ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರು ಗ್ಯಾಂಗ್‌ ರೇಪ್‌ ಕೇಸ್‌ಗೆ ಟ್ವಿಸ್ಟ್‌; ಲವರ್‌ ಬಳಿ ಸತ್ಯ ಮುಚ್ಚಿಡಲು ಸುಳ್ಳು ದೂರು ಕೊಟ್ಟ ಯುವತಿ!

Bengaluru News: ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಕೇರಳ ಮೂಲದ ಯುವತಿ ದೂರು ನೀಡಿದ್ದಳು. ಆದರೆ, ಆಕೆಯ ಲವರ್‌​ ಬಳಿ ಸತ್ಯ ಮುಚ್ಚಿಡಲು ಸುಳ್ಳು ದೂರು ದಾಖಲಿಸಿದ್ದಳು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಬೆಂಗಳೂರು ಗ್ಯಾಂಗ್‌ ರೇಪ್‌ ಕೇಸ್‌ಗೆ ಟ್ವಿಸ್ಟ್;‌ ಯುವತಿಯಿಂದ ಸುಳ್ಳು ದೂರು!

ಸಾಂದರ್ಭಿಕ ಚಿತ್ರ -

Prabhakara R
Prabhakara R Dec 9, 2025 9:26 PM

ಬೆಂಗಳೂರು, ಡಿ.8: ನಗರದ ಬಾಣಸವಾಡಿಯಲ್ಲಿ ಇತ್ತೀಚೆಗೆ ಕೇರಳದ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಯುವತಿ ನೀಡಿದ್ದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಯುವತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದಿದ್ದಳು. ಆದರೆ, ಸ್ನೇಹಿತನಿಂದಲೇ ಲೈಂಗಿಕ ದೌರ್ಜನ್ಯ (physical abuse) ನಡೆದಿದೆ ಎಂಬುವುದು ವಿಚಾರಣೆ ಸಂದರ್ಭದಲ್ಲಿ ಗೊತ್ತಾಗಿದೆ.

ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಕೇರಳ ಮೂಲದ ಯುವತಿ ದೂರು ನೀಡಿದ್ದಳು. ಆದರೆ, ಆಕೆಯ ಲವರ್‌​ ಬಳಿ ಸತ್ಯ ಮುಚ್ಚಿಡಲು ಸುಳ್ಳು ದೂರು ದಾಖಲಿಸಿದ್ದಳು ಎಂದು ತಿಳಿದುಬಂದಿದೆ.

ಯುವತಿ ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಆರೋಪಿಸಿ ಮೊದಲಿಗೆ ಮಡಿವಾಳ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆ ನಡೆದ ಸ್ಥಳ ಬಾಣಸವಾಡಿ ಆದ ಕಾರಣ ಅಲ್ಲಿನ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಪ್ರಕರಣ ಸಂಬಂಧ ಕ್ಯಾಬ್ ಚಾಲಕ ಸರೇಶ್‌ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ, ಆತ ಬೇರೆಯದ್ದೇ ಕತೆ ಹೇಳಿದ್ದಾನೆ.

ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ವಿರೋಧ ಬೇಡ; ದೆಹಲಿ ಮಹಿಳೆಯ ಪೋಸ್ಟ್ ವೈರಲ್‌

ತಾನು ಮತ್ತು ದೂರುದಾರೆ ಯುವತಿ ಇಬ್ಬರೂ ಪರಿಚಯಸ್ಥರು. ನಾನು ಆಕೆಯ ಮೇಲೆ ಅತ್ಯಾಚಾರ ಮಾಡಿಲ್ಲ. ಈ ಹಿಂದೆ ಕ್ಯಾಬ್ ಬುಕ್ ಮಾಡಿದಾಗ ಇಬ್ಬರಿಗೂ ಪರಿಚಯವಾಗಿತ್ತು. ನಾವು ಪರಸ್ಪರ ಒಪ್ಪಿಗೆಯಿಂದಲೇ ದೈಹಿಕ ಸಂಪರ್ಕ ನಡೆಸಿದ್ದೇವೆ. ಆಗ ನನ್ನ ಜತೆ ಬೇರೆ ಯಾರೂ ಇರಲಿಲ್ಲ ಎಂದು ತಿಳಿಸಿದ್ದಾನೆ. ಹೀಗಾಗಿ ಯುವತಿಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆಕೆ ಸಾಕಷ್ಟು ಗೊಂದಲದ ಹೇಳಿಕೆಗಳನ್ನು ನೀಡಿದ್ದಾಳೆ ಎನ್ನಲಾಗಿದೆ.

ಕ್ಯಾಬ್ ಡ್ರೈವರ್ ಸಹ ಕೇರಳ ಮೂಲದವನಾಗಿದ್ದು, ಇಬ್ಬರಿಗೂ ಪರಿಯವಿದ್ದ ಕಾರಣ ಇತ್ತೀಚೆಗೆ ಒಟ್ಟಾಗಿ ಪಾರ್ಟಿ ಕೂಡ ಮಾಡಿದ್ದರು. ಈ ವೇಳೆ ಯುವತಿಯ ಕುತ್ತಿಗೆ ಭಾಗಕ್ಕೆ ಸಣ್ಣ ಗಾಯವಾಗಿತ್ತು. ಆ ಬಳಿಕ ಯುವತಿ ಕೇರಳಕ್ಕೆ ತೆರಳಿದ್ದು, ಅಲ್ಲಿ ಆಕೆಯ ಬಾಯ್​​ ಫ್ರೆಂಡ್ ಗಾಯದ ಬಗ್ಗೆ ಕೇಳಿದ್ದಾನೆ. ಈ ವೇಳೆ ತನ್ನ ಮೇಲೆ ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಳು. ಹೀಗಾಗಿ ಗೆಳತಿ ಜತೆ ಬಾಯ್​​ ಫ್ರೆಂಡ್ ಸೀದಾ ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದ.

ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಜಾಮೀನು ಅರ್ಜಿ ವಜಾ

ತನಿಖೆ ವೇಳೆ ಯುವತಿ ಹಾಗೂ ಆರೋಪಿ ಸುರೇಶ್ ವಾಟ್ಸ್ಆ್ಯಪ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಅವರಿಬ್ಬರಿಗೂ ಮೊದಲೇ ಪರಿಚಯ ಇರುವುದು ಗೊತ್ತಾಗಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಭೇಟಿ ಮಾಡಿರುವುದಕ್ಕೂ ಸಾಕ್ಷಿಗಳು ಲಭ್ಯವಾಗಿವೆ. ಇನ್ನುಯುವತಿ ಹೇಳಿಕೆಯನ್ನೂ ದಾಖಲು ಮಾಡಲಾಗಿದೆ. ಪ್ರಕರಣದಲ್ಲಿ ಈ ಮೊದಲು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದೀಗ ಕ್ಯಾಬ್ ಚಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.