#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Swapna Mantapa Movie: 2 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಬರಗೂರು ರಾಮಚಂದ್ರಪ್ಪ ಅವರ ‘ಸ್ವಪ್ನ ಮಂಟಪʼ ಚಿತ್ರ ಆಯ್ಕೆ

Swapna Mantapa Movie: ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ಸ್ವಪ್ನಮಂಟಪʼ ಕನ್ನಡ ಚಿತ್ರವು ಈಗ ಎರಡು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ದೆಹಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ಚಿಕಾಗೊ ಚಿತ್ರೋತ್ಸವಗಳ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದ್ದು, ಚಿಕಾಗೊ ಚಿತ್ರೋತ್ಸವದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತವನ್ನು ತಲುಪಿದೆ. ಈ ಕುರಿತ ವಿವರ ಇಲ್ಲಿದೆ.

Swapna Mantapa Movie: 2 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಬರಗೂರು ರಾಮಚಂದ್ರಪ್ಪ ಅವರ ‘ಸ್ವಪ್ನ ಮಂಟಪʼ ಚಿತ್ರ ಆಯ್ಕೆ

ಸ್ವಪ್ನ ಮಂಟಪ ಚಿತ್ರ

Profile Siddalinga Swamy Jan 24, 2025 11:02 PM

ಬೆಂಗಳೂರು, ಜ.24, 2025: ಎ.ಎಂ.ಬಾಬು ಅವರು ಮಲೈ ಮಹದೇಶ್ವರ ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿ, ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ಸ್ವಪ್ನಮಂಟಪʼ ಕನ್ನಡ ಚಿತ್ರವು (Swapna mantapa Movie) ಈಗ ಎರಡು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ದೆಹಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ಚಿಕಾಗೊ ಚಿತ್ರೋತ್ಸವಗಳ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದ್ದು, ಚಿಕಾಗೊ ಚಿತ್ರೋತ್ಸವದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತವನ್ನು ತಲುಪಿದೆ.

ʼಸ್ವಪ್ನಮಂಟಪʼ ಚಿತ್ರವು ಅದೇ ಹೆಸರಿನ ಬರಗೂರರ ಕಾದಂಬರಿಯನ್ನು ಆಧರಿಸಿದ ಸಿನಿಮಾವಾಗಿದೆ. ಬರಗೂರರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ.

ನಾಡಿನ ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆಯ ಅಗತ್ಯವನ್ನು ಮನಗಾಣಿಸುವ ಕಥಾವಸ್ತುವನ್ನು ‘ಸ್ವಪ್ನಮಂಟಪʼ ಚಿತ್ರವು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ‘ಸ್ವಪ್ನಮಂಟಪʼ ವನ್ನು ನಿರ್ಮಾಣ ಮಾಡಿರುತ್ತಾನೆ. ಈ ಚಾರಿತ್ರಿಕ ಮಂಟಪವನ್ನು ಕೆಡವಿ ಹಾಕುವ ಪ್ರಯತ್ನಕ್ಕೆ ಚಿತ್ರದ ನಾಯಕ-ನಾಯಕಿ ತಡೆಯೊಡ್ಡುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.

ಈ ಸುದ್ದಿಯನ್ನೂ ಓದಿ | Bhuvaneshwari Statue: ಬೆಳಗಾವಿ ಶಕ್ತಿಸೌಧದಲ್ಲಿ ಜ.27ಕ್ಕೆ ಕನ್ನಡಾಂಬೆ ಭುವನೇಶ್ವರಿ ಕಂಚಿನ‌ ಪ್ರತಿಮೆ ಅನಾವರಣ: ಶಿವರಾಜ್ ತಂಗಡಗಿ

ಕಥಾನಾಯಕರಾಗಿ ವಿಜಯ ರಾಘವೇಂದ್ರ ಮತ್ತು ನಾಯಕಿಯಾಗಿ ರಂಜನಿ ರಾಘವನ್ ಇಬ್ಬರೂ ದ್ವಿಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಗಣದಲ್ಲಿ ಸುಂದರರಾಜ್, ರಜನಿ, ಶೋಭಾ ರಾಘವೇಂದ್ರ, ರಾಜಪ್ಪ ದಳವಾಯಿ, ಸುಂದರರಾ ಅರಸು, ಮಹಾಲಕ್ಷ್ಮೀ, ಅಂಬರೀಶ್ ಸಾರಂಗಿ, ವೆಂಕಟರಾಜು, ಶಿವಲಿಂಗ ಪ್ರಸಾದ್ ಮುಂತಾದವರು ಇದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ ಇರುವ ಈ ಚಿತ್ರದ ಸಹನಿರ್ದೇಶಕರು ನಟ್ರಾಜ್ ಶಿವು ಮತ್ತು ಪ್ರವೀಣ್.