Toyota Kirloskar: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಸಮಗ್ರ ಸಾರಿಗೆ ಉತ್ಪನ್ನಗಳನ್ನು ಪ್ರದರ್ಶಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಪಾರಂಪರಿಕ ಟೊಯೋಟಾ ಹೈಲಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾದ ಈ ವಾಹನಗಳು ವಿವಿಧ ವಲಯಗಳಲ್ಲಿ ಕೈಗಾರಿಕಾ ಸಾರಿಗೆ ವ್ಯವಸ್ಥೆ, ಕಾರ್ಯಾಚರಣೆ ದಕ್ಷತೆ ಮತ್ತು ಸುಸ್ಥಿರತೆ ಕ್ರಮಗಳನ್ನು ಹೆಚ್ಚಿ ಸುವ ಮುನ್ನಡೆಸಲು ಟೊಯೋಟಾದ ಬದ್ಧತೆಗೆ ಉತ್ತಮ ಉದಾಹರಣೆಯಾಗಿದೆ
ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ತನ್ನ ಟೊಯೋಟಾ ಮೊಬಿಲಿಟಿ ಸರ್ವಿಸ್ (ಟಿಎಂಎಸ್) ಸ್ಟಾಲ್ ನಲ್ಲಿ ವ್ಯಾಪಕ ಶ್ರೇಣಿಯ ವಿಶೇಷ ವಾಹನಗಳನ್ನು ಮತ್ತು ನವೀನ ಸಾರಿಗೆ ಉತ್ಪನ್ನಗಳನ್ನು ಪ್ರದರ್ಶಿ ಸಿದೆ.
ಪಾರಂಪರಿಕ ಟೊಯೋಟಾ ಹೈಲಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾದ ಈ ವಾಹನಗಳು ವಿವಿಧ ವಲಯಗಳಲ್ಲಿ ಕೈಗಾರಿಕಾ ಸಾರಿಗೆ ವ್ಯವಸ್ಥೆ, ಕಾರ್ಯಾಚರಣೆ ದಕ್ಷತೆ ಮತ್ತು ಸುಸ್ಥಿರತೆ ಕ್ರಮಗಳನ್ನು ಹೆಚ್ಚಿಸುವ ಮುನ್ನಡೆಸಲು ಟೊಯೋಟಾದ ಬದ್ಧತೆಗೆ ಉತ್ತಮ ಉದಾಹರಣೆಯಾಗಿದೆ.
ಹಾಲ್ ಸಂಖ್ಯೆ 6ರಲ್ಲಿ ಸ್ಟಾಲ್ ಹೊಂದಿರುವ ಟಿಕೆಎಂ ತನ್ನ ಸ್ಟಾಲ್ ನಲ್ಲಿ ಎಮರ್ಜೆನ್ಸಿ ರೆಸ್ಪಾನ್ಸ್, ಗಣಿಗಾರಿಕೆ, ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯಗಳಂತಹ ವಿವಿಧ ಕೈಗಾರಿಕಾ ಕ್ಷೇತ್ರಗಳಿಗಾಗಿ ವಿನ್ಯಾಸಗೊಳಿಸಲಾದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿದೆ. ಈ ಮೂಲಕ ಸಂದರ್ಶಕರ ಮನ ಸೆಳೆದಿದೆ. ಪ್ರತೀ ವಿಶೇಷ ವಾಹನವು ಹೈಲಕ್ಸ್ ನ ಅದ್ಭುತ ಬಾಳಿಕೆ ಸಾಮರ್ಥ್ಯ, ವಿಶ್ವಾಸಾರ್ಹತೆ ಮತ್ತು ಹೊಂದಿಕೊಳ್ಳುವ ಗುಣವನ್ನು ಹೊಂದಿದೆ. ಈ ಮೂಲಕ ಟೊಯೋಟಾ ಸಂಸ್ಥೆಯು ವಿಶ್ವಾ ಸಾರ್ಹ ಉತ್ಪನ್ನಗಳನ್ನು ಒದಗಿಸುವ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದೆ.
ವಾಹನ ವಿಧ
ಪ್ರಮುಖ ಫೀಚರ್ ಗಳು
ಉತ್ಪನ್ನ ಚಿತ್ರ
ರಾಪಿಡ್ ಇಂಟರ್ ವೆನ್ಷನ್ ವೆಹಿಕಲ್
ಅಗ್ನಿಶಾಮಕ ಮತ್ತು ವೈದ್ಯಕೀಯ ನೆರವು ಒದಗಿಸುವ ವ್ಯವಸ್ಥೆಗಳನ್ನು ಕಲ್ಪಿಸುವ ವಾಹನ.
ಫೀಲ್ಡ್ ಡಯಾಗ್ನಾಸಿಸ್ ವೆಹಿಕಲ್
ಏರ್ ಕಂಪ್ರೆಸರ್, ವೆಲ್ಡಿಂಗ್ ಸಿಸ್ಟಮ್, ಜಿಬ್ ಕ್ರೇನ್ ಮತ್ತು ಆನ್- ಸೈಟ್ ರಿಪೇರಿಗಾಗಿ ಬೇಕಾಗುವ ಉಪಕರಣ ಸಂಗ್ರಹಣೆ ಹೊಂದಿದೆ
ಪೆಟ್ರೋಲಿಂಗ್ ವೆಹಿಕಲ್
ಸ್ಟೀಲ್ ಬಂಪರ್‌ಗಳು, ಎಲೆಕ್ಟ್ರಿಕಲ್ ವಿಂಚ್ ಗಳು, ಸ್ನಾರ್ಕೆಲ್‌ಗಳು ಮತ್ತು ಅತ್ಯಾಧುನಿಕ ಕಣ್ಗಾವಲು ಸಾಧನಗಳನ್ನು ಒಳಗೊಂಡಿದೆ
ಸರ್ವೀಲಿಯೆನ್ಸ್ ವೆಹಿಕಲ್
ಬಹುಮುಖ ಕಾರ್ಯಗಳಿಗಾಗಿ ಇರುವ ಮೇಲಾವರಣ, ಮಡಿಸಬಹುದಾದ ಆಸನ ಮತ್ತು ಹೆಚ್ಚುವರಿ ಇಂಧನ ಸಂಗ್ರಹಣೆ ವ್ಯವಸ್ಥೆ ಹೊಂದಿದೆ.
ಪ್ರತಿಯೊಂದು ಉತ್ಪನ್ನ ಕೂಡ ಹೈಲಕ್ಸ್ ನ ದೃಢವಾದ ಚಾಸಿಸ್, ಉತ್ತಮ ಆಫ್ ರೋಡ್ ಸಾಮರ್ಥ್ಯ ಗಳು ಮತ್ತು ವಿವಿಧ ಕೈಗಾರಿಕಾ ಉತ್ಪನ್ನಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಸೇರಿದಂತೆ ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿದ್ದು, ವಿಶೇಷ ಸಾರಿಗೆ ಉತ್ಪನ್ನಗಳನ್ನನು ಒದಗಿಸುತ್ತದೆ.
ಟೊಯೋಟಾ ಮೊಬಿಲಿಟಿ ಸರ್ವಿಸ್ (ಟಿಎಂಎಸ್) ವಿಶೇಷ ವಾಹನಗಳಷ್ಟೇ ಅಲ್ಲದೇ, ಸಾರಿಗೆ ವ್ಯವ ಸ್ಥೆಯನ್ನು ಸರಳಗೊಳಿಸುವ ಒಂದು ಸಮಗ್ರ ವಿಧಾನವನ್ನು ಪರಿಚಯಿಸುತ್ತದೆ. ವಿವಿಧ ರೀತಿಯ ವ್ಯಾಪಾರ ಅಗತ್ಯಗಳಿಗೆ ಅನುಗುಣವಾದ ಸೂಕ್ತ ಹಣಕಾಸು ಸೌಲಭ್ಯ ಮತ್ತು ಗುತ್ತಿಗೆ ಸೌಲಭ್ಯ ಮತ್ತು ಸಮಗ್ರ ನಿರ್ವಹಣಾ ಸೌಲಭ್ಯ ಮತ್ತು ವಿಮಾ ಪ್ಯಾಕೇಜ್ ಗಳು ಸೇರಿದಂತೆ ಹಲವಾರು ಸೌಲಭ್ಯ ಗಳನ್ನು ಒದಗಿಸುತ್ತವೆ.
ಸಂಪರ್ಕಿತ ವಾಹನ ಸೇವೆಗಳು ವಾಹನಗಳಿಗೆ ನೈಜ ಸಮಯದ ಮೇಲ್ವಿ ಚಾರಣೆ ಮತ್ತು ನಿರ್ವಹಣೆ ಮಾಡಲು ಅನುವು ನೀಡುತ್ತಿದ್ದು, ಆ ಮೂಲಕ ದಕ್ಷತೆಯನ್ನು ಹೆಚ್ಚಿಸು ತ್ತದೆ. ವಿಸ್ತೃತ ವಾರಂಟಿ ಮತ್ತು 24/7 ರೋಡ್ ಸೈಡ್ ಅಸಿಸ್ಟೆನ್ಸ್ ಸಂಪೂರ್ಣ ವಿಶ್ವಾಸಾರ್ಹತೆ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ.