Shishir Hegde Column: ಇಲ್ಲಿ ಶೇ.98 ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಗೆ ಬರುವುದೇ ಇಲ್ಲ!
ವ್ಯವಸ್ಥೆ ನಿಂತಿರುವುದೇ ನಂಬಿಕೆಯ ಮೇಲೆ. ನಂಬಿಕೆಯ ಜತೆ ವ್ಯವಸ್ಥೆ ಅಲುಗಾಡಿದ್ದು ಈ ಕಾರಣಕ್ಕೆ. ಆಗ ನನಗೆ ‘ಇಂಥದ್ದೊಂದು ಘಟನೆ ಅಮೆರಿಕದಲ್ಲಿ ನಡೆದದ್ದಾಗಿದ್ದರೆ ಅವನು ದೇಶ ಬಿಟ್ಟು ಹೋಗಲು ಸಾಧ್ಯವೇ ಇರಲಿಲ್ಲ’ ಎಂದೆಲ್ಲ ಹೋಲಿಸಿ ಬೇಸರವೆನಿಸಿತ್ತು. ಏಕೆಂದರೆ ಇಂಥದ್ದನ್ನೇ ಹೋಲುವ ಕೆಲವು ಘಟನೆಗಳು ಇಲ್ಲಿಯೂ ನಡೆದಿದ್ದವು. ಆದರೆ ಯಾರೊಬ್ಬರೂ ದೇಶ ಬಿಟ್ಟು ಓಡಿಹೋಗಲು ಸಾಧ್ಯವಾಗ ಲಿಲ್ಲ.


ಶಿಶಿರಕಾಲ
shishirh@gmail.com
(ಅಮೆರಿಕ ಕಾನೂನು ವ್ಯವಸ್ಥೆ ಭಾಗ -1)
ಎಲ್ಲಿ ಕಾನೂನಿನ ಶಿಕ್ಷೆಯ ಪ್ರಮಾಣ ಹೆಚ್ಚೋ ಅಲ್ಲ ಈ ‘ಮನವಿ-ಚೌಕಾಶಿ’ ಅದ್ಭುತವಾಗಿ ಕೆಲಸ ಮಾಡುತ್ತದೆ. ಇಲ್ಲಿ ತಪ್ಪೊಪ್ಪಿಕೊಂಡರೆ ಶಿಕ್ಷೆಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅದು ಅಪರಾಧಿಗೆ. ಇತ್ತ ಕೋರ್ಟ್, ವಕೀಲರ ಸಮಯ, ಸಂತ್ರಸ್ತರು ಕೋರ್ಟಿಗೆ ಅಲೆಯುವ ಪರಮೋಚ್ಚ ವೇದನೆ ಅವೆಲ್ಲವೂ ತಪ್ಪುತ್ತದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಅಪರಾಧಕ್ಕೆ ಅತಿ ವೇಗದಲ್ಲಿ ಶಿಕ್ಷೆ ನಿರ್ಧಾರವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಅಮೆರಿಕದ ಶೇ.90-98 ಕ್ರಿಮಿನಲ್ ಮೊಕದ್ದಮೆ ಗಳು ಅತ್ಯಂತ ಬೇಗ, ವಾದ-ಪ್ರತಿವಾದವಿಲ್ಲದೆ ನ್ಯಾಯ ಸಂದಾಯದಲ್ಲಿ ಮುಕ್ತಾಯವಾಗುತ್ತದೆ.
ರಾಜಕೀಯ, ಸಿನಿಮಾ ಇತ್ಯಾದಿ ಜನಬೆಂಬಲ, ಅಧಿಕಾರ ಶಕ್ತಿ ಮತ್ತು ಮುಕಳಹರಿ (ಅಜೀರ್ಣ ವಾಗುವಷ್ಟು) ಹಣ- ಈ ಸಂಯೋಗ ಎಲ್ಲಿರುತ್ತದೆಯೋ ಅಲ್ಲಿ ಉಳಿದ ಅಪಸವ್ಯಗಳ ಜತೆಗೆ ಹೆಣ್ಣು ಬಾಕತನವೂ ಜಾಸ್ತಿ. ಎಲ್ಲರೂ ಹಾಗಲ್ಲ, ಕೆಲವರೇ ಹಾಗೆ ಎಂದೇ ನಮ್ಮ ಸಮಾಧಾನಕ್ಕೆ ನಂಬೋಣ. ಆದರೆ ರಾಜಕೀಯ ಮಹಾದರಿದ್ರ, ಕೊಚ್ಚೆ ಎನ್ನುವ ಭಾವನೆಯೇ ಸಾರ್ವತ್ರಿಕವಾಗಿರುವಾಗ ಪ್ರಜ್ವಲ್ ರೇವಣ್ಣ ಕೇಸ್ ಎಲ್ಲ ವರ್ಗ-ಪ್ರಭೇದದವರಲ್ಲಿಯೂ ಇಡೀ ವ್ಯವಸ್ಥೆಯೆಡೆಗೆ ವಾಕರಿಕೆ ಹುಟ್ಟಿಸಿದ್ದು ಸುಳ್ಳಲ್ಲ.
ಚುನಾವಣೆ ಆಗಷ್ಟೇ ಮುಗಿದಿತ್ತು. ಇಷ್ಟೊಂದು ದೊಡ್ಡ ದೇಶ, ಇಂಥದ್ದೊಂದು ಚುನಾವಣೆಯನ್ನು ಇಷ್ಟು ವ್ಯವಸ್ಥಿತವಾಗಿ ಮಾಡುತ್ತದೆಯಲ್ಲ ಎಂದು ಹೆಮ್ಮೆ ಪಡಲೂ ಜಾಸ್ತಿ ಅವಕಾಶ ಸಿಗಲಿಲ್ಲ. ವಿಷಯ ಹೊರಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ದೇಶಬಿಟ್ಟು ಓಡಿ ಹೋಗಿ ಜರ್ಮನಿಯಲ್ಲಿ ಕೂತಿದ್ದ, ಇತ್ತ ಆತ ದೇಶ ಬಿಡುವುದರೊಳಗೇ ಜನಸಾಮಾನ್ಯರ ಮೊಬೈಲ್‌ಗಳಲ್ಲಿ ವಿಡಿಯೋ ಹರಿದಾಡುತ್ತಿತ್ತು. ಅದು ಸಿನಿಮಾದಲ್ಲಿನ ನಟನೆಯ ಅತ್ಯಾಚಾರವಾಗಿರಲಿಲ್ಲ.
ನೋಡಿದ ಎಂಥವರಿಗೂ ಅದರ ಅಸಲಿಯತ್ತಿನ ಬಗ್ಗೆ ಅನುಮಾನ ಹೆಚ್ಚಿರಲಿಲ್ಲ. ಅದಾಗಿಯೂ ಡಿಪ್ಲೊಮ್ಯಾಟ್ ಪಾಸ್‌ಪೋರ್ಟ್ ಬಳಸಿ ದೇಶ ಬಿಟ್ಟು ಓಡಿ ಹೋಗುವುದು ಎಂದರೆ! ಅದೇನು ಎಕ್ಸ್‌ಪ್ರೆಸ್ ಬಸ್ ಹತ್ತಿ ಕುಂದಾಪುರದಿಂದ ಉಡುಪಿಗೆ ಹೋದಂತಲ್ಲವಲ್ಲ!!
ಇದನ್ನೂ ಓದಿ: Shishir Hegde Column: ಬಿಂಜ್ ಟ್ಯೂಬ್ ಡಿಸಾರ್ಡರ್: ಯೂಟ್ಯೂಬ್ ಎಂಬ ಸಸ್ತಾ ನಶೆ
ತಡೆಯಬೇಕೆಂದರೆ ಅದಕ್ಕೆಲ್ಲ ಪ್ರೊಸೀಜರ್ ಇರುತ್ತವೆ, ಹಾಗೆಲ್ಲ ಏಕಾಏಕಿ ಯಾರದೋ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಲಿಕ್ಕೆ ಆಗುವುದಿಲ್ಲ ಎನ್ನುವುದು ಗೊತ್ತಿದ್ದೂ ಅಲ್ಲಿ ಎಲ್ಲೋ ಒಂದಿಷ್ಟು ವಿಳಂಬವಾಗಿದೆ ಎಂದೆನಿಸಿದ್ದು ನಿಜ. ಯಾರೋ, ‘ಚುನಾವಣೆ ಮುಗಿಯಲಿ ನಿಲ್ಲಿ’ ಎಂದಂತೆ. ಅದರಲ್ಲೂ ಇತ್ತೀಚೆಗೆ ದೇಶಬಿಟ್ಟು ಓಡಿಹೋಗುವ ಕೆಲ ಘಟನೆಗಳಾದಾಗಿನಿಂದ ಹಣ ಮತ್ತು ಬಲವಿದ್ದರೆ ಏನು ಬೇಕಾದರೂ ಮಾಡಬಹುದೇ? ಎನ್ನುವ ಪ್ರಶ್ನೆ ಅಂದು ಜನಸಾಮಾನ್ಯ ರಲ್ಲಿ ಮೂಡಿತ್ತು.
ವ್ಯವಸ್ಥೆ ನಿಂತಿರುವುದೇ ನಂಬಿಕೆಯ ಮೇಲೆ. ನಂಬಿಕೆಯ ಜತೆ ವ್ಯವಸ್ಥೆ ಅಲುಗಾಡಿದ್ದು ಈ ಕಾರಣಕ್ಕೆ. ಆಗ ನನಗೆ ‘ಇಂಥದ್ದೊಂದು ಘಟನೆ ಅಮೆರಿಕದಲ್ಲಿ ನಡೆದದ್ದಾಗಿದ್ದರೆ ಅವನು ದೇಶ ಬಿಟ್ಟು ಹೋಗಲು ಸಾಧ್ಯವೇ ಇರಲಿಲ್ಲ’ ಎಂದೆಲ್ಲ ಹೋಲಿಸಿ ಬೇಸರವೆನಿಸಿತ್ತು. ಏಕೆಂದರೆ ಇಂಥದ್ದನ್ನೇ ಹೋಲುವ ಕೆಲವು ಘಟನೆಗಳು ಇಲ್ಲಿಯೂ ನಡೆದಿದ್ದವು. ಆದರೆ ಯಾರೊಬ್ಬರೂ ದೇಶ ಬಿಟ್ಟು ಓಡಿಹೋಗಲು ಸಾಧ್ಯವಾಗಲಿಲ್ಲ.
ಇನ್ನೊಂದೇನೆಂದರೆ ವಿಷಯ ಸಾರ್ವಜನಿಕರಿಗೆ ತಿಳಿಯುವುದಕ್ಕಿಂತ ಮೊದಲೇ ಬಂಧನವಾಗಿತ್ತು. ವ್ಯವಸ್ಥೆಯ ಮೇಲೆ ಬೇಸತ್ತುಹೋಗುವಂಥ ಘಟನೆಗಳು ಕೆಲವೊಮ್ಮೆ ನಡೆದಾಗ, ‘ಅಕೆ ಹೀಗೆ, ಇಕೆ ಹಾಗೆ?’ ಎಂದು ಎರಡೂ ಕಡೆ ಹೋಲಿಸಿ ನೋಡುವುದು ಮೇಲು ಕೀಳಿನ ವಿಷಯವಲ್ಲ, ಅದು ಸಹಜ. ಈಗ ಎಲ್ಲ ಮುಗಿದಿದೆ.
ಜನಪ್ರತಿನಿಧಿಗಳ ಕೋರ್ಟು ಪ್ರಜ್ವಲ್ ಅಪರಾಧಿಯೆಂದು ಶಿಕ್ಷೆ ವಿಧಿಸಿ ಆಗಿದೆ. ಇಷ್ಟು ವೇಗದ ನ್ಯಾಯ ಸಾಧ್ಯ ಎಂದು ನಾನಂತೂ ಊಹಿಸಿಯೇ ಇರಲಿಲ್ಲ. ಅಂದು ಕೆಲವರು ಮೀಡಿಯಾ ಟ್ರಯಲ್ ಅನ್ನು ಖಂಡಿಸಿದರು. ಆದರೆ ಮಾಧ್ಯಮಗಳು ಪ್ರತಿಯೊಬ್ಬರಲ್ಲಿ ವ್ಯವಸ್ಥೆಯೆಡೆಗೆ ಹುಟ್ಟಿದ ಭ್ರಮನಿರಸನಕ್ಕೆ ಕನ್ನಡಿ ಹಿಡಿದಂತೆ ವ್ಯವಹರಿಸಿದವು.
ಅದೆಲ್ಲದಕ್ಕಿಂತ ಈಗ ಅನ್ಯಾಯವೊಂದಕ್ಕೆ ನಮ್ಮ ವ್ಯವಸ್ಥೆಯಲ್ಲಿ ಇಷ್ಟು ಬೇಗ ಶಿಕ್ಷೆಯ ತೀರ್ಪಾ ಯಿತಲ್ಲ. ಇದು ಇಡೀ ವ್ಯವಸ್ಥೆಯ ಮೇಲೆ ಒಂದಿಷ್ಟು ಹೊಸ ನಂಬಿಕೆಗಳನ್ನು ಹುಟ್ಟು ಹಾಕಿದೆ. ಇಡೀ ಘಟನೆಯಲ್ಲಿ ವ್ಯವಸ್ಥೆ ಗೆದ್ದಿದೆ. ಅಂದು ಬೇಸರಿಸಿಕೊಂಡವರಿಗೆಲ್ಲ ಈ ತೀರ್ಪು ಕೊಟ್ಟ ಸಮಾಧಾನ ಸ್ವಲ್ಪ ಕಾಲ ಉಳಿಯಲಿದೆ.
ಪ್ರಜ್ವಲ್ ರೇವಣ್ಣ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಲು ಕೇಳಿಕೊಳ್ಳುವಾಗ ಆಡಿದ ಕೆಲವು ಮಾತುಗಳು ಪತ್ರಿಕೆಯಲ್ಲಿ ವರದಿಯಾಗಿದ್ದನ್ನು ಓದುತ್ತಿದ್ದೆ. ‘ನಾನು ನನ್ನ ತಂದೆ-ತಾಯಿಯನ್ನು ಆರು ತಿಂಗಳಿಂದ ನೋಡಿಲ್ಲ, ಇದು ಚುನಾವಣೆಯ ಸಮಯದಲ್ಲಿ ಆದ ರಾಜಕೀಯ ಪ್ರೇರಿತ ಘಟನೆ’ ಇತ್ಯಾದಿ.
ಯಥಾವತ್ defendant's statement ಬಹಿರಂಗವಾದಂತಿಲ್ಲ. ಅಪರಾಧಿ ತಪ್ಪೊಪ್ಪಿ ಕೊಂಡಿದ್ದಾನೆ ಎಂಬ ವಿವರಣೆ ಎಲ್ಲಿಯೂ ಸಿಗಲಿಲ್ಲ. ಇರಲಿ- ತಪ್ಪಿಗೆ ಶಿಕ್ಷೆಯಾಯಿತಲ್ಲ. ಒಟ್ಟಾರೆ ಇಡೀ ಘಟನೆ ಯಲ್ಲಿ ಅಪರಾಧದಿಂದ ಸಂತ್ರಸ್ತರಿಗೆ ಆದ ಕಷ್ಟ-ನಷ್ಟ ಏನು ಎನ್ನುವುದು ಖಾಸಗಿ ವಾಹಿನಿ ಯಿಂದಾಗಿ ಅಲ್ಪ ಸ್ವಲ್ಪ ತಿಳಿದದ್ದು ಬಿಟ್ಟರೆ ಉಳಿದದ್ದೆಲ್ಲ ಊಹೆ ಮಾತ್ರ. ಈ ವಿಚಾರದಲ್ಲಿ ಅಮೆರಿಕದ ಕಾನೂನು ವ್ಯವಸ್ಥೆಯಂದು ಪದ್ಧತಿಯಿದೆ.
ಆರೋಪಿಯೊಬ್ಬನ ಅಪರಾಧ ಸಾಬೀತಾದ ನಂತರ ಮತ್ತು ನ್ಯಾಯಾಧೀಶರು ಶಿಕ್ಷೆಯನ್ನು ಘೋಷಿಸುವುದಕ್ಕಿಂತ ಮೊದಲು ಇದೊಂದು ಕೋರ್ಟ್ ಪ್ರಕ್ರಿಯೆ ನಡೆಯುತ್ತದೆ. ಅದು qಜ್ಚಿಠಿಜಿಞ ಜಿಞmZಠಿ oಠಿZಠಿಛಿಞಛ್ಞಿಠಿ. ಯಾರಿಗೆ ಹಾನಿಯಾಗಿರುತ್ತದೆಯೋ ಆ ಹಾನಿಯ ವಿವರವನ್ನು ಹೇಳಿಕೊಳ್ಳಲು ಸಂತ್ರಸ್ತರಿಗೆ ಈ ಹಂತದಲ್ಲಿ ಅವಕಾಶ ಸಿಗುತ್ತದೆ. ಅತ್ಯಾಚಾರದ ಸಂತ್ರಸ್ತೆ, ಮಕ್ಕಳನ್ನು ಅಪರಾಧದಿಂದಾಗಿ ಕಳೆದುಕೊಂಡ ತಂದೆ-ತಾಯಂದಿರು, ಸಂಬಂಧಿಕರು ಇತ್ಯಾದಿ ನ್ಯಾಯಾಲಯದ ಎದುರು ತಮಗಾದ ಹಾನಿಯನ್ನು ಭಾವನೆಗಳ ಸಹಿತ ಹಂಚಿಕೊಳ್ಳುತ್ತಾರೆ.
ಸಂತ್ರಸ್ತರು ಅಪರಾಧಿಯ ಕುಕೃತ್ಯದಿಂದ ಆದ ಹಾನಿ, ನಷ್ಟವನ್ನು ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಾರೆ- ‘ನೀನೊಬ್ಬ ರಾಕ್ಷಸ, ನೀನು ಬದುಕಲೇ ಅನರ್ಹ, ಈ ಭೂಮಿಯಲ್ಲಿ ನಿನ್ನಂಥವರು ಹುಟ್ಟಲೇಬಾರದಿತ್ತು’ ಇತ್ಯಾದಿ. ಅದನ್ನು ಅಪರಾಧಿ, ವಕೀಲರು, ನ್ಯಾಯಾಧೀಶರು ಎಲ್ಲರೂ ಕೇಳಿಸಿಕೊಳ್ಳುತ್ತಾರೆ.
ತೀರಾ ಹೈ ಪ್ರೊಫೈಲ್ ಅಪರಾಧಗಳಾಗಿದ್ದಲ್ಲಿ ಇದನ್ನು ಲೈವ್ ಬಿತ್ತರಿಸಲಾಗುತ್ತದೆ. ಇದರಿಂದ ಇಡೀ ಜಗತ್ತಿಗೆ ಅಪರಾಧದಿಂದಾದ ಹಾನಿ, ನಷ್ಟ, ಕಷ್ಟ ಇವೆಲ್ಲದರ ಅರಿವಾಗುತ್ತದೆ. ಇದನ್ನು ಸಂತ್ರಸ್ತರು ಮೌಖಿಕವಾಗಿ ಬೇಕಾದರೂ ಕೊಡಬಹುದು ಇಲ್ಲ ಲಿಖಿತ ರೂಪದಲ್ಲಿ. ಸಾಮಾನ್ಯವಾಗಿ ಶೇ. 70 ರಷ್ಟು ಕ್ರಿಮಿನಲ್ ಮೊಕದ್ದಮೆಯಲ್ಲಿ ಇದು ಮೌಖಿಕವಾಗಿಯೇ ನಡೆಯುತ್ತದೆ.
ಕೆಲವು ತೀರಾ ಗಮನ ಸೆಳೆದ ಮೊಕದ್ದಮೆಗಳಲ್ಲಿ ಸಂತ್ರಸ್ತರ ಮಾತುಗಳು ವೈರಲ್ ಆಗುತ್ತವೆ, ಅದನ್ನು ಕೋಟ್ಯಂತರ ಜನರು ನೋಡುತ್ತಾರೆ. ಅಷ್ಟೇ ಅಲ್ಲ- ಅಪರಾಧಿ ಪ್ರಭಾವಿಯಾಗಿದ್ದರೆ ಇಡೀ ಸಮಾಜಕ್ಕೆ ವ್ಯವಸ್ಥೆಯ ಲೋಪ ಕೂಡ ಇಲ್ಲಿ ಬಹಿರಂಗವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಹೀಗೆ ತಿಳಿಯುವುದು ಮುಖ್ಯ- ಏಕೆಂದರೆ ಕಾನೂನುಗಳು ಬದಲಾಗುವುದು ಅದೇ ಜನರ ಪ್ರತಿನಿಧಿಗಳಿಂದ ಅಲ್ಲವೇ? ಒಟ್ಟಾರೆ ಶೋಷಿತರು ತಮಗಾದ ಮಾನಸಿಕ, ದೈಹಿಕ, ಸಾಮಾಜಿಕ ಹೀಗೆ ಎಲ್ಲ ಹಾನಿ ಯನ್ನು ಅಪರಾಧಿಯ ಮುಖದ ಮುಂದೆ ಹೇಳಿ ಹಗುರಾಗುತ್ತಾರೆ.
‘ನನ್ನ ಬದುಕನ್ನು ಹೀಗೆ ಮಾಡಿದ್ದಕ್ಕೆ ಇನ್ನುಮುಂದೆ ನಿನ್ನ ಬದುಕು ಹಾಗೆ’ ಎಂದು ಕ್ಯಾಕರಿಸಿ ಉಗಿಯುತ್ತಾರೆ. ಇದೆಲ್ಲವನ್ನೂ ಕೇಳಿಯೇ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಘೋಷಿಸು ವುದು. ಅಮೆರಿಕದ ಕಾನೂನು ವ್ಯವಸ್ಥೆಯಲ್ಲಿ ಇನ್ನೊಂದು ಗಮನಿಸಲೇಬೇಕಾದ ವಿಷಯವಿದೆ. ಏನೆಂದರೆ ಇಲ್ಲಿ ಶೇ.90-98ರಷ್ಟು ಕ್ರಿಮಿನಲ್ ಮೊಕದ್ದಮೆಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತಕ್ಕೆ ಬರುವುದೇ ಇಲ್ಲ.
ವಿಚಾರಣೆ, ವಾದ- ಪ್ರತಿವಾದ, ಆರೋಪಿಯನ್ನು ಅಪರಾಧಿಯೆಂದು ಸಿದ್ಧಮಾ ಡುವ ಪ್ರಕ್ರಿಯೆ ಬಹಳ ಅಪರೂಪ. ಹಾಗಾದರೆ ಏನು ಕಥೆ? ಎಲ್ಲಿಯೇ ಇರಲಿ, ಆರೋಪಿಯ ಮುಂದಿರುವ ಆಯ್ಕೆಗಳು ಎರಡು. ಮೊದಲನೆಯದು- ನಾನು ತಪ್ಪಿತಸ್ಥನಲ್ಲ ಎಂದು ಕೇಸ್ ಮುಂದುವರಿಸು ವುದು.
ಎರಡನೆಯದು, ಅಪರಾಧಿ ಎಂದು ತಪ್ಪೊಪ್ಪಿಕೊಳ್ಳುವುದು. ಅಮೆರಿಕದಲ್ಲಿ ಶೇ.90-98 ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡುಬಿಡುತ್ತಾರೆ. ಅವೆಲ್ಲ ಮೊಕದ್ದಮೆಗಳು ಇತ್ಯರ್ಥವಾಗುವುದು plea bargaining ಮೂಲಕ. Plea ಎಂದರೆ ಮನವಿ, bargain ಎಂದರೆ ಚೌಕಾಶಿ. ಅಪರಾಧಿ ತಾನು ಮಾಡಿದ್ದು ತಪ್ಪು, ನಾನು ವಾದಿಸುವುದಿಲ್ಲ. ಬದಲಿಗೆ ತಪ್ಪೊಪ್ಪಿ ಕೊಂಡುಬಿಡುತ್ತೇನೆ. ಅದರ ಬದಲಿಗೆ ನನ್ನ ಶಿಕ್ಷೆ ತಗ್ಗಿಸಬೇಕು ಎಂದು ಪ್ರಾಸಿಕ್ಯೂಟರ್ ಜತೆ ನಡೆಸುವ ಚೌಕಾಶಿಯೇ plea bargaining.
ಅಪರಾಧಿ ಪ್ರತಿವಾದ ಮಾಡದೆ, ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡರೆ ಕೇಸ್ ಪ್ರಕ್ರಿಯೆ ಬೇಗ ಮುಗಿಯುತ್ತದೆ, ನ್ಯಾಯಾಲಯ, ವಕೀಲರ ಸಮಯ ವ್ಯರ್ಥವಾಗುವುದಿಲ್ಲ ಇತ್ಯಾದಿ. ಒಟ್ಟಾರೆ ಶೀಘ್ರನ್ಯಾಯ. ಆದರೆ ಇಷ್ಟು ಪ್ರಮಾಣದಲ್ಲಿ ತಪ್ಪೊಪ್ಪಿಗೆ ನಡೆಯುವುದು ಹೇಗೆ? ಎರಡೂ ಕಡೆ ಯವರಿಗೆ ಇದರಿಂದ ಲಾಭವಿದ್ದರೆ ಮಾತ್ರ ಸಾಧ್ಯವಲ್ಲವೇ? ಈ ಚೌಕಾಶಿ ಮಾತುಕತೆಗೆ ನ್ಯಾಯ ವ್ಯವಸ್ಥೆಯಲ್ಲಿ ಅವಕಾಶವಿದ್ದರೂ ಅದನ್ನು ಮೊದಲು ನ್ಯಾಯಾಲಯ ಒಪ್ಪಬೇಕು.
ಆರೋಪಿ ತಾನು ಅಪರಾಧಿ ಎಂದು ತಪ್ಪೊಪ್ಪಿಕೊಳ್ಳುವುದು ಈ ಚೌಕಾಶಿ ಪ್ರಕ್ರಿಯೆಯ ಮೊದಲ ಹಂತ. ಆಗ ನ್ಯಾಯಾಧೀಶರು ಆರೋಪಿಯನ್ನು ‘ನೀನು ಏನನ್ನು ಒಪ್ಪಿಕೊಳ್ಳುತ್ತಿರುವೆ ಎಂಬುದರ ಅರಿವಿದೆಯೇ?’ ಎಂದು ಪ್ರಶ್ನಿಸುತ್ತಾರೆ. ಇದು ಯಾರದೋ ಒತ್ತಾಯ, ಒತ್ತಡದ ಕಾರಣಕ್ಕೆ ಮಾಡಿ ಕೊಳ್ಳುವ ತಪ್ಪೊಪ್ಪಿಗೆ ಅಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.
ತಪ್ಪೊಪ್ಪಿಕೊಂಡ ನಂತರ ಅಪರಾಧಿ- ಹಾಗಾಗಿ ಮತ್ತೆ ತಾನು ನಿರಪರಾಧಿ ಎಂದು ಬಂದು ವರ್ಧಿಸಲು ಅವಕಾಶವಿರುವುದಿಲ್ಲ, ಇನ್ನೇನಿದ್ದರೂ ಶಿಕ್ಷೆ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಾರೆ. ಅದಾದ ಮೇಲೆಯೇ ಚೌಕಾಶಿ ಮಾತುಕತೆಗೆ ಕೋರ್ಟ್ ಅವಕಾಶ ನೀಡುತ್ತದೆ.
ಉದಾಹರಣೆಗೆ ಯಾರೋ ಒಬ್ಬ ಅಂಗಡಿಯಲ್ಲಿ ಏನನ್ನೋ ಕದ್ದು ಸಿಕ್ಕಿಹಾಕಿಕೊಂಡ ಎಂದಿಟ್ಟು ಕೊಳ್ಳಿ. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಅದು ಜೈಲು ಶಿಕ್ಷಾರ್ಹ ಅಪರಾಧ. ಶಿಕ್ಷೆಯ ಪ್ರಮಾಣದ ಅಂದಾಜಿಗೆ ಹೇಳುವುದಾದರೆ 300 ಡಾಲರ್- 25 ಸಾವಿರ ರುಪಾಯಿ ಮೌಲ್ಯದ ವಸ್ತುವನ್ನು ಕದ್ದರೆ ಅದಕ್ಕೆ ಶಿಕ್ಷೆ ಎರಡರಿಂದ ಆರು ವರ್ಷ. ಆದರೆ ತಪ್ಪೊಪ್ಪಿಕೊಂಡರೆ ಪ್ರಾಸಿಕ್ಯೂಟರ್ ಅಷ್ಟು ವರ್ಷದ ಬದಲಿಗೆ ಕೆಲವೇ ತಿಂಗಳಿನ ಶಿಕ್ಷೆ ಕೋಡಿ ಎಂದು ಕೋರ್ಟಿಗೆ ಮನವಿ ಮಾಡಿಕೊಳ್ಳುತ್ತಾರೆ.
ತಪ್ಪಿಕೊಂಡ ಕಾರಣಕ್ಕೆ ಕೋರ್ಟ್ ಕೂಡ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುತ್ತದೆ. ಅಲ್ಲದೆ ಈ ಚೌಕಾಶಿಯ ಅಪರಾಧಿ ಪರಿಹಾರ ಎಷ್ಟು ಕೊಡಬೇಕು ಎಂಬುದೆಲ್ಲ ಮಾತುಕತೆಯಾಗುತ್ತದೆ. ಆ ಚೌಕಾಶಿ ಕೋರ್ಟ್ ಹೊರಗಡೆ ನಡೆದರೂ- ನಡೆಯುವುದು ಕೋರ್ಟಿನ ದೇಖರೇಖಿಯಲ್ಲಿಯೇ. ಶೋಷಿತ ಮತ್ತು ಅಪರಾಧಿ ಪರ ವಕೀಲರುಗಳ ಮಧ್ಯೆ ಬೇಕಾಬಿಟ್ಟಿ ಚೌಕಾಶಿಗೆ ಅವಕಾಶವಿಲ್ಲ. ಚೌಕಾಶಿ ನ್ಯಾಯ ಒಪ್ಪುವ ರೀತಿ ಇರಬೇಕು. ಕೋರ್ಟ್ ಪರಿಶೀಲಿಸಿ ಒಪ್ಪಬೇಕು.
ಅಂತಿಮ ಶಿಕ್ಷೆಯ ನಿರ್ಧಾರವೇನಿದ್ದರೂ ನ್ಯಾಯಾಲಯದ್ದೇ. ತಪ್ಪೊಪ್ಪಿಕೊಂಡದ್ದಕ್ಕೆ ಶಿಕ್ಷೆಯ ಪ್ರಮಾಣ ತಗ್ಗಿಸುವುದು ವಾಡಿಕೆಯಾದರೂ ಅದು ಕಾನೂನಲ್ಲ. ಚೌಕಾಶಿ ನಂತರ ಪ್ರಾಸಿಕ್ಯೂಷನ್ ‘ಆರು ತಿಂಗಳು ಶಿಕ್ಷೆ ಕೊಡಿ’ ಎಂದು ಮನವಿ ಮಾಡಿದರೆ ಅದನ್ನು ಕೋರ್ಟ್ ‘ಇಲ್ಲ, ಈ ಅಪರಾಧಕ್ಕೆ ಅದು ಕಡಿಮೆಯಾಯಿತು’ ಎಂದು ವಾಪಸ್ ಕಳುಹಿಸಬಹುದು ಅಥವಾ ಇಂಥದ್ದೊಂದು ಚೌಕಾಶಿ ಒಪ್ಪಿಗೆಯನ್ನೇ ತಿರಸ್ಕರಿಸಬಹುದು.
ಆದರೆ ಸಾಮಾನ್ಯವಾಗಿ ತಪ್ಪೊಪ್ಪಿಕೊಂಡರೆ ಶಿಕ್ಷೆಯ ಪ್ರಮಾಣ ಗಣನೀಯ ತಗ್ಗಿಸಲು ಕೋರ್ಟ್ ಒಪ್ಪುತ್ತದೆ. ಎಲ್ಲಿ ಕಾನೂನಿನ ಶಿಕ್ಷೆಯ ಪ್ರಮಾಣ ಹೆಚ್ಚೋ ಅಲ್ಲ ಈ ಚೌಕಾಶಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಇಲ್ಲಿ ತಪ್ಪೊಪ್ಪಿಕೊಂಡರೆ ಶಿಕ್ಷೆಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅದು ಅಪರಾಧಿಗೆ. ಇತ್ತ ಕೋರ್ಟ್, ವಕೀಲರ ಸಮಯ, ಸಂತ್ರಸ್ತರು ಕೋರ್ಟಿಗೆ ಅಲೆಯುವ ಪರಮೋಚ್ಚ ವೇದನೆ ಅವೆಲ್ಲವೂ ತಪ್ಪುತ್ತದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಅಪರಾಧಕ್ಕೆ ಅತಿ ವೇಗದಲ್ಲಿ ಶಿಕ್ಷೆ ನಿರ್ಧಾರವಾಗುತ್ತದೆ.
ಈ ಎಲ್ಲ ಕಾರಣಗಳಿಂದಾಗಿ ಅಮೆರಿಕದ ಶೇ.90-98 ಕ್ರಿಮಿನಲ್ ಮೊಕದ್ದಮೆಗಳು ಅತ್ಯಂತ ಬೇಗ, ವಾದ-ಪ್ರತಿವಾದವಿಲ್ಲದೆ ನ್ಯಾಯಸಂದಾಯದಲ್ಲಿ ಮುಕ್ತಾಯವಾಗುತ್ತದೆ. ಎಲ್ಲಿ ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಹೆಚ್ಚಿನ ಅವಕಾಶವಿಲ್ಲವೋ ಅಲ್ಲಿ ಈ ‘ಮನವಿ-ಚೌಕಾಶಿ’ ವ್ಯವಸ್ಥೆ ಪರಿಣಾಮಕಾರಿ ಯಾಗಿ ನಡೆಯುತ್ತದೆ. ಸಿಕ್ಕಿಬಿದ್ದ ಅಪರಾಧಿಗೆ ಇನ್ನು ತನಗೆ ಉಳಿಗಾಲವಿಲ್ಲ, ಶಿಕ್ಷೆ ಇಂದಲ್ಲ ನಾಳೆ ಕಟ್ಟಿಟ್ಟ ಬುತ್ತಿ, ಹಾಗಾಗಿ ಶಿಕ್ಷೆ ತಗ್ಗಿಸಿಕೊಳ್ಳುವುದೇ ಲಾಭ ಎಂದೆನಿಸಬೇಕು.
ಅದಾಗದಿದ್ದಲ್ಲಿ ಈ ಇಡೀ ಚೌಕಾಶಿ ವ್ಯವಹಾರ ನಡೆಯುವುದಿಲ್ಲ. ಇದರಲ್ಲಿ 2-3 ಸಮಸ್ಯೆಗಳಿದೆ. ಕೆಲವೊಮ್ಮೆ ಅಪರಾಧ ಮಾಡದ- ನಿರಪರಾಧಿ ವ್ಯಕ್ತಿ ಆರೋಪಿಯಾದಲ್ಲಿ- ತನಗೆ ಶಿಕ್ಷೆಯಾಗಬಹುದು ಎಂಬ ಹೆದರಿಕೆಯಿಂದಲೇ ಚೌಕಾಶಿ ಮಾಡಿ ತಪ್ಪೊಪ್ಪಿಕೊಂಡುಬಿಡಬಹುದು. ಈ ಮೂಲಕ ನಿರಪರಾಧಿಗೆ ಶಿಕ್ಷೆಯಾಗಿಬಿಡಬಹುದು. ಅಲ್ಲದೆ ಕೋರ್ಟ್ ಟ್ರಯಲ್ ನಡೆದಾಗ ಅಪರಾಧಿಯ ಇನ್ನಷ್ಟು ಕುಕೃತ್ಯಗಳು, ಆ ವ್ಯಕ್ತಿಯ ಜತೆ ಬೇರೆ ಅಪರಾಧಿ-ಅಪರಾಧಗಳು ಹೊರಬರಬಹುದು.
ಈ ಚೌಕಾಶಿಯಿಂದ ಅದೆಲ್ಲವೂ ತಪ್ಪುತ್ತದೆ. ಈ ಚೌಕಾಶಿ ವ್ಯವಹಾರದಲ್ಲಿ ಎಲ್ಲವೂ ಬಹಿರಂಗ ವಾಗುವುದಿಲ್ಲ, ಕೆಲವೊಮ್ಮೆ ಇನ್ನಷ್ಟು ಅಪರಾಧಗಳು ಮುಚ್ಚಿ ಹೋಗುತ್ತವೆ. ಅದೆಲ್ಲ ಋಣಾತ್ಮಕ ಅಂಶಗಳಿರಬಹುದು. ಆದರೆ ಇದರಿಂದಾಗಿ ಅಪರಾಧಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಶೋಷಿತ ವ್ಯಕ್ತಿಗೆ ಬೇಗ ನ್ಯಾಯ ಸಿಗುತ್ತದೆ. ಕೋರ್ಟ್ ಸಮಯ ಉಳಿಯುತ್ತದೆ. ಅಂಥ ನ್ಯಾಯಕ್ಕೊಂದು ಬೆಲೆಯಿದೆ. ಅಲ್ಲದೆ ಇದೆಲ್ಲದರಿಂದ ಆ ಉಳಿದ ಶೇ. 2-10, ತಾನು ನಿರಪರಾಧಿ ಎನ್ನುವವರ ಕೇಸ್ ನಡೆಸಲು ನ್ಯಾಯಾಲಯಕ್ಕೆ ಸಾಕಷ್ಟು ಸಮಯ ಸಿಗುತ್ತದೆ.
ಭಾರತದಲ್ಲಿಯೂ ಇಂಥ ಚೌಕಾಶಿಗೆ ಕಾನೂನಿನಲ್ಲಿ 2005ರಲ್ಲಿ ಮಾಡಿದ ಕಾನೂನು ಬದಲಾವಣೆ ಯಿಂದಾಗಿ ಅವಕಾಶವಿದೆ. ಈ ಬದಲಾವಣೆಯನ್ನು ಭಾರತದಲ್ಲಿ ತಂದಿರುವುದೇ ಪ್ರಕರಣ ಗಳ ವೇಗ ಹೆಚ್ಚಿಸಲು. ಆದರೆ ಅದಕ್ಕೊಂದಿಷ್ಟು ನಿರ್ಬಂಧಗಳಿವೆ. ವ್ಯವಸ್ಥೆ ಇದೆಲ್ಲದಕ್ಕೆ ಇನ್ನೂ ಪೂರಕವಾಗ ಬೇಕಿದೆ.
(ಮುಂದುವರಿಯುತ್ತದೆ)