ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sathish to lead Ahinda: ಅಹಿಂದ ಹೋರಾಟಕ್ಕೆ ಸತೀಶ್ ನೇತೃತ್ವ ?

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಕ್ಷಣದಿಂದ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದ ಅಹಿಂದ ಚರ್ಚೆಗೆ ಇದೀಗ ಜೀವ ಬಂದಿದೆ. ಸಿದ್ದರಾಮಯ್ಯ ಅವರು ಹುಟ್ಟುಹಾಕಿದ್ದ ಅಹಿಂದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವವರು ಯಾರು ಎನ್ನುವ ಪ್ರಶ್ನೆ ಪದೇಪದೆ ಮುನ್ನೆಲೆಗೆ ಬರುತ್ತಿದೆ. ಇದರ ನಡುವೆಯೇ ಸತೀಶ್ ಜಾರಕಿಹೊಳಿ ಅವರು ನೇತೃತ್ವದ ವಹಿಸುವ ಮಾತುಗಳನ್ನು ಆಡಿದ್ದರು.

ಹಿಂದಕ್ಕೆ 25 ವರ್ಷ, ಹುಬ್ಬಳ್ಳಿಯಲ್ಲಿ ಸಮಾವೇಶ, ಮಾಜಿ ಸಿಎಂ ಸಿದ್ದು ಉಪಸ್ಥಿತಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಕ್ಷಣದಿಂದ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದ ಅಹಿಂದ ಚರ್ಚೆಗೆ ಇದೀಗ ಜೀವ ಬಂದಿದೆ. ಸಿದ್ದರಾಮಯ್ಯ ಅವರು ಹುಟ್ಟುಹಾಕಿದ್ದ ಅಹಿಂದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವವರು ಯಾರು ಎನ್ನುವ ಪ್ರಶ್ನೆ ಪದೇಪದೆ ಮುನ್ನೆಲೆಗೆ ಬರುತ್ತಿದೆ. ಇದರ ನಡುವೆಯೇ ಸತೀಶ್ ಜಾರಕಿಹೊಳಿ ಅವರು ನೇತೃತ್ವದ ವಹಿಸುವ ಮಾತುಗಳನ್ನು ಆಡಿದ್ದರು.

ಇದೀಗ 2001ರಲ್ಲಿ ಸ್ಥಾಪನೆಯಾದ ಅಹಿಂದ ಹೋರಾಟಕ್ಕೆ 25 ವರ್ಷ ಸಂದ ನೆಪದಲ್ಲಿ ಮತ್ತೊಮ್ಮೆ ಅಹಿಂದ ಹೋರಾಟವನ್ನು ಮುನ್ನೆಲೆಗೆ ತರುವ ಲೆಕ್ಕಾಚಾರದಲ್ಲಿ ನಾಯಕರಿದ್ದಾರೆ ಎನ್ನಲಾಗಿದೆ. 2001ರಲ್ಲಿ ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟ ಸ್ಥಾಪನೆಯಾಗಿತ್ತು. ಈ ಒಕ್ಕೂಟದಿಂದಲೇ 2005ರಲ್ಲಿ ಸಿದ್ದರಾಮಯ್ಯ, ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಲು ಕೂಡ ಮುಂದಾ ಗಿದ್ದರು. ಈಗ 2001ರಲ್ಲಿ ಸ್ಥಾಪನೆಯಾಗಿರುವ ಹಿಂದುಳಿದ ಜಾತಿಗಳ ಒಕ್ಕೂಟಕ್ಕೆ 25 ವರ್ಷ ಪೂರ್ಣವಾಗುತ್ತಿದೆ.

ಇದನ್ನೂ ಓದಿ: Ahinda: ಕಾಂಗ್ರೆಸ್‌ ಪಕ್ಷಕ್ಕೆ ಅಹಿಂದ ಬುಡ ಅಲುಗಾಡುವ ಆತಂಕ

ಇದರ 25ನೇ ವರ್ಷಾಚರಣೆ ಯನ್ನು ಮುಂದಿನ ತಿಂಗಳ (ಸೆಪ್ಟೆಂಬರ್) 6ರಂದು ನಡೆಸಲು ನಿರ್ಧರಿಸಲಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸುವುದಾಗಿ ಸಿದ್ದರಾಮಯ್ಯ ಅವರು ಈಗಾಗಲೇ ಘೋಷಿಸಿದ್ದಾರೆ. ಸಿದ್ದು ಈ ಸಮಾವೇಶದ ಮೂಲಕ ಏನಾದರೂ ಸಂದೇಶ ರವಾನಿಸುವರೇ ಎನ್ನುವ ಕುತೂಹಲ ಅನೇಕರಲ್ಲಿದೆ.

ಇದಕ್ಕೆ ಪೂರಕ ಎನ್ನುವಂತೆ ಸಚಿವ ಸತೀಶ್ ಜಾರಕಿಹೊಳಿ, ಯತೀಂದ್ರ ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ನಡೆಸಿದ್ದು, ಸಭೆಯ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಯತೀಂದ್ರ ಅವರು ನಮ್ಮ ಪಕ್ಷದವರು. ಆದ್ದರಿಂದ ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ. ಅಹಿಂದ ಹೋರಾಟಕ್ಕೆ 25 ವರ್ಷ ಸಂದಿರುವ ಕಾರಣಕ್ಕೆ ಸಮಾವೇಶ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಕರೆದಿದ್ದಾರೆ ಅವರು ಹೋಗುತ್ತಿದ್ದಾರೆ. ನಮಗಿನ್ನೂ ಕರೆದಿಲ್ಲ. ಕರೆದರೆ ನೋಡೋಣ. ಪಕ್ಷದ ಹಿತಕ್ಕಾಗಿಯೇ ಸಮಾವೇಶ ಮಾಡಲಾಗುತ್ತದೆ ಎಂದು ಹೇಳಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಹತ್ವವೇನು?

ಸಿದ್ದರಾಮಯ್ಯ ನಂತರ ಅಹಿಂದಕ್ಕೆ ನಾಯಕ ಯಾರು ಎಂಬುದು ಚರ್ಚೆ

ತಾನು ನೇತೃತ್ವ ವಹಿಸುವ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ

ಹಿಂದೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಲು ಯತ್ನಿಸಿದ್ದ ಸಿದ್ದು, ಈಗ ಅಲ್ಲೇ ಸಭೆ

image

ಕೆಲ ಶಾಸಕರಿಗೆ ಅಸಮಾಧಾನ ವಾಗಿರುವುದು ನಿಜ. ಆದರೆ ಅವರ ಅಸಮಾಧಾನ ಸರಿಪಡಿಸಬೇಕು. ಯಥಾಸ್ಥಿತಿಗೆ ತರಬೇಕು. ಸಚಿವ ಸ್ಥಾನ ಸಿಗದವರಿಗೆ ಈ ರೀತಿಯ ಬೇಸರವಾಗುವುದು ಸಹಜ. ಆದರೆ ಪಕ್ಷದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಹೋಗಬೇಕು. ಎಲ್ಲರೂ ಸೇರಿ ಸರಿಪಡಿಸಬೇಕು.

-ಸತೀಶ್ ಜಾರಕಿಹೊಳಿ, ಸಚಿವ