ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಡಿಗೆ ದೂರಿತ್ತವರು ಯಾರೆಂದು ಗೊತ್ತು: ಆಫ್ರಿಕಾದಲ್ಲಿ ಹೂಡಿಕೆ ಮಾಡಿದ್ದರೆ ಇಡಿ ದಾಖಲೆ ನೀಡಲಿ: ಸತೀಶ್

ಶನಿವಾರ ನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಡಿ ಜಾರಿ ನಿರ್ದೇಶನಾಲಯದ ಮಾಧ್ಯಮ ಪ್ರಕಟಣೆಯಲ್ಲಿ ಹೂಡಿಕೆ ಮತ್ತು ಲೋಕೋಪಯೋಗಿ ಇಲಾಖೆ ಲಂಚ ಪಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಇಡಿ ಅಧಿಕಾರಿಗಳು ನೋಟಿಸ್ ನೀಡಿದರೆ ಸೂಕ್ತ ಉತ್ತರ, ಸ್ಪಷ್ಟನೆ ನೀಡಲಾಗುವುದು ಎಂದರು.

ಬೆಂಗಳೂರು: ‘ಆಫ್ರಿಕಾದಲ್ಲಿ ಚಿನ್ನ ಗಣಿಗಾರಿಕೆ ಸಂಸ್ಥೆಯಲ್ಲಿ ಶೇ.40ರಷ್ಟು ಪಾಲಿದೆ’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ದಾಖಲೆಯಿದ್ದರೆ ಸಾಬೀತುಪಡಿಸಲಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.

ಶನಿವಾರ ನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಡಿ ಜಾರಿ ನಿರ್ದೇಶನಾಲಯದ ಮಾಧ್ಯಮ ಪ್ರಕಟಣೆಯಲ್ಲಿ ಹೂಡಿಕೆ ಮತ್ತು ಲೋಕೋಪಯೋಗಿ ಇಲಾಖೆ ಲಂಚ ಪಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಇಡಿ ಅಧಿಕಾರಿಗಳು ನೋಟಿಸ್ ನೀಡಿದರೆ ಸೂಕ್ತ ಉತ್ತರ, ಸ್ಪಷ್ಟನೆ ನೀಡಲಾಗುವುದು ಎಂದರು.

ಇದನ್ನೂ ಓದಿ: Satish Jarkiholi: ಸತೀಶ್‌ ಜಾರಕಿಹೊಳಿ ಹೊಸ ಹೆಲಿಕಾಪ್ಟರ್‌ ಖರೀದಿ, ಬೆಲೆ ಎಷ್ಟು ಗೊತ್ತಾ?

ದೂರಿತ್ತವರು ಗೊತ್ತು: ನನ್ನ ವಿರುದ್ಧ ಇಡಿಗೆ ಯಾರು ದೂರು ನೀಡಿದ್ದಾರೆಂಬುದು ಗೊತ್ತಿದೆ. ರಾಜಕೀಯವಾಗಿ ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. ಏನೇ ಆದರೂ ಜನರ ತೀರ್ಮಾನವೇ ಅಂತಿಮ. ಜನರೆ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ. ಇಡಿ ಅಧಿಕಾರಿಗಳು ನನಗೆ ನೋಟಿಸ್ ನೀಡಲಿ, ಉತ್ತರ ಕೊಡುತ್ತೇನೆ ಎಂದು ಸತೀಶ್ ತಿಳಿಸಿದರು. ನನ್ನ ವಿರುದ್ಧ ದೂರು ನೀಡಿರುವವರು ಯಾರು ಎಂಬ ವಿಚಾರದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ. ಇದರಲ್ಲಿ ನಮ್ಮ ಪಕ್ಷದವರು ಅಥವಾ ಬಿಜೆಪಿ ಯವರೇ ಇರಬಹುದು. ಅವರ ಸಂಬಂಧ ಕಾಂಗ್ರೆಸ್ ನಲ್ಲಿ ಇದೆ ಅಷ್ಟೇ. ಅವರ ಮತಗಳು ಬಿಜೆಪಿಯಲ್ಲಿ ಇವೆ. ಈ ಕುರಿತು ಸಿಎಂ ಗಮನಹರಿಸಲಿದ್ದಾರೆ. ಏನೇ ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದೇವೆ ಎಂದರು.

ವಿಜಯ ಮಲ್ಯ ಖಂಡನೆ

ಸಚಿವ ಸತೀಶ್ ಜಾರಕಿಹೊಳಿ, ಅವರ ಪುತ್ರಿ ಮತ್ತು ಸಂಸದೆ ಪ್ರಿಯಾಂಕಾ ನಿವಾಸ ಕಚೇರಿಗಳ ಮೇಲೆ ನಡೆದ ದಾಳಿ ನಡೆದಿ ರುವ ವಿವರಗಳನ್ನು ಇಡಿ ಬಹಿರಂಗ ಪಡಿಸಿರು ವುದು ಸರಿಯಾದ ಕ್ರಮವಲ್ಲ. ಚಾರ್ಜ್‌ಶೀಟ್ ಸಲ್ಲಿಸುವ ಮುನ್ನವೇ ತನಿಖೆ ವಿವರಗಳನ್ನು ಬಹಿರಂಗ ಪಡಿಸುವ ಅಗತ್ಯ ಏನಿದೆ? ಯಾವ ದೇಶದಲ್ಲಿ ಹೀಗೆ ನಡೆಯುತ್ತದೆ ಎಂದು ಉದ್ಯಮಿ, ಮಾಜಿ ಸಂಸದ ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ.