತ್ತು ನಾವೀನ್ಯತೆಯನ್ನು ಚುರುಕುಗೊಳಿಸುವ ಅವಕಾಶ ನೀಡುತ್ತದೆ.

ಡಿಜಿಟಲ್ ಮತ್ತು ಎಐ ತಂತ್ರಜ್ಞಾನಗಳ ಮೇಲೆ ಹೆಚ್ಚು ಗಮನ ಹರಿಸುವುದರೊಂದಿಗೆ ನಮ್ಮ ಹೊಸ ಅತ್ಯಾಧುನಿಕ ಕೇಂದ್ರವು ಉನ್ನತ ಪ್ರತಿಭೆಯನ್ನು ಆಕರ್ಷಿಸಲು, ಶ್ರೇಷ್ಠತೆಯನ್ನು ಪೋಷಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಮುನ್ನಡೆಸಲು ವಿನ್ಯಾಸಗೊಳಿಸಲಾಗಿದೆ- ಇವೆಲ್ಲವೂ ಸಹ ಆರೋಗ್ಯರೈಕೆಯನ್ನು ಉತ್ತಮಗೊಳಿಸುವ ನಮ್ಮ ಧ್ಯೇಯವನ್ನು ಎತ್ತಿ ಹಿಡಿಯುತ್ತದೆ.” ಎಂದರು.

ಬೆಂಗಳೂರಿನಲ್ಲಿ ಹೊಸ ಕೇಂದ್ರದ ಆರಂಭವು ಸ್ಟ್ರೈಕರ್ ನ ಪ್ರಸ್ತುತ ಉಪಸ್ಥಿತಿಯನ್ನು ಆಧರಿಸಿದ್ದು, ಇದು ಸಂಶೋಧನಾ ಉತ್ಕೃಷ್ಟತೆ, ವೈದ್ಯಕೀಯ ತಂತ್ರಜ್ಞಾನ ನಾವಿನ್ಯತೆ ಮತ್ತು ಉನ್ನತ ಪ್ರತಿಭೆಯ ಭಾರತದ ವೈವಿಧ್ಯಮಯ ಪರಿಸರವ್ಯವಸ್ಥೆಯ ಕಡೆಗಿನ ಮುಂದುವರೆದ ಬದ್ಧತೆಯನ್ನು ಪ್ರದರ್ಶಿಸು ತ್ತದೆ.