ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World One Family Mission: ಸದ್ಗುರು ಶ್ರೀ ಮಧುಸೂದನ್ ಸಾಯಿ ನೇತೃತ್ವದ ‘ಒಂದು ಜಗತ್ತು ಒಂದು ಕುಟುಂಬ' ವತಿಯಿಂದ ನವರಾತ್ರಿ ಉತ್ಸವ

ವಿಶ್ವದ 100 ದೇಶಗಳಲ್ಲಿ ಸಕ್ರಿಯವಾಗಿರುವ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಸೇವಾ ಅಭಿಯಾನ' (ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್) ವತಿಯಿಂದ ಉಚಿತ ಪೋಷಣೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಲಕ್ಷಾಂತರ ಜನರಿಗೆ ನೀಡಲಾಗುತ್ತಿದೆ. ಇದೀಗ ಕರ್ನಾಟಕದ ಮುದ್ದೇನ ಹಳ್ಳಿಯಲ್ಲಿರುವ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ಹೆಗ್ಗುರುತಾಗಿ ಆಯೋಜಿಸುತ್ತಿದೆ.

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ

-

Profile Pushpa Kumari Sep 21, 2025 9:38 PM

ಬೆಂಗಳೂರು: ವಿಶ್ವದ 100 ದೇಶಗಳಲ್ಲಿ ಸಕ್ರಿಯವಾಗಿರುವ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಸೇವಾ ಅಭಿಯಾನ' (ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್) (One World One Family Mission) ವತಿಯಿಂದ ಉಚಿತ ಪೋಷಣೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಲಕ್ಷಾಂತರ ಜನರಿಗೆ ಸಲ್ಲಿಸಲಾಗುತ್ತಿದೆ. ಇದೀಗ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ಹೆಗ್ಗುರುತಾಗಿ ಆಯೋಜಿಸುತ್ತಿದೆ. ಈ ವರ್ಷದ ನವರಾತ್ರಿ ಆಚರಣೆಗಳು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿವೆ. ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಂಭ್ರಮದ ಸಂದರ್ಭದಲ್ಲಿಯೇ ನವರಾತ್ರಿ ಉತ್ಸವವೂ ನಡೆಯುತ್ತಿರುವುದು ವಿಶೇಷ

ಈ ಆಚರಣೆಯ ಮುಖ್ಯ ಭಾಗವಾಗಿ ‘ಅತಿರುದ್ರ ಮಹಾಯಜ್ಞ’ ನಡೆಯಲಿದೆ. ಶೃಂಗೇರಿ ಮಠದ 108 ಪುರೋಹಿತರು ಹನ್ನೊಂದು ದಿನಗಳ ಕಾಲ ಈ ಆಚರಣೆಯನ್ನು ನಡೆಸಿಕೊಡಲಿದ್ದಾರೆ. ಇದರ ಜತೆಯಲ್ಲಿ ನವರಾತ್ರಿ ಹೋಮವು ಸ್ತ್ರೀರೂಪದ ದೈವಿಕ ಶಕ್ತಿಯನ್ನು ಒಂಬತ್ತು ರೂಪಗಳಲ್ಲಿ ಪೂಜಿಸಲಿದ್ದು, ಇದೇ ವೇಳೆ ಬಂಗಾಳದ ಸಾಂಪ್ರದಾಯಿಕ ದುರ್ಗಾ ಪೂಜೆಯನ್ನು ಸಹ ನಡೆಸಲಾಗುತ್ತದೆ.

ಸತ್ಯ ಸಾಯಿ ಗ್ರಾಮದ ನವರಾತ್ರಿ ಸಂಭ್ರಮದಲ್ಲಿ ವೇದ ಗುರುಕುಲಂನ ವಿದ್ಯಾರ್ಥಿಗಳು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಪ್ರತಿ ಸಂಜೆಯೂ ಭಾರತದ ಕೆಲವು ಪ್ರಸಿದ್ಧ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಸಂಭ್ರಮಗಳು ಆಚರಣೆಗಳಿಗೆ ಜೀವ ತುಂಬಲಿವೆ. ಕರ್ನಾಟಕದ ಸಾಂಸ್ಕೃತಿಕ ಜಗತ್ತು ಗೌರವದಿಂದ ಗುರುತಿಸುವ ಅರುಣಾ ಸಾಯಿರಾಂ ಅವರಿಂದ ಭಕ್ತಿಗೀತೆಗಳು, ಸಿತಾರ್ ಮಾಂತ್ರಿಕ ಪಂಡಿತ್ ನೀಲಾದ್ರಿ ಕುಮಾರ್ ಅವರ ಭಾವಪೂರ್ಣ ಪ್ರಸ್ತುತಿ ಮತ್ತು ಖ್ಯಾತ ನೃತ್ಯಪಟುಗಳಾದ ತನುಶ್ರೀ ಶಂಕರ್, ಡಾ. ಸೋನಾಲ್ ಮಾನ್ಸಿಂಗ್ ಮತ್ತು ಡಾ. ಪದ್ಮಾ ಸುಬ್ರಹ್ಮಣ್ಯಂ ಮತ್ತಿತರರ ಕಲಾ ಪ್ರದರ್ಶನವು ಪ್ರೇಕ್ಷಕರ ಮನಸಿಗೆ ಮುದ ನೀಡಲಿದೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರೊಂದಿಗೆ ವಿದುಷಿ ಅರುಣಾ ಸಾಯಿರಾಮ್, ಖ್ಯಾತ ಕರ್ನಾಟಕ ಸಂಗೀತ ವಿದುಷಿ, ಪದ್ಮಶ್ರೀ ಪುರಸ್ಕೃತ ಅರುಣಾ ಸಾಯಿರಾಮ್ ಹಾಡಲಿದ್ದಾರೆ. ಕರ್ನಾಟಕ ಸಂಗೀತ ವಿದುಷಿಯರಾದ ರಂಜನಿ ಮತ್ತು ಗಾಯತ್ರಿ ಅವರು ನವರಾತ್ರಿ ಮಹೋತ್ಸವದಲ್ಲಿ ಹಾಡಲಿದ್ದಾರೆ. ಅದರ ಜತೆ ಸತ್ಯ ಸಾಯಿ ಗ್ರಾಮದ ಅತಿರುದ್ರ ಮಹಾಯಾಗ ಮತ್ತು ನವರಾತ್ರಿ ಉತ್ಸವದಲ್ಲಿ ಸಿತಾರ್ ಮಾಂತ್ರಿಕ ಪಂಡಿತ್ ನೀಲಾದ್ರಿ ಕುಮಾರ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಏಕೈಕ ಉದ್ದೇಶದಿಂದ ಸತ್ಯ ಸಾಯಿ ಗ್ರಾಮದಲ್ಲಿ 11 ದಿನಗಳ ಕಾಲ ಅತಿರುದ್ರ ಮಹಾಯಾಗ ನಡೆಯಲಿದೆ. ಅತಿ ರುದ್ರ ಮಹಾಯಾಗದಲ್ಲಿ ಧಾರ್ಮಿಕ ವಿಧಿಯನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ನೆರವೇರಿಸಲಿದ್ದಾರೆ. ನವರಾತ್ರಿ ಉತ್ಸವದಲ್ಲಿ ವೈಭವದಿಂದ ದೇವಿಯ ಆರಾಧನೆ ನಡೆಯಲಿದೆ. ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನಾ ಪೂಜೆಯೂ ಐದು ದಿನಗಳ ಕಾಲ ನಡೆಯಲಿದೆ. ಶಿವ ಮತ್ತು ಶಕ್ತಿ ದೇವತೆಗೆ ಸಮರ್ಪಿತವಾದ ಉಮಾ ಮಹೇಶ್ವರ ದೇವಾಲಯವು ಪ್ರಾರ್ಥನೆ ಮತ್ತು ಭಕ್ತರ ಆತ್ಮಾವಲೋಕನಕ್ಕೆ ಹೊಸದೊಂದು ಪವಿತ್ರ ಸ್ಥಳವನ್ನು ಒದಗಿಸಲಿದೆ.

ಇದನ್ನು ಓದಿ:Vastu Tips: ಪೂಜೆ ವೇಳೆ ಗಂಟೆ ಬಾರಿಸುವುದರಿಂದ ಏನು ಪ್ರಯೋಜನ?

ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, "ನನ್ನ ಪೂಜ್ಯ ಗುರುಗಳಾದ ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದೇವೆ. ನಿಸ್ವಾರ್ಥ ಸೇವೆಯಿಲ್ಲದೆ ಆಧ್ಯಾತ್ಮಿಕತೆಯು ಅಪೂರ್ಣ ಎಂದು ಈ ನವರಾತ್ರಿ ಆಚರಣೆಗಳು ನಮಗೆ ನೆನಪಿಸುತ್ತದೆ. ಸಾಂಸ್ಕೃತಿಕ ವೈವಿಧ್ಯವನ್ನು ಮಾನವೀಯತೆಯ ಶಕ್ತಿಯಾಗಿ ಸಂಭ್ರಮಿಸಲಾಗುತ್ತದೆ” ಎಂದು ಹೇಳಿದರು.

‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ವು ಆಗಸ್ಟ್ 16ರಂದು ಆರಂಭ ವಾಯಿತು. ಈ ಕಾರ್ಯಕ್ರಮಗಳು 2025ರ ನವೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಇದೊಂದು ಜಾಗತಿಕ ಕಾರ್ಯಕ್ರಮವಾಗಿದ್ದು, ಪ್ರತಿ ದಿನವೂ ವಿಭಿನ್ನ ಸದಸ್ಯ ದೇಶಗಳ ಕಲಾವಿದರು ತಮ್ಮ ರಾಷ್ಟ್ರಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತಾರೆ. ಈ ಆಚರಣೆಯು 2025ರ ನವೆಂಬರ್‌ನಲ್ಲಿ ವಿಶ್ವದ ಅತಿದೊಡ್ಡ ಉಚಿತ ಖಾಸಗಿ ಗ್ರಾಮೀಣ ಆಸ್ಪತ್ರೆಯ ಉದ್ಘಾಟನೆಯೊಂದಿಗೆ ಸಂಪನ್ನಗೊಳ್ಳಲಿದೆ.