ಬೆಂಗಳೂರಿನಲ್ಲಿ ವಾರ್ಷಿಕ ಟೊಯೋಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮದ ಬ್ಯಾಚ್ 2 ಅನ್ನು ಯಶಸ್ವಿಯಾಗಿ ನಡೆಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಶಾಲಾ ಮಕ್ಕಳನ್ನು ರಸ್ತೆ ಸುರಕ್ಷತಾ ರಾಯಭಾರಿಗಳಾಗಿ ರೂಪಿಸಲು ವಿನ್ಯಾಸ ಗೊಳಿಸಲಾಗಿರುವ ಟಿಎಸ್ಇಪಿ ಕಾರ್ಯಕ್ರಮವು ಮಕ್ಕಳಲ್ಲಿ ಜವಾಬ್ದಾರಿಯುತ ರಸ್ತೆ ನಡವಳಿಕೆ ಬೆಳೆಸುವ ಮೂಲಕ ಕುಟುಂಬಗಳು ಮತ್ತು ಜನ ಸಮುದಾಯಗಳಲ್ಲಿ ಪರಿಣಾಮ ಬೀರಲಿವೆ. ಆ ಮೂಲಕ ಮಹತ್ವದ ಕಾರ್ಯಕ್ರಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಟಿಎಸ್ಇಪಿ ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮ ಎಂಬ ಯಶಸ್ಸು ಗಳಿಸಿದೆ


ಬೆಂಗಳೂರು: ರಸ್ತೆ ಸುರಕ್ಷತೆ ವಿಚಾರದಲ್ಲಿ ಶ್ರಮಿಸುತ್ತಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾ ರ್ ಕಂಪನಿಯು ಇಂದು ಬೆಂಗಳೂರಿನಲ್ಲಿ ತನ್ನ ವಾರ್ಷಿಕ ಟೊಯೋಟಾ ಸುರಕ್ಷತಾ ಶಿಕ್ಷಣ ಕಾರ್ಯ ಕ್ರಮದ (ಟಿಎಸ್ಇಪಿ) ಎರಡನೇ ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಿದೆ. "ರಸ್ತೆ ಸುರಕ್ಷತೆ - ನನ್ನ ಹಕ್ಕು, ನನ್ನ ಜವಾಬ್ದಾರಿ" ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮವು ಮುಂದಿನ ಪೀಳಿಗೆಗೆ ರಸ್ತೆ ಸುರಕ್ಷತೆ ಕುರಿತ ಜ್ಞಾನವನ್ನು ಒದಗಿಸಿದೆ ಮತ್ತು ಜವಾಬ್ದಾರಿ ಪ್ರಜ್ಞೆ ಮೂಡಿಸಿದೆ. ಈ ಕಾರ್ಯ ಕ್ರಮದಲ್ಲಿ ಬೆಂಗಳೂರು ಟ್ರಾಫಿಕ್ ಪೋಲೀಸ್ ವಿಭಾಗದ ಡಾ.ಅನಿಲ್ ಕುಮಾರ್ ಮತ್ತು ಟಿಕೆಎಂನ ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ವಿಭಾ ಗದ ಮುಖ್ಯಸ್ಥರಾದ ಶ್ರೀ ಸುದೀಪ್ ದಳವಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: Bangalore Habba: ಬೆಂಗಳೂರು ಹಬ್ಬಕ್ಕೆ ಅದ್ಧೂರಿ ತೆರೆ: 2 ಲಕ್ಷಕ್ಕೂ ಅಧಿಕ ಮಂದಿ ಭಾಗಿ
ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕುರಿತು ತಿಳಿಸಿದರು. ಶಾಲಾ ಮಕ್ಕಳನ್ನು ರಸ್ತೆ ಸುರಕ್ಷತಾ ರಾಯಭಾರಿಗಳಾಗಿ ರೂಪಿಸಲು ವಿನ್ಯಾಸ ಗೊಳಿಸಲಾಗಿರುವ ಟಿಎಸ್ಇಪಿ ಕಾರ್ಯಕ್ರಮವು ಮಕ್ಕಳಲ್ಲಿ ಜವಾಬ್ದಾರಿಯುತ ರಸ್ತೆ ನಡವಳಿಕೆ ಬೆಳೆಸುವ ಮೂಲಕ ಕುಟುಂಬಗಳು ಮತ್ತು ಜನ ಸಮುದಾಯಗಳಲ್ಲಿ ಪರಿಣಾಮ ಬೀರಲಿವೆ. ಆ ಮೂಲಕ ಮಹತ್ವದ ಕಾರ್ಯಕ್ರಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಟಿಎಸ್ಇಪಿ ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮ ಎಂಬ ಯಶಸ್ಸು ಗಳಿಸಿದೆ.

ಜಾಗತಿಕ ಮಟ್ಟದಲ್ಲಿ ನೋಡಿದರೆ ಭಾರತದಲ್ಲಿ ಪ್ರತೀ ವರ್ಷ ಅತೀ ಹೆಚ್ಚು ರಸ್ತೆ ಅಪಘಾತದ ಸಾವು ನೋವುಗಳು ಉಂಟಾಗುತ್ತವೆ. ಪ್ರತೀ ವರ್ಷ 1,50,000ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ಲೆಕ್ಕಾಚಾರ ತಿಳಿಸುತ್ತದೆ. ಅದರಲ್ಲೂ 5-29 ವರ್ಷ ವಯಸ್ಸಿನ ಜನರು ರಸ್ತೆ ಅಪಘಾತದ ಗಾಯಗಳಿಂದ ಮರಣವನ್ನಪ್ಪುತ್ತಿದ್ದಾರೆ. ಈ ತೊಡಕನ್ನು, ತೊಂದರೆಯನ್ನು ನಿರ್ವಹಿಸಲು ಟಿಕೆಎಂ ಸಂಸ್ಥೆಯು 2007ರಲ್ಲಿ ಟಿಎಸ್ಇಪಿ ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಶಾಲಾ ಪಠ್ಯಕ್ರಮಗಳಲ್ಲಿ ರಸ್ತೆ ಸುರಕ್ಷತೆ ಕುರಿತ ವಿಚಾರವನ್ನು ಸೇರಿಸಿತು. "ಚೈಲ್ಡ್ ಟು ಕಮ್ಯುನಿಟಿ" ವಿಧಾನದ ಮೂಲಕ ಟಿಎಸ್ಇಪಿ ರಾಷ್ಟ್ರವ್ಯಾಪಿ 800,000 ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದೆ. ಶಾಲಾ ಮಕ್ಕಳನ್ನು ರಸ್ತೆ ಸುರಕ್ಷತಾ ರಾಯಭಾರಿಗಳನ್ನಾಗಿ ರೂಪಿಸಿದೆ.

ಈ ವರ್ಷ ಟಿಕೆಎಂ ಬೆಂಗಳೂರು ಮತ್ತು ದೆಹಲಿಯಲ್ಲಿ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಮುಂದಿನ ಹಂತದ ಕಾರ್ಯಕ್ರಮವು ಮುಂಬೈನಲ್ಲಿ ಫೆ.11 ರಂದು ನಡೆಯಲಿದೆ. ಈ ಕಾರ್ಯ ಕ್ರಮವು 140 ಶಾಲೆಗಳ 70,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 600 ಶಿಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದ್ದು, ಶೂನ್ಯ ರಸ್ತೆ ಅಪಘಾತ ಸಾಧಿಸುವ ಬದ್ಧತೆಗೆ ಪೂರಕವಾಗಿ ನಡೆಯಲಿದೆ.
ಟಿಕೆಎಂನ "ರಿಯಲ್ ವರ್ಲ್ಡ್ ಸೇಫ್ಟಿ" ಫಿಲಾಸಫಿಗೆ ಪೂರಕವಾಗಿ ನಡೆಯುತ್ತಿರುವ ಟಿಎಸ್ಇಪಿ ಕಾರ್ಯಕ್ರಮವು ಸುರಕ್ಷಿತ ವಾಹನ ತಯಾರಿಕೆ, ಸಂಚಾರ ಪರಿಸರ ಸುಧಾರಣೆ ಇತ್ಯಾದಿಗಳ ಕಡೆಗೆ ಗಮನ ಹರಿಸುವ ಮೂಲಕ ಸಮಗ್ರ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ರಸ್ತೆ ಜಾಗೃತಿ ಮತ್ತು ಜವಾಬ್ದಾರಿಯುತ ರಸ್ತೆ ನಡವಳಿಕೆಯನ್ನು ಬೆಳೆಸುವ ಮೂಲಕ ಈ ಕಾರ್ಯ ಕ್ರಮವು ಮುಂದಿನ ಪೀಳಿಗೆಯನ್ನು ಹೆಚ್ಚು ಜವಾಬ್ದಾರಿಯುತವಾಗಿ ರೂಪಿಸಲಿದೆ. ಭಾರತದಲ್ಲಿ ಸುರಕ್ಷಿತವಾಗಿ ಮತ್ತು ಹೆಚ್ಚು ಜವಾಬ್ದಾರಿಯುತವಾಗಿ ರಸ್ತೆ ಬಳಕೆ ಮಾಡುವಂತೆ ಪ್ರೇರೇಪಣೆ ನೀಡಲಿದೆ.
ಈ ಕಾರ್ಯಕ್ರಮವು ವಿಶಿಷ್ಟವಾದ ಎಬಿಸಿ ವಿಧಾನದ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಈ ವಿಧಾನ ಈ ಕೆಳಗಿವಂತಿವೆ:
* ಅರಿವು: (ಅವೇರ್ ನೆಸ್) ರಸ್ತೆ ಸುರಕ್ಷತಾ ನಿಯಮಗಳು ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ವಿದ್ಯಾ ರ್ಥಿಗಳಿಗೆ ಶಿಕ್ಷಣ ಒದಗಿಸುವುದು.
* ವರ್ತನೆ ಬದಲಾವಣೆ: (ಬಿಹೇವಿಯರಲ್ ಚೇಂಜ್) ಧನಾತ್ಮಕ ಮತ್ತು ಜವಾಬ್ದಾರಿಯುತ ರಸ್ತೆ ಬಳಕೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದು.
* ಅಭಿಯಾನಗಳು: (ಕ್ಯಾಂಪೇನ್) ಸಂವಾದಾತ್ಮಕ ಮತ್ತು ಪರಿಣಾಮಕಾರಿ ಚಟುವಟಿಕೆಗಳ ಮೂಲಕ ಎಲ್ಲರೂ ರಸ್ತೆ ಸುರಕ್ಷತೆ ವಿಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು.
ಈ ಸಮಗ್ರ ವಿಧಾನವು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡುವುದರ ಜೊತೆಗೆ ಶಿಕ್ಷಕರಿಗೆ ರಚನಾತ್ಮಕ ತರಬೇತಿಯನ್ನು ನೀಡುತ್ತದೆ. ರಸ್ತೆ ಸುರಕ್ಷತಾ ಶಿಕ್ಷಣವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಮತ್ತು ಆ ಮೂಲಕ ದೀರ್ಘಾವಧಿಯ ಪರಿಣಾಮ ಉಂಟು ಮಾಡಲು ಅವರಲ್ಲಿ ಸ್ಫೂರ್ತಿ ತುಂಬುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲೆಗಳಲ್ಲಿ ರಸ್ತೆ ಸುರಕ್ಷತಾ ಕ್ಲಬ್ ಗಳನ್ನು ರಚಿಸುವ ಮೂಲಕ, ಈ ಕಾರ್ಯಕ್ರಮವು ಸಹಪಾಠಿಗಳು ಸೇರಿಕೊಂಡು ಈ ಮಹೋನ್ನತ ಉದ್ದೇಶದ ಭಾಗವಾಗುವಂತೆ ಮಾಡುತ್ತದೆ.
ಪೋಸ್ಟರ್ ತಯಾರಿಕೆ, ಸ್ಕಿಟ್ ಗಳು, ಹಾಡುಗಳು, ಮ್ಯಾಡ್ ಆಡ್ ಗಳು ಮತ್ತು ಸತ್ಯ ಆಧರಿತ ವೀಡಿ ಯೊ ಪ್ರಸ್ತುತಿ ಮುಂತಾದ ಚಟುವಟಿಕೆಗಳ ಮೂಲಕ ರಸ್ತೆ ಸುರಕ್ಷತೆಯ ಕುರಿತ ತಮ್ಮ ತಿಳುವಳಿಕೆ ಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಸೃಜನಶೀಲ ಪ್ರಸ್ತುತಿಯು ಬೆಂಗಳೂರಿನ ಕಾರ್ಯಕ್ರಮದ ವಿಶೇಷವಾಗಿತ್ತು. ಈ ಸಂವಾದಾತ್ಮಕ ಸ್ವರೂಪಗಳು ಕಲಿಕೆಯನ್ನು ಹೆಚ್ಚು ಪರಿ ಣಾಮಕಾರಿಯಾಗಿಸಿದವು ಮತ್ತು ಸುರಕ್ಷಿತ ರಸ್ತೆಗಳನ್ನು ರೂಪಿಸಲು ನವೀನ ಪರಿಹಾರಗಳನ್ನು ಕಂಡುಕೊಳ್ಳಲು ಪ್ರೇರೇಪಿಸಿದವು.
ಈ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ಜಾಗೃತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಸಾಧಾರಣ ಪ್ರಯತ್ನ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಗಳಿಗೆ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸ ಲಾಯಿತು. ರಸ್ತೆ ಸುರಕ್ಷತೆ ಕುರಿತು ಹೆಚ್ಚಿನ ಜನರಿಗೆ ಅರಿವು ಮೂಡಿಸಲು ಇವರೆಲ್ಲರ ಪ್ರಯತ್ನಗಳು ಬಹಳ ಮಹತ್ವದ ಪಾತ್ರ ವಹಿಸಿವೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಡಾ.ಅನಿಲ್ ಕುಮಾರ್ ಅವರು, “ಟೊಯೋಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮದಂತಹ ಕಾರ್ಯಕ್ರಮಗಳು ಜವಾಬ್ದಾರಿಯುತ ರಸ್ತೆ ನಡವಳಿಕೆಯನ್ನು ಬೆಳೆಸುವಲ್ಲಿ ಅವಶ್ಯವಾದ ಆರಂಭಿಕ ಶಿಕ್ಷಣ ಒದಗಿಸು ತ್ತವೆ ಮತ್ತು ಸಮಾಜ ತೊಡಗಿಸಿಕೊಂಡರೆ ಏನಾಗುತ್ತದೆ ಎಂಬ ಮಹತ್ವವನ್ನು ಸಾರುತ್ತದೆ. ಶಾಲಾ ಮಕ್ಕಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಟಿಕೆಎಂ ತಮ್ಮ ಕುಟುಂಬಗಳು ಮತ್ತು ಸಮಾಜ ದಲ್ಲಿ ಬದಲಾವಣೆಯನ್ನು ಉಂಟು ಮಾಡಲು ಮುಂದಿನ ಪೀಳಿಗೆಯನ್ನು ಪ್ರೋತ್ಸಾಹಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತೋರಿಸಿರುವ ಸೃಜನಶೀಲತೆ ಮತ್ತು ಹುಮ್ಮಸ್ಸು ರಸ್ತೆ ಸುರಕ್ಷತೆ ಕಡೆಗೆ ಜವಾಬ್ದಾರಿ ಹುಟ್ಟುಹಾಕುವಲ್ಲಿನ ಈ ಯೋಜನೆಯ ಪರಿಣಾಮಕಾರಿತ್ವ ತೋರಿಸುತ್ತದೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಮತ್ತು ನಾಗರಿಕರಿಗೆ ಸುರಕ್ಷತೆ ಒದಗಿಸುವ ಟೊಯೋ ಟಾದ ಬದ್ಧತೆಯು ಅಪೂರ್ವವಾಗಿದೆ” ಎಂದು ಹೇಳಿದರು.
ಟಿಕೆಎಂನ ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾದ ಸುದೀಪ್ ದಳವಿ ಅವರು, “ಟೊಯೋಟಾದಲ್ಲಿ ರಸ್ತೆ ಸುರಕ್ಷತೆ ಕಡೆಗಿನ ನಮ್ಮ ಬದ್ಧತೆಯು ಸುರಕ್ಷಿತ ಕಾರುಗಳನ್ನು ತಯಾರಿಸುವುದನ್ನೂ ಮೀರಿದ್ದಾಗಿದೆ. ನಾವು ಸಮಾಜ ದೊಂದಿಗೆ ಒಟ್ಟಾಗಿ ಬೆಳೆಯಲು ಮತ್ತು ನಾವು ಸೇವೆ ಸಲ್ಲಿಸುವ ಸಮುದಾಯಗಳ ಜೀವನವನ್ನು ಉತ್ತಮಗೊಳಿಸಲು ಸದಾ ಪ್ರಯತ್ನಿಸುತ್ತೇವೆ. ರಸ್ತೆ ಸುರಕ್ಷತೆಯನ್ನು ಪಾಲಿಸಲು ಪ್ರೋತ್ಸಾಹಿಸುವ ಮೂಲಕ ಮತ್ತು ನಡವಳಿಕೆಯಲ್ಲಿ ಬದಲಾವಣೆ ತರಲು ಪ್ರೇರೇಪಿಸುವ ಮೂಲಕ ನಾವು ಎಲ್ಲರಿಗೂ ಸುರಕ್ಷಿತ ಭವಿಷ್ಯವನ್ನು ರಚಿಸುವ ಗುರಿಯನ್ನು ಹೊಂದಿದ್ದೇವೆ. 2007ರಿಂದ ಟೊಯೋಟಾ ಸುರ ಕ್ಷತಾ ಶಿಕ್ಷಣ ಕಾರ್ಯಕ್ರಮದಂತಹ ಯೋಜನೆಗಳ ಮೂಲಕ ನಾವು 800,000ಕ್ಕೂ ಹೆಚ್ಚು ವಿದ್ಯಾರ್ಥಿ ಗಳನ್ನು ತಲುಪಿದ್ದೇವೆ. ಅವರ ಕುಟುಂಬಗಳು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಯನ್ನು ಉಂಟು ಮಾಡುವ 'ರಸ್ತೆ ಸುರಕ್ಷತಾ ರಾಯಭಾರಿ'ಗಳಾಗಲು ಅವರಿಗೆ ಉತ್ತೇಜನ ನೀಡಿದ್ದೇವೆ.
ಈ ಸಮಗ್ರ ವಿಧಾನವು ಸಮಾಜಕ್ಕೆ ಹಿಂತಿರುಗಿ ನೀಡುವ ಮತ್ತು ರಸ್ತೆ ಸುರಕ್ಷತೆಯಂತಹ ಮಹತ್ವದ ಸವಾಲುಗಳನ್ನು ಎದುರಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ. ನಮ್ಮ ಪಾಲು ದಾರರ ಜೊತೆಗೆ ಶೂನ್ಯ ರಸ್ತೆ ಅಪಘಾತಗಳನ್ನು ಸಾಧಿಸುವ ಉದ್ದೇಶ ಪೂರೈಸಲು ಮತ್ತು ರಾಷ್ಟ್ರ ದಾದ್ಯಂತ ಜವಾಬ್ದಾರಿಯುತ ರಸ್ತೆ ನಡವಳಿಕೆಯ ಸಂಸ್ಕೃತಿಯನ್ನು ಬೆಳೆಸಲು ನಾವು ಬದ್ಧರಾಗಿ ದ್ದೇವೆ" ಎಂದು ಹೇಳಿದರು.
ಟಿಕೆಎಂ 2001ರಿಂದ ಶಿಕ್ಷಣ, ಪರಿಸರ, ರಸ್ತೆ ಸುರಕ್ಷತೆ, ಕೌಶಲ್ಯ ಅಭಿವೃದ್ಧಿ, ಆರೋಗ್ಯ, ನೈರ್ಮಲ್ಯ ಮತ್ತು ವಿಪತ್ತು ನಿರ್ವಹಣೆ ವಿಚಾರಗಳ ಹಲವು ಯೋಜನೆಗಳ ಮೂಲಕ ಸಮಾಜ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದೆ. ಈ ಪ್ರಯತ್ನಗಳ ಮೂಲಕ ಟಿಕೆಎಂ 2.3 ಮಿಲಿಯನ್ ಗಿಂತಲೂ ಹೆಚ್ಚು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಸುರಕ್ಷಿತ, ಆರೋಗ್ಯಕರ ಮತ್ತು ಹೆಚ್ಚು ಸಬಲ ಸಮಾಜವನ್ನು ಬೆಳೆಸುವ ತನ್ನ ಧ್ಯೇಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಟಿಕೆಎಂ ಶೂನ್ಯ ರಸ್ತೆ ಅಪಘಾತ ಸಾಧಿಸುವ ಮತ್ತು ಭವಿಷ್ಯದ ಪೀಳಿಗೆಯನ್ನು ಸುರಕ್ಷಿತ ರಸ್ತೆ ಬಳಕೆಯ ಕಡೆಗೆ ಪ್ರೇರೇಪಿಸುವ ವಿಚಾರದಲ್ಲಿ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹುಮ್ಮಸ್ಸಿನಿಂದ ಮುನ್ನಡೆಯುತ್ತಿದೆ.