ವಿಪ್ರ ಬಿಸಿನೆಸ್ ಫೋರಂ ನೂತನ ಪದಾಧಿಕಾರಿಗಳ ನೇಮಕ; ಅಧ್ಯಕ್ಷ ಆನಂದ್, ಗೌರವಾಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಆಯ್ಕೆ
ಕಳೆದ ಏಳು ವರ್ಷಗಳಿಂದ ಸಕ್ರಿಯವಾಗಿರುವ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಪ್ರ ಬಿಸಿನೆಸ್ ಫೋರಂನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನಡೆದಿದೆ. ಸಂಘಟನೆಯಡಿ ಕಾರ್ಯನಿರ್ವಹಿಸುತ್ತಿರುವ ಆತ್ರೇಯ, ಅಗಸ್ತ್ಯ, ಭಾರದ್ವಾಜ, ವಸಿಷ್ಠ ಮತ್ತು ಕಾಶ್ಯಪ ವಾಹಿನಿಗಳ ಸದಸ್ಯರು ಭಾಗವಹಿಸಿದ್ದರು.
ಸಂಗ್ರಹ ಚಿತ್ರ -
ಬೆಂಗಳೂರು: ಕಳೆದ ಏಳು ವರ್ಷಗಳಿಂದ ಸಕ್ರಿಯವಾಗಿರುವ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ (Vipra Business Forum) ತನ್ನದೇ ಛಾಪು ಮೂಡಿಸಿರುವ ವಿಪ್ರ ಬಿಸಿನೆಸ್ ಫೋರಂನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನಡೆದಿದೆ. ಸಂಘಟನೆಯಡಿ ಕಾರ್ಯನಿರ್ವಹಿಸುತ್ತಿರುವ ಆತ್ರೇಯ, ಅಗಸ್ತ್ಯ, ಭಾರದ್ವಾಜ, ವಸಿಷ್ಠ ಮತ್ತು ಕಾಶ್ಯಪ ವಾಹಿನಿಗಳ ಸದಸ್ಯರು ಭಾಗವಹಿಸಿದ್ದರು. 110ಕ್ಕೂ ಹೆಚ್ಚು ಉದ್ಯಮಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆಯೂ ನಡೆಯಿತು.
ಅಧ್ಯಕ್ಷರಾಗಿ ಆನಂದ್, ಗೌರವಾಧ್ಯಕ್ಷರಾಗಿ ಕಾವೇರಿ ಕಾರ್ಸ್ ಸಂಸ್ಥೆಯ ಸ್ಥಾಪಕರಾದ ಕೆ. ರಾಧಾಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯರಾವ್, ಉಪಾಧ್ಯಕ್ಷರಾಗಿ ಸತ್ಯಬೋಧ ಕುಲಕರ್ಣಿ, ಖಜಾಂಚಿಯಾಗಿ ರಂಗಸ್ವಾಮಿ ಯವರು, ಬೈಲಾ ಸಮಿತಿಯ ಅಧ್ಯಕ್ಷರಾಗಿ ರಂಗನಾಥ ಅಡಿಗ, ಹಿರಿಯರಾದ ವೆಂಕಟೇಶ, ಜಂಟಿ ಕಾರ್ಯದರ್ಶಿಯಾಗಿ ನವನೀತ್ ಜೋಶಿ ಹಾಗೂ ಸಲಹೆಗಾರರಾಗಿ ಕಾಮತ್ ಗ್ರೂಪ್ ಹೋಟೆಲ್‌ನ ಮಾಲೀಕರಾದ ವೀರೇಂದ್ರ ಕಾಮತ್ ಕಾಮತ್ ಆಯ್ಕೆಯಾದರು.
ಈ ನೂತನ ತಂಡವು ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸವನ್ನು ಸದಸ್ಯರಲ್ಲಿ ಮೂಡಿಸಿತು. ಸಂಘಟನೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಹೊಸ ಬೈ ಲಾ ತಿದ್ದುಪಡಿಗಳನ್ನು ಅಂಗೀಕರಿಸಲಾಯಿತು.
ಬ್ರಾಹ್ಮಣ ಸಮುದಾಯದ ಉದ್ಯಮಿಗಳ ನಡುವೆ ಸಂಪರ್ಕ, ಸಂವಹನ, ಪರಸ್ಪರ ವಿಶ್ವಾಸ ಮತ್ತು ವ್ಯಾವಹಾರಿಕ ಸಹಕಾರವನ್ನು ವೃದ್ಧಿಸುವ ಉದ್ದೇಶದಿಂದ ಕಾರ್ಯಪ್ರವೃತ್ತರಾಗುವುದಾಗಿ ನೂತನ ಪದಾಧಿಕಾರಿಗಳು ತಿಳಿಸಿದರು.