ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೋ, ಇಲ್ಲಿ ಹಿಂದಿ ಮಾತನಾಡು; ವಿದ್ಯಾರ್ಥಿಗೆ ಕಾಲೇಜು ವಾರ್ಡನ್‌ ಧಮ್ಕಿ, ವಿಡಿಯೊ ವೈರಲ್‌

Bengaluru AMC College: ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಎಎಂಸಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು, ವಾರ್ಡನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ವಾರ್ಡನ್‌ನನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಎಂಸಿ ಕಾಲೇಜು ವಾರ್ಡನ್‌.

ಬೆಂಗಳೂರು: ಖಾಸಗಿ ಕಾಲೇಜೊಂದರಲ್ಲಿ ಕನ್ನಡ ಮಾತನಾಡದಂತೆ ವಿದ್ಯಾರ್ಥಿಗೆ ವಾರ್ಡನ್‌ ಧಮ್ಕಿ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 'ಕನ್ನಡ ಮಾತನಾಡುವುದನ್ನು ನಿಮ್ಮ ಮನೆಯಲ್ಲಿ ಇಟ್ಕೋ, ಇಲ್ಲಿ ಹಿಂದಿ ಮಾತನಾಡು' ಎಂದು ಕಾಲೇಜು ಹಾಸ್ಟೆಲ್‌ನಲ್ಲಿ ವಾರ್ಡನ್‌ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಹರಿದಾಡುತ್ತಿರುವ ವಿಡಿಯೊ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಎಎಂಸಿ ಕಾಲೇಜಿನ ಹಾಸ್ಟೆಲ್‌ನದ್ದು ಎನ್ನಲಾಗಿದೆ. ಅಲ್ಲಿರುವ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಲು ಮುಂದಾದಾಗ ವಾರ್ಡನ್ ಹಿಂದಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ವಾರ್ಡನ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ, ನಾನು ಯಾಕೆ ಕನ್ನಡದಲ್ಲಿ ಮಾತನಾಡಬಾರದು? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ವಾರ್ಡನ್ ಇಲ್ಲಿ ಯಾವ ಭಾಷೆ ಮಾತನಾಡಬೇಕು ಎಂಬುದನ್ನು ನಾನು ನಿರ್ಧಾರ ಮಾಡುತ್ತೇನೆ. ಇದು ನಿಮ್ಮ ಮನೆಯಲ್ಲ, ಕಾಲೇಜು ಎಂದು ಕನ್ನಡದ ವಿದ್ಯಾರ್ಥಿಗಳಿಗೆ ಕನ್ನಡ ಮಾತನಾಡದಂತೆ ಸೂಚನೆ ನೀಡಿದ್ದಾರೆ.

ಈ ವಿಡಿಯೊವನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. "ದುರಹಂಕಾರದ ಪರಮಾವಧಿ, ಇದು ಕನ್ನಡದ ಮೇಲೆ ಅನ್ಯಭಾಷಿಕರ ದಬ್ಬಾಳಿಕೆ. ಕಾಲೇಜಿನಲ್ಲಿ ಕನ್ನಡ ಮಾತನಾಡಬಾರದಂತೆ, ಇವನಿಗೆ ಈ ಆದೇಶ ಮಾಡೋಕೆ ಈ ಅಧಿಕಾರ ಕೊಟ್ಟೋರು ಯಾರು?, ಬನ್ನೇರುಘಟ್ಟ ರಸ್ತೆಯ Amc ಕಾಲೇಜು ಕಾಲೇಜು ಕನ್ನಡ ವಿದ್ಯಾರ್ಥಿಗಳ ಮೇಲೆ ಈ ದೌರ್ಜನ್ಯ ಸಹಿಸಲ್ಲ, ಕಾಲೇಜುಗಳಲ್ಲಿ ಉದ್ಯೋಗ ಕನ್ನಡಿಗರಿಗೆ ಆದ್ಯತೆ ಇಲ್ಲ. ಇವನು ಅವನ ಊರಿಗೆ ಹೋರಡಲಿ" ಎಂದು ಕಿಡಿಕಾರಿದ್ದಾರೆ.



ಕನ್ನಡ ದ್ರೋಹಿ ಕೆಲಸದಿಂದ ವಜಾ

ಕನ್ನಡಪರ ಸಂಫಟನೆಗಳಾದ ನಾವೆಲ್ಲರೂ ಇಂದು ಕಾಲೇಜಿಗೆ ಮುತ್ತಿಗೆ ಹಾಕಿ ಕನ್ನಡಿಗರಿಗೆ, ಕನ್ನಡಕ್ಕೆ ಅವಮಾನ ಮಾಡಿದ್ದ ಕನ್ನಡ ದ್ರೋಹಿಯನ್ನು ಕೆಲಸದಿಂದ ವಜಾ ಮಾಡಿಸಿ ಹಾಗೂ FIR ಮಾಡಿಸಲಾಗಿದೆ. ಆದೆ ಜಾಗದಲ್ಲಿ ಕನ್ನಡಿಗನ ನೇಮಕ ಆಗಲಿದೆ. ಎಲ್ಲ ಹೋರಾಟಗಾರರಿಗೂ / ಕನ್ನಡದ ಮನಸುಗಳಿಗೂ ಹಾಗೂ ಪೋಲಿಸ್ ಇಲಾಖೆಯವರಿಗೂ ಧನ್ಯವಾದಗಳು ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ತಿಳಿಸಿದ್ದಾರೆ.

Harish Kera Column: ಆಡು ಕನ್ನಡ ಸಾಲದು, ಬರಹ ಕನ್ನಡವೂ ಬೆಳೆಯಲಿ


ಪ್ರತಿಭಟನೆ ಹಿನ್ನೆಲೆ ವಾರ್ಡನ್‌ ಬಂಧನ

ಕಾಲೇಜಿನಲ್ಲಿ ಕನ್ನಡ ಮಾತನಾಡಬಾರದು ಎಂದಿದ್ದ ವಾರ್ಡನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿಗೆ ಮುತ್ತಿಗೆ ಹಾಕಿ ತರಾಟೆಗೆ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರ್ಡನ್‌ ಸರೇಶ್‌ನನ್ನು ಬಂಧಿಸಲಾಗಿದೆ. ಸುರೇಶ್ ಮೂಲತಃ ಕೇರಳದವನಾಗಿದ್ದಾನೆ. ಭಾರಿ ಪ್ರತಿಭಟನೆ ಬಳಿಕ ಸುರೇಶ್‌ನನ್ನು ಕೆಲಸದಿಂದ ವಜಾ ಮಾಡಲಾಗಿದೆ.