ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನಿಷ್ಠ ಸೇವಾವಧಿ ಪೂರ್ಣಗೊಳ್ಳುವ ಮುನ್ನ ವರ್ಗಾವಣೆಗೆ ಅವಕಾಶವಿಲ್ಲ

ಭಾಸ್ಕರ್ ಮೇ 11ರಂದು ಬ್ಯಾಡರ ಹಳ್ಳಿ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರಿಂದಲೇ ಒಂದು ವರ್ಷ ಅಲ್ಲಿಯೇ ಮುಂದುವರಿ ಯುವ ಪ್ರಶ್ನಾತೀತ ಹಕ್ಕು ಅವರಿಗೆ ದೊರೆಯುವುದಿಲ್ಲ. ಪೂರ್ವಾ ನುಮತಿ ಇಲ್ಲದಿರುವುದು ಸರಿಪಡಿಸಬಹುದಾದ ಲೋಪವಾಗಿದ್ದು, ವರ್ಗಾವಣೆ ಆದೇಶ ಅನೂರ್ಜಿತ ಗೊಳಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕನಿಷ್ಠ ಸೇವಾವಧಿ ಪೂರ್ಣಗೊಳ್ಳುವ ಮುನ್ನ ವರ್ಗಾವಣೆಗೆ ಅವಕಾಶವಿಲ್ಲ

-

Profile
Ashok Nayak Sep 14, 2026 8:55 AM

ಬೆಂಗಳೂರು: ಪೊಲೀಸ್ ಸಿಬ್ಬಂದಿ ಮಂಡಳಿಯ ಪೂರ್ವಾನುಮತಿ ಪಡೆಯದೇ ಮಾಡಿದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶದ ಬಳಿಕ ಮಂಡಳಿ ಅನುಮೋದನೆ ನೀಡಿದರೆ, ಪ್ರಕ್ರಿಯೆ ಯಲ್ಲಿನ ಲೋಪ ಇರುವುದಿಲ್ಲ ಎಂದು ಹೈಕೋರ್ಟ್(Karnataka High Court) ಅಭಿಪ್ರಾಯ ಪಟ್ಟಿದೆ.

ಕನಿಷ್ಠ ಸೇವಾವಧಿ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡಲಾಗಿದೆ ಎಂಬ ಕಾರಣಕ್ಕೆ ಮಾತ್ರ ಆದೇಶ ಕಾನೂನು ಬಾಹಿರವಾಗುವುದಿಲ್ಲ. ಸಕ್ಷಮ ಪ್ರಾಧಿಕಾರ ಅನುಮೋದಿಸಿದ್ದರೆ ಅಂತಹ ವರ್ಗಾವಣೆ ಮಾನ್ಯ ವಾಗಿರುತ್ತದೆ. ನಿಗದಿತ ಅವಧಿಗೂ ಮುನ್ನ ತಮ್ಮನ್ನು ವರ್ಗಾವಣೆ ಮಾಡಲಾ ಗಿದೆ ಎಂದು ಆಕ್ಷೇಪಿಸಿ ಪೊಲೀಸ್ ಇನ್ಸ್‌ಪೆಕ್ಟರ್ ಭಾಸ್ಕರ್ ಭಾಸ್ಕರ್ ಎಂಬುವರು ಸಲ್ಲಿಸಿದ್ದ ಅರ್ಜಿ ಯನ್ನು ಮಾನ್ಯ ಮಾಡಿದ್ದ ಕರ್ನಾಟಕ ಆಡಳಿ ತಾತ್ಮಕ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಗೋವಿಂದರಾಜು ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಎಚ್.ಶಾಂತಿಭೂಷಣ್ ಅವ ರಿದ್ದ ವಿಭಾಗೀಯಪೀಠ ಆದೇಶಿಸಿದೆ. ಅಲ್ಲದೇ, ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 20(ಬಿ) ಪ್ರಕಾರ ಡಿವೈಎಸ್‌ಪಿ ಮತ್ತು ಅದಕ್ಕಿಂತ ಕೆಳಗಿನ ಶ್ರೆಣಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಮತ್ತು ಬಡ್ತಿ ಸೇರಿ ಸೇವಾ ವಿಷಯಗಳನ್ನು ನಿರ್ಧರಿಸುವ ಅಧಿಕಾರ ಪೊಲೀಸ್ ಸಿಬ್ಬಂದಿ ಮಂಡಳಿಗಿದೆ. ಸೆಕ್ಷನ್ 20(ಎಫ್) ಎಕ್ಸಿಕ್ಯೂಟಿವ್ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಕನಿಷ್ಠ ಒಂದು ವರ್ಷದ ಸೇವಾವಧಿ ನಿಗದಿಪಡಿಸಿದರೂ, ನಿರ್ದಿಷ್ಟ ಸಂದರ್ಭಗಳಲ್ಲಿ ಅವಧಿಗೂ ಮುನ್ನ ವರ್ಗಾವಣೆಗೆ ಅವಕಾಶವಿರಲಿದೆ ಎಂದು ನ್ಯಾಯ ಪೀಠ ಹೇಳಿದೆ. ‌

ಇದನ್ನೂ ಓದಿ: Karnataka High court: ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಶ್ರೀಲಂಕಾ ಸುಪ್ರೀಂ ಕೋರ್ಟ್‌ ಜಡ್ಜ್!‌

ಭಾಸ್ಕರ್ ಮೇ 11ರಂದು ಬ್ಯಾಡರ ಹಳ್ಳಿ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರಿಂದಲೇ ಒಂದು ವರ್ಷ ಅಲ್ಲಿಯೇ ಮುಂದುವರಿ ಯುವ ಪ್ರಶ್ನಾತೀತ ಹಕ್ಕು ಅವರಿಗೆ ದೊರೆಯುವುದಿಲ್ಲ. ಪೂರ್ವಾನುಮತಿ ಇಲ್ಲದಿರುವುದು ಸರಿಪಡಿಸಬಹುದಾದ ಲೋಪವಾಗಿದ್ದು, ವರ್ಗಾವಣೆ ಆದೇಶ ಅನೂರ್ಜಿತಗೊಳಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮತ್ತು ನಿಯೋಜನೆ ನಿರ್ಧರಿಸುವ ಅಧಿಕಾರ ಪೊಲೀಸ್ ಸಿಬ್ಬಂದಿ ಮಂಡಳಿಗಿದೆ. ಆದ್ದರಿಂದ ನಂತರ ನೀಡಿರುವ ಅನುಮೋದನೆಯು ಅಧಿಕಾರ ವ್ಯಾಪ್ತಿ ಹೊಂದಿರದ ಸಂಸ್ಥೆಯಿಂದ ಬಂದ ಅನುಮೋದನೆಯಲ್ಲ ಎಂದು ತಿಳಿಸಿದ ಹೈಕೋರ್ಟ್, ವರ್ಗಾವಣೆ ಆದೇಶ ರದ್ದುಗೊಳಿಸಿದ್ದ ಕೆಎಟಿ ಆದೇಶ ಅನೂರ್ಜಿತಗೊಳಿಸಿದೆ. ‌

ಅರ್ಜಿದಾರರ ಪರ ವಕೀಲರು, ಮೇ 14ರ ಮಾರ್ಪಡಿಸಿದ ವರ್ಗಾವಣೆ ಆದೇಶವನ್ನು ಜೂನ್ 8ರಂದು ಪೊಲೀಸ್ ಸ್ಥಾಪನಾ ಮಂಡಳಿಯ ಮುಂದೆ ಇರಿಸಲಾಗಿದ್ದು, ಮಂಡಳಿ ಅದಕ್ಕೆ ಅನುಮೋದನೆ ನೀಡಿದೆ. ಇಂತಹ ನಂತರದ ಅನುಮೋದನೆ ಯನ್ನು ನಿರ್ಬಂಧಿಸುವ ಯಾವುದೇ ಶಾಸನಬದ್ಧ ನಿಯಮವಿಲ್ಲ. ಹೀಗಾಗಿ ಆದೇಶದಲ್ಲಿದ್ದ ಪ್ರಕ್ರಿಯಾತ್ಮಕ ಲೋಪ ಸರಿಯಾಗಿದೆ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಬಿ.ಗೋವಿಂದ ರಾಜು ಅವರನ್ನು 2026ರ ಮೇ 10ರ ಆದೇಶದಡಿ ವಿಧಾನಸೌಧ ಭದ್ರತಾ ವಿಭಾಗಕ್ಕೆ ವರ್ಗಾಯಿಸ ಲಾಗಿತ್ತು. ಅದೇ ಆದೇಶ ದಲ್ಲಿ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಬ್ಯಾಡರಹಳ್ಳಿ ಠಾಣೆ ಯ ಹೆಚ್ಚುವರಿ ಹೊಣೆ ಹೊಂದಿದ್ದ ಸಿ.ಭಾಸ್ಕರ್ ಅವರನ್ನು ಬ್ಯಾಡರಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಆಗಿ ನಿಯೋ ಜಿಸಲಾಗಿತ್ತು.

ಭಾಸ್ಕರ್ ಮೇ 11ರಂದು ಅಂದರೆ ಒಂದು ದಿನದ ಬಳಿಕ ಸಿಐಡಿಯಿಂದ ಬಿಡುಗಡೆ ಗೊಂಡು ಬ್ಯಾಡರಹಳ್ಳಿ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ಆದರೆ, ಮೇ 14ರಂದು ಹೊರಡಿಸಿದ ಮತ್ತೊಂದು ಆದೇಶದಲ್ಲಿ ಅವರನ್ನು ಬ್ಯಾಡರಹಳ್ಳಿಯಿಂದ ಕರ್ನಾಟಕ ಲೋಕಾ ಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಿ, ಅರ್ಜಿದಾರ ಗೋವಿಂ ದರಾಜು ಬ್ಯಾಡರಹಳ್ಳಿ ಠಾಣೆಗೆ ನಿಯೋಜಿಸಲಾಗಿತ್ತು. ಆದರೆ, ಅದೇ ದಿನ ಪುಲಿಕೇಶಿನಗರ ಠಾಣೆಯಿಂದ ಬಿಡುಗಡೆಗೊಂಡು ರಾತ್ರಿ ಬ್ಯಾಡರ ಹಳ್ಳಿ ಠಾಣೆಯಲ್ಲಿ ಹಾಜರಾಗಿದ್ದರು.