ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Travel Fashion: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಪ್ಯಾರಿಸ್ ಟ್ರಾವೆಲ್ ಫ್ಯಾಷನ್

ಬಿಗ್‌ ಬಾಸ್ ಮಾಜಿ ಸ್ಪರ್ಧಿ, ನಿರೂಪಕಿ ಹಾಗೂ ಉದ್ಯಮಿ ಚೈತ್ರಾ ವಾಸುದೇವನ್ ಪ್ಯಾರಿಸ್ ಟ್ರಾವೆಲ್ ಫ್ಯಾಷನ್‌ನಲ್ಲಿ ಹೇಗೆಲ್ಲಾ ಕಾಣಿಸಿಕೊಂಡರು? ಯಾವ ಔಟ್‌ಫಿಟ್‌ಗಳು ಅವರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೇರಿದ್ದವು? ಎಂಬುದರ ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

Travel Fashion: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಪ್ಯಾರಿಸ್ ಟ್ರಾವೆಲ್ ಫ್ಯಾಷನ್

ಚೈತ್ರಾ ವಾಸುದೇವನ್.

ಸಂದರ್ಶನ: ಶೀಲಾ ಸಿ. ಶೆಟ್ಟಿ

ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ, ನಿರೂಪಕಿ, ಉದ್ಯಮಿ ಚೈತ್ರಾ ವಾಸುದೇವನ್ (Chaitra Vasudevan) ಪ್ಯಾರಿಸ್ ಟ್ರಾವೆಲ್ ಫ್ಯಾಷನ್‌ನಲ್ಲಿ (Travel Fashion) ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಎಲ್ಲ ಸಂದರ್ಭಗಳಲ್ಲೂ ಅತ್ಯಾಕರ್ಷಕ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವ, ಮಾಜಿ ಬಿಗ್‌ ಬಾಸ್ ಸ್ಪರ್ಧಿ ಚೈತ್ರಾ, ಸ್ಟಾರ್ ನಿರೂಪಕಿ ಕೂಡ. ಆಗಾಗ್ಗೆ ಫ್ಯಾಷನ್ ಫೋಟೋಶೂಟ್‌ಗಳಲ್ಲೂ ಕಾಣಿಸಿಕೊಂಡು ಟ್ರೆಂಡ್ ಸೆಟ್ ಮಾಡುತ್ತಿರುತ್ತಾರೆ. ಈ ವಿಂಟರ್ ಸೀಸನ್‌ನಲ್ಲಿ ತಮ್ಮ ಡ್ರೀಮ್ ಡೆಸ್ಟಿನೇಷನ್ ಪ್ಯಾರಿಸ್ ಹಾಗೂ ಮಿಲಾನ್‌ಗೆ ಟ್ರಾವೆಲ್ ಮಾಡಿರುವ ಅವರು ಅತ್ಯಾಕರ್ಷಕ ಲೇಯರ್ ಲುಕ್‌ನಲ್ಲಿ ಕಾಣಿಸಿಕೊಂಡರು. ತಮ್ಮಈ ಟ್ರಾವೆಲ್ ಫ್ಯಾಷನ್ ಬಗ್ಗೆ ಮಾತನಾಡುವುದರೊಂದಿಗೆ, ಟ್ರಾವೆಲ್ ಪ್ರಿಯರಿಗೂ ಕೂಡ ಟಿಪ್ಸ್ ನೀಡಿದ್ದಾರೆ.

13

ವಿಶ್ವವಾಣಿ ನ್ಯೂಸ್: ಮೈನಸ್ ಡಿಗ್ರಿಯಲ್ಲಿ ನಿಮ್ಮ ಟ್ರಾವೆಲ್ ಫ್ಯಾಷನ್‌ನಲ್ಲಿ ಏನೆಲ್ಲ ಸೇರಿತ್ತು ?

ಶೀತ ರಾಷ್ಟ್ರಗಳಲ್ಲಿನ ಮೈನಸ್ ಡಿಗ್ರಿಯ ಹವಾಮಾನಕ್ಕೆ ತಕ್ಕಂತೆ, ಲೇಯರ್ ಲುಕ್ ನೀಡುವಂತಹ ಔಟ್‌ಫಿಟ್‌ಗಳನ್ನು ಚೂಸ್ ಮಾಡಿ, ಧರಿಸಿದ್ದೆ.

ವಿಶ್ವವಾಣಿ ನ್ಯೂಸ್: ಪ್ಯಾರಿಸ್‌ನಲ್ಲಿ ನಿಮ್ಮ ಫ್ಯಾಷನ್ ಲುಕ್ ಹೇಗಿತ್ತು ?

ಸ್ಕರ್ಟ್ ಹಾಗೂ ಟಾಪ್‌ನೊಂದಿಗೆ ಥರ್ಮಲ್ಸ್ ಧರಿಸಿದ್ದೆ. ಅದರ ಮೇಲೆ ಟ್ರೆಂಡಿ ಪಫರ್ ಟ್ರೆಕ್ಕರ್ ಲಾಂಗ್ ಜಾಕೆಟ್ ಮ್ಯಾಚ್ ಮಾಡಿದ್ದೆ. ಇದರೊಂದಿಗೆ ಧರಿಸಿದ್ದ, ಫರ್ ಗ್ಲೌವ್ಸ್ ಮತ್ತು ಹ್ಯಾಟ್ ನನ್ನ ಆಕರ್ಷಕ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡಿತ್ತು.

12

ವಿಶ್ವವಾಣಿ ನ್ಯೂಸ್: ಜಾಗತಿಕ ಮಟ್ಟದ ಫ್ಯಾಷನ್ ಹಬ್‌ಗಳಾದ ಪ್ಯಾರಿಸ್ ಹಾಗೂ ಮಿಲಾನ್‌ನಲ್ಲಿ ನೀವು ಗಮನಿಸಿದ್ದೇನು?

ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಥರ್ಮಲ್ಸ್ , ವಾರ್ಮರ್ಸ್ ಧರಿಸಿದರೂ ಫ್ಯಾಷೆನಬಲ್ ಆಗಿ ಕಾಣಿಸಬಹುದು ಎಂಬುದು ಅಲ್ಲಿನ ಜನರನ್ನು ನೋಡಿ ತಿಳಿಯಿತು. ವಿಶೇಷವೆಂದರೆ, ಅಲ್ಲಿ ಸಾಕು ಪ್ರಾಣಿಗಳನ್ನು ಕ್ಯೂಟಾಗಿ ಡ್ರೆಸ್ ಮಾಡಿ, ಕರೆದುಕೊಂಡು ಹೋಗುವುದನ್ನು ನೋಡಿ ಸಂತಸವಾಯಿತು.

11

ವಿಶ್ವವಾಣಿ ನ್ಯೂಸ್: ಪ್ಯಾರಿಸ್ ಟ್ರಾವೆಲ್ ಪ್ರಿಯರಿಗೆ ನೀವು ನೀಡುವ ಟಿಪ್ಸ್?

* ಕಂಪ್ಲೀಟ್ ಲೇಯರ್ ಲುಕ್‌ಗೆ ಆದ್ಯತೆ ನೀಡಿ.

* ವಾರ್ಮರ್ಸ್ ಮರೆಯದೇ ತೆಗೆದುಕೊಂಡು ಹೋಗಿ.

* ಟ್ರೆಂಡಿ ಔಟ್‌ಫಿಟ್‌ ಬದಲು ಬೆಚ್ಚಗಿಡುವ ಔಟ್‌ಫಿಟ್ ಧರಿಸಿ.

* ಅತಿ ಹೆಚ್ಚು ಆಕ್ಸೆಸರೀಸ್ ಬೇಡ. ಮೆಸ್ಸಿ ಲುಕ್‌ನಂತಾಗುತ್ತದೆ.

* ಟ್ರಾವೆಲ್ ಮಾಡುವಾಗ ಆದಷ್ಟು ಹೆವ್ವಿ ಮೇಕಪ್ ಬೇಡ

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Star Fashion: ಮೆನ್ಸ್ ಯೂನಿಕ್ ಫ್ಯಾಷನ್ ಟಾಪ್ ಲಿಸ್ಟ್‌ಗೆ ಸೇರಿದ ಸುದೀಪ್ ಧರಿಸಿದ್ದ ಬಿಗ್‌ಬಾಸ್ ಫಿನಾಲೆ ಗ್ರ್ಯಾಂಡ್ ಡಿಸೈನರ್‌ವೇರ್ಸ್!