ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TV actor Aryan: ಹುಟ್ಟು ಹಬ್ಬದ ದಿನವೇ ಕೊನೆಯುಸಿರೆಳೆದ ಕಿರುತೆರೆ ನಟ ಆರ್ಯನ್

Sandalwood News: ಕಳೆದ 15 ದಿನಗಳ ಹಿಂದೆ ಹಾಸನಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಕಿರುತೆರೆ ನಟ ಆರ್ಯನ್ ಗುರುಸ್ವಾಮಿ ವಸ್ತ್ರದ್​ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು ಆಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೊಪ್ಪಳ, ಅ.25: ಕನಕಗಿರಿ ಮೂಲದ ಕಿರುತೆರೆ ನಟ ಆರ್ಯನ್ ಗುರುಸ್ವಾಮಿ ವಸ್ತ್ರದ್​ (TV actor Aryan) ಹುಟ್ಟು ಹಬ್ಬದ ದಿನದಂದೇ ಕೊನೆಯುಸಿರೆಳೆದಿದ್ದಾರೆ. ಕಳೆದ 15 ದಿನಗಳ ಹಿಂದೆ ಹಾಸನಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಡೆದ ಅಪಘಾತದಿಂದಾಗಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು ಆಗಿದ್ದರು.

ಆರ್ಯನ್ ಗುರುಸ್ವಾಮಿ ವಸ್ತ್ರದ್ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನೆನ್ನೆ ನಟ ಆರ್ಯನ್ ಹುಟ್ಟು ಹಬ್ಬದ ಹಿನ್ನೆಲೆ ಕಟುಂಬಸ್ಥರು ಕೇಕ್ ಕತ್ತರಿಸಿದ್ದರು. ಈ ವೇಳೆ ದುಖಃವು ಮಡುಗಟ್ಟಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೆ ಕಿರುತೆರೆ ನಟ ಆರ್ಯನ್ ಕೊನೆಯುಸಿರೆಳೆದಿದ್ದಾರೆ.

ಮಗನನ್ನು ಕಳೆದುಕೊಂಡ ದುಖಃದ ನಡುವೆಯೇ ಪೋಷಕರು ಮೃತ ನಟ ಆರ್ಯನ್ ಗುರುಸ್ವಾಮಿ ಅವರ ಅಂಗಾಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಈ ಸುದ್ದಿಯನ್ನೂ ಓದಿ | Actor Satish Shah: 'ಸಾರಾಭಾಯ್‌ ವರ್ಸಸ್‌ ಸಾರಾಭಾಯ್‌' ಧಾರಾವಾಹಿ ಖ್ಯಾತಿಯ ನಟ ಸತೀಶ್‌ ಶಾ ನಿಧನ