ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidar news: ಬೀದರ್‌ನಲ್ಲಿ ಬಿಸಿಲಿನ ಝಳಕ್ಕೆ ಯುವಕ ಬಲಿ

ಬಿಸಿಲಿನಿಂದಲೇ ಮಗ ಸಾವನ್ನಪ್ಪಿದ್ದಾನೆ ಎಂದು ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಿಸಿಲು ಅತ್ಯಧಿಕವಾಗಿರುವ ಹೊತ್ತಿನಲ್ಲಿ ಹೊರಗೆ ಹೋಗದಂತೆ, ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ತಲೆ ಹಾಗೂ ಮುಖವನ್ನು ಬಟ್ಟೆಯಿಂದ ಕವರ್‌ ಮಾಡಿಕೊಳ್ಳುವಂತೆ, ಹಾಗೂ ಸಾಕಷ್ಟು ನೀರು ಸೇವಿಸಿ ಹೈಡ್ರೇಟ್‌ ಆಗಿರುವಂತೆ ತಜ್ಞರು ಸೂಚಿಸಿದ್ದಾರೆ.

ಬೀದರ್‌ನಲ್ಲಿ ಬಿಸಿಲಿನ ಝಳಕ್ಕೆ ಯುವಕ ಬಲಿ

ಮೃತ ಮೊಹ್ಮದ್ ಸಮೀರ್ ಅಹ್ಮದ್ -

ಹರೀಶ್‌ ಕೇರ
ಹರೀಶ್‌ ಕೇರ Apr 20, 2026 1:15 PM

ಬೀದರ್, ಏ.20: ರಾಜ್ಯದಲ್ಲಿ ಹೀಟ್‌ ವೇವ್ ಜೋರಾಗಿದ್ದು, ಬೀದರ್‌ನಿಂದ ಆತಂಕದ ಸುದ್ದಿ ಬಂದಿದೆ. ತರಕಾರಿ ತರಲು ಹೋಗಿ ಯುವಕ ಸಾವನ್ನಪ್ಪಿದ್ದು, ಬಿಸಿಲಿನ ಝಳಕ್ಕೆ ಮಗ ಬಲಿಯಾಗಿದ್ದಾನೆಂದು ತಂದೆ ಗೋಳಾಡಿದ್ದಾರೆ. ಈ ಘಟನೆ ಬೀದರ್ (Bidar) ಜಿಲ್ಲೆಯ ಕಮಲನಗರ ಪಟ್ಟಣದ ಡಿಗ್ಗಿ ರೋಡ್ ಬಳಿ ನಡೆದಿದೆ. ಯುಪಿ ಮೂಲದ ಮೊಹ್ಮದ್ ಸಮೀರ್ ಅಹ್ಮದ್ (20) ಸಾವನ್ನಪ್ಪಿದ ದುರ್ದೈವಿ ಯುವಕ. ಗರಿಷ್ಠ ತಾಪಮಾನ ಸಹಿಸಲಾರದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಘಟನೆ ನಡೆದ ದಿನ ಯುವಕ ತರಕಾರಿ ತರಲು ಹೋಗಿದ್ದ. ಬಳಿಕ ಮನೆಗೆ ವಾಪಸ್ಸಾಗುವಾಗ ತಲೆ ತಿರುಗಿದಂತಾಗಿದ್ದು, ಕೂಡಲೇ ಸಮೀಪದಲ್ಲಿಯೇ ಇದ್ದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದ. ಸ್ವಲ್ಪ ಹೊತ್ತಾದ ಮೇಲೆ ಮನೆಗೆ ಮರಳುವಾಗ ಡಿಗ್ಗಿ ಗ್ರಾಮದ ರಸ್ತೆ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಬಿಸಿಲಿನಿಂದಲೇ ಮಗ ಸಾವನ್ನಪ್ಪಿದ್ದಾನೆ ಎಂದು ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ವೇಳೆಗೆ ಬಿಸಿಲು ಅತ್ಯಧಿಕವಾಗಿರುವ ಹೊತ್ತಿನಲ್ಲಿ ಹೊರಗೆ ಹೋಗದಂತೆ, ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ತಲೆ ಹಾಗೂ ಮುಖವನ್ನು ಬಟ್ಟೆಯಿಂದ ಕವರ್‌ ಮಾಡಿಕೊಳ್ಳುವಂತೆ, ಹಾಗೂ ಸಾಕಷ್ಟು ನೀರು ಸೇವಿಸಿ ಹೈಡ್ರೇಟ್‌ ಆಗಿರುವಂತೆ ತಜ್ಞರು ಸೂಚಿಸಿದ್ದಾರೆ.

Bidar Rain: ಬೀದರ್‌ನಲ್ಲಿ ಮಳೆ ಅಬ್ಬರ; ಸಿಡಿಲು ಬಡಿದು ಯುವರೈತ ಸಾವು

ಕೆರೆಯಲ್ಲಿ ಮುಳುಗಿ ಮಾವ- ಅಳಿಯ ಸಾವು

ಹಾಸನ: ಕೆರೆಯಲ್ಲಿ ಮುಳುಗಿ ಮಾವ ಹಾಗೂ ಅಳಿಯ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ, ಎನ್.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ್ (45), ಪ್ರತೀಕ್ (12) ಮೃತ ದುರ್ದೈವಿಗಳು. ಪ್ರತೀಕ್ ಮೂಲತಃ ದುದ್ದ ಹೋಬಳಿ, ಸೋಮನಹಳ್ಳಿ ಗ್ರಾಮದವನು. ಬೇಸಿಗೆ ರಜೆ ಹಿನ್ನಲೆ ಮಾವ ಪ್ರಭಾಕರ್ ಮನೆಗೆ ಬಂದಿದ್ದ.

ಮಾವ-ಅಳಿಯ ಇಬ್ಬರೂ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾಲು ಜಾರಿ ಪ್ರತೀಕ್ ಕೆರೆಗೆ ಬಿದ್ದಿದ್ದಾನೆ. ಪ್ರತೀಕ್‌ನನ್ನು ರಕ್ಷಿಸಲು ಮಾವ ಪ್ರಭಾಕರ್ ಕೂಡ ಕೆರೆಗೆ ಇಳಿದಿದ್ದಾರೆ. ಈಜು ಬಾರದ ಕಾರಣ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.