ಉತ್ಥಾನ ಕಥಾಸ್ಪರ್ಧೆ 2025ರ ಫಲಿತಾಂಶ ಪ್ರಕಟ; ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಪ್ರಥಮ
Utthana Katha Sparde 2025 Results: ಉತ್ಥಾನ ಕಥಾಸ್ಪರ್ಧೆಯಲ್ಲಿ ಮೊದಲನೆ ಬಹುಮಾನವನ್ನು ಡಾ. ಶೈಲೇಶ್ ಕುಮಾರ್ ಅವರ ‘ಒತ್ತುವರಿ’ ಎಂಬ ಕಥೆ ಪಡೆದಿದೆ. ಎರಡನೆಯ ಬಹುಮಾನವನ್ನು ರಾಧಿಕಾ ವಿ. ಗುಜ್ಜರ್ ಅವರ ‘ಮಂಥ’ ಕಥೆ ಪಡೆದಿದ್ದು, ಮೂರನೆಯ ಬಹುಮಾನವನ್ನು ರೋಹಿತ್ ಚಕ್ರತೀರ್ಥ ಅವರ ‘ಪ್ಲುಟೋ’ ಕಥೆ ಪಡೆದಿದೆ.
ಉತ್ಥಾನ ಕಥಾಸ್ಪರ್ಧೆ 2025 ವಿಜೇತರು. -
ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2025ರ (Utthana Katha Sparde 2025) ಫಲಿತಾಂಶ ಬಿಡುಗಡೆಯಾಗಿದ್ದು, ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಕಥಾಸ್ಪರ್ಧೆಯಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿ ಒಟ್ಟು 494 ಕಥೆಗಳು ಭಾಗವಹಿಸಿದ್ದವು. ಲೇಖಕ, ಕವಿ ದಿವಾಕರ ಹೆಗಡೆ ಕೆರೆಹೊಂಡ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದ್ದಾರೆ.
ಈ ಬಗ್ಗೆ ಉತ್ಥಾನ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕಥಾಸ್ಪರ್ಧೆಯಲ್ಲಿ ಮೊದಲನೆ ಬಹುಮಾನವನ್ನು (15,000 ರೂ.) ಡಾ. ಶೈಲೇಶ್ ಕುಮಾರ್ ಅವರ ‘ಒತ್ತುವರಿ’ ಎಂಬ ಕಥೆ ಪಡೆದಿದೆ. ಎರಡನೆಯ ಬಹುಮಾನವನ್ನು (12,000 ರೂ.) ರಾಧಿಕಾ ವಿ. ಗುಜ್ಜರ್ ಅವರ ‘ಮಂಥ’ ಕಥೆ ಪಡೆದಿದ್ದು, ಮೂರನೆಯ ಬಹುಮಾನವನ್ನು (10,000 ರೂ.) ರೋಹಿತ್ ಚಕ್ರತೀರ್ಥ ಅವರ ‘ಪ್ಲುಟೋ’ ಕಥೆ ಪಡೆದಿದೆ.
ಇನ್ನು 5 ಕಥೆಗಳು ಮೆಚ್ಚುಗೆ ಬಹುಮಾನವನ್ನು (ತಲಾ 2000 ರೂ.) ಪಡೆದಿವೆ. ಬೆಂಗಳೂರಿನ ಕಾಂಚನಾ ಕರ್ಕಿ ಅವರ ‘ದೂರದ ಪಯಣ’, ಅನಸೂಯಾ ಸಿದ್ಧರಾಮ ಅವರ ‘ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’, ಕೊಡಗಿನ ಸ್ಮಿತಾ ಅಮೃತರಾಜ್ ಸಂಪಾಜೆ ಅವರ ‘ಪರಿಹಾರ’, ಧಾರವಾಡದ ಶಂಕರ ಪಾಗೋಜಿ ಅವರ ಪುಣ್ಯಭೂಮಿ’ ಹಾಗೂ ಶಿವಮೊಗ್ಗದ ಟಿ.ಎಸ್. ಶ್ರವಣಕುಮಾರಿ ಅವರ ‘ಬಿದ್ದವರೆದ್ದಾಗ’ – ಈ ಕಥೆಗಳು ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿವೆ.
ಬಹುಮಾನ ವಿಜೇತರ ವಿವರ ಹೀಗಿದೆ:
ಪ್ರಥಮ ಬಹುಮಾನ (15,000 ರೂ.)
ಕಥೆ-ಒತ್ತುವರಿ, ಕಥೆಗಾರ-ಡಾ. ಶೈಲೇಶ್ ಕುಮಾರ್, ಬೆಂಗಳೂರು
ಎರಡನೆಯ ಬಹುಮಾನ (12,000 ರೂ.)
ಕಥೆ-ಮಂಥ, ಕಥೆಗಾರರು- ರಾಧಿಕಾ ವಿ. ಗುಜ್ಜರ್, ಬೆಂಗಳೂರು
ಮೂರನೆಯ ಬಹುಮಾನ (10,000 ರೂ.)
ಕಥೆ-ಪ್ಲುಟೋ, ಕಥೆಗಾರ- ರೋಹಿತ್ ಚಕ್ರತೀರ್ಥ, ಬೆಂಗಳೂರು
ಮೆಚ್ಚುಗೆ ಬಹುಮಾನ (ತಲಾ 2000 ರೂ.)
- ದೂರದ ಪಯಣ- ಕಾಂಚನಾ ಕರ್ಕಿ, ಬೆಂಗಳೂರು
- ವ್ಯಾಪ್ತಿಪ್ರದೇಶದ ಹೊರಗಿದ್ದಾರೆ- ಅನಸೂಯಾ ಸಿದ್ಧರಾಮ, ಗೋಕಾಕ
- ಪರಿಹಾರ- ಸ್ಮಿತಾ ಅಮೃತರಾಜ್, ಕೊಡಗು
- ಪುಣ್ಯದ ಭೂಮಿ-ಶಂಕರ ಪಾಗೋಜಿ, ಧಾರವಾಡ
- ಬಿದ್ದವರೆದ್ದಾಗ-ಟಿ.ಎಸ್. ಶ್ರವಣಕುಮಾರಿ, ಶಿವಮೊಗ್ಗ

ತೀರ್ಪುಗಾರರು: ಲೇಖಕರು, ಕವಿ ದಿವಾಕರ ಹೆಗಡೆ ಕೆರೆಹೊಂಡ