ಇಂದು ದೇಶದ ಮನೆಮನೆಗಳಲ್ಲಿ ಬೆಳಗಲಿದೆ ದೀಪ ವಿಕಸಿತ ಭಾರತಕ್ಕಾಗಿ ಸಂಕಲ್ಪ, ಸ್ವಚ್ಛತಾ ಅಭಿಯಾನ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ತಮ್ಮ 76ನೇ ಜನ್ಮದಿನ ಆಚರಿಸಿ ಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಬಿಜೆಪಿಯಿಂದ ಸೇವಾಸಂಕಲ್ಪ ಯೋಜನೆ ಗಳು ಮುಂದಿನ ಒಂದು ತಿಂಗಳ ಕಾಲ ನಡೆಯಲಿದೆ. ರಾಜ್ಯ ದಲ್ಲೂ ಜಿಲ್ಲೆ, ತಾಲೂಕು, ಬೂತ್ ಮಟ್ಟದಲ್ಲಿ ಸೇವಾ ಅಭಿಯಾನ ನಡೆಯಲಿದೆ. ಸೆ.17ರಂದು ‘ಆಶೀರ್ವಾದ ದೀಪ’ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ತಮ್ಮ ಮನೆ ಮುಂದೆ ದೀಪ ಬೆಳಗಿಸಿ, ವಿಕಸಿತ ಭಾರತ ಸಂಕಲ್ಪದ ಯಶಸ್ಸಿಗಾಗಿ ಪ್ರಾರ್ಥಿಸಬೇಕು ಎಂದು ರಾಜ್ಯ ಬಿಜೆಪಿ ವಿನಂತಿ ಮಾಡಿದೆ. ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಅಭಿಯಾನದ ಭಾಗವಾಗಿ ಶಾಲಾ ಮಕ್ಕಳಿಗೆ ವಿಕಸಿತ ಭಾರತ ಕುರಿತು ಚಿತ್ರಕಲೆ, ಭಾಷಣ ಸ್ಪರ್ಧೆ, ನಮೊ ಸೇವಾ ಗಾಥಾ, ಬೀದಿ ನಾಟಕ ಪ್ರದರ್ಶನ, ಅಂಗನ ವಾಡಿ ಉತ್ಸವ, ಸೇವಾ ಜ್ಯೋತಿ ಯಾತ್ರೆ, ಬೈಕ್ ರ್ಯಾಲಿ, ಸಸಿ ನೆಡುವುದು, ರಕ್ತದಾನ, ಜಲಮೂಲಗಳ ಸ್ವಚ್ಛತೆ, ಹ್ಯಾಕಥಾನ್ ಸೇರಿ ವಿವಿಧ ಕಾರ್ಯಕ್ರಮಗಳು ಒಂದು ತಿಂಗಳು ನಡೆಯಲಿವೆ.
ಇದನ್ನೂ ಓದಿ: Modi-Putin: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ; ವಿಷನ್ 2030 ಒಪ್ಪಂದಕ್ಕೆ ಸಹಿ
ಅವರು 25 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ದೇಶವನ್ನು ಮುನ್ನಡೆಸುವ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನವನ್ನು ವೀಕ್ಷಿಸಿ ಅವರು ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಸೂಚನೆಯಂತೆ ಸೆ.17ರಿಂದ ಅಕ್ಟೋಬರ್ 17ರವರೆಗೆ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಜನರಿಗೆ ಪರಿಚಯಿಸುವ ಹಾಗೂ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮ ಆಯೋಜಿಸ ಲಾಗುತ್ತಿದೆ.
ಅಭಿಯಾನದ ಅಂಗವಾಗಿ ಜಗನ್ನಾಥ ಭವನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ಹಾಗೂ ಅಸ್ಸಾಂ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾರ್ವಜನಿಕ ಸೇವೆಯನ್ನು ಬಿಂಬಿಸುವ ಚಿತ್ರಕಲಾಕೃತಿಗಳನ್ನು ರಚಿಸಿದ್ದಾರೆ.
ಕಲಾವಿದರಿಗೆ ವಿಜಯೇಂದ್ರ ಅಭಿನಂದನೆ : ದೇಶದ ಪ್ರಧಾನಮಂತ್ರಿಯವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಕಲೆಯ ಮೂಲಕ ಜನರಿಗೆ ತಲುಪಿಸುವ ಈ ಪ್ರಯತ್ನ ಶ್ಲಾಘನೀಯ ವಾಗಿದೆ. ರಾಜ್ಯದ ವಿವಿಧ ಜಿಗಳು ಹಾಗೂ ಹೊರರಾಜ್ಯಗಳಿಂದ ಆಗಮಿಸಿ ತಮ್ಮ ಪ್ರತಿಭೆಯ ಮೂಲಕ ಈ ಅಭಿಯಾನಕ್ಕೆ ಕೊಡುಗೆ ನೀಡಿದ ಎಲ್ಲ ಕಲಾವಿದರಿಗೆ ವಿಜಯೇಂದ್ರ ಅವರು ಕೃತಜ್ಞತೆ ಸಲ್ಲಿಸಿದರು. ಅದೇ ರೀತಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಬಿಜೆಪಿ ವಿವಿಧ ಪ್ರಕೋಷ್ಠಗಳ ಸಂಚಾಲಕರು ಹಾಗೂ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಪ್ರಮುಖ ರನ್ನು ಅಭಿನಂದಿಸಿದರು.
ಏನೇನು ನಡೆಯಲಿದೆ?
ಶಾಲಾ ಮಕ್ಕಳಿಗೆ ವಿಕಸಿತ ಭಾರತ ಕುರಿತು ಚಿತ್ರಕಲೆ, ಭಾಷಣ ಸ್ಪರ್ಧೆ, ನಮೊ ಸೇವಾ ಗಾಥಾ, ಬೀದಿ ನಾಟಕ ಪ್ರದರ್ಶನ, ಅಂಗನವಾಡಿ ಉತ್ಸವ, ಸೇವಾ ಜ್ಯೋತಿ ಯಾತ್ರೆ, ಬೈಕ್ ರ್ಯಾಲಿ, ಸಸಿ ನೆಡುವುದು, ರಕ್ತದಾನ, ಜಲಮೂಲಗಳ ಸ್ವಚ್ಛತೆ, ಹ್ಯಾಕಥಾನ್ ಸೇರಿ ವಿವಿಧ ಕಾರ್ಯಕ್ರಮಗಳು ಒಂದು ತಿಂಗಳು ನಡೆಯಲಿವೆ