ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಹಿಳಾ ಸಾಧಕಿಯರಿಗೆ ತಾನಿಷ್ಕ್ ಮಿಯಾ ಮತ್ತು ಓರಿಯನ್ ವೆಂಪವರ್‌ನಿಂದ ‘ರೆಡ್ ದಿವಸ್ ಪ್ರಶಸ್ತಿ 2026’

ವಿಶ್ವ ಮಹಿಳಾ ದಿನದಂದು 93.5 ರೆಡ್‌ ಎಫ್‌ಎಂ ನೇತೃತ್ವದಲ್ಲಿ ಮಿಯಾ ಬೈ ತಾನಿಷ್ಕ್ ಮತ್ತು ಓರಿಯನ್ ವೆಂಪವರ್ ಸಮಾಜದ ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ರೆಡ್ ದಿವಸ್ ಪ್ರಶಸ್ತಿ 2026 ಅನ್ನು ನೀಡಿ ಗೌರವಿಸಲಿದೆ. ಮಾ..8ರಂದು ರಾಜಾಜಿನಗರದ ಓರಿಯನ್ ಮಾಲ್‌ನಲ್ಲಿ ಈ ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಚಿತ್ರನಟಿ ಹರಿಪ್ರಿಯಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ

ಮಹಿಳಾ ಸಾಧಕಿಯರಿಗೆ ‘ರೆಡ್ ದಿವಸ್ ಪ್ರಶಸ್ತಿ 2026’

-

Ashok Nayak
Ashok Nayak Mar 6, 2026 5:14 PM

ಬೆಂಗಳೂರು: ವಿಶ್ವ ಮಹಿಳಾ ದಿನದಂದು 93.5 ರೆಡ್‌ ಎಫ್‌ಎಂ ನೇತೃತ್ವದಲ್ಲಿ ಮಿಯಾ ಬೈ ತಾನಿಷ್ಕ್ ಮತ್ತು ಓರಿಯನ್ ವೆಂಪವರ್ ಸಮಾಜದ ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ರೆಡ್ ದಿವಸ್ ಪ್ರಶಸ್ತಿ 2026 ಅನ್ನು ನೀಡಿ ಗೌರವಿಸಲಿದೆ. ಮಾ..8ರಂದು ರಾಜಾಜಿನಗರದ ಓರಿಯನ್ ಮಾಲ್‌ನಲ್ಲಿ ಈ ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಚಿತ್ರನಟಿ ಹರಿಪ್ರಿಯಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Karnataka Budget 2026: ಕಾರವಾರಕ್ಕೆ ಹೈಟೆಕ್ ಸ್ಪರ್ಶ: ಕೊನೆಗೂ ಈಡೇರಿತು 'ಸೂಪರ್ ಸ್ಪೆಷಾಲಿಟಿ' ಕನಸು

‘ವ್ಯಾಪಾರ, ಸಾಮಾಜಿಕ ಪ್ರಭಾವ, ಕ್ರೀಡೆ, ಮನರಂಜನೆ, ತಂತ್ರಜ್ಞಾನ, ಉದ್ಯಮಶೀಲತೆ ಸೇರಿದಂತೆ ವಿವಿಧ ಕ್ಷೇತ್ರಗಳ 40ಕ್ಕೂ ಅಧಿಕ ಅಸಾಧಾರಣ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಿದ್ದೇವೆ.

93.5 ರೆಡ್‌ ಎಫ್‌ಎಂ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ’ ಎಂದು ಕೆಎಎಲ್‌ ರೇಡಿಯೋ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ. ಶಿವ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.