ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಪಘಾತಕ್ಕೀಡಾದ ವಾಹನ ವಿಮೆ ಪಡೆದಿದ್ದ ವಿಮಾ ಕಂಪನಿಯನ್ನು ಹೊಣೆಗಾರನ್ನಾಗಿ ಮಾಡಲಾಗುವುದಿಲ್ಲ

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ, ಸರಕು ಸಾಗಾಣೆ ವಾಹನಕ್ಕೆ ವಿಮೆ ನೀಡಿದ್ದ ದಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಬೆಂಗಳೂರು : ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಳ್ಳುವುದು ಹಾಗೂ ಮೃತಪಟ್ಟ ಸಂದರ್ಭದಲ್ಲಿ ಆ ವಾಹನದ ಮಾಲೀಕರು ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ತಿಳಿಸಿರುವ ಹೈಕೋರ್ಟ್, ಅಪಘಾತಕ್ಕೀಡಾದ ವಾಹನ ವಿಮೆ ಪಡೆದಿದ್ದ ವಿಮಾ ಕಂಪನಿಯನ್ನು ಹೊಣೆಗಾರನ್ನಾಗಿ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ, ಸರಕು ಸಾಗಾಣೆ ವಾಹನಕ್ಕೆ ವಿಮೆ ನೀಡಿದ್ದ ದಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಇದನ್ನೂ ಓದಿ: Shishir Hegde Column: ಇಲ್ಲಿ ಶೇ.98 ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಗೆ ಬರುವುದೇ ಇಲ್ಲ!

ಅಲ್ಲದೇ, ಪ್ರಕರಣದಲ್ಲಿ ಪರಿಹಾರಕ್ಕೆ ಅರ್ಹವಾಗಿರುವ ವ್ಯಕ್ತಿ ಚುನಾವಣಾ ಕರ್ತವ್ಯವನ್ನು ಮುಗಿಸಿ ಕೊಂಡು ತಮ್ಮ ಊರಿಗೆ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುತ್ತಿದ್ದಾನೆ. ಟೆಂಪೋದಲ್ಲಿ ಸಾಗಿಸುತ್ತಿದ್ದ ಸರಕುಗಳಿಗೆ ಗಾಯಗೊಂಡ ವ್ಯಕ್ತಿ ಮಾಲೀಕರಾಗಿರಲಿಲ್ಲ. ಹೀಗಾಗಿ, ಮೋಟಾರು ವಾಹನ ಕಾಯಿದೆ ಸೆಕ್ಷನ್ 147ರ ಅಡಿ ಸರಕು ಸಾಗಾಣೆ ವಾಹನದಲ್ಲಿ ಪ್ರಯಾಣಿಸುವ ಅನಪೇಕ್ಷಿತ ಪ್ರಯಾಣಿಕರಿಗೆ ಸಾವು ಇಲ್ಲವೇ ಗಾಯವಾದಲ್ಲಿ ವಿಮಾ ಕಂಪೆನಿ ಪರಿಹಾರ ಪಾವತಿಸಲು ಹೊಣೆಗಾರರಾಗುವುದಿಲ್ಲ ಎಂದು ತಿಳಿಸಿದೆ. ಆದರೆ, ಘಟನೆಗೆ ಎರಡೂ ವಾಹನಗಳ ವಿಮಾದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಹೊಣೆಗಾರರಾಗಿದ್ದಾರೆ ಎಂದು ನ್ಯಾಯಾಧಿಕರಣ ತೀರ್ಪು ನೀಡಿರುವುದು ತಪ್ಪಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಗಾಯಗೊಂಡಿರುವ ವ್ಯಕ್ತಿಯ ವಿರುದ್ದದ ಎರಡೂ ವಾಹನಗಳ ಚಾಲಕರ ಸಮಾನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಎರಡೂ ಚಾಲಕರ ಸಮಾನ ನಿರ್ಲಕ್ಷ್ಯದಿಂದ ಅಪಘಾತ ಉಂಟಾದಲ್ಲಿ ಸಂತ್ರಸ್ಥ ಸಮಾನ ಪರಿಹಾರ ಪಡೆಯಲು ಅರ್ಹನಾಗಿದ್ದಾರೆ. ಆದ್ದರಿಂದ ನ್ಯಾಯಾಧಿಕರಣದ ಆದೇಶವನ್ನು ಮಾರ್ಪಾಡು ಮಾಡುತ್ತಿದ್ದು, ಅಪಘಾದಲ್ಲಿ ಭಾಗಿಯಾಗಿರುವ ಬಸ್ ಮಾಲೀಕ, ಬಸ್​​ನ ವಿಮಾದಾರ ಕಂಪನಿ ಒಟ್ಟಾಗಿ ಶೇ.50 ರಷ್ಟು ಪರಿಹಾರ ಮತ್ತು ಸರಕು ಸಾಗಣೆ ಟೆಂಪೋ ಮಾಲೀಕ ಶೇ. 50 ರಷ್ಟು ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಆದ್ದರಿಂದ, ಮೇಲ್ಮನವಿ ಸಲ್ಲಿಸಿರುವ ವಿಮಾ ಕಂಪನಿ ಎತ್ತಿರುವ ಪ್ರಶ್ನೆ ಸಮರ್ಥವಾಗಿದ್ದು, ಸರಕು ಸಾಗಣೆ ವಾಹನದ ಮಾಲೀಕರು ಪರಿಹಾರ ನೀಡಲು ಹೊಣೆಗಾರರಾಗಿದ್ದಾರೆ. ಆದ್ದರಿಂದ ಮೇಲ್ಮನವಿದಾರ ವಿಮಾ ಕಂಪನಿ ಪರಿಹಾರ ಪಾವತಿಯಿಂದ ಮುಕ್ತರಾಗಲು ಅರ್ಹವಾಗಿದೆ ಎಂದು ಆದೇಶಿಸಿದೆ.